ಪನ್ನ ಕೊಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Panna Cotta with cream and garnish.jpg

ಪನ್ನ ಕೊಟ್ಟ ಜೆಲಟಿನ್‍ನಿಂದ ಗಟ್ಟಿಯಾಗಿಸಿ ಅಚ್ಚು ಮಾಡಲಾದ ಸಿಹಿಭರಿತ ಕೆನೆಯ ಒಂದು ಇಟ್ಯಾಲಿಯನ್ ಡಿಜ಼ರ್ಟ್. ಕೆನೆಯನ್ನು ರಮ್, ಕಾಫಿ, ವನಿಲಾ, ಅಥವಾ ಇತರ ಪರಿಮಳಕಾರಕಗಳೊಂದಿಗೆ ಸುಗಂಧಿತಗೊಳಿಸಬಹುದು. ಸಕ್ಕರೆಯನ್ನು ಬೆಚ್ಚಗಿನ ಕೆನೆಯಲ್ಲಿ ಕರಗಿಸಿ, ನಂತರ ತಂಪು ದ್ರವದಲ್ಲಿ ಮೃದುವಾಗಿಸಿದ ಜೆಲಟಿನ್ಅನ್ನು ಬೆಚ್ಚಗಿನ ಕೆನೆ ಮಿಶ್ರಣಕ್ಕೆ ಸೇರಿಸಲಾಗುತ್ತದೆ.