ಪಾತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಲ್ಪನಿಕ ಕೃತಿಯಲ್ಲಿ (ಉದಾಹರಣೆಗೆ ಕಾದಂಬರಿ, ನಾಟಕ, ದೂರದರ್ಶನ ಧಾರಾವಾಹಿ, ಚಲನಚಿತ್ರ ಅಥವಾ ವೀಡಿಯೊ ಗೇಮ್), ಪಾತ್ರ (ಕೆಲವೊಮ್ಮೆ ಕಾಲ್ಪನಿಕ ಪಾತ್ರ ಎಂದು ಕರೆಯಲ್ಪಡುತ್ತದೆ) ಎಂದರೆ ಒಬ್ಬ ವ್ಯಕ್ತಿ ಅಥವಾ ಕೃತಿಯಲ್ಲಿನ ಇತರ ಜೀವಿ.[೧][೨] ಪಾತ್ರವು ಸಂಪೂರ್ಣವಾಗಿ ಕಾಲ್ಪನಿಕವಾಗಿರಬಹುದು ಅಥವಾ ನಿಜಜೀವನದ ವ್ಯಕ್ತಿಯ ಮೇಲೆ ಆಧಾರಿತವಾಗಿರಬಹುದು, ಈ ಸಂದರ್ಭದಲ್ಲಿ "ಕಾಲ್ಪನಿಕ" ಮತ್ತು "ನೈಜ" ಪಾತ್ರದ ನಡುವೆ ವ್ಯತ್ಯಾಸ ಮಾಡಬಹುದು. ಪಾತ್ರ, ವಿಶೇಷವಾಗಿ ಒಬ್ಬ ನಟನಿಂದ ರಂಗಭೂಮಿ ಅಥವಾ ಚಲನಚಿತ್ರದಲ್ಲಿ ಅಭಿನಯಿಸಲ್ಪಟ್ಟಾಗ, "ಒಬ್ಬ ವ್ಯಕ್ತಿಯಾಗುವ ಕಲ್ಪನೆಯನ್ನು" ಒಳಗೊಳ್ಳುತ್ತದೆ. ಸಾಹಿತ್ಯದಲ್ಲಿ, ಪಾತ್ರಗಳು ಓದುಗರಿಗೆ ಅವುಗಳ ಕತೆಗಳಲ್ಲಿ ಮಾರ್ಗದರ್ಶನ ಮಾಡುತ್ತವೆ, ಅವರಿಗೆ ಕಥಾವಸ್ತುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಿಷಯಗಳನ್ನು ವಿಚಾರಮಾಡಲು ನೆರವಾಗುತ್ತವೆ.[೩] ೧೯ನೇ ಶತಮಾನದಿಂದ, ನಟರು ಅಥವಾ ಬರಹಗಾರರು ಅಭ್ಯಸಿಸುವ ಪಾತ್ರಗಳನ್ನು ಸೃಷ್ಟಿಸುವ ಕಲೆಯನ್ನು ಪಾತ್ರಚಿತ್ರಣ ಎಂದು ಕರೆಯಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Matthew Freeman (2016). Historicising Transmedia Storytelling: Early Twentieth-Century Transmedia Story Worlds. Routledge. pp. 31–34. ISBN 978-1315439501. Retrieved January 19, 2017.
  2. Maria DiBattista (2011). Novel Characters: A Genealogy. John Wiley & Sons. pp. 14–20. ISBN 978-1444351552. Retrieved January 19, 2017.
  3. Roser, Nancy; Miriam Martinez; Charles Fuhrken; Kathleen McDonnold. "Characters as Guides to Meaning". The Reading Teacher. 6 (6): 548–559.
"https://kn.wikipedia.org/w/index.php?title=ಪಾತ್ರ&oldid=967619" ಇಂದ ಪಡೆಯಲ್ಪಟ್ಟಿದೆ