ಪಾತ್ರೆ ತೊಳೆಯುವ ಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾತ್ರೆ ತೊಳೆಯುವ ಯಂತ್ರದ ಒಳಭಾಗ
ಪಾತ್ರೆ ತೊಳೆಯುವ ಯಂತ್ರದ ನೀಲಿನಕ್ಷೆ

ಪಾತ್ರೆ ತೊಳೆಯುವ ಯಂತ್ರವು ಸ್ವಯಂ ಚಾಲಿತವಾಗಿ ಪಾತ್ರೆಗಳನ್ನು ತೊಳೆಯುತ್ತದೆ ಮತ್ತು ಒಣಗಿಸುತ್ತದೆ. ಕೊಳೆ ನಿವಾರಕಗಳನ್ನೊಳಗೊಂಡ ಬಿಸಿ ನೀರು ಅವುಗಳನ್ನು ತೊಳೆಯುತ್ತದೆ. ಹೋಟೆಲುಗಳಿಗೆ ರೂಪಿಸಲಾದ ಮೊದಲನೆಯ ಪಾತ್ರೆ ತೊಳೆಯುವ ಯಂತ್ರವು ಕನ್ವೇಯರ್ ಬೆಲ್ಟ್ ಅಧಾರದ ಮೇಲೆ ಕೆಲಸ ಮಾಡುತ್ತದೆ. ಇನ್ನೊಂದು ಮಾದರಿಯ ಪಾತ್ರೆ ತೊಳೆಯುವ ಯಂತ್ರವು ಗಾಜಿನ ಲೇಪನ ಮಾಡಿರುವ ಕೋಣೆಯಲ್ಲಿ ಇಡಲಾಗುತ್ತದೆ.ಕೆಳಗೆ ಪ್ಲಾಸ್ಟಿಕ್ ಲೇಪಿತ ಬುಟ್ಟಿಯನ್ನು ಅಳವಡಿಸಲಾಗುತ್ತದೆ. ಬಾಗಿಲಿಗೆ ಸ್ವಿಚ್ ಅಳವಡಿಸಲಾಗಿದೆ.[೧]

ನೀರು ಸರಬರಾಜು[ಬದಲಾಯಿಸಿ]

ಈ ಯಂತ್ರಕ್ಕೆ ನೀರಿನ ಸಂಪರ್ಕವನ್ನು ಹಾಲಿ ಇರುವ ನಲ್ಲಿಗಳಿಗೆ ಕೊಳವೆಗಳನ್ನು ಜೋಡಿಸಿ, ಅಥಾವ ಶಾಶ್ವತವಾಗಿ ಕೊಳಾಯಿಯನ್ನು ಮಾಡಿ ಒದಗಿಸಬಹುದು. ಹೆಚ್ಚಿನ ಯಂತ್ರಗಳು ಈಗ ಬಿಸಿ ಮತ್ತು ತಣ್ಣೀರನ್ನು ಪಡೆಯುತ್ತದೆ. ಆದರೆ ಅವುಗಳಲ್ಲಿ ತಮ್ಮದೆ ಆದ ಕಾಯಿಸುವ ವಿಭಾಗವು ಇರುತ್ತದೆ. ಅನಗತ್ಯ ನೀರನ್ನು ಹೊರಗೆ,ಕಳುಹಿಸಲು,ಒಂದು ಕೊಳವೆಯ ಮುಖಾಂತರ ಪಂಪ್ ಮಾಡಲಾಗುತ್ತದೆ. ನೀರಿನ ಒತ್ತಡವು ೫೦ರಿಂದ ೭೦ ಡಿಗ್ರಿ ಸಿ, ವರೆಗಿದ್ದು ನಮ್ಮ ಕೈಗಳು ತಡೆಯಬಹುದಾದುದಕ್ಕಿಂತ ಹೆಚ್ಚು ಬಿಸಿಯಾಗಿರುತ್ತದೆ.[೨]


ಕಾರ್ಯ ವಿಧಾನ[ಬದಲಾಯಿಸಿ]

ಪಾತ್ರೆ ತೊಳೆಯುವ ಯಂತ್ರವು ತೊಳೆಯಬೇಕಾಗಿರುವ ಪಾತ್ರೆಗಳ ವಿಧಗಳು ಮತ್ತು ತೆಗೆದು ಹಾಕಬೇಕಾಗಿರುವ ಉಳಿದ ಆಹಾರದ ವಿಧವನ್ನು ಅನುಸರಿಸಿ ಕೆಲಸ ಮಾಡುತ್ತದೆ.ಒಂದು ಮಾದರಿಯ ಕಾರ್ಯ ವಿಧಾನವು ತಣ್ಣನೆಯ ಅಥಾವ ಬಿಸಿ ನೀರಿನ ಜಾಲಿಸುವಿಕೆಯಿಂದ ಪ್ರಾರಂಭವಾಗಿ, ಕೊಳೆನಿವಾರಕದಿಂದ ಬಿಸಿನೀರಿನ ತೊಳೆಯುವಿಕೆ ಮುಂದುವರಿದು ಅನೇಕ ಜಾಲಿಸುವಿಕೆಯಲ್ಲಿ ಮುಕ್ತಾಯಗೊಳ್ಳುತ್ತದೆ.ಕೆಲವು ಯಂತ್ರಗಳು ಶಾಖದ ಮೂಲಕ್ಕಾಗಿ ಪಾತ್ರೆಗಳನ್ನು ಒಣಗಿಸುತ್ತದೆ.

ತೊಳೆಯುವ ಮತ್ತು ಜಾಲಿಸುವ ನೀರನ್ನು ಪಾತ್ರೆ ಬುಟ್ಟಿಯ ಕೆಳಗಿನಿಂದ ಮತ್ತು ಮೇಲಿನಿಂದ ನೀರನ್ನು ಒದಗಿಸುವ,ಸುತ್ತುವ ಕೈಗಗಳಿಂದ ಸಿಂಪಡಿಸಲಾಗುತ್ತದೆ.ಈ ಪ್ರತಿಯೊಂದು ಕೈಯಲ್ಲೂ ಅನೇಕ ಸಿಂಪಡಿಸುವ ರಂಧ್ರಗಳಿರುತ್ತದೆ.ಕೊಳೆ ನಿವಾರಕ ಮತ್ತು ಜಾಲಿಸುವ ಸಹಾಯಕಗಳು,ಡಿಸ್ಟೆನ್ಸರ್ ಗಳಲ್ಲಿ ಶೇಕರವಾಗಿದ್ದು,ಒಂದು ಸುತ್ತುವಿಕೆಯಲ್ಲಿ ಸರಿಯಾದ ಜಾಗದಲ್ಲಿ ಸರಿಯಾದ ಪ್ರಮಾಣವನ್ನು, ತನಗೆ ತಾನೇ ಬಿಡುಗಡೆ ಮಾಡುತ್ತದೆ.ಆರಿಸಿದ ಈ ಸುತ್ತನ್ನು ಸಮಯದ ಸಾಧನವು ತಾನೇ ನಿಯಂತ್ರಿಸುತ್ತದೆ. ಅನೇಕ ಸಲ, ಅಳತೆ ಮಾಡಿರುವ ದುಂಡಾದ ಗುಬುಟಗಳ ಸಹಾಯದಿಂದ ಕೆಲಸ ಮಾಡುತ್ತದೆ.ಕೆಲವು ಯಂತ್ರಗಳಲ್ಲಿ ಮಾರ್ಗದರ್ಶಿ ದೀಪಗಳಿದ್ದು ಸುತ್ತಿನ ಯಾವ ಭಾಗವು ಆಗ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ. ಕೆಲವು ಸಲ ಗುಬುಟಗಳಿಗೆ ಒತ್ತು ಮತ್ತು ಎಳಿ ಆರಿಸು ಮತ್ತು ಹೊತ್ತಿಸುವ ಕೆಲಸವನ್ನು ಜೋಡಿಸಲಾಗಿದ್ದು, ಯಾವುದೇ ಕಾಲದಲ್ಲಿ ಪಾತ್ರೆಗಳನ್ನು ಒಳಗೆ ಹಾಕುವ ಮತ್ತು ತೆಗೆಯುವ ಕೆಲಸಕ್ಕೆ ತಿರುಗುವಿಕೆಯನ್ನು ನಿಲ್ಲಿಸಬಹುದು.

ಉಲ್ಲೇಖ[ಬದಲಾಯಿಸಿ]

  1. http://www.mirror.co.uk/news/uk-news/made-in-the-uk-the-life-changing-everyday-innovations-1294240
  2. http://www.popsci.com/gadgets/article/2010-11/archive-gallery-kitchens-tomorrow-1950s-edition