ಪಕ್ಷಿನೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ಯಾರಿಸ್ ನಗರದ ಪಕ್ಷಿನೋಟ

ಪಕ್ಷಿನೋಟವು ವೀಕ್ಷಕನು ಒಂದು ಪಕ್ಷಿ ಎಂಬ ದೃಷ್ಟಿಕೋನದಿಂದ, ಮೇಲಿನಿಂದ ಒಂದು ವಸ್ತುವಿನ ಎತ್ತರದ ನೋಟ.[೧] ಇದನ್ನು ಹಲವುವೇಳೆ ನೀಲನಕ್ಷೆಗಳು, ಅಂತಸ್ತುನಕ್ಷೆಗಳು ಮತ್ತು ನಕ್ಷೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಇದು ಒಂದು ವೈಮಾನಿಕ ಛಾಯಾಚಿತ್ರವಾಗಿರಬಹುದು, ಆದರೆ ಒಂದು ರೇಖಾಚಿತ್ರವೂ ಆಗಿರಬಹುದು. ಮಾನವಯುಕ್ತ ಹಾರಾಟವು ಸಾಮಾನ್ಯವಾಗಿದ್ದಕ್ಕಿಂತ ಮುಂಚೆ, ಎತ್ತರದ ಸ್ಥಳಗಳಿಂದ (ಉದಾ. ಪರ್ವತ ಅಥವಾ ಗೋಪುರ) ನೇರ ವೀಕ್ಷಣೆಯಿಂದ ಬಿಡಿಸಿದ ಮತ್ತು ಒಂದು ಕಾಲ್ಪನಿಕ (ಪಕ್ಷಿಯ) ದೃಷ್ಟಿಕೋನದಿಂದ ನಿರ್ಮಿಸಿದ ನೋಟಗಳನ್ನು ವ್ಯತ್ಯಾಸಮಾಡಲು "ಪಕ್ಷಿನೋಟ" ಪದವನ್ನು ಬಳಸಲಾಗುತ್ತಿತ್ತು. ಒಂದು ಪ್ರಕಾರವಾಗಿ ಪಕ್ಷಿನೋಟಗಳು ಪ್ರಾಚೀನ ಕಾಲದಿಂದ ಅಸ್ತಿತ್ವದಲ್ಲಿವೆ. ಅವುಗಳ ಕೊನೆಯ ಬೃಹತ್ ಏಳಿಗೆಯು ೧೯ನೇ ಶತಮಾನದ ಮಧ್ಯಭಾಗದಿಂದ ಕೊನೆಯ ಭಾಗದವರೆಗೆ ಆಗಿತ್ತು. ಆಗ ಪಕ್ಷಿನೋಟದ ಚಿತ್ರಗಳು ಅಮೇರಿಕ ಮತ್ತು ಯೂರೋಪ್‍ನಲ್ಲಿ ಜನಪ್ರಿಯವಾಗಿದ್ದವು.

ಕೆಲವೊಮ್ಮೆ ವಾಯವೀಯ ನೋಟ ಪದವನ್ನು ಕೂಡ ಪಕ್ಷಿನೋಟ ಪದಕ್ಕೆ ಸಮಾನಾರ್ಥಕವಾಗಿ ಬಳಸಲಾಗುತ್ತದೆ. ವಾಯವೀವ ನೋಟ ಪದವು ಭಾರೀ ಎತ್ತರದಿಂದ ನೋಡಿದ ಯಾವುದೇ ನೋಟವನ್ನು ಸೂಚಿಸಬಹುದು, ವಿಶಾಲ ಕೋನದಲ್ಲಿ ಕೂಡ, ಉದಾಹರಣೆಗೆ ವಿಮಾನದ ಕಿಟಕಿಯಿಂದ ಪಾರ್ಶ್ವ ದಿಕ್ಕಿನಲ್ಲಿ ಅಥವಾ ಪರ್ವತದ ತುದಿಯಿಂದ ನೋಡುವುದು.

ಉಲ್ಲೇಖಗಳು[ಬದಲಾಯಿಸಿ]

  1. Ravenhill, William (1986). "Bird's-eye view & bird's-flight view". The Map Collector. 35: 36–7.