ಪಕ್ಕವಾದ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಕ್ಕವಾದ್ಯ ಎಂದರೆ ಒಂದು ಹಾಡು ಅಥವಾ ಮುಖ್ಯವಾದ್ಯ ಸಂಗೀತದ ತುಣುಕಿನ ಮುಖ್ಯ ಸ್ವರಸಂಗತಿಗೆ ಲಯದ ಮತ್ತು/ಅಥವಾ ಅಧಿಸ್ವರ ಆಧಾರವನ್ನು ಒದಗಿಸುವ ಸಂಗೀತ ಭಾಗವಾಗಿ ನುಡಿಸಲಾಗುವ ಸಹಾಯಕ ವಾದ್ಯಗಳು.[೧] ಸಂಗೀತದ ವಿವಿಧ ಪ್ರಕಾರಗಳು ಮತ್ತು ಶೈಲಿಗಳಲ್ಲಿ ಅನೇಕ ವಿಭಿನ್ನ ಶೈಲಿಗಳ ಮತ್ತು ಪ್ರಕಾರಗಳ ಪಕ್ಕವಾದ್ಯಗಳಿವೆ. ನೃತ್ಯಕ್ಕೂ ಪಕ್ಕವಾದ್ಯದ ಆಧಾರವಿರಬಹುದು.

ಹಾಡಲಾದ ಸ್ವರಸಂಗತಿ ಅಥವಾ ತನಿವಾದನಕ್ಕೆ ಪಕ್ಕವಾದ್ಯವನ್ನು ಒಬ್ಬನೇ ಸಂಗೀತಗಾರನು ನುಡಿಸಬಹುದು. ಪಕ್ಕವಾದ್ಯಗಳಾಗಿ ಬಳಸಲಾದ ಕೆಲವು ವಾದ್ಯಗಳೆಂದರೆ ಪಿಯಾನೋ, ಗಿಟಾರ್, ತಬಲಾ, ಮೃದಂಗ, ಆರ್ಗನ್ ಇತ್ಯಾದಿ. ತಾತ್ವಿಕವಾಗಿ ಯಾವುದೇ ವಾದ್ಯವನ್ನು ಪಕ್ಕವಾದ್ಯವಾಗಿ ಬಳಸಬಹುದಾದರೂ, ಒಂಟಿ ವಾದ್ಯ ಮಾತ್ರ ಇದ್ದಾಗ, ಕೀಲಿಮಣೆ ಹಾಗೂ ಗಿಟಾರ್ ಕುಟುಂಬದ ವಾದ್ಯಗಳನ್ನು ಬಳಸುವ ಸಾಧ್ಯತೆಯಿರುತ್ತದೆ, ಏಕೆಂದರೆ ಈ ವಾದ್ಯಗಳು ಸ್ವರಮೇಳಗಳು ಮತ್ತು ತಗ್ಗುಸ್ಥಾಯಿಯ ಭಾಗವನ್ನು ಏಕಕಾಲದಲ್ಲಿ ನುಡಿಸಬಲ್ಲವು. ತನಿಹಾಡುಗಾರನು ತಾನು ಹಾಡುವುದರ ಜೊತೆಗೆ ಗಿಟಾರ್ ಅಥವಾ ಪಿಯಾನೊವನ್ನು ನುಡಿಸಬಹುದು, ಮತ್ತು ಕೆಲವು ಅಪರೂಪದ ಸಂದರ್ಭಗಳಲ್ಲಿ, ತನಿಹಾಡುಗಾರನು ಕೇವಲ ತನ್ನ ಧ್ವನಿ ಹಾಗೂ ಶರೀರವನ್ನು ಬಳಸಿಯೂ ಜೊತೆಯಾಗಿಸಿಕೊಳ್ಳಬಹುದು.

ಉಲ್ಲೇಖಗಳು[ಬದಲಾಯಿಸಿ]