ವಿಷಯಕ್ಕೆ ಹೋಗು

ನ್ಯಾನೋ ರೋಬೋಟ್ಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ನ್ಯಾನೋ ರೋಬೋಟ್ಗಳು" ನ್ಯಾನೋ ರೋಬೋಟ್ಗಳು ಏನು ಕೆಲಸ ಮಾಡಬಲ್ಲವು ಎಂದು ಕೇಳುವುದಕ್ಕಿಂತ ಏನು ಮಡುವುದಿಲ್ಲ ಎಂದು ಕೇಳುವುದುವಾಸಿ ಎನಿಸುತದೆ. ಏಕೆಂದರೆ , ಅಣುಗಾತ್ರದ ಈ ರೋಬೋಟ್ ಗಳು ಇಂದಿನ ಅನೇಕ ಕ್ಲಿಷ್ಟಕರ ಸಮಸ್ಯೆಗಳಿಗೆ ಸರಳ ಉತ್ತರ ಗಳಾಗಿ ನಿಲ್ಲಬಲ್ಲ ಶಕ್ತಿ ಪಡೆದಿವೆ ಉದಾರಣೆಗೆ, ದೇಹದೊಳಗಿನ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಎನ್ನುವ ಜಾಗಕ್ಕೆ ನ್ಯಾನೋ ರೋಬೋಟ್ ಗಳನ್ನು ಕಳುಹಿಸಿ ಅಲ್ಲಿನ ಕ್ಯಾನ್ಸರ್ ಜೀವಕೋಶಗಳನ್ನೆಲ್ಲ ಒಂದೊಂದಾಗಿ ಹುಡುಕಿ ಹುಡುಕಿ ಕೊಲ್ಲುವಂತೆ ಮಾಡಬಹುದು. ಹೃದಯಕ್ಕೆ ಸರಬರಾಜಾಗುವ ರಕ್ತನಾಳಗಳಲ್ಲಿ ಕೊಬ್ಬಿನಂಶ ಶೇಖರಣೆಯಾಗಿ ಅಡ್ಡಗಟ್ಟಿ ತೊಂದರೆಯಾಗಿಬಿಟ್ಟರೆ ಅಂಥಾ ಜಾಗಕ್ಕೂ ಈ ರೋಬೋಟ್ಗಳನ್ನು ಕಳುಹಿಸಿ ಆ ಕೊಬ್ಬಿನಂಶವನ್ನು ಕಿತ್ತುಹಾಕಿ ಸರಾಗವಾಗಿ ರಕ್ತ ಪರಿಚಲನೆಗೆ ಅವಕಾಶ ಕಲ್ಪಿಸುವಂತೆ ಮಾಡಬಹುದು , ಮನುಷ್ಯನ ದೈಹಿಕ ಕಾಯಿಲೆಗಳ ರಿಪೇರಿಗಳೊತ್ತಟತಟ್ಟಿಗಿರಲಿ, ಇಂಜಿನ್ ಭಾಗಗಳು, ಕಾಂಟ್ಯಾಕ್ಟ್ ಲೆನ್ಸ್, ಶಸ್ತ್ರಚಿಕಿತ್ಸಾ ಯಂತ್ರಗಳು ಮುಂತಾದ ವೈದ್ಯಕೀಯ ವಸ್ತುಗಳು ಸುಲಭವಾಗಿ ಹಾಳಾಗದಂತೆ ತಡೆಗಟ್ಟಲು ನ್ಯಾನೋತಂತ್ರಜ್ಞಾನ ನೆರವಾಗುತ್ತದೆ . ಸಾಧಾರಣ ಮರವನ್ನು ಇಂಗಾಲದ ನ್ಯಾನೋ ನಳಿಕೆಗಳಿಂದ ಹೊದಿಸಿ ಆದರೆ , ಉಕ್ಕಿಗಿಂತ ನೂರಾರು ಪಟ್ಟು ಹೆಚ್ಚು ಬಲಶಾಲಿಯಾದ ವಸ್ತುವನ್ನು ನಿರ್ಮಿಸಬಹುದು. ತೀರಾ ಸೂಕ್ಷ್ಮವಾದ ಗೇರ್ ಗಳು, ಲಿವರ್ ಗಳು ಬೇರಿಂಗ್ ಗಳು , ಪ್ಲೇಟ್ ಗಳು, ಸೆನ್ಸಾರ್ ಗಳನ್ನು ಶಕ್ತಿಯುತವಾದ ಕಂಪ್ಯೂಟರ್ ನಿಯಂತ್ರಣದೊಂದಿಹೆ ನಿರ್ಮಿಸುವ ಹೊಸ ಮಾದರಿಯ ವಸ್ತುಗಳು ಮನುಷ್ಯನ ಬದುಕಿನಲ್ಲಿ ಹೊಸ ಕ್ರಾಂತಿಕಾರಿ ಅಧ್ಯಾಯವನ್ನೇ ತೆರೆಯಲಿವೆ. ನ್ಯಾನೋ ರೋಬೋಟ್ ಗಳನ್ನು ಬಳಸಿ ನೆಲ ಗುಡಿಸುವುದರಿಂದ ಹಿಡಿದು ಗೋಡೆಗೆ ಸುಣ್ಣಬಲಿಯುವವರೆಗೆ ದಿನನಿತ್ಯದ ಎಲ್ಲ ಕೆಲಸ ಮಾಡಿಕೊಳ್ಳಬಹುದಲ್ಲವೇ ಎಂಬುದೀಗ ನ್ಯಾನೋ ತಂತ್ರಜ್ಞಾನಿಗಳ ಆಲೋಚನೆ.