ಪರಿಸರ-ಜಲವಿಜ್ಞಾನ
ಪರಿಸರ-ಜಲವಿಜ್ಞಾನ (ಗ್ರೀಕ್ ಭಾಷೆಯ οἶκος, ಇಕೋಸ್ , "ಮನೆಗೆ ಸಂಬಂಧಿಸಿದ"; ὕδωρ, ಹೈಡೊರ್ , "ನೀರು"; ಮತ್ತು -λογία, -ಲೋಗಿಯಾ ಎಂಬ ಪದಗಳಿಂದ ಪಡೆದದ್ದು) ಎಂಬುದು ಒಂದು ಅಂತರಶಾಸ್ತ್ರೀಯ ಕ್ಷೇತ್ರವಾಗಿದ್ದು, ನೀರು ಮತ್ತು ಪರಿಸರ ವ್ಯವಸ್ಥೆಗಳ ನಡುವಿನ ಪರಸ್ಪರ ಪ್ರಭಾವಗಳನ್ನು ಅಧ್ಯಯನಮಾಡುವುದಕ್ಕೆ ಇದು ಮೀಸಲಾಗಿದೆ. ನದಿಗಳು ಮತ್ತು ಸರೋವರಗಳಂಥ ಜಲರಾಶಿಗಳ ಒಳಗೆ, ಅಥವಾ ನೆಲದ ಮೇಲಿರುವ ಕಾಡುಗಳು, ಮರುಭೂಮಿಗಳು, ಮತ್ತು ಭೂಮಿಗೆ ಸಂಬಂಧಿಸಿದ ಇತರ ಪರಿಸರ ವ್ಯವಸ್ಥೆಗಳಲ್ಲಿ ಈ ಪರಸ್ಪರ ಪ್ರಭಾವಗಳು ಸಂಭವಿಸಬಹುದು. ಬಾಷ್ಪವಿಸರ್ಜನೆ ಮತ್ತು ಸಸ್ಯದ ನೀರಿನ ಬಳಕೆ, ಜೀವಿಗಳು ತಮ್ಮ ನೀರಿನ ಪರಿಸರಕ್ಕೆ ಹೊಂದಿಕೊಂಡಿರುವುದು, ತೊರೆಯ ಹರಿವು ಮತ್ತು ಚಟುವಟಿಕೆಯ ಮೇಲಿನ ಸಸ್ಯವರ್ಗದ ಪ್ರಭಾವ, ಮತ್ತು ಪರಿಸರ ವಿಜ್ಞಾನದ ಪ್ರಕ್ರಿಯೆಗಳು ಹಾಗೂ ಜಲವಿಜ್ಞಾನದ ಚಕ್ರದ ನಡುವಿನ ಪರಿಣಾಮ ಮಾಹಿತಿಗಳು ಇವೆಲ್ಲವೂ ಪರಿಸರ-ಜಲವಿಜ್ಞಾನದಲ್ಲಿನ ಸಂಶೋಧನಾ ಕ್ಷೇತ್ರಗಳಲ್ಲಿ ಸೇರಿವೆ.
ಪ್ರಮುಖ ಪರಿಕಲ್ಪನೆಗಳು
[ಬದಲಾಯಿಸಿ]ಭೂಮಿಯ ಮೇಲ್ಮೈ ಮೇಲಿನ, ಭೂಮಿಗಿಂತ ಮೇಲ್ಮಟ್ಟದಲ್ಲಿನ ಮತ್ತು ಕೆಳಭಾಗದಲ್ಲಿನ ನೀರಿನ ನಿರಂತರ ಚಲನೆಯ ಕುರಿತಾಗಿ ಜಲವಿಜ್ಞಾನದ ಚಕ್ರವು ವಿವರಿಸುತ್ತದೆ. ಈ ಹರಿವು ಹಲವಾರು ಹಂತಗಳಲ್ಲಿ ಪರಿಸರ ವ್ಯವಸ್ಥೆಗಳಿಂದ ಮಾರ್ಪಡಿಸಲ್ಪಡುತ್ತದೆ. ಸಸ್ಯಗಳಿಂದ ಹೊರಹೊಮ್ಮುವ ಬಾಷ್ಪವಿಸರ್ಜನೆಯು, ವಾತಾವರಣಕ್ಕೆ ಹರಿಯುವ ನೀರಿನ ಬಹುಭಾಗವನ್ನು ಪ್ರತಿನಿಧಿಸುತ್ತದೆ. ನೆಲದ ಮೇಲ್ಮೈನ ಮೇಲ್ಭಾಗದಲ್ಲಿ ನೀರು ಹರಿಯುವುದರಿಂದ, ಮೇಲ್ಮೈಯನ್ನು ಆವರಿಸಿಕೊಂಡಿರುವ ಸಸ್ಯಗಳ ಸಮುದಾಯದಿಂದ ನೀರು ಪ್ರಭಾವಿಸಲ್ಪಡುತ್ತದೆ ಮತ್ತು ನದಿ-ಕಾಲುವೆಗಳು ತಮ್ಮೊಳಗಿನ ಸಸ್ಯವರ್ಗಗಳಿಂದ ಆಕಾರ ಪಡೆದುಕೊಂಡಿರಲು ಸಾಧ್ಯವಿದೆ.
ಭೂಮಿಗೆ ಸಂಬಂಧಿಸಿದ ಮತ್ತು ನೀರಿಗೆ ಸಂಬಂಧಿಸಿದ ವ್ಯವಸ್ಥೆಗಳೆರಡನ್ನೂ ಪರಿಸರ-ಜಲವಿಜ್ಞಾನಿಗಳು ಅಧ್ಯಯನ ಮಾಡುತ್ತಾರೆ. ಭೂಮಿಗೆ ಸಂಬಂಧಿಸಿದ ಪರಿಸರ ವ್ಯವಸ್ಥೆಗಳಲ್ಲಿ (ಕಾಡುಗಳು, ಮರುಭೂಮಿಗಳು, ಮತ್ತು ಹುಲ್ಲುಗಾವಲುಗಳಂಥವು), ಸಸ್ಯವರ್ಗ, ನೆಲದ ಮೇಲ್ಮೈ, ವಡೋಸ್ ವಲಯ, ಮತ್ತು ಅಂತರ್ಜಲ ಇವುಗಳ ನಡುವಿನ ಪರಸ್ಪರ ಪ್ರಭಾವಗಳ ಮೇಲೆ ಪ್ರಧಾನವಾಗಿ ಗಮನಹರಿಸಲಾಗುತ್ತದೆ. ನೀರಿಗೆ ಸಂಬಂಧಿಸಿದ ಪರಿಸರ ವ್ಯವಸ್ಥೆಗಳಲ್ಲಿ (ನದಿಗಳು, ತೊರೆಗಳು, ಸರೋವರಗಳು, ಮತ್ತು ಜೌಗುಭೂಮಿಯಂಥವು), ಅವುಗಳ ರಚನೆ ಮತ್ತು ಚಟುವಟಿಕೆಯ ಮೇಲೆ ನೀರಿನ ಸಂಯೋಜನೆ, ಭೂರೂಪಶಾಸ್ತ್ರ, ಮತ್ತು ಜಲವಿಜ್ಞಾನ ಇವುಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತಾಗಿ ಒತ್ತುನೀಡಲಾಗುತ್ತದೆ.
ತತ್ತ್ವಗಳು
[ಬದಲಾಯಿಸಿ]ಪರಿಸರ-ಜಲವಿಜ್ಞಾನದ ತತ್ತ್ವಗಳನ್ನು ಮೂರು ಅನುಕ್ರಮಿಕ ಅಂಗಭಾಗಗಳಲ್ಲಿ ವ್ಯಕ್ತಪಡಿಸಲಾಗುತ್ತದೆ:
- ಜಲವಿಜ್ಞಾನದ ಭಾಗ: ಜಲಾನಯನ ಭೂಮಿಯೊಂದರ ಪರಿಮಾಣ ಮಾಪನವು, ಜಲವಿಜ್ಞಾನದ ಮತ್ತು ಜೈವಿಕ ಪ್ರಕ್ರಿಯೆಗಳ ಕಾರ್ಯಾತ್ಮಕ ಸಮನ್ವಯಕ್ಕೆ ಸಂಬಂಧಿಸಿದಂತೆ ಒಂದು ಮಾದರಿಯಾಗಿರಬೇಕಾಗುತ್ತದೆ.
- ಪರಿಸರ ವಿಜ್ಞಾನದ ಭಾಗ: ನದಿ ಜಲಾನಯನ ಭೂಮಿಯ ಶ್ರೇಣಿಪಟ್ಟಿಯಲ್ಲಿ ಸಮನ್ವಯಗೊಂಡ ಪ್ರಕ್ರಿಯೆಗಳನ್ನು ನಿರ್ದೇಶಿಸಲು ಸಾಧ್ಯವಿದ್ದು, ಇದರಿಂದ ಜಲಾನಯನ ಭೂಮಿಯ ಸಾಗಿಸುವ ಸಾಮರ್ಥ್ಯ ಮತ್ತು ಅದರ ಪರಿಸರ ವ್ಯವಸ್ಥೆಯ ಸೇವೆಗಳನ್ನು ವರ್ಧಿಸಬಹುದಾಗಿರುತ್ತದೆ.
- ಪರಿಸರ ವಿಜ್ಞಾನದ ಎಂಜಿನಿಯರಿಂಗ್ ಭಾಗ: ಇದು ಒಂದು ಸುಸಂಯೋಜನಾತ್ಮಕ ವ್ಯವಸ್ಥಾ ವಿಧಾನವನ್ನು ಆಧರಿಸಿದ, ಜಲವಿಜ್ಞಾನದ ಮತ್ತು ಪರಿಸರ-ವಿಜ್ಞಾನದ ಪ್ರಕ್ರಿಯೆಗಳ ನಿಯಂತ್ರಣವಾಗಿದ್ದು, ಸಮನ್ವಯಗೊಳಿಸಲಾದ ನೀರಿನ ಜಲಾನಯನ ಭೂಮಿಯ ನಿರ್ವಹಣೆಗೆ ಸಂಬಂಧಿಸಿದಂತಿರುವ ಒಂದು ಹೊಸ ಸಾಧನವಾಗಿ ಇದು ತನ್ಮೂಲಕ ಹೊರಹೊಮ್ಮುತ್ತದೆ.
ಪರೀಕ್ಷಣೀಯ ಊಹಾಸಿದ್ಧಾಂತವಾಗಿ ಅವುಗಳ ಅಭಿವ್ಯಕ್ತಿಯನ್ನು (ಝಾಲೆವ್ಸ್‌ಕಿ ಮತ್ತು ಇತರರು, ೧೯೯೭) ಈ ರೀತಿಯಲ್ಲಿ ಕಾಣಬಹುದು:
- H1: ಜಲವಿಜ್ಞಾನದ ಪ್ರಕ್ರಿಯೆಗಳು ಸಾಮಾನ್ಯವಾಗಿ ಜೀವಿಸಮೂಹವನ್ನು ನಿಯಂತ್ರಿಸುತ್ತವೆ
- H2: ಜಲವಿಜ್ಞಾನದ ಪ್ರಕ್ರಿಯೆಗಳನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದ ಒಂದು ಸಾಧನವಾಗಿ ಜೀವಿಸಮೂಹವನ್ನು ರೂಪಿಸಬಹುದಾಗಿದೆ
- H3: ನೀರು ಮತ್ತು ಪರಿಸರ ವ್ಯವಸ್ಥೆಯ ಸಮರ್ಥನೀಯ ಸೇವೆಗಳನ್ನು ಸಾಧಿಸುವ ಸಲುವಾಗಿ, ನಿಯಂತ್ರಣಗಳ ಈ ಎರಡು ಬಗೆಗಳನ್ನು (H1&H2) ಜಲ-ತಾಂತ್ರಿಕ ಮೂಲಸೌಕರ್ಯದೊಂದಿಗೆ ಸಮನ್ವಯಗೊಳಿಸಬಹುದಾಗಿದೆ
ಸಸ್ಯವರ್ಗ ಮತ್ತು ನೀರಿನ ಒತ್ತಡ
[ಬದಲಾಯಿಸಿ]ಸಸ್ಯಗಳ ಶರೀರವಿಜ್ಞಾನವು ನೀರಿನ ಲಭ್ಯತೆಯೊಂದಿಗೆ ನೇರವಾಗಿ ಸಂಬಂಧವನ್ನು ಹೊಂದಿದೆ ಎಂಬುದು ಪರಿಸರ-ಜಲವಿಜ್ಞಾನದಲ್ಲಿನ ಒಂದು ಮೂಲಭೂತ ಪರಿಕಲ್ಪನೆಯಾಗಿದೆ. ಮಳೆಕಾಡುಗಳಲ್ಲಿ ಇರುವಂತೆ, ಎಲ್ಲೆಲ್ಲಿ ನೀರು ಹೇರಳವಾಗಿದೆಯೋ, ಅಲ್ಲೆಲ್ಲಾ ಪೌಷ್ಟಿಕ ದ್ರವ್ಯದ ಲಭ್ಯತೆಯ ಮೇಲೆ ಸಸ್ಯಗಳ ಬೆಳವಣಿಗೆಯು ಹೆಚ್ಚು ಅವಲಂಬಿತವಾಗಿರುತ್ತದೆ. ಆದಾಗ್ಯೂ, ಆಫ್ರಿಕಾದ ಹುಲ್ಲುಗಾವಲುಗಳಂಥ ಅರೆ-ನಿರ್ಜಲ ಕ್ಷೇತ್ರಗಳಲ್ಲಿ, ಮಣ್ಣಿನಿಂದ ಸಸ್ಯಗಳು ಪಡೆದುಕೊಳ್ಳಲು ಸಾಧ್ಯವಿರುವ ನೀರಿನ ಪ್ರಮಾಣದೊಂದಿಗೆ ಸಸ್ಯವರ್ಗದ ಬಗೆ ಮತ್ತು ಹರಡಿಕೆಯು ನೇರವಾದ ಸಂಬಂಧವನ್ನು ಹೊಂದಿರುತ್ತದೆ. ಮಣ್ಣಿನಲ್ಲಿ ಲಭ್ಯವಿರುವ ನೀರಿನ ಪ್ರಮಾಣವು ಸಾಕಷ್ಟಿಲ್ಲದಿದ್ದಾಗ, ನೀರಿನ-ಒತ್ತಡದ ಪರಿಸ್ಥಿತಿಯೊಂದು ಸಂಭವಿಸುತ್ತದೆ. ನೀರಿನ-ಒತ್ತಡದ ಅಡಿಯಲ್ಲಿರುವ ಸಸ್ಯಗಳು ತಮ್ಮ ಬಾಹ್ಯಚರ್ಮದ ರಂಧ್ರಗಳನ್ನು ಮುಚ್ಚಿಕೊಳ್ಳುವ ಪ್ರತಿಸ್ಪಂದನೆಯೂ ಸೇರಿದಂತೆ, ಹಲವಾರು ಪ್ರತಿಕ್ರಿಯೆಗಳ ಮೂಲಕ ತಮ್ಮ ಬಾಷ್ಪವಿಸರ್ಜನೆ ಮತ್ತು ದ್ಯುತಿಸಂಶ್ಲೇಷಣೆಯ ಚಟುವಟಿಕೆಗಳನ್ನು ತಗ್ಗಿಸುತ್ತವೆ. ಮೇಲಾವರಣದ ನೀರಿನ ಹೊರಹೊಮ್ಮುವಿಕೆ ಮತ್ತು ಇಂಗಾಲದ ಡೈಯಾಕ್ಸೈಡ್‌ನ ಹೊರಹೊಮ್ಮುವಿಕೆಯಲ್ಲಿನ ಈ ತೆರನಾದ ಇಳಿಕೆಯು, ಸುತ್ತುವರೆದಿರುವ ಹವಾಮಾನ ಮತ್ತು ವಾಯುಗುಣದ ಮೇಲೆ ಒಂದು ಪ್ರಭಾವವನ್ನು ಬೀರಬಲ್ಲದಾಗಿರುತ್ತದೆ.
ಮಣ್ಣಿನ ತೇವಾಂಶದ ಚಾಲಕಶಕ್ತಿಗಳು
[ಬದಲಾಯಿಸಿ]ಮಣ್ಣಿನ ತೇವಾಂಶ ಎಂಬುದೊಂದು ಸಾರ್ವತ್ರಿಕ ಶಬ್ದವಾಗಿದ್ದು, ವಡೋಸ್ ವಲಯದಲ್ಲಿ, ಅಥವಾ ನೆಲದ ಕೆಳಭಾಗದಲ್ಲಿನ ಮಣ್ಣಿನ ಅಪರ್ಯಾಪ್ತ ಭಾಗದಲ್ಲಿ ಇರುವ ನೀರಿನ ಪ್ರಮಾಣವನ್ನು ಅದು ವಿವರಿಸುತ್ತದೆ. ನಿರ್ಣಾಯಕ ಜೈವಿಕ ಪ್ರಕ್ರಿಯೆಗಳನ್ನು ನಿರ್ವಹಿಸುವುದಕ್ಕಾಗಿ ಸಸ್ಯಗಳು ಈ ನೀರಿನ ಮೇಲೆ ಅವಲಂಬಿತವಾಗಿರುತ್ತವೆಯಾದ್ದರಿಂದ, ಪರಿಸರ-ಜಲವಿಜ್ಞಾನದ ಅಧ್ಯಯನದಲ್ಲಿ ಮಣ್ಣಿನ ತೇವಾಂಶವು ಒಂದು ಅವಿಭಾಜ್ಯ ಅಂಗವೆನಿಸಿಕೊಳ್ಳುತ್ತದೆ. ಮಣ್ಣಿನ ತೇವಾಂಶವನ್ನು ಸಾಮಾನ್ಯವಾಗಿ ನೀರಿನ ಅಂಶ , ಅಥವಾ ಆರ್ದ್ರೀಕರಣ ಎಂಬುದಾಗಿ ವಿವರಿಸಲಾಗುತ್ತದೆ. ಎಂಬ ಸಮೀಕರಣದ ಮೂಲಕ, ಈ ಶಬ್ದಗಳು ಸರಂಧ್ರತೆ ನಿಂದ ಸಂಬಂಧವನ್ನು ಹೊಂದಿವೆ. ಕಾಲಾನಂತರದಲ್ಲಿ ಮಣ್ಣಿನ ತೇವಾಂಶದಲ್ಲಿ ಆಗುವ ಬದಲಾವಣೆಗಳನ್ನು ಮಣ್ಣಿನ ತೇವಾಂಶದ ಚಾಲಕಶಕ್ತಿಗಳೆಂದು ಕರೆಯಲಾಗುತ್ತದೆ.
ಕಾಲಸೂಚಕ ಮತ್ತು ದೈಶಿಕ ಪರಿಗಣನೆಗಳು
[ಬದಲಾಯಿಸಿ]ಕಾಲಸೂಚಕ (ಸಮಯ) ಮತ್ತು ದೈಶಿಕ (ಅವಕಾಶ) ಸಂಬಂಧಗಳ ಪರಿಗಣನೆಗಳ ಮೇಲೆಯೂ ಪರಿಸರಜಲವಿಜ್ಞಾನದ ಸಿದ್ಧಾಂತವು ಪ್ರಾಮುಖ್ಯತೆಯನ್ನು ಇರಿಸುತ್ತದೆ. ಜಲವಿಜ್ಞಾನವು, ಅದರಲ್ಲೂ ನಿರ್ದಿಷ್ಟವಾಗಿ ಅವಕ್ಷೇಪನ ಘಟನೆಗಳ ಕಾಲಯೋಜನೆಯು, ಕಾಲಾನಂತರದಲ್ಲಿ ಪರಿಸರ ವ್ಯವಸ್ಥೆಯೊಂದು ವಿಕಸನಗೊಳ್ಳುವ ವಿಧಾನದಲ್ಲಿನ ಒಂದು ನಿರ್ಣಾಯಕ ಅಂಶವಾಗಿ ಹೊರಹೊಮ್ಮಬಹುದಾಗಿದೆ. ಉದಾಹರಣೆಗೆ, ಮೆಡಿಟರೇನಿಯನ್ ಪ್ರದೇಶದ ನೈಸರ್ಗಿಕ ಭೂಸಂಪನ್ಮೂಲಗಳು ಅಥವಾ ಭೂದೃಶ್ಯಗಳು ಶುಷ್ಕ ಬೇಸಿಗೆಗಳು ಮತ್ತು ತೇವದ ಚಳಿಗಾಲಗಳನ್ನು ಅನುಭವಿಸುತ್ತವೆ. ಸಸ್ಯವರ್ಗವು ಬೇಸಿಗೆಯು ಬೆಳೆಯುತ್ತಿರುವ ಋತುವೊಂದನ್ನು ಹೊಂದಿದ್ದರೆ, ಅದು ಅನೇಕವೇಳೆ ನೀರಿನ ಒತ್ತಡವನ್ನು ಅನುಭವಿಸುತ್ತದೆ; ವರ್ಷದಾದ್ಯಂತ ಕಂಡುಬರುವ ಒಟ್ಟು ಅವಕ್ಷೇಪನವು ಮಿತವಾಗಿರುವಾಗಲೂ ಇದು ಕಂಡುಬರಬಹುದಾಗಿದೆ. ನೀರು ಲಭ್ಯತೆಯು ಉನ್ನತವಾಗಿರುವ ಚಳಿಗಾಲದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ನೀರಿಗೆ ಬೇಡಿಕೆಯನ್ನು ಸಲ್ಲಿಸುವ ತೃಣವರ್ಗಗಳಿಗೆ ಬೆಂಬಲ ನೀಡುವ ಸಲುವಾಗಿ, ಈ ಪ್ರದೇಶಗಳಲ್ಲಿನ ಪರಿಸರ ವ್ಯವಸ್ಥೆಗಳು ವಿಶಿಷ್ಟವಾಗಿ ವಿಕಸನಗೊಂಡಿರುತ್ತವೆ, ಮತ್ತು ನೀರಿನ ಲಭ್ಯತೆಯು ಕಡಿಮೆಯಿರುವ ಬೇಸಿಗೆಯಲ್ಲಿ, ಜಲಕ್ಷಾಮಕ್ಕೆ-ಹೊಂದಿಕೊಂಡಿರುವ ಮರಗಳಿಗೆ ಬೆಂಬಲ ನೀಡುವ ರೀತಿಯಲ್ಲಿ ಅವು ವಿಕಸನಗೊಂಡಿರುತ್ತವೆ.
ಸಸ್ಯಗಳ ದೈಶಿಕ ಹರಡಿಕೆಯ ಹಿಂದಿರುವ ಜಲವಿಜ್ಞಾನದ ಅಂಶಗಳೊಂದಿಗೂ ಪರಿಸರ-ಜಲವಿಜ್ಞಾನವು ಸ್ವತಃ ಕಾಳಜಿಯನ್ನು ಹೊಂದಿರುತ್ತದೆ. ಸಸ್ಯಗಳ ಪ್ರಶಸ್ತವಾದ ಅಂತರ ಬಿಡುವಿಕೆ ಮತ್ತು ದೈಶಿಕ ಸಂಘಟನೆಯು, ನೀರಿನ ಲಭ್ಯತೆಯಿಂದ ಕನಿಷ್ಟಪಕ್ಷ ಆಂಶಿಕವಾಗಿ ನಿರ್ಣಯಿಸಲ್ಪಡುತ್ತದೆ. ಕಡಿಮೆ ತೇವಾಂಶದ ಮಣ್ಣನ್ನು ಹೊಂದಿರುವ ಪರಿಸರ ವ್ಯವಸ್ಥೆಗಳಲ್ಲಿನ ಮರಗಳು, ತಾವು ಉತ್ತಮವಾದ-ನೀರಿನ ವ್ಯವಸ್ಥೆಯಿರುವ ಕ್ಷೇತ್ರಗಳಲ್ಲಿರುವಾಗ ನೆಲೆಗೊಂಡಿರುವುದಕ್ಕಿಂತಲೂ ವಿಶಿಷ್ಟವಾಗಿ, ಮತ್ತಷ್ಟು ವಿರಳವಾಗಿ ನೆಲೆಗೊಂಡಿರುತ್ತವೆ.
ಮೂಲಭೂತ ಸಮೀಕರಣಗಳು ಮತ್ತು ಮಾದರಿಗಳು
[ಬದಲಾಯಿಸಿ]ಒಂದೆಡೆಯಲ್ಲಿನ ನೀರಿನ ಸಮತೋಲನ
[ಬದಲಾಯಿಸಿ]ಭೂದೃಶ್ಯ ಅಥವಾ ಭೂಮಿಯ ನೈಸರ್ಗಿಕ ಸನ್ನಿವೇಶದಲ್ಲಿ, ಒಂದೆಡೆಯಲ್ಲಿನ ನೀರಿನ ಸಮತೋಲನವು ಪರಿಸರ-ಜಲವಿಜ್ಞಾನದಲ್ಲಿನ ಒಂದು ಮೂಲಭೂತ ಸಮೀಕರಣವಾಗಿದೆ. ನೀರಿನ ಸಮತೋಲನವೊಂದು ವಿಶದೀಕರಿಸುವ ಪ್ರಕಾರ, ಮಣ್ಣನ್ನು ಪ್ರವೇಶಿಸುವ ನೀರಿನ ಪ್ರಮಾಣವು, ಮಣ್ಣನ್ನು ಬಿಡುವ ನೀರಿನ ಪ್ರಮಾಣ ಹಾಗೂ ಮಣ್ಣಿನಲ್ಲಿ ಶೇಖರಿಸಲ್ಪಟ್ಟ ನೀರಿನ ಪ್ರಮಾಣದಲ್ಲಿನ ಬದಲಾವಣೆಯ ಮೊತ್ತಕ್ಕೆ ಸಮಾನವಾಗಿರಬೇಕು. ನೀರಿನ ಸಮತೋಲನವು ನಾಲ್ಕು ಮುಖ್ಯ ಅಂಗಭಾಗಗಳನ್ನು ಹೊಂದಿದೆ. ಅವುಗಳೆಂದರೆ: ಮಣ್ಣಿನೊಳಗೆ ಅವಕ್ಷೇಪನದ ಒಳವ್ಯಾಪಿಸುವಿಕೆ, ಆವಿ ಬಾಷ್ಪೀಕರಣ, ಸಸ್ಯಕ್ಕೆ ಲಭ್ಯವಿಲ್ಲದ ಮಣ್ಣಿನ ಆಳವಾದ ಭಾಗಗಳೊಳಗೆ ಆಗುವ ನೀರಿನ ಸೋರಿಕೆ, ಮತ್ತು ನೆಲ ಮೇಲ್ಮೈಯಿಂದ ಹರಿದುಹೋದ ನೀರಿನ ಪ್ರಮಾಣ. ಈ ಕೆಳಗಿನ ಸಮೀಕರಣದಿಂದ ಇದನ್ನು ವಿವರಿಸಲಾಗುತ್ತದೆ:
ಸಮೀಕರಣದ ಎಡಭಾಗದಲ್ಲಿರುವ ಪರಿಮಾಣಗಳು, ಬೇರುಬಿಟ್ಟಿರುವ ವಲಯದಲ್ಲಿ ಸೇರಿಕೊಂಡಿರುವ ನೀರಿನ ಒಟ್ಟು ಪ್ರಮಾಣವನ್ನು ವಿವರಿಸುತ್ತವೆ. ಸಸ್ಯವರ್ಗಕ್ಕೆ ಸುಲಭಲಭ್ಯವಿರುವ ಈ ನೀರು, ಮಣ್ಣಿನ ಸರಂಧ್ರತೆಗೆ () ಸಮಾನವಾಗಿರುವ ಒಂದು ಪ್ರಮಾಣವನ್ನು ಹೊಂದಿದ್ದು, ಇದು ಅದರ ಆರ್ದ್ರೀಕರಣದಿಂದ () ಮತ್ತು ಸಸ್ಯದ ಬೇರುಗಳ () ಆಳದಿಂದ ಗುಣಿಸಲ್ಪಟ್ಟಿರುತ್ತದೆ. ಕಾಲಾನಂತರದಲ್ಲಿ ಮಣ್ಣಿನ ಆರ್ದ್ರೀಕರಣವು ಹೇಗೆ ಬದಲಾಗುತ್ತದೆ ಎಂಬುದನ್ನು ಎಂಬ ವಿಕಲ ಸಮೀಕರಣವು ವಿವರಿಸುತ್ತದೆ. ಮಳೆಸುರಿತ (), ಅವರೋಧನ (), ಹರಿದುಹೋದ ನೀರಿನ ಪ್ರಮಾಣ (), ಆವಿ ಬಾಷ್ಪೀಕರಣ (), ಮತ್ತು ಸೋರಿಕೆ () ಇವುಗಳ ಪ್ರಮಾಣಗಳನ್ನು ಸಮೀಕರಣದ ಬಲಭಾಗದಲ್ಲಿರುವ ಪರಿಮಾಣಗಳು ವಿವರಿಸುತ್ತವೆ. ಪ್ರತಿ ದಿನಕ್ಕಿರುವ ಮಿಲಿಮೀಟರುಗಳ (mm/d) ಪ್ರಮಾಣದಲ್ಲಿ ಇವನ್ನು ವಿಶಿಷ್ಟವಾಗಿ ನೀಡಲಾಗುತ್ತದೆ. ಹರಿದುಹೋದ ನೀರಿನ ಪ್ರಮಾಣ, ಆವಿಯಾಗುವಿಕೆ, ಮತ್ತು ಸೋರಿಕೆ ಇವೆಲ್ಲವೂ ಒಂದು ನಿರ್ದಿಷ್ಟ ಕಾಲದಲ್ಲಿನ ಮಣ್ಣಿನ ಆರ್ದ್ರೀಕರಣದ ಮೇಲೆ ಅತೀವವಾಗಿ ಅವಲಂಬಿತವಾಗಿರುತ್ತವೆ.
ಸಮೀಕರಣವನ್ನು ಬಿಡಿಸುವ ಸಲುವಾಗಿ, ಮಣ್ಣಿನ ತೇವಾಂಶದ ಒಂದು ಚಟುವಟಿಕೆಯಾಗಿ ಆವಿ ಬಾಷ್ಪೀಕರಣದ ಪ್ರಮಾಣವನ್ನು ತಿಳಿದಿರುವುದು ಅವಶ್ಯವಾಗಿರುತ್ತದೆ. ಒಂದು ನಿಶ್ಚಿತ ಆರ್ದ್ರೀಕರಣಕ್ಕಿಂತ ಮೇಲೆ, ಲಭ್ಯವಿರುವ ಬಿಸಿಲಿನಂಥ ಹವಾಮಾನದ ಅಂಶಗಳ ಮೇಲೆ ಮಾತ್ರವೇ ಆವಿಯಾಗುವಿಕೆಯು ಅವಲಂಬಿತವಾಗಿರುತ್ತದೆ ಎಂಬುದನ್ನು ವಿವರಿಸಲು ಈ ಮಾದರಿಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಹಂತಕ್ಕಿಂತಲೂ ಕೆಳಗೆ ಬಂದದ್ದೇ ಆದಲ್ಲಿ, ಮಣ್ಣಿನ ತೇವಾಂಶವು ಆವಿಯ ಬಾಷ್ಪೀಕರಣದ ಮೇಲೆ ನಿಯಂತ್ರಣಗಳನ್ನು ವಿಧಿಸುತ್ತದೆ, ಮತ್ತು ಸಸ್ಯವರ್ಗವು ಇನ್ನೆಂದೂ ಮತ್ತಷ್ಟು ನೀರನ್ನು ಪಡೆದುಕೊಳ್ಳಲು ಸಾಧ್ಯವಾಗದ ಹಂತಕ್ಕೆ ಮಣ್ಣು ತಲುಪುವವರೆಗೆ ಇದು ತಗ್ಗಿಸುತ್ತದೆ. ಮಣ್ಣಿನ ಈ ಮಟ್ಟವನ್ನು "ಕಾಯಂ ಬತ್ತಿಹೋಗುವ ಹಂತ" ಎಂಬುದಾಗಿ ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. ಈ ಶಬ್ದವು ಒಂದು ರೀತಿಯಲ್ಲಿ ಗೊಂದಲವುಂಟುಮಾಡುವಂತಿದೆ, ಏಕೆಂದರೆ ಅನೇಕ ಸಸ್ಯ ಜಾತಿಗಳು ವಾಸ್ತವವಾಗಿ "ಬತ್ತು"ವುದಿಲ್ಲ.
ಉಲ್ಲೇಖಗಳು
[ಬದಲಾಯಿಸಿ]- García-Santos, G.; Bruijnzeel, L.A.; Dolman, A.J. (2009). "Modelling canopy conductance under wet and dry conditions in a subtropical cloud forest". Journal Agricultural and Forest Meteorology. 149 (10): 1565-1572. doi:10.1016/j.agrformet.2009.03.008.
- ಇಕೋಹೈಡ್ರಾಲಜಿ ಇನ್ ಎ ಮಾಂಟೇನ್ ಕ್ಲೌಡ್ ಫಾರೆಸ್ಟ್ ಇನ್ ನ್ಯಾಷನಲ್ ಪಾರ್ಕ್ ಆಫ್ ಗಾರಾಜೊನೆ, ಲಾ ಗೊಮೆರಾ (ಕೆನರಿ ದ್ವೀಪಗಳು, ಸ್ಪೇನ್). ಗಾರ್ಸಿಯಾ-ಸ್ಯಾಂಟೋಸ್, G. (2007), PhD ಪ್ರೌಢಪ್ರಬಂಧ, ಆಮ್‌ಸ್ಟರ್‌ಡ್ಯಾಂ: VU ವಿಶ್ವವಿದ್ಯಾಲಯ. http://dare.ubvu.vu.nl/handle/1871/12697
- "ಗೈಡ್‌ಲೈನ್ಸ್ ಫಾರ್ ದಿ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಆಫ್ ದಿ ವಾಟರ್‌ಷೆಡ್ - ಫೈಟೋಟೆಕ್ನಾಲಜಿ & ಇಕೋಹೈಡ್ರಾಲಜಿ", ಲೇಖಕ: ಝಾಲೆವ್ಸ್‌ಕಿ, M. (2002) (ಸಂಪಾದಿತ) ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ ಫ್ರೆಶ್‌ವಾಟರ್ ಮ್ಯಾನೇಜ್‌ಮೆಂಟ್ ಸೀರೀಸ್ ಸಂ. 5. 188 ಪುಟಗಳು , ISBN 92-807-2059-7.
- "ಇಕೋಹೈಡ್ರಾಲಜಿ. ಎ ನ್ಯೂ ಪ್ಯಾರಡೈಮ್ ಫಾರ್ ದಿ ಸಸ್ಟೇನಬಲ್ ಯೂಸ್ ಆಫ್ ಅಕ್ವಾಟಿಕ್ ರಿಸೋರ್ಸಸ್", ಲೇಖಕರು: ಝಾಲೆವ್ಸ್‌ಕಿ, M., ಜಾನೌರ್, G.A. ಮತ್ತು ಜೋಲಂಕೈ, G. 1997. UNESCO IHP ಟೆಕ್ನಿಕಲ್ ಡಾಕ್ಯುಮೆಂಟ್ ಇನ್ ಹೈಡ್ರಾಲಜಿ ಸಂ. 7.; IHP - V ಪ್ರಾಜೆಕ್ಟ್ಸ್ 2.3/2.4, UNESCO ಪ್ಯಾರಿಸ್, 60 ಪುಟಗಳು.
- ಇಕೋಹೈಡ್ರಾಲಜಿ: ಡಾರ್ವಿನಿಸಂ ಎಕ್ಸ್‌ಪ್ರೆಷನ್ ಆಫ್ ವೆಜಿಟೇಷನ್ ಫಾರ್ಮ್ ಅಂಡ್ ಫಂಕ್ಷನ್ , ಲೇಖಕ: ಪೀಟರ್ S. ಈಗಲ್‌ಸನ್, 2002. [೧]
- ಇಕೋಹೈಡ್ರಾಲಜಿ - ವೈ ಹೈಡ್ರಾಲಜಿಸ್ಟ್ಸ್ ಶುಡ್ ಕೇರ್ , ರ್ಯಾಂಡಾಲ್ J. ಹಂಟ್ ಮತ್ತು ಡೋಗ್ಲಸ್ A. ವಿಲ್ಕಾಕ್ಸ್, 2003, ಗ್ರೌಂಡ್ ವಾಟರ್, ಸಂಪುಟ 41, ಸಂ. 3, ಪುಟ 289.
- ಇಕೋಹೈಡ್ರಾಲಜಿ: ಎ ಹೈಡ್ರಾಲಾಜಿಕ್ ಪರ್ಸ್ಪೆಕ್ಟಿವ್ ಆಫ್ ಕ್ಲೈಮೇಟ್-ಸಾಯಿಲ್-ವೆಜಿಟೇಷನ್ ಡೈನಮಿಕ್ಸ್ , ಇಗನೇಷಿಯೋ ರೋಡ್ರಿಗ್ಸ್-ಇಟರ್ಬೆ, 2000, ವಾಟರ್ ರಿಸೋರ್ಸಸ್ ರಿಸರ್ಚ್, ಸಂಪುಟ 36, ಸಂ. 1, ಪುಟಗಳು 3-9.
- ಇಕೋಹೈಡ್ರಾಲಜಿ ಆಫ್ ವಾಟರ್-ಕಂಟ್ರೋಲ್ಡ್ ಇಕೋಸಿಸ್ಟಮ್ಸ್: ಸಾಯಿಲ್ ಮಾಯಿಶ್ಚರ್ ಅಂಡ್ ಪ್ಲಾಂಟ್ ಡೈನಮಿಕ್ಸ್ , ಇಗನೇಷಿಯೋ ರೋಡ್ರಿಗ್ಸ್-ಇಟರ್ಬೆ, ಅಮಿಲ್‌ಕೇರ್ ಪೋರ್ಪೊರೇಟೊ, 2005. ISBN 0-521-81943-1
- ಡ್ರೈಲ್ಯಾಂಡ್ ಇಕೋಹೈಡ್ರಾಲಜಿ , ಪೌಲೋ ಡಿ'ಒಡೊರಿಕೊ, ಅಮಿಲ್‌ಕೇರ್ ಪೋರ್ಪೊರೇಟೊ, 2006. ISBN 1-4020-4261-2 [೨]
- ಇಕೋಹೈಡ್ರಾಲಜಿ ಡಿಫೈನ್ಡ್ , ವಿಲಿಯಂ ನಟ್ಲ್, 2004. [೩] Archived 2005-02-09 ವೇಬ್ಯಾಕ್ ಮೆಷಿನ್ ನಲ್ಲಿ.
- "ಆನ್ ಇಕಾಲಜಿಸ್ಟ್'ಸ್ ಪರ್ಸ್ಪೆಕ್ಟಿವ್ ಆಫ್ ಇಕೋಹೈಡ್ರಾಲಜಿ", ಡೇವಿಡ್ D. ಬ್ರೆಷಿಯರ್ಸ್, 2005, ಬುಲೆಟಿನ್ ಆಫ್ ದಿ ಇಕಾಲಜಿಕಲ್ ಸೊಸೈಟಿ ಆಫ್ ಅಮೆರಿಕಾ 86: 296-300. [೪]
- ಇಕೋಹೈಡ್ರಾಲಜಿ - ವೈಜ್ಞಾನಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಿರುವ ಒಂದು ಅಂತರರಾಷ್ಟ್ರೀಯ ನಿಯತಕಾಲಿಕ. ಪ್ರಧಾನ-ಸಂಪಾದಕರು: ಕೀತ್ ಸ್ಮೆಟೆಮ್, ಸಹಾಯಕ ಸಂಪಾದಕರು: ಡೇವಿಡ್ D. ಬ್ರೆಷಿಯರ್ಸ್, ಹ್ಯಾನ್ ಡಾಲ್ಮನ್ ಮತ್ತು ಜೇಮ್ಸ್ ಮೈಕೇಲ್ ವ್ಯಾಡಿಂಗ್ಟನ್ [೫][ಶಾಶ್ವತವಾಗಿ ಮಡಿದ ಕೊಂಡಿ]
- ಇಕೋಹೈಡ್ರಾಲಜಿ & ಹೈಡ್ರೋಬಯಾಲಜಿ - ಪರಿಸರ-ಜಲವಿಜ್ಞಾನ ಮತ್ತು ನೀರಿಗೆ ಸಂಬಂಧಿಸಿದ ಪರಿಸರ ವಿಜ್ಞಾನದ ಕುರಿತಾದ ಅಂತರರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕ (ISSN 1642-3593). ಸಂಪಾದಕರು: ಮೇಸಿಯೆಜ್ ಝಾಲೆವ್ಸ್‌ಕಿ, ಡೇವಿಡ್ M. ಹಾರ್ಪರ್, ರಿಚರ್ಡ್ D. ರೊಬಾರ್ಟ್ಸ್ [೬] Archived 2008-05-06 ವೇಬ್ಯಾಕ್ ಮೆಷಿನ್ ನಲ್ಲಿ.
- ವಾಟರ್ ಡೈನಮಿಕ್ಸ್ ಇನ್ ಎ ಲೌರೆಲ್ ಮಾಂಟೇನ್ ಕ್ಲೌಡ್ ಫಾರೆಸ್ಟ್ ಇನ್ ದಿ ಗ್ಯಾರಜೋನೆ ನ್ಯಾಷನಲ್ ಪಾರ್ಕ್ (ಕೆನರಿ ದ್ವೀಪಗಳು, ಸ್ಪೇನ್), ಗಾರ್ಸಿಯಾ-ಸ್ಯಾಂಟೋಸ್, G., ಮಾರ್ಜೋಲ್, M. V., ಮತ್ತು ಆಶ್ಚನ್, G. (2004), ಹೈಡ್ರಾಲ್. ಅರ್ತ್ ಸಿಸ್ಟ್. ಸೈ., 8, 1065-1075. http://www.hydrol-earth-syst-sci.net/8/1065/2004/hess-8-1065-2004.html
- Articles containing Ancient Greek (to 1453)-language text
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ನೀರಿಗೆ ಸಂಬಂಧಿಸಿದ ಪರಿಸರ ವಿಜ್ಞಾನ
- ಜಲವಿಜ್ಞಾನ
- ಮಣ್ಣಿನ ಭೌತವಿಜ್ಞಾನ
- ಪರಿಸರ ವಿಜ್ಞಾನ
- ಪರಿಸರ
- Pages using ISBN magic links