ನೂತನ ಅಂತರಾಷ್ಟ್ರೀಯ ಅರ್ಥ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

1970ರ ಅವಧಿಯಲ್ಲಿ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಬಿಕ್ಕಟ್ಟು ತಲೆದೂರಿತು. 1973ರಲ್ಲಿ ಪೆಟ್ರೋಲಿಯಂ ವಸ್ತುಗಳ ಬೆಲೆಯ ಹೆಚ್ಚಳದ ಬಿಸಿ ಎಲ್ಲ ರಾಷ್ಟ್ರಗಳಿಗೂ ತಟ್ಟಿತು. ತೃತೀಯ ಜಗತ್ತಿನ ರಾಷ್ಟ್ರಗಳು ವಿಶ್ವ ಅಭಿವೃದ್ಧಿಯ ಸಲುವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇದರ ಬಗ್ಗೆ ಗಂಭೀರ ಸಂಧಾನಗಳನ್ನು ಮತ್ತು ಸಹಕಾರವನ್ನು ಕೊಡಬೇಕೆಂದು ಮೇಲಿಂದ ಮೇಲೆ ಪ್ರತಿಪಾಧಿಸಿದವು. ಇದರಿಂದ ಸಭೆ ಸಮ್ಮೇಳನಗಳ ಮೂಲಕ ವಿಶ್ವ ಆರ್ಥಿಕ ಸುಧಾರಣೆಯ ಕಾರ್ಯಕ್ರಮ ಪಟ್ಟಿಯನ್ನು(UNCTAD) ಸಿದ್ಧಪಡಿಸಿತು.


1973ರಲ್ಲಿ ಅಲಿಪ್ತ ರಾಷ್ಟ್ರಗಳ 4ನೇಯ ಶೃಂಗ ಸಭೆಯು ಆಲ್ಜೀರ್ ನಲ್ಲಿ ನಡೆಯಿತು. ಅದು ನೂತನ ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಸ್ಥಾಪನೆಗೆ ಕರೆಕೊಡುವ ಕಾರ್ಯಕ್ರಮವನ್ನು ಅಳವಡಿಸಿಕೊಂಡಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನೂತನ ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಮೇ 1, 1974ರಂದು ಘೋಷಣೆಯನ್ನು ಮಾಡಿತು. ಅದರ ಪ್ರಸ್ತಾವನೆಗಳು ಕೆಳಗಿನಂತಿವೆ.


ನೂತನ ಅರ್ಥ ವ್ಯವಸ್ಥೆಯ ಪ್ರಸ್ತಾವನೆಗಳು:


1. ಆಹಾರ ಮತ್ತು ಕೃಷಿ ಉತ್ಪಾದನೆ.

2. ಶೀಘ್ರ ಬೆಳವಣಿಗೆ ಮತ್ತು ಅಭಿವೃದ್ಧಿ ಸಹಾಯ.

3. ವ್ಯಾಪಾರ.

4. ಪ್ರಾದೇಶಿಕ ಸಹಕಾರ.

5. ಔದ್ಯೋಗಿಕ ರಚನೆ.

6. ತಂತ್ರಜ್ಞಾನದ ವರ್ಗಾವಣೆ.

7. ಅಂತರಾಷ್ಟ್ರೀಯ ಹಣಕಾಸು ಪದ್ಧತಿಯ ಸುಧಾರಣೆ

8. ಬಹುರಾಷ್ರೀಯ ಕಂಪನಿಗಳ ನಿಯಂತ್ರಣ.