ನ್ಯಾಷನಲ್ ಕ್ರೀಡಾಂಗಣ, ಕರಾಚಿ
ಗೋಚರ
ನ್ಯಾಷನಲ್ ಕ್ರೀಡಾಂಗಣ (ಉರ್ದು: نیشنل اسٹڈیم) ಕರಾಚಿ, ಪಾಕಿಸ್ತಾನದಲ್ಲಿ ಇರುವ ಒಂದು ಕ್ರಿಕೆಟ್ ಕ್ರೀಡಾಂಗಣ.[೧] ಇದರ ಸಾಮರ್ಥ್ಯ ೩೪,೨೨೮.[೨] ಪಾಕಿಸ್ತಾನಿ ಕ್ರಿಕೆಟ್ ತಂಡ ಈ ಮೈದಾನದಲ್ಲಿ ಗಮನಾರ್ಹ ಟೆಸ್ಟ್ ದಾಖಲೆಯನ್ನು ಹೊಂದಿದೆ. ಸಚಿನ್ ತೆಂಡೂಲ್ಕರ್ ಈ ಕ್ರೀಡಾಂಗಣದಲ್ಲಿ ಪ್ರಥಮ ಟೆಸ್ಟ್ ಪಂದ್ಯವನ್ನು ಆಡಿದರು. ಈ ಕ್ರೀಡಾಂಗಣದಲ್ಲಿ ೧೯೯೬-೯೭ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಾಗಿತ್ತು.
ಕ್ರೀಡಾಂಗಣ ದಾಖಲೆಗಳು
[ಬದಲಾಯಿಸಿ]- ಮೊದಲ ಟೆಸ್ಟ್: ಪಾಕಿಸ್ತಾನ ಮತ್ತು ಭಾರತ, ೨೧-೨೪ ಏಪ್ರಿಲ್ ೧೯೫೫.
- ಮೊದಲ ಏಕದಿನ ಪಂದ್ಯ: ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್, ೨೧ ನವೆಂಬರ್ ೧೯೮೦.
ಈ ಕ್ರೀಡಾಂಗಣದಲ್ಲಿ ೧೯೮೭ರ ಕ್ರಿಕೆಟ್ ವಿಶ್ವಕಪ್ ಮತ್ತು ೧೯೯೬ರ ಕ್ರಿಕೆಟ್ ವಿಶ್ವ ಕಪ್ ನಡುವೆ ೬ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದೆ.
ಟೆಸ್ಟ್ ಪಂದ್ಯಗಳು
[ಬದಲಾಯಿಸಿ]- ಗರಿಷ್ಠ ಇನ್ನಿಂಗ್ಸ್ ಮೊತ್ತ: ೭೬೫ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ, ೨೦೦೯.
- ಕಡಿಮೆ ಇನ್ನಿಂಗ್ಸ್ ಮೊತ್ತ: ೮೦ ಆಸ್ಟ್ರೇಲಿಯಾ, ಪಾಕಿಸ್ತಾನದ ವಿರುದ್ಧ, ೧೯೫೬.
- ಗರಿಷ್ಠ ವೈಯಕ್ತಿಕ ಮೊತ್ತ: ೩೧೩ ಯೂನಿಸ್ ಖಾನ್ (ಪಾಕಿಸ್ತಾನ), ಶ್ರೀಲಂಕಾ ವಿರುದ್ಧ, ೨೦೦೯.
- ಗರಿಷ್ಠ ಜೊತೆಯಾಟ: ೪೩೭ ಮಹೇಲ ಜಯವರ್ದನೆ ಮತ್ತು ತಿಲನ್ ಸಮರವೀರ, ಪಾಕಿಸ್ತಾನದ ವಿರುದ್ಧ, ೨೦೦೯.
ಏಕದಿನ ಪಂದ್ಯಗಳು
[ಬದಲಾಯಿಸಿ]- ಗರಿಷ್ಠ ಇನ್ನಿಂಗ್ಸ್ ಮೊತ್ತ: ೩೭೪/೪ ಭಾರತ, ಹಾಂಗ್ ಕಾಂಗ್ ವಿರುದ್ಧ, ೨೫ ಜೂನ್ ೨೦೦೮ (ಏಷ್ಯಾ ಕಪ್).
- ಕಡಿಮೆ ಇನ್ನಿಂಗ್ಸ್ ಮೊತ್ತ: ೧೧೫ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ, ೪ ಜುಲೈ ೨೦೦೮.
- ಗರಿಷ್ಠ ವೈಯಕ್ತಿಕ ಮೊತ್ತ: ೧೮೧ ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್), ಶ್ರೀಲಂಕಾ ವಿರುದ್ಧ, ೧೩ ಅಕ್ಟೋಬರ್ ೧೯೮೭.
- ಗರಿಷ್ಠ ಜೊತೆಯಾಟ: ೨೦೧ ಸನತ್ ಜಯಸೂರ್ಯ ಮತ್ತು ಕುಮಾರ ಸಂಗಕ್ಕರ, ಬಾಂಗ್ಲಾದೇಶ ವಿರುದ್ಧ, ೩೦ ಜೂನ್ ೨೦೦೮.
ಉಲ್ಲೇಖನಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2017-02-02. Retrieved 2016-11-29.
- ↑ http://www.worldstadiums.com/asia/countries/pakistan.shtml