ವಿಷಯಕ್ಕೆ ಹೋಗು

ಪದಕ (ಆಭರಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಬರಿನ ಪದಕಗಳು

ಪದಕವು ಆಭರಣದ ಸಡಿಲವಾಗಿ ತೂಗಾಡುವ ಭಾಗದ ರೂಪದಲ್ಲಿರುತ್ತದೆ. ಇದನ್ನು ಸಾಮಾನ್ಯವಾಗಿ ಸಣ್ಣ ಗಂಟಿನ ಮೂಲಕ ಕಂಠಹಾರಗಳಿಗೆ ಲಗತ್ತಿಸಲಾಗುತ್ತದೆ. ಇದು "ಪದಕದ ಕಂಠಹಾರ" ಎಂದು ಪರಿಚಿತವಾಗಬಹುದು.[] ಪದಕದ ಓಲೆ ಎಂದರೆ ಕೆಳಗೆ ತೂಗಾಡುತ್ತಿರುವ ಒಂದು ಭಾಗವಿರುವ ಓಲೆ. ಒಟ್ಟಾರೆ ಕಂಠಹಾರದಲ್ಲಿ ಪದಕದ ವಿನ್ಯಾಸವನ್ನು ಒಟ್ಟುಗೂಡಿಸುವ ಮಟ್ಟವು ಇವನ್ನು ಪ್ರತ್ಯೇಕ ವಸ್ತುಗಳಾಗಿ ಕಾಣುವುದನ್ನು ಯಾವಾಗಲೂ ನಿಖರವಾಗಿಸುವುದಿಲ್ಲ.[]

ಆದರೆ ಕೆಲವು ಸಂದರ್ಭಗಳಲ್ಲಿ, ಕಂಠಹಾರ ಮತ್ತು ಪದಕದ ನಡುವಿನ ಪ್ರತ್ಯೇಕತೆಯು ಹೆಚ್ಚು ಸ್ಪಷ್ಟವಾಗಿರುತ್ತದೆ.[]

ಪದಕಗಳು ಶಾರೀರಿಕ ಅಲಂಕರಣದ ಅತ್ಯಂತ ಹಳೆಯ ದಾಖಲಿತ ಪ್ರಕಾರಗಳ ಪೈಕೆ ಒಂದೆನಿಸಿಕೊಂಡಿವೆ. ಕಲ್ಲು, ಚಿಪ್ಪು, ಮಡಕೆಗಳು ಮತ್ತು ಹೆಚ್ಚಿನ ನಾಶಹೊಂದುವ ವಸ್ತುಗಳನ್ನು ಬಳಸಲಾಗುತ್ತಿತ್ತು. ಪ್ರಾಚೀನ ಐಗುಪ್ತದವರು ಸಾಮಾನ್ಯವಾಗಿ ಪದಕಗಳನ್ನು ಧರಿಸುತ್ತಿದ್ದರು, ಮತ್ತು ಕೆಲವು ಚಿತ್ರಲಿಪಿಗಳಂತೆ ಆಕಾರ ಹೊಂದಿರುತ್ತಿದ್ದವು.

ಉಲ್ಲೇಖಗಳು

[ಬದಲಾಯಿಸಿ]
  1. "The Early Pendant: A Jewelry And A Talisman". Talismanamulet.org. Archived from the original on 8 ಡಿಸೆಂಬರ್ 2012. Retrieved 7 August 2012.
  2. ೨.೦ ೨.೧ Johns, Catherine (1996). The Jewellery of Roman Britain Celtic and classical Traditions. Routledge. p. 104. ISBN 9780415516129.