ಪಾಂತಾ ಭಾತ್

ವಿಕಿಪೀಡಿಯ ಇಂದ
Jump to navigation Jump to search
Panta Ilish.jpg

ಪೋಯಿತಾ ಭಾತ್ ಅಥವಾ ಪಾಂತಾ ಭಾತ್ ಅನ್ನದ ಒಂದು ಖಾದ್ಯವಾಗಿದೆ. ಅನ್ನವನ್ನು, ಸಾಮಾನ್ಯವಾಗಿ ಉಳಿದಿರುವ ಅನ್ನವನ್ನು ನೀರಿನಲ್ಲಿ ರಾತ್ರಿ ಇಡೀ ನೆನೆಸಿ ಇದನ್ನು ತಯಾರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಇದನ್ನು ಬೆಳಿಗ್ಗೆ ಹೊತ್ತು ಉಪ್ಪು, ಈರುಳ್ಳಿ ಮತ್ತು ಮೆಣಸಿನಕಾಯಿಯೊಂದಿಗೆ ಬಡಿಸಲಾಗುತ್ತದೆ. ಇದನ್ನು ಬಾಂಗ್ಲಾದೇಶ ಮತ್ತು ಪೂರ್ವ ಭಾರತದ ರಾಜ್ಯಗಳಾದ ಬಿಹಾರ್, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರಾಗಳಲ್ಲಿ ಸೇವಿಸಲಾಗುತ್ತದೆ. ಇದು ಪಹೇಲಾ ಬೈಸಾಖ್ ಅಥವಾ ಬಂಗಾಳಿ ಹೊಸ ವರ್ಷದ ದಿನದಂದು ಜನಪ್ರಿಯ ಖಾದ್ಯವಾಗಿದೆ. ಇದನ್ನು ೧೭ನೇ ಶತಮಾನದ ದಸ್ತಾವೇಜುಗಳಲ್ಲಿ ವರ್ಣಿಸಲಾಗಿದೆ. ಪಾಂತಾ ಭಾತ್ ತಾಜಾ ಅನ್ನಕ್ಕಿಂತ ಹೆಚ್ಚು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತದೆ. ಸಾಂಪ್ರದಾಯಿಕವಾಗಿ ಇದು ಜ್ವರದ ಪರಿಸ್ಥಿತಿಗಳಲ್ಲಿ ಪ್ರಯೋಜನಕಾರಿಯಾಗಿರುತ್ತದೆ ಎಂದು ಪರಿಗಣಿಸಲಾಗುತ್ತದೆ.

ಪಾಂತಾ ಭಾತ್‍ನ್ನು ಹಲವುವೇಳೆ ಕರಿದ ಮೀನು ಅಥವಾ ತರಕಾರಿ ಕರಿ ಅಥವಾ ಅವಲಕ್ಕಿ, ಒಣ ಕಬ್ಬು ಅಥವಾ ತಾಳೆ ಕಾಕಂಬಿ (ಬೆಲ್ಲ) ಮತ್ತು ಮೊಸರಿನೊಂದಿಗೆ ಬಡಿಸಲಾಗುತ್ತದೆ.[೧] ತಿನ್ನುವ ಮೊದಲು ನೀರನ್ನು ತೆಗೆದು ಬಿಡಲಾಗುತ್ತದೆ. ಕೆಲವೊಮ್ಮೆ ಖಾದ್ಯ ತೈಲಗಳನ್ನು ಸೇರಿಸಬಹುದು.[೨]

ಉಲ್ಲೇಖಗಳು[ಬದಲಾಯಿಸಿ]

  1. Enamul Haq (2012). "Customs and Traditions". In Islam, Sirajul; Jamal, Ahmed A. (eds.). Banglapedia: National Encyclopedia of Bangladesh (Second ed.). Asiatic Society of Bangladesh.
  2. Narendra S. Bisht and T. S. Bankoti, Encyclopaedic Ethnography of the Himalayan Tribes: R-Z (Volume 4), Page 1336, Global Vision, 2004, ISBN 9788187746959