ನೋಶನ್ ಇಂಕ್ ಕೈನ್ 2-ಇನ್-1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ನೋಶನ್ ಇಂಕ್ ಕೈನ್: 2-ಇನ್-1'[೧] ಎನ್ನುವ ಹೆಸರಿನಲ್ಲಿ ಗ್ರಾಹಕರಿಗೆ ಉಪಯೋಗಕಾರಿಯಾದ 'ಮೈಕ್ರೋಸಾಫ್ಟ್ ಕಂಪೆನಿಯ ಎಮ್.ಎಸ್.ತಂತ್ರಾಶ ಬಳಸುವ, ಪರಿವರ್ತಿಸಬಲ್ಲ', (Convertible 2-in-1) '೨ ಇನ್ ಒನ್ ಮಾಡೆಲ್' ಗಳು ಗ್ರಾಹಕರು ಕೊಡುವ ಬೆಲೆಗೆ ಹೋಲಿಸಿದರೆ, ಅತ್ಯಂತ 'ಹೆಚ್ಚು ಸೌಲಭ್ಯಯುತ ಸೆಟ್' ಗಳೆಂದು ಹೆಸರುವಾಸಿಯಾಗಿದೆ. ಈ ಉಪಕರಣ 'ಬೆಂಗಳೂರಿನ ಮೈಕ್ರೋಸಾಫ್ಟ್ ಶಾಖೆ'ಯ ಉಡುಗೊರೆಯಾಗಿದೆ.[೨] ೧೯೯೯ ರಲ್ಲೇ 'ಮೈಕ್ರೋಸಾಫ್ಟ್ ಕಂಪೆನಿ' ಈ ತರಹದ ವಸ್ತುಗಳನ್ನು ನಿರ್ಮಿಸಿ, ಬಿಕರಿಮಾಡುತ್ತಿತ್ತು. ಆದರೆ ಆ 'ಟ್ಯಾಬ್ಲೆಟ್' ಗಳ ತೂಕ ಹೆಚ್ಚಾಗಿದ್ದು, ಒಂದು ಕೈನಲ್ಲಿ ಹಿಡಿದು ಕೆಲಸ ಮಾಡಲು ತೊಂದರೆಯಾಗಿ ಕಾಣಿಸಿದರ ಪರಿಣಾಮ ಸ್ವರೂಪವಾಗಿ, ಗ್ರಾಹಕರು ಇವನ್ನು ಹೆಚ್ಚು ಪುರಸ್ಕರಿಸಲಿಲ್ಲ. ಆದರೆ ಈಗ ಬಳಕೆಯಲ್ಲಿರುವ ಕಂಪ್ಯೂಟರ್ ಸೆಟ್ ಗಳು,ಚೆನ್ನಾಗಿ ಪರಿಷ್ಕರಿಸಲ್ಪಟ್ಟು ನ್ಯೂನತೆಗಳನ್ನು ಕಡಿಮೆಮಾಡುವ ದಿಶೆಯಲ್ಲಿ ಯಶಸ್ವಿಯಾಗಿವೆ. ಈಗ ಮತ್ತೆ 'ಆಪಲ್ ಕಂಪೆನಿ'ಯವರೂ ಸಹಿತ, ಒಂದು 'ಐಪ್ಯಾಡ್' ಮತ್ತು 'ಆಂಡ್ರಾಯ್ಡ್ ಟ್ಯಾಬ್ಲೆಟ್' ನ್ನು ಪರಿಚಯಿಸಿದ್ದಾರೆ.

ಗುಣವಿಶೇಷತೆಗಳು[ಬದಲಾಯಿಸಿ]

  • 'ಟ್ಯಾಬ್ಲೆಟ್' ಇಲ್ಲವೇ 'ಲ್ಯಾಪ್ ಟಾಪ್' ಆಗಿ ಉಪಯೋಗಿಸಬಹುದು.
  • ೨೫೮‍‍‍‌‌‍ x೧೭೨x೯.೭ ಮಿ.ಮಿ.ಗಾತ್ರದ ೬೩೦ ಗ್ರಾಂ ತೂಕದ ವಸ್ತು.
  • ೧.೮೩ ಗಿಗಾ ಹರ್ಟ್ಸ್ ವೇಗದ ೪ ಹೃದಯಗಳ ಪ್ರೊಸೆಸರ್ ಗಳು.(Intel® Z3735 Bay Trail),
  • ೨ ಗಿಗಬೈಟ್ ಪ್ರಾಥಮಿಕ ಮೆಮೊರಿ,
  • ೩೨ ಗಿಗಬೈಟ್, ಸಂಗ್ರಹ ಮೆಮೊರಿ,
  • ಇನ್ನು ಹೆಚ್ಚು ಮೆಮೊರಿಗೆ ಮೈಕ್ರೊ ಎಸ್.ಡಿ.ಸಿ.ಡಿ. ಹಾಕಿಸಿಕೊಳ್ಳುವ ಏರ್ಪಾಡು.
  • ೧೦ ಅಂಗುಲ,೧೨೮೦ x ೮೦೦ ರೆಸುಲ್ಯೂಶನ್ ಐಪಿಎಸ್, ಸ್ಪರ್ಷಸಂವೇದಿ ಪರದೆ,
  • ೨ ಮೆಗ ಪಿಕ್ಸೆಲ್, ರೆಸೊಲ್ಯುಶನ್ ಆಕ್ಸೆಲೊರೊಮೀಟರ್,
  • ೩ ಜಿ.ಸಿ.ಎಮ್, ಹಾಕಿಸಲು ಹೆಚ್ಚಿನ ಸೌಲಭ್ಯ.(ಇದನ್ನು ಪ್ರತ್ಯೇಕವಾಗಿ ಹಾಕಿಸಿಕೊಳ್ಳಬೇಕು)
  • ಯಿಯರ್ ಫೊನ್, ಮೈಕ್ರೊ ಯುಎಸ್ಬಿ,
  • USB3, 3.5 mm, 'ಯಿಯರ್ ಫೋನ್',
  • 'ಎಚ್.ಡಿ.ಎಮ್.ಐ, ಕಿಂಡಿಗಳು',
  • 'ವೈಫೈ' ವ್ಯವಸ್ಥೆ,
  • ೭೯೦೦ ಎಮ್ ಎ.ಎಚ್ ಶಕ್ತಿ ಬ್ಯಾಟರಿ,
  • ಬ್ಯಾಟರಿ ಛಾರ್ಜ್ ಮಾಡಲು ಪ್ರತ್ಯೇಕ ಕಿಂಡಿ
  • ಜೋಡಿಸಬಲ್ಲ ಪ್ರತ್ಯೇಕಿಸಬಲ್ಲ 'ರೀಚಾರ್ಜ್ ಘಟಕ'.
  • 'ವಿಂಡೋಸ್ ೮.೧ ಕಾರ್ಯಾಚರಣೆ ವ್ಯವಸ್ಥೆ' ಇತ್ಯಾದಿ.
  • 'ಕೀಲಿಮಣೆಯಲ್ಲಿ ಸ್ಪರ್ಷಸಂವೇದಿ ಪ್ಯಾಡ್ ಸಹಿತ' ಇದೆ.
  • ಮೌಸ್ ಬಳಕೆದಾರರಿಗೆ ಒಟಿಜಿ ಕೇಬಲ್ ಒಂದು 'ನಿಸ್ತಂತು'(Wireless),'ಮೌಸ್' ನ್ನೂ ಜೊತೆಗೆ ಕೊಡುತ್ತಾರೆ.
  • ಈ ಸೆಟ್ ಗಳು,'ಸ್ನಾಪ್ ಡೀಲ್ ಡಾಟ್ ಕಾಂ'.(Snapdeal.com) ಜಾಲತಾಣ ಮೂಲಕ ೧೯.೪೯೦ ಸಾವಿರ ರೂಪಾಯಿಗಳಿಗೆ ದೊರೆಯುತ್ತದೆ.

ಕೀಲಿಮಣೆಯ ಹಿಂದೆ 'ತ್ರಿಕೋಣಾಕೃತಿಯ ಪುಟ್ಟ ಆಕೃತಿ, ಮಡಿಸಿಡಬಹುದಾದ 'ಟ್ಯಾಬ್ಲೆಟ್' ಗೆ ಆಸರೆಯಾಗಿ ನಿಲ್ಲಿಸಲು ಬಳಸಬಹುದು. ಕೆಲಸಮುಗಿದ ಬಳಿಕ 'ಲ್ಯಾಪ್ ಟಾಪ್' ತರಹ ಮಾಡಿಸಬಹುದು. ಒಮ್ಮೆ ನಮಗೆ ಈ ಉಪಕರಣ, ಒಂದು 'ದೊಡ್ಡ ಡೈರಿ'(Diary)ಯನ್ನು ಕಂಡಂತೆ ಭಾಸವಾಗುತ್ತದೆ. ಎಲ್ಲಾ ಜೋಡಣೆಗಳೂ ಮಡಿಸಿಡುವ ಜಾಗದಲ್ಲಿ ಪುಟ್ಟ, ಪುಟ್ಟ, ಅಯಸ್ಕಾಂತಗಳಿಂದ ಕೂಡಿದ್ದು, ಒಟ್ಟಾರೆ ಈ ಮಶಿನ್ ಮೇಲೆ ಕೈಯ್ಯಾಡಿಸುವಾಗ ನಮಗೆ ಬಹಳ ಹೌಣಾಗಿರುತ್ತದೆ.

೮.೧ ವಿಂಡೊಸ್ ಕಾರ್ಯಾಚರಣೆ[ಬದಲಾಯಿಸಿ]

'೮.೧ ವಿಂಡೊಸ್ ವ್ಯವಸ್ಥೆ'ಯಾಗಿ ರೂಪುಗೊಂಡಿರುವ ಈ ಯಂತ್ರವನ್ನು 'ವಿಂಡೊಸ್' ಆಗಿ ಬಳಸಿದಾಗ, ತಂತ್ರಾಂಶಗಳನ್ನು(ಉದಾ :ಬರಹ) ಇದರಲ್ಲಿ ಬಳಸಬಹುದು. 'ಶಕ್ತಿಶಾಲಿಯಾದ ಹಾಗೂ ಪ್ರಭಾವಿ ಲ್ಯಾಪ್ ಟಾಪ್' ಎಂದು ಭಾವಿಸಲು ಸಾಧ್ಯವಿಲ್ಲ. ಇದರಲ್ಲಿ ಕೆಲವು ನ್ಯೂನತೆಗಳು ಹೀಗಿವೆ :

  • ಹಾರ್ಡ್ ಡಿಸ್ಕ್ ಇಲ್ಲ.
  • ೩೨ ಜಿಬಿ ಸಂಗ್ರಹ ಶಕ್ತಿಯಿದೆ.
  • ಸುಮಾರಾಗಿ ಅಗತ್ಯಗಳನ್ನು ಪೂರೈಸಲು ಸಾಕು.
  • ಗ್ರಾಫಿಕ್ ಕೆಲಸಗಳಿಗೆ, ತುಂಬಾ ಶಕ್ತಿಯ ಆಟಗಳನ್ನು ನೋಡಲು, ಅಥವಾ ಆಡಲು, ಇಲ್ಲವೇ 'ವೀಡಿಯೊ ಎಡಿಟಿಂಗ್' ಗೆ ಇದು ಅಸಮರ್ಥವಾಗಿದೆ.

ಎಮ್.ಎಸ್.ಆಫೀಸ್ ವಲಯದಲ್ಲಿ[ಬದಲಾಯಿಸಿ]

  1. 'ಲೇಖನ ತಯಾರಿ', ಹಾಗೂ 'ಎಮ್.ಎಸ್.ಆಫೀಸ್ ಕಾರ್ಯಕ್ಷೇತ್ರ'ದಲ್ಲಿ, ಮತ್ತು 'ಇಮೇಜ್ ಜಾಲತಾಣ ವೀಕ್ಷಣೆ,ಸರಳ ವೀಡಿಯೋ ವೀಕ್ಷಣೆ,' ಮೊದಲಾದ ಕೆಲಸಗಳಿಗೆ ಇದು ಸಾಕು ಎನ್ನಿಸುತ್ತದೆ.
  2. 'ಎಚ್.ಡಿ.ಡಿಸ್ಕ್', 'ಸಿಡಿ/ಡಿವಿಡಿ' ಮೊದಲಾದ ಸೇರ್ಪಡೆಗಳನ್ನು ಬೇಕಾದರೆ ಹೊರಗಡೆಯಿಂದ ಜೋಡಿಸಬಹುದು.
  3. 'ಮೈಕ್' ಮತ್ತು 'ಡಿಸಿಡಿ'ಗೆ ಜಾಗವಿದೆ. 'ಮೆಮೊರಿ ಹೆಚ್ಚಿಸಲು ಯುಎಸ್ಬಿ' ಬಳಸಬಹುದು.'ವೀಡಿಯೊ ಗುಣಮಟ್ಟ ಚೆನ್ನಾಗಿದೆ'.
  4. 'ಹೈ ಡೆಫಿನಿಶನ್' ಮಾತ್ರವಲ್ಲದೆ,'೪ ಕೆ. ವೀಡಿಯೋ'ಗಳನ್ನೂ ವೀಕ್ಷಿಸಬಹುದು.
  5. 'ಆಡಿಯೊ ಇಂಜಿನ್' ಚೆನ್ನಾಗಿ ಕೆಲಸಮಾಡುತ್ತದೆ.
  6. ಒಳ್ಳೆಯ'ಯಿಯರ್ ಫೋನ್'ಜೋಡಿಸಿ ಆಲಿಸಿದಾಗ,ಧ್ವನಿ ಉತ್ತಮಾಗಿ ಕೇಳಬರುತ್ತದೆ.
  7. ಒಳ್ಳೆಯ ಸಂಗೀತ,ಹಾಗೂ ವೀಡಿಯೊ ನೋಡಲು ಇದು ಹೇಳಿಮಾಡಿಸಿದ ಉಪಕರಣ.

ಬ್ಯಾಟರಿ ಅಳವಡಿಸುವ ವ್ಯವಸ್ಥೆ[ಬದಲಾಯಿಸಿ]

'ಬ್ಯಾಟರಿ ಪ್ರತ್ಯೇಕ ಕಿಂಡಿ'ಯಲ್ಲಿ ಜೋಡಿಸಬಹುದು. ಅದು, ಸುಮಾರು ೭-೮ ಗಂಟೆಗಳ ವರೆಗೆ ಸಶಕ್ತವಾಗಿರುತ್ತದೆ. ಮನೆಯಲ್ಲಿ ಉಪಲಭ್ದವಿರುವ ಯಾವುದೇ 'ಯು ಎಸ್.ಬಿ. ಚಾರ್ಜರ್' ಉಪಯೋಗಿಸಿ 'ಚಾರ್ಜ್' ಮಾಡಬಹುದು.

ಕನ್ನಡ ಫಾಂಟ್ ಗಳಿಗೂ ಅತ್ಯುಪಯೋಗಿ[ಬದಲಾಯಿಸಿ]

'ವಿಂಡೊಸ್ ಆಧಾರಿತ ತಂತ್ರಾಂಶ'ಗಳಲ್ಲಿ ಒಂದಾದ 'ಇಂಗ್ಲೀಷ್ ಅಲ್ಲದ ಯಾವುದೇ ಫಾಂಟ್' ಗಳನ್ನು ಸುಲಭವಾಗಿ ಉಪಯೋಗಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "ಪ್ರಜಾವಾಣಿ, ಗಾಡ್ಜೆಟ್ ಲೋಕ, ಡಾ.ವವನಜ, 'ನೋಶನ್ ಇಂಕ್ ಕೈನ್: ಕೈಗೆಟುಕುವ ಬೆಲೆಗೆ 2-ಇನ್-1' 11/06/2014". Archived from the original on 2014-11-10. Retrieved 2014-11-07.
  2. NDTV Gadgets, Notion Ink Cain Windows 8.1 Tablet-Cum-Laptop Launched at Rs. 19,990, Sept, 18, 2014