ನೋಟೀಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೋಟೀಸು ಎಂದರೆ ಒಬ್ಬ ಕಕ್ಷಿಗೆ ತಮ್ಮ ಹಕ್ಕುಗಳು, ಕರ್ತವ್ಯಗಳ ಮೇಲೆ ಪ್ರಭಾವ ಬೀರುವ ಕಾನೂನು ಪ್ರಕ್ರಿಯೆಯ ಅರಿವಿರಬೇಕು ಎಂಬ ಆವಶ್ಯಕತೆಯನ್ನು ವಿವರಿಸುವ ಕಾನೂನು ಸಂಬಂಧಿ ಪರಿಕಲ್ಪನೆ. ಹಲವಾರು ಪ್ರಕಾರದ ನೋಟೀಸುಗಳಿವೆ: ಸಾರ್ವಜನಿಕ ನೋಟೀಸು (ಅಥವಾ ಕಾನೂನಾತ್ಮಕ ನೋಟೀಸು), ವಾಸ್ತವಿಕ ನೋಟೀಸು, ರಚನಾತ್ಮಕ ನೋಟೀಸು, ಮತ್ತು ಸೂಚಿತ ನೋಟೀಸು.

ಸಾಮಾನ್ಯ ಕಾನೂನಿನಲ್ಲಿ, ನೋಟೀಸು ಕಾನೂನು ವಿಧಾನದಲ್ಲಿ ಮೂಲಭೂತ ತತ್ವವಾಗಿದೆ. ಈ ಸಂದರ್ಭದಲ್ಲಿ, ಕಾನೂನು ವಿಧಾನವು ಪ್ರತಿವಾದಿಗೆ ದೂರಿನಲ್ಲಿರುವ, ಅಥವಾ ಅಂತಹ ಇತರ ವಾದದಲ್ಲಿನ, ಆರೋಪಗಳನ್ನು ವಿಧ್ಯುಕ್ತವಾಗಿ ಸೂಚಿಸುತ್ತದೆ. ನೋಟೀಸು ಮೂಲಭೂತವಾಗಿರುವುದರಿಂದ, ಒಂದು ವಾದವು ಪ್ರತಿವಾದಿಗೆ ವಿಧ್ಯುಕ್ತವಾಗಿ ಸೂಚನೆ ನೀಡುವಲ್ಲಿ ವಿಫಲವಾದರೆ ನ್ಯಾಯಾಲಯವು ಆ ವಾದವನ್ನು ದೋಷಯುಕ್ತವೆಂದು ತೀರ್ಮಾನಿಸಬಹುದು.

ಒಂದು ಸಿವಿಲ್ ಪ್ರಕರಣದಲ್ಲಿ, ಹಾಜರಿ ಕರೆಯನ್ನು ನೀಡುವುದರ ಮೂಲಕ ಪ್ರತಿವಾದಿಯ ಮೇಲೆ ವೈಯಕ್ತಿಕ ಅಧಿಕಾರವನ್ನು ಪಡೆಯಲಾಗುತ್ತದೆ. ಹಾಜರಿ ಕರೆಯನ್ನು ವೈಯಕ್ತಿಕವಾಗಿ ತಲುಪಿಸುವ ಮೂಲಕ ಅಥವಾ ವ್ಯಕ್ತಿಗೆ ಅಥವಾ ವ್ಯಕ್ತಿಯ ಅಧಿಕೃತ ಏಜಂಟಿಗೆ ಲಿಖಿತ ಹಾಜರಿ ಆದೇಶದ ಮೂಲಕ ಕಾನೂನಾತ್ಮಕ ನೀಡಿಕೆಯನ್ನು ಸಾಧಿಸಬಹುದು. ಕಾನೂನಾತ್ಮಕ ನೀಡಿಕೆಯನ್ನು ಬದಲಿ ಸಾಧನಗಳಿಂದಲೂ ಮಾಡಬಹುದು; ಉದಾಹರಣೆಗೆ, ಅನೇಕ ನ್ಯಾಯವ್ಯಾಪ್ತಿಗಳಲ್ಲಿ, ಹಾಜರಿ ಕರೆಯನ್ನು ಪ್ರತಿವಾದಿಯ ನಿವಾಸ ಅಥವಾ ವ್ಯವಹಾರ ಸ್ಥಳದಲ್ಲಿ ಸೂಕ್ತ ವಯಸ್ಸು ಮತ್ತು ವಿವೇಚನೆಯಿರುವ ವ್ಯಕ್ತಿಗೆ ನೀಡಬಹುದು. ಸಂಸ್ಥೆಗಳ ಮೇಲೆ ಅಧಿಕಾರವನ್ನು ಹಲವುವೇಳೆ ಅಂತಹ ವಿಧಾನವನ್ನು ಪಡೆಯಲು ಅಧಿಕಾರವಿರುವ ಸರ್ಕಾರಿ ಸಂಸ್ಥೆಯ ಮೂಲಕ ಪಡೆಯಲಾಗುತ್ತದೆ.

ನ್ಯಾಯಾಲಯವು ಒಬ್ಬ ಹೊರ-ರಾಜ್ಯದ ಅಥವಾ ವಿದೇಶದ ಪ್ರತಿವಾದಿ ಮೇಲೆ ಹೊರ-ರಾಜ್ಯ ಸಂಬಂಧಿ ಕಾಯಿದೆ ಬಳಸಿ ವೈಯಕ್ತಿಕ ಅಧಿಕಾರವನ್ನು ಆಧರಿಸಿದರೆ, ನ್ಯಾಯಾಲಯವು ಎಚ್ಚರಿಕೆಯಿಂದ ಪ್ರತಿವಾದಿಗೆ ತಿಳಿಪಡಿಸಲು ಸಾಧನವನ್ನು ಆಯ್ಕೆ ಮಾಡಬೇಕಾಗುತ್ತದೆ, ಏಕೆಂದರೆ ನ್ಯಾಯವಾದ ಪ್ರಕ್ರಿಯೆಯ ನೋಟೀಸಿನ ಅಗತ್ಯವನ್ನು ಅನುಸರಿಸಬೇಕಾಗುತ್ತದೆ. ಕೆಲವೊಮ್ಮೆ ಇದನ್ನು ರಾಜ್ಯದಲ್ಲಿ ಸ್ಥಿತವಾಗಿರುವ ಪ್ರತಿವಾದಿಯ ಸೇವಾ ಏಜಂಟುಗಳು ಮಾಡುತ್ತಾರೆ. ಯಾವಾಗಲೂ ಹೊರರಾಜ್ಯದ ಪ್ರತಿವಾದಿಗಳನ್ನು ಸುಲಭವಾಗಿ ಪತ್ತೆಹಚ್ಚಲು ಆಗುವುದಿಲ್ಲವಾದ್ದರಿಂದ, ಕೆಲವು ರಾಜ್ಯ ಅಥವಾ ಸ್ಥಳೀಯ ಕಾನೂನುಗಳು ಪ್ರಕಟಣೆ ಮೂಲಕ ನೋಟೀಸು ನೀಡಿಕೆಗೆ ಅನುಮತಿಸಬಹುದು. ಇದರ ಒಂದು ಉದಾಹರಣೆಯೆಂದರೆ ಪ್ರತಿವಾದಿಯು ವಾಸಿಸುತ್ತಿದ್ದಾನೆ ಎಂದು ನಂಬಲಾದ ಸ್ಥಳದಲ್ಲಿ ಪ್ರಕಟಣೆಗೊಳ್ಳುವ ಸುದ್ದಿಪತ್ರಿಕೆಯಲ್ಲಿ ಮೊಕದ್ದಮೆಯ ನೋಟೀಸನ್ನು ಮುದ್ರಿಸುವುದು. ನ್ಯಾಯಾಲಯದಲ್ಲಿ ಪ್ರತಿವಾದಿಯು ಹಾಜರಾಗಲು ವಿಫಲವಾದರೆ ಅವನ ವಿರುದ್ಧ ಗೈರುಹಾಜರಿ ತೀರ್ಪು ಆಗುವ ಕಾರಣದಿಂದ, ನ್ಯಾಯವಾದ ಪ್ರಕ್ರಿಯೆಯನ್ನು ಪೂರೈಸಲು ಪ್ರತಿವಾದಿಗೆ ವಾಸ್ತವಿಕ ನೋಟೀಸನ್ನು ಕೊಡುವ ಮೊದಲು ಅಂತಹ ಕ್ರಮಗಳನ್ನು ಸಾಕಷ್ಟು ಲೆಕ್ಕಮಾಡಬೇಕಾಗುತ್ತದೆ.

"https://kn.wikipedia.org/w/index.php?title=ನೋಟೀಸು&oldid=843302" ಇಂದ ಪಡೆಯಲ್ಪಟ್ಟಿದೆ