ವಿಷಯಕ್ಕೆ ಹೋಗು

ಆರ್ದ್ರೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್ದ್ರೀಕರಣ ಎಂದರೆ ಆರ್ದ್ರವಾತಾವರಣದಿಂದ ನೀರನ್ನು ಹೀರಿ ಕೊನೆಗೆ ಕರಗಿಹೋಗುವಂಥ ಕೆಲವು ಸ್ಫಟಿಕೀಯ ರಾಸಾಯನಿಕಗಳ ಗುಣ (ಡೆಲಿಕ್ವೆಸೆನ್ಸ್). ಕ್ಯಾಲ್ಸಿಯಂ ಕ್ಲೋರೈಡ್ (CaCl2), ಸತುವಿನ ಕ್ಲೋರೈಡ್ (ZnCl2), NaOH, KOH, MgCl2 ಉದಾಹರಣೆಗಳು. ಸ್ಫಟಿಕೀಯ ವಸ್ತು ನೀರನ್ನು ಹೀರುತ್ತದೋ ಇಲ್ಲವೋ ಎನ್ನುವುದು ಗಾಳಿಯಲ್ಲಿ ನೀರಿನ ಆವಿಒತ್ತಡ (ವೇಪರ್ ಪ್ರೆಶರ್), ಆ ವಸ್ತುವಿನ ಪರ್ಯಾಪ್ತ ದ್ರಾವಣದ (ಸ್ಯಾಚುರೇಟೆಡ್ ಸೊಲ್ಯೂಷನ್) ನೀರಿನ ಆವಿಯ ಒತ್ತಡ-ಇವುಗಳನ್ನು ಅವಲಂಬಿಸುತ್ತವೆ. ವಸ್ತು ನೀರಿನಲ್ಲಿ ವಿಲೀನವಾಗುವ ಗುಣ ಹೆಚ್ಚಾಗಿದ್ದಷ್ಟೂ ಅದು ಆರ್ದ್ರೀಕರಣ ತೋರುವುದು ಹೆಚ್ಚು. ಗಾಳಿಯಲ್ಲಿನ ಸಾಪೇಕ್ಷ ಆರ್ದ್ರತೆ (ರಿಲೇಟಿವ್ ಹ್ಯುಮಿಡಿಟಿ) ೩೦% ಭಾಗಕ್ಕೆ ಹೆಚ್ಚಾದಾಗ ಕ್ಯಾಲ್ಸಿಯಂ ಕ್ಲೋರೈಡ್ ಆರ್ದ್ರೀಕರಣ ತೋರುತ್ತದೆ. ಸಕ್ಕರೆ ಈ ಆರ್ದ್ರತೆ ೮೦% ಭಾಗಕ್ಕೆ ಹೆಚ್ಚಾದಾಗ ಆರ್ದ್ರೀಕರಣ ತೋರುತ್ತದೆ.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: