ಪಾಬ್ಲೋ ನೆರೂಡಾ

ವಿಕಿಪೀಡಿಯ ಇಂದ
Jump to navigation Jump to search
ಪಾಬ್ಲೋ ನೆರೂಡಾ
ಪಾಬ್ಲೋ ನೆರೂಡಾ 1963ರಲ್ಲಿ
ಜನನNeftalí Ricardo Reyes Basoalto
12 ಜುಲೈ 1904
Parral, Maule Region, Chile
ಮರಣ23 ಸಪ್ಟೆಂಬರ್ 1973(1973-09-23) (ವಯಸ್ಸು 69)
Santiago, Chile
ವೃತ್ತಿಕವಿ,ರಾಜತಂತ್ರಜ್ಞ
ಭಾಷೆSpanish (Chilean)
ರಾಷ್ಟ್ರೀಯತೆ Chile
ಪ್ರಮುಖ ಪ್ರಶಸ್ತಿ(ಗಳು)International Peace Prize (1950)
Nobel Prize in Literature (1971)


ಸಹಿ

ಪಾಬ್ಲೋ ನೆರೂಡಾ (೧೯೦೪-೧೦೭೩)ಚಿಲಿಕವಿ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ.

ಚಿಲಿದೇಶದ ಜನಪ್ರಿಯ-ಕವಿ[ಬದಲಾಯಿಸಿ]

'ಚಿಲಿದೇಶದ ನೋಬೆಲ್ ಪ್ರಶಸ್ತಿವಿಜೇತ',ಕವಿ,'ಪಾಬ್ಲೋ ನೆರೂಡಾ' ರವರ ನಿಜವಾದ ಹೆಸರು, 'ನೆಫ್ತಾಲಿ ರಿಕಾರ್ಡೋ ರೆಯಸ್ ಬಸೊಆಲ್ಟೋ' ಯೆಂದು. ಅವರ 'ನೆಫ್ತಾಲಿ ರಿಕಾರ್ಡೋ ರೆಯಸ್ ಬಸೊಆಲ್ಟೋ' ಹೆಸರು, ದಾಖಲೆಯಲ್ಲಿ ಇತ್ತೇ ವಿನಃ ಬಳಕೆಯಲ್ಲಿರಲಿಲ್ಲ. ಮಾಡಿದ ಸಾಹಿತ್ಯ ಕೃಷಿಯೆಲ್ಲಾ, ಚಿಲಿದೇಶದ ಅಧಿಕೃತಭಾಷೆಯಾದ,' ಸ್ಪಾನಿಷ್' ನಲ್ಲಿ.'ಪಾಬ್ಲೋ ನೆರೂಡಾ' ರನ್ನು ಹಲವರು '೨೦ ನೆಯ ಶತಮಾನದ ಅತಿ ಶ್ರೇಷ್ಠ ಕವಿ'ಯೆಂದು ಪರಿಗಣಿಸಿದ್ದಾರೆ. ೧೯೭೧ ರಲ್ಲಿ 'ಪಾಬ್ಲೋ ನೆರೂಡಾ' ರವರು ನೋಬೆಲ್ ಪ್ರಶಸ್ತಿಯಿಂದ ಅಲಂಕೃತರಾದಾಗ ಹಲವಾರು ಟೀಕೆಗಳಿಗೆ ಗುರಿಯಾಗಬೇಕಾಯಿತು. ಲ್ಯಾಟಿನ್ ಅಮೆರಿಕದ ಅತ್ಯಂತ ಹೆಸರುವಾಸಿಯಾದ ಕವಿಗಳಪಟ್ಟಿಯಲ್ಲಿ ಅವರದು ಪ್ರಥಮಸ್ಥಾನವಾಗಿತ್ತು.

ಬಾಲ್ಯ[ಬದಲಾಯಿಸಿ]

ಇನ್ನೂ ೧೦ ವರ್ಷದ ಚಿಕ್ಕಪ್ರಾಯದವರಾಗಿದ್ದಾಗಲೇ 'ಪಾಬ್ಲೋ ನೆರೂಡಾ' ಕವನಗಳನ್ನು ರಚಿಸತೊಡಗಿದರು. ಅವರ ತಂದೆಯವರಿಗೆ ಇದು ಇಷ್ಟವಿರಲಿಲ್ಲ, ಅದಲ್ಲದೆ ಅವರು ವಿರೋಧಿಸುತ್ತಿದ್ದರು ಸಹಿತ. ಆ ಸಮಯದಲ್ಲಿ 'ಪಾಬ್ಲೋ ನೆರೂಡಾ' ರವರ ನೆರವಿಗೆ ಬಂದವರೆಂದರೆ, ಪಕ್ಕದ ಬಾಲಕಿಯರ ಶಾಲೆಯಲ್ಲಿ ಮುಖ್ಯ ಅಧ್ಯಾಪಕಿಯಾಗಿ ಕೆಲಸಮಾಡುತ್ತಿದ್ದ, 'ಗೇಬ್ರಿಯೆಲಾ ಮಿಸ್ರಾಲ್'. ಇವರಿಗೂ ಮುಂದೆ 'ನೋಬೆಲ್ ಪ್ರಶಸ್ತಿ' ಸಿಕ್ಕಿತು. 'ಪಾಬ್ಲೋ ನೆರೂಡಾ,' ತಮ್ಮ ತಾಯಿಯವರ ಮಧ್ಯದ ಹೆಸರು, 'ನೆಫ್ತಾಲಿ' ಯನ್ನು ಸ್ವಲ್ಪಕಾಲ 'ಕಾವ್ಯನಾಮ'ವನ್ನಾಗಿ ಇಟ್ಟುಕೊಂಡಿದ್ದರು. ನಂತರ ಆ ಹೆಸರನ್ನು ಬದಲಾಯಿಸಿ,'ಪಾಬ್ಲೋ ನೆರೂಡಾ' ಕಾವ್ಯನಾಮವನ್ನು ಬಳಸಲಾರಂಭಿಸಿದ್ದು ಇದೇ ಸಮಯದಲ್ಲಿ. ಸನ್ ೧೯೪೬ ರಲ್ಲಿ ಅದೇ ಹೆಸರನ್ನು ಅಧಿಕೃತಗೊಳಿಸಿಕೊಂಡರು.

'ಪಾಬ್ಲೋ ನೆರೂಡಾ'ರವರ ಕೃತಿಗಳು[ಬದಲಾಯಿಸಿ]

'ಪಾಬ್ಲೋ' ರವರು, 'ಸ್ಯಾಂಟಿಯಾಗೋ ವಿಶ್ವವಿದ್ಯಾಲಯ'ದಲ್ಲಿ ಫ್ರೆಂಚ್ ಭಾಷೆಯನ್ನು ಕಲಿತು ಅಧ್ಯಾಪಕನಾಗುವ ಆಶೆಯನ್ನು ಪ್ರಕಟಪಡಿಸಿದ್ದರು. ಆದರೆ ಆದದ್ದು ಕವಿಯಾಗಿ. ಕಮ್ಯೂನಿಸ್ಟ್ ಚಿಂತಕನಾಗಿ ರಾಜಕೀಯವಲಯದಲ್ಲಿ ಕೆಲಸಮಾಡಿದರು. ೧೯೨೩ ರಲ್ಲಿ ಪ್ರಕಟವಾದ 'ಪಾಬ್ಲೋ ನೆರೂಡಾ' ರವರ ಮೊದಲ ಕಾವ್ಯಕೃತಿ, ’ಕ್ರೆಪುಸ್ಕುಲಾರಿಯೋ’ [ಮುಸ್ಸಂಜೆಗಳ ಪುಸ್ತಕ], ೧೯೨೪ ರಲ್ಲಿ, ’ವೆಯಿಂಟೆ ಪೊಯೆಮ’ [ಇಪ್ಪತ್ತು ಪ್ರೇಮಗೀತೆಗಳು ಮತ್ತು ಒಂದು ಹತಾಶೆಯ ಹಾಡು], ಎಂಬ ಪುಸ್ತಕ ಪ್ರಕಟವಾಯಿತು. ಇದೊಂದು ಪ್ರೇಮಕಾವ್ಯ ಸಂಕಲನ. ಇದರಲ್ಲಿರುವ ಮುಕ್ತತೆಗಾಗಿ ಕವಿ, ಆಗ ಸಂಪ್ರದಾಯನಿಷ್ಠರ ಟೀಕೆಗಳಿಗೂ ಒಳಗಾಗಿದ್ದರು.

'ಪಾಬ್ಲೋ ನೆರೂಡಾ' ಕಮ್ಯುನಿಸ್ಟ್ ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸಿದರು[ಬದಲಾಯಿಸಿ]

ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ 'ಪಾಬ್ಲೋ ನೆರೂಡಾ' ಚಿಲಿಯಲ್ಲಿ ಈ ಪಕ್ಷ ಅಧಿಕಾರದಲ್ಲಿದ್ದಾಗ ತಮ್ಮ ೨೩ ನೆಯ ವಯಸ್ಸಿನಲ್ಲಿ ಬರ್ಮಾದೇಶದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದರು. ೧೯೪೩ ರಲ್ಲಿ 'ಪಾಬ್ಲೋ ನೆರೂಡಾ' ಚಿಲಿಗೆ ಮರಳಿಬಂದು, ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ೧೯೪೬ ರಲ್ಲಿ ವಿಡೇಲಾನಪರವಾಗಿ ಪ್ರಚಾರದಲ್ಲಿ ಭಾಗವಹಿಸಿದ್ದ ನೆರ್ ಮುಂದೆ ಅವರನ್ನು ಟೀಕಿಸಿದ ಕಾರಣಕ್ಕಾಗೆ ತಲೆಮರೆಸಿಕೊಂಡು ನಾಪತ್ತೆಯಾಗಬೇಕಾಯಿತು. ೧೯೪೯ ರಲ್ಲಿ ಚಿಲಿದೇಶದಿಂದ ಪರಾರಿಯಾದ 'ಪಾಬ್ಲೋ ನೆರೂಡಾ' ಅರ್ಜೆಂಟೀನಾ ದೇಶಕ್ಕೆ ಹೋಗಿ,ಅಲ್ಲಿ ಆಶ್ರಯ ಪಡೆದರು. ಆ ಸಂದರ್ಭದಲ್ಲಿ ಕ್ಯಾಂಟೋ ಜನರಲ್ ಯೆಂಬ ಕಾವ್ಯ ಕೃತಿಯನ್ನು ಬರೆದರು.

ಯೂರೋಪ್ ಪ್ರವಾಸ[ಬದಲಾಯಿಸಿ]

ಅಲ್ಲಿಂದ ಮುಂದೆ ಸಾಹಿತಿ ರಾಜತಾಂತ್ರಿಕ, 'ಮಿಗೆಲ್ ಎಂಜೆಲೋ ಆಸ್ಟುರಿಯಾಸ್' ರ 'ಪಾಸ್ ಪೋರ್ಟ್' ನ್ನು ಬಳಸಿಕೊಂಡು ಯೂರೋಪಿಗೆ ಬಂದರು. ಇವರಿಬ್ಬರೂ ನೋಡಲು ಒಂದೇ ತರಹ ಇದ್ದರು. ಈ ಆಸ್ಟುರಿಯಸ್ ಸಹಿತ ಮುಂದೆ ನೋಬೆಲ್ ಪ್ರಶಸ್ತಿಗಳಿಸಿದರು. ಯೂರೋಪಿನಲ್ಲಿ 'ಪಾಬ್ಲೋ ನೆರೂಡಾ' ಭಾರತವೂ ಸೇರಿದಂತೆ ಹಲವಾರು ದೇಶಗಳಿಗೆ ಹೋಗಿಬಂದರು. ೧೯೭೦ ರಲ್ಲಿ 'ಸಾಲ್ವದೋರ್ ಎಲ್ಲೆಂದೆ' ಅಧಿಕಾರವಹಿಸಿಕೊಂಡಾಗ 'ಪಾಬ್ಲೋ ನೆರೂಡಾ' ರನ್ನು ಫ್ರಾನ್ಸ್ ದೇಶಕ್ಕೆ ಚಿಲಿಯ ರಾಯಭಾರಿಯಾಗಿ ಕಳಿಸಿದರು. ೧೯೭೨ ರಲ್ಲಿ 'ಎಲ್ಲೆಂದೆ ಸರಕಾರ' ಪತನವಾದಾಗ 'ಪಾಬ್ಲೋ ನೆರೂಡಾ' ರು ಅಪಘಾತಕ್ಕೊಳಗಾದರು. ’ಕ್ಯಾನ್ಸರ್ ಚಿಕಿತ್ಸೆ’ಗಾಗಿ ಆಸ್ಪತ್ರೆಗೆ ದಾಖಲಾದ'ಪಾಬ್ಲೋ ನೆರೂಡಾ'ರವರು ಹೃದಯಾಘಾತದಿಂದ ಅಸುನೀಗಿದರು.'ಪಾಬ್ಲೋ ನೆರೂಡಾ'ರವರ ’ಪ್ರೇಮಗೀತೆಗಳ ಸಂಕಲನಗಳು, ಆ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿವೆ. ಆದರೆ ವಿಮರ್ಶಕ ಮೆಚ್ಚುಗೆ ಗಳಿಸಿದ್ದು ಅವರ ’ಸರ್ರಿಯಲಿಸ್ಟ್’ ಕವಿತೆಗಳು.

ಲ್ಯಾಟಿನ್ ಅಮೆರಿಕದ ಅತ್ಯಂತ ಪ್ರಭಾವಿ,ಜನಪ್ರಿಯ-ಕವಿ[ಬದಲಾಯಿಸಿ]

೧೯೪೩ ರಲ್ಲಿ ಅವರು ಪಾಳುಬಿದ್ದ ಪ್ರಸಿದ್ಧ ’ಇಂಕಾನಗರ’ ’ಮಚ್ಚುಪಿಚ್ಚು’ವಿಗೆ ಭೇಟಿಕೊಟ್ಟರು. ಆಗ ಅವರು ರಚಿಸಿದ ಕವನ ’ಆಲ್ತುರಾಸ್ ಡಿ ಮಚ್ಚುಪಿಚ್ಚು’ ಅತ್ಯಂತ ಶ್ರೇಷ್ಠ ಕಾವ್ಯವೆಂದು ವಿಮರ್ಶಕರ ಮಾನ್ಯತೆ ಪಡೆಯಿತು. ೧೨ ಭಾಗಗಳ ಪೂರ್ಣಪ್ರಮಾಣದ ಕಾವ್ಯಕೃತಿಯಾಗಿದೆ. ಇದರಲ್ಲಿ ನೆರೂಡಾ ಪ್ರಾಚೀನ ನಗರದ ಅದ್ಭುತ ಸೌಂದರ್ಯ, ಅದನ್ನು ನಿರ್ಮಿಸಿದ ಸಾಧನೆಯನ್ನು ಮೆಚ್ಚುವ ಜನತೆಗೆ ಅದನ್ನು ಸಾಧ್ಯವಾಗಿಸಿದ ಗುಲಾಮಗಿರಿಯನ್ನು ಖಂಡಿಸುತ್ತಾರೆ. ’ಈಜಿಪ್ಟ್ ನ ಪಿರಿಮಿಡ್’ ನಂತೆ ’ಮಚ್ಚುಪಿಚ್ಚುವಿನಂತಹ ಕಲ್ಪನಾತೀತ ಮಾನವ ಸಾಧನೆ’ ಯಹಿಂದೆ ಆ ಕಾಲದಲ್ಲಿ ಇದ್ದ ’ಗುಲಾಮಗಿರಿಯ ಕೊಡುಗೆ’ಯೂ ಇದೆ. ಮನುಷ್ಯರ ಜೀವಕ್ಕೆ ಬೆಲೆಕೊಡದೆ ದುಡಿಸಿದಾಗ ಮಾತ್ರ ಅಂತಹ ಸಾಧನೆಗಳು ಸಾಧ್ಯವಾಗುತ್ತವೆ. ಅಂತಹ ಚಿಂತನೆಯ ಆಯಾಮವನ್ನೂ ಪಾಬ್ಲೋ ರ ಕಾವ್ಯ ಒಳಗೊಂಡು ಒಂದು ಶ್ರೇಷ್ಠ ಕಾವ್ಯಕೃತಿಯಾಗಿ ಮೂಡಿಬಂದಿದೆ. ಇಂತಹದೇ ವೈಚಾರಿಕತೆಯನ್ನು ’ಕ್ಯಾಂಟೋ ಜನರಲ್’ ನಲ್ಲಿ ಕೂಡಾ ನಾವು ಕಾಣಬಹುದು.ಲ್ಯಾಟಿನ್ ಅಮೆರಿಕದ ಜನಸಾಮಾನ್ಯರ ನೋವು-ನಲಿವುಗಳಿಗೆ, ಹಾಗೂ ಅತಂತ್ರ ಪರಿಸ್ಥಿತಿಗಳಿಗೆ ಪಾಬ್ಲೋ ನ ತಮ್ಮ ಕಾವ್ಯದಲ್ಲಿ ಸಾಂತ್ವನಹೇಳಲು ಪ್ರಯತ್ನಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. Patrick M. O'Neil, Great World Writers: Twentieth Century, Marshall Cavendish, 2004, p. 1062.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]