ನೆಲ್ಲಿಕಟ್ಟೆ ಎಸ್.ಸಿದ್ದೇಶ್
ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್ (ಮಾರ್ಚ್ ೦೪, ೧೯೭೨) ಕವಿಗಳು, ಅಂಕಣ ಬರಹಗಾರರು. ಸಂಶೋದಕರು, ವಿಮರ್ಶಕರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ತಮ್ಮ ಬರಹ, ಚಿಂತನೆ, ಸಂವಾದಗಳ ಮೂಲಕ ಗುರುತಿಸಲ್ಪಟ್ಟವರು. ಕವನ, ಕತೆ, ಪ್ರಬಂಧ, ಸಂಶೋಧನೆ, ವಿಮರ್ಶೆ ಸಂಪಾದನೆ ಇತ್ಯಾದಿ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವ ಇವರು ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಜನನ, ಜೀವನ
[ಬದಲಾಯಿಸಿ]ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಇವರು ಚಿತ್ರದುರ್ಗ ತಾಲ್ಲೂಕು ಭರಮಸಾಗರ ಹೋಬಳಿ ನೆಲ್ಲಿಕಟ್ಟೆ ಗ್ರಾಮದಲ್ಲಿ ಮಾರಕ್ಕ-ಎಚ್.ಸಿದ್ದಪ್ಪ ದಂಪತಿಗಳ ಮಡಿಲಲ್ಲಿ ಜನಿಸಿದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಇಸಾಮುದ್ರ, ಕಾಲಗೆರೆ ಗ್ರಾಮಗಳಲ್ಲಿ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು, ಬಿದರಕೆರೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು, ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಏಳನೆ ರ‍್ಯಾಂಕ್‌ನೊಂದಿಗೆ ಬಿ.ಎ.ಪದವಿಯನ್ನು ಮತ್ತು ತರಳಬಾಳು ಜಗದ್ಗುರು ಶ್ರೀಶ್ರೀಶ್ರೀ ಶಿವಕುಮಾರ ಶಿವಾಚಾರ್ಯಸ್ವಾಮಿಗಳ ಸ್ಮರಣಾರ್ಥ ಚಿನ್ನದ ಪದಕದೊಂದಿಗೆ ಬಿ.ಇಡಿ. ಪದವಿಯನ್ನು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರನೆ ರ‍್ಯಾಂಕ್‌ನೊಂದಿಗೆ ಕನ್ನಡ ಎಂ.ಎ. ಪದವಿಯನ್ನು, `ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ : ಒಂದು ಅಧ್ಯಯನ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ (ಪಿಎಚ್.ಡಿ.) ಡಾಕ್ಟರೇಟ್ ಪದವಿಯನ್ನು ಪಡೆದಿರುವರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಸಂವಿಧಾನ ಮತ್ತು ಅಂಬೇಡ್ಕರ್ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಕೃತಿಗಳು[ಬದಲಾಯಿಸಿ]
[ಬದಲಾಯಿಸಿ]ಪಿ.ಎಚ್ ಡಿ ಸಂಶೋಧನಾ ಪ್ರಬಂಧ
[ಬದಲಾಯಿಸಿ]- ಅಭಿನವಕಾಳಿದಾಸ ಬಸವಪ್ಪ ಶಾಸ್ತ್ರಿ:ಒಂದು ಅಧ್ಯಯನ, ೨೦೦೫
ಕೃತಿಗಳು
[ಬದಲಾಯಿಸಿ]- ಬಿಸಿಲು-ಮಳೆ, (೨೦೦೧, ೨೦೧೭)
- ಸಾಹಿತಿ ಸಂಕುಲ, (೨೦೦೧)
- ಛಲಬೇಕು ಶರಣಂಗೆ, (೨೦೦೨)
- ವ್ಯಕ್ತಿತ್ವವಿಕಾಸ ಮತ್ತು ಕನ್ನಡ ಸಾಹಿತ್ಯ, (೨೦೦೭, ೨೦೧೭)
- ಅಭಿನವಕಾಳಿದಾಸ ಬಸಪ್ಪ ಶಾಸ್ತ್ರಿ (೨೦೦೮, ೨೦೧೭)
- ಸಿರಿಗನ್ನಡ ಜಾನಪದ, (೨೦೦೮)
- ವೃಕ್ಷಮಾತೆ ಸಾಲುಮರದ ತಿಮ್ಮಕ್ಕ್ಮ, (೨೦೦೯)
- ಯುವಜನತೆ ಮತ್ತು ದುಶ್ಚಟಗಳು, (೨೦೧೦)
- ಸಿರಿಗನ್ನಡ ಪ್ರಾಚೀನ ಕವಿಗಳು, (೨೦೧೦)
- ಶ್ರೀ ಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿ ವಚನಾಮೃತ, (೨೦೧೩)
- ಕನಕದಾಸರ ಲೋಕದೃಷ್ಟಿ, (೨೦೧೩)
- ಸಂವೇದನೆ, (೨೦೧೪)
- ಅಜಾತ, (೨೦೧೫)
- ಶ್ರೀಗುರು, (೨೦೧೭)
- ಮರ್ತ್ಯದ ವಿಸ್ಮಯ ಮಹದೇವಮ್ಮ, (೨೦೧೮)
- ತನ್ನ ತಾನರಿದೆಡೆ, (೨೦೧೮)
- ಅಂತರಂಗ-ಸಿ.ಡಿ, (೨೦೨೦)
- ಜಗಳೂರು ತಾಲ್ಲೂಕು ಗೆಜೆಟಿಯರ್ ಇ, (೨೦೨೧)
- ಅಂಬೇಡ್ಕರ್ ಮತ್ತು ಆಧ್ಯಾತ್ಮ, (೨೦೨೧)
- ಸಾಂಸ್ಕೃತಿಕ ನಾಯಕಿ ಒನಕೆ ಓಬವ್ವ, (೨೦೨೨)
- ಬುದ್ಧಕಟ್ಟ ಬಯಸಿದ ಸಮಾಜ, (೨೦೨೩)
ಸಂಪಾದಿತ ಕೃತಿಗಳು
[ಬದಲಾಯಿಸಿ]- ಭಾರತದ ಧೀರಮಹಿಳೆ ಚಿತ್ರದುರ್ಗದ ಓನಕೆ ಒಬವ್ವ (೨೦೦೭)
- ಡಾ.ಕುಮಾರಚಲ್ಯ ಸಾಹಿತ್ಯ ವಾಚಿಕೆ (೨೦೧೮)
- ಸಾಹಿತ್ಯಾನುಸಂಧಾನ (೨೦೧೮)
- ಶೋಧ ಪರಂಪರೆ (೨೦೧೯)
- ಕುವೆಂಪು :ಪೂರ್ಣದೃಷ್ಟಿ (೨೦೨೦)
- ಸಾಹಿತ್ಯ ವಿಮರ್ಶೆ (೨೦೨೨)
- ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ (೨೦೨೨)
- ಶೋಧ ಮತ್ತು ಅರಿವು (೨೦೨೨)
- ಯುಗಧರ್ಮ ರಾಮಣ್ಣ ಅವರ ಬ್ರಹ್ಮಾಂಡ (೨೦೨೪)
- ಯುಗಧರ್ಮ ರಾಮಣ್ಣ ಅವರ ತ್ರಿಪದಿಗಳು (೨೦೨೪)
- ಯುಗಧರ್ಮ ರಾಮಣ್ಣ ಅವರ ವಚನಗಳು (೨೦೨೪)
- ಯುಗಧರ್ಮ ರಾಮಣ್ಣ ಅವರ ತತ್ವಪದಗಳು (೨೦೨೪)
- ಯುಗಧರ್ಮ ರಾಮಣ್ಣ ಅವರ ಕನ್ನಡಮ್ಮನ ತೇರು (೨೦೨೪)
- ಯುಗಧರ್ಮ ರಾಮಣ್ಣ ಅವರ ನಿಶ್ಯಬ್ದ (೨೦೨೪)
- ಶೋಧ ಸಂಭ್ರಮ (೨೦೨೫)
- ಕಲಾಸೌರಭ-೪ (೨೦೨೫)
- ವಿಜ್ಞಾನ ಸೌರಭ-೪ (೨೦೨೫)
- ವಾಣಿಜ್ಯ ಸೌರಭ-೪ (೨೦೨೫)
- ಗಣಕಸಿರಿ-೪ (೨೦೨೫)
- ವ್ಯವಹಾರ ಸಂಗಾತಿ-೪ (೨೦೨೫)
- ಸಾಹಿತ್ಯ ಸೌರಭ-೪ (೨೦೨೫)
- ವಿಶೇಷ ಕವಿ ಕುವೆಂಪು-೪ (೨೦೨೫)
ಸಂಶೋಧನಾ ಯೋಜನೆಗಳು
[ಬದಲಾಯಿಸಿ]- ನೆಲ್ಲಿಕಟ್ಟೆ ಗ್ರಾಮ: ಸಾಂಸ್ಕೃತಿಕ ಅಧ್ಯಯನ (ಕುವೆಂಪು ವಿಶ್ವವಿದ್ಯಾಲಯ)
- ಛಲವಾದಿ ಜನಾಂಗ: ಸಾಂಸ್ಕೃತಿಕ ಅಧ್ಯಯನ (ಯು.ಜಿ.ಸಿ)
- ಅಂಬೇಡ್ಕರ್ ಮತ್ತು ಅಧ್ಯಾತ್ಮ (ಕುವೆಂಪು ವಿಶ್ವವಿದ್ಯಾಲಯ)
ಗೌರವ, ಪ್ರಶಸ್ತಿಗಳು
[ಬದಲಾಯಿಸಿ]- ಶಿಕ್ಷಕ ವಿಭೂಷಣ, ಬಸವಕೇಂದ್ರ,ಚಿತ್ರದುರ್ಗ, (೨೦೦೪).
- ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ, ಡಾ.ಸುಭಾಷ್‌ಭರಣಿ ವೇದಿಕೆ-ಬಳ್ಳಾರಿ, (೨೦೦೭).
- ‘ಅಭಿನವಕಾಳಿದಾಸ ಬಸವಪ್ಪಶಾಸ್ತ್ರಿ’ ಕೃತಿಗೆ ‘ಸಂಶೋಧನ ಪ್ರಕಾರದ ‘ಪುಸ್ತಕ ಪ್ರಶಸ್ತಿ- ದಲಿತ ಸಾಹಿತ್ಯ ಪರಿಷತ್ತು, (೨೦೦೯)
- ಮಹಾತ್ಮ ಜ್ಯೋತಿ ಬಾಪುಲೆ’ ರಾಷ್ಟ್ರೀಯ ಪ್ರಶಸ್ತಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ದೆಹಲಿ (೨೦೧೦).
- ‘ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ’ ಕೃತಿಗೆ ಪುಸ್ತಕ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತು, ಬೆಂಗಳೂರು (೨೦೧೦).
- ಡಿ ಎಸ್ ಮ್ಯಾಕ್ಸ್ ಸಂಸ್ಥೆವತಿಯಿಂದ “ಡಿ ಎಸ್ ಮ್ಯಾಕ್ಸ್ ಸಾಹಿತ್ಯ ಶ್ರೀ’’ ಪ್ರಶಸ್ತಿ - ಡಿ ಎಸ್ ಮ್ಯಾಕ್ಸ್ ಪ್ರಾರ‍್ಟಿಸ್, (೨೦೧೯)
- ಸ್ಫೂರ್ತಿಶ್ರೀ ಪ್ರಶಸ್ತಿ- ಎಸ್ ಎಂ ಎಲ್ ಪಬ್ಲಿಕ್ ಸ್ಕೂಲ್ ದಶಕದ ಸಂಭ್ರಮ (೨೦೨೦)
- ಕವಿ ವಿಭೂಷಣ ಪ್ರಶಸ್ತಿ- ಕರ್ಮವೀರ ವೇದಿಕೆ, ಬೆಳಗಾವಿ (೨೦೨೧)
- ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ) ಬೆಂಗಳೂರು (೨೦೨೨).
- ಶ್ರೀಗಂಧ ಹಾರ ಪ್ರಶಸ್ತಿ - ಮಾಸ್ಕೇರಿ ಸಾಹಿತ್ಯ ಪ್ರತಿಷ್ಠಾನ, ಭಾರತಿ ಪ್ರಕಾಶನ, ದಾಂಡೇಲಿ, (೨೦೨೨-೨೩)
- ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ) ಬೆಂಗಳೂರು (೨೦೨೩).
- ಭಾರತೀಯ ಸಾಹಿತ್ಯ ರತ್ನ- ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರು, (೨೦೨೫)
- ಕಿ.ರಂ.ನಾಗರಾಜ್ ರಾಷ್ಟ್ರೀಯ ವಿಮರ್ಶಾ ಪ್ರಶಸ್ತಿ- ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು, (೨೦೨೫)
ಉಲ್ಲೇಖಗಳು
[ಬದಲಾಯಿಸಿ]- ↑ "Golden Jubilee Award to Dr. Nellikatte S. Siddesh". Chitradurga News. Retrieved 2024-11-20.
- ↑ "Golden Jubilee Award to Dr. Nellikatte S. Siddesh". Karnataka Kahale. Retrieved 2024-11-20.
- ↑ "Ambedkar is Aware of the Existence of This World – Dr. Nellikatte S. Siddesh". Suddi One. Archived from the original on 2025-05-17. Retrieved 2024-11-20.