ನ್ಯಾಷನಲ್ ಕ್ರೀಡಾಂಗಣ, ಕರಾಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾಷನಲ್ ಕ್ರೀಡಾಂಗಣ

ನ್ಯಾಷನಲ್ ಕ್ರೀಡಾಂಗಣ (ಉರ್ದು: نیشنل اسٹڈیم) ಕರಾಚಿ, ಪಾಕಿಸ್ತಾನದಲ್ಲಿ ಇರುವ ಒಂದು ಕ್ರಿಕೆಟ್ ಕ್ರೀಡಾಂಗಣ.[೧] ಇದರ ಸಾಮರ್ಥ್ಯ ೩೪,೨೨೮.[೨] ಪಾಕಿಸ್ತಾನಿ ಕ್ರಿಕೆಟ್ ತಂಡ ಈ ಮೈದಾನದಲ್ಲಿ ಗಮನಾರ್ಹ ಟೆಸ್ಟ್ ದಾಖಲೆಯನ್ನು ಹೊಂದಿದೆ. ಸಚಿನ್ ತೆಂಡೂಲ್ಕರ್ ಈ ಕ್ರೀಡಾಂಗಣದಲ್ಲಿ ಪ್ರಥಮ ಟೆಸ್ಟ್ ಪಂದ್ಯವನ್ನು ಆಡಿದರು. ಈ ಕ್ರೀಡಾಂಗಣದಲ್ಲಿ ೧೯೯೬-೯೭ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಾಗಿತ್ತು.

ಕ್ರೀಡಾಂಗಣ ದಾಖಲೆಗಳು[ಬದಲಾಯಿಸಿ]

  • ಮೊದಲ ಟೆಸ್ಟ್: ಪಾಕಿಸ್ತಾನ ಮತ್ತು ಭಾರತ, ೨೧-೨೪ ಏಪ್ರಿಲ್ ೧೯೫೫.
  • ಮೊದಲ ಏಕದಿನ ಪಂದ್ಯ: ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್, ೨೧ ನವೆಂಬರ್ ೧೯೮೦.

ಈ ಕ್ರೀಡಾಂಗಣದಲ್ಲಿ ೧೯೮೭ರ ಕ್ರಿಕೆಟ್ ವಿಶ್ವಕಪ್ ಮತ್ತು ೧೯೯೬ರ ಕ್ರಿಕೆಟ್ ವಿಶ್ವ ಕಪ್ ನಡುವೆ ೬ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದೆ.

ಟೆಸ್ಟ್ ಪಂದ್ಯಗಳು[ಬದಲಾಯಿಸಿ]

  • ಗರಿಷ್ಠ ಇನ್ನಿಂಗ್ಸ್ ಮೊತ್ತ: ೭೬೫ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ, ೨೦೦೯.
  • ಕಡಿಮೆ ಇನ್ನಿಂಗ್ಸ್ ಮೊತ್ತ: ೮೦ ಆಸ್ಟ್ರೇಲಿಯಾ, ಪಾಕಿಸ್ತಾನದ ವಿರುದ್ಧ, ೧೯೫೬.
  • ಗರಿಷ್ಠ ವೈಯಕ್ತಿಕ ಮೊತ್ತ: ೩೧೩ ಯೂನಿಸ್ ಖಾನ್ (ಪಾಕಿಸ್ತಾನ), ಶ್ರೀಲಂಕಾ ವಿರುದ್ಧ, ೨೦೦೯.
  • ಗರಿಷ್ಠ ಜೊತೆಯಾಟ: ೪೩೭ ಮಹೇಲ ಜಯವರ್ದನೆ ಮತ್ತು ತಿಲನ್ ಸಮರವೀರ, ಪಾಕಿಸ್ತಾನದ ವಿರುದ್ಧ, ೨೦೦೯.

ಏಕದಿನ ಪಂದ್ಯಗಳು[ಬದಲಾಯಿಸಿ]

  • ಗರಿಷ್ಠ ಇನ್ನಿಂಗ್ಸ್ ಮೊತ್ತ: ೩೭೪/೪ ಭಾರತ, ಹಾಂಗ್ ಕಾಂಗ್ ವಿರುದ್ಧ, ೨೫ ಜೂನ್ ೨೦೦೮ (ಏಷ್ಯಾ ಕಪ್).
  • ಕಡಿಮೆ ಇನ್ನಿಂಗ್ಸ್ ಮೊತ್ತ: ೧೧೫ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ, ೪ ಜುಲೈ ೨೦೦೮.
  • ಗರಿಷ್ಠ ವೈಯಕ್ತಿಕ ಮೊತ್ತ: ೧೮೧ ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್), ಶ್ರೀಲಂಕಾ ವಿರುದ್ಧ, ೧೩ ಅಕ್ಟೋಬರ್ ೧೯೮೭.
  • ಗರಿಷ್ಠ ಜೊತೆಯಾಟ: ೨೦೧ ಸನತ್ ಜಯಸೂರ್ಯ ಮತ್ತು ಕುಮಾರ ಸಂಗಕ್ಕರ, ಬಾಂಗ್ಲಾದೇಶ ವಿರುದ್ಧ, ೩೦ ಜೂನ್ ೨೦೦೮.

ಉಲ್ಲೇಖನಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2017-02-02. Retrieved 2016-11-29.
  2. http://www.worldstadiums.com/asia/countries/pakistan.shtml