ವಿಷಯಕ್ಕೆ ಹೋಗು

ನುಗ್ಗೆ ಸೊಪ್ಪಿನ ಸಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನುಗ್ಗೆ ಸೊಪ್ಪಿನ ಬಗ್ಗೆ

[ಬದಲಾಯಿಸಿ]

ದಿನನಿತ್ಯ ಆಹಾರ ಪದಾರ್ಥಗಳಲ್ಲಿ ವಿವಿಧ ರೀತಿಯ ಸೊಪ್ಪು ತರಕಾರಿಗಳನ್ನು ಬಳಕೆ ಮಾಡುತ್ತೇವೆ. ಆದರೆ ನುಗ್ಗೆ ಸೊಪ್ಪನುಗ್ಗೆ ಸೊಪ್ಪುನ್ನು ಸೇವಿಸುವುದು ಸ್ವಲ್ಪ ಕಡಿಮೆ. ಕಹಿ ಗುಣವಿರುವ ಕಾರಣ ಈ ಸೊಪ್ಪನ್ನು ಇಷ್ಟ ಪಡುವುದು ಕಡಿಮೆಯೇ. ಡ್ರಮ್ ಸ್ಟಿಕ್ ಎಲೆಗಳು ಎಂಬ ಹೆಸರಿನಿಂದಲೂ ಕರೆಯುವ ಈ ನುಗ್ಗೆ [] ಸೊಪ್ಪು ಆರೋಗ್ಯದ ವಿಚಾರದಲ್ಲಿ ಸಂಜೀವಿನಿಯಾಗಿದೆ. ನುಗ್ಗೆ ಸೊಪ್ಪಿನ ಪಲ್ಯವನ್ನು ಪ್ರತಿದಿನವೂ ನಿಯಮಿತವಾಗಿ ಸೇವಿಸುವುದರಿಂದ ಮೂಲವ್ಯಾಧಿಯ ರೋಗ ಉಲ್ಬಣಿಸುವುದಿಲ್ಲ. 1 ಚಮಚ ನುಗ್ಗೆಸೊಪ್ಪಿನ ರಸವನ್ನು ದಿನಕ್ಕೆ 2 ಬಾರಿ ಮಕ್ಕಳಿಗೆ ಕೊಡುವುದರಿಂದ “ಇರುಳುಗಣ್ಣು’ ಕಾಯಿಲೆ ನಿವಾರಣೆಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ

ನುಗ್ಗೆಸೊಪ್ಪು ಸಾರು

[ಬದಲಾಯಿಸಿ]
ನುಗ್ಗೆಸೊಪ್ಪು

ಬೇಕಾಗುವ ಸಾಮಗ್ರಿ

[ಬದಲಾಯಿಸಿ]
  1. 2 ಕಪ್‌ ಸಣ್ಣಗೆ ಹೆಚ್ಚಿದ ನುಗ್ಗೆಸೊಪ್ಪು
  2. ಕಡಲೆಗಾತ್ರದ ಇಂಗು
  3. 1/2 ಕಪ್‌ ತೆಂಗಿನ ತುರಿ,
  4. 1/2 ಚಮಚ ಜೀರಿಗೆ,
  5. 4-5 ಒಣಮೆಣಸು,
  6. 1 ಕಪ್‌ ಬೇಯಿಸಿದ ತೊಗರಿಬೇಳೆ,
  7. 1 ಚಮಚ ಸಾಸಿವೆ,
  8. 1/2 ಚಮಚ ಜೀರಿಗೆ,
  9. 1 ಚಮಚ ಎಣ್ಣೆ ,
  10. 1 ಎಸಳು ಕರಿಬೇವು,
  11. 1/2 ಚಮಚ ಕೆಂಪುಮೆಣಸಿನ ಚೂರು,
  12. ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

[ಬದಲಾಯಿಸಿ]
ನುಗ್ಗೆ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿ 6 ಕಪ್‌ ನೀರು, ಉಪ್ಪು , ಇಂಗು ಹಾಕಿ ಬೇಯಿಸಿ. ತೊಗರಿ ಬೇಳೆಯನ್ನು ಬೇರೆಯೇ ಬೇಯಿಸಿಡಬೇಕು.. ತೆಂಗಿನ ತುರಿಗೆ ಒಣಮೆಣಸು, ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ. ಬೆಂದ ಸೊಪ್ಪಿಗೆ ಬೆರೆಸಿ. ನಂತರ ಬೆಂದ ತೊಗರಿಬೇಳೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು ಸೇರಿಸಿ ಒಗ್ಗರಣೆ ಹಾಕಿ. ಚಪಾತಿಗೆ, ಊಟಕ್ಕೆ ಬಳಸಬಹುದು.ತುಂಬಾ ರುಚಿಕರವಾದ ಸಾರು ಇದು.

ನುಗ್ಗೆ ಸೊಪ್ಪಳ್ಳಿ ತಯಾರಿಸುವ ವಿಧಗಳು

[ಬದಲಾಯಿಸಿ]
  • ನುಗ್ಗೆ ಸೊಪ್ಪಿನ ಪಲ್ಯ
  • ನುಗ್ಗೆ ಸೊಪ್ಪಿನ ಗಸಿ
  • ನುಗ್ಗೆ ಸೊಪ್ಪಿನ ಪತ್ರೊಡೆ
  • ನುಗ್ಗೆ ಸೊಪ್ಪಿನ ವಡೆ

ಉಲ್ಲೇಖ

[ಬದಲಾಯಿಸಿ]
  1. Kannada, TV9 (ಫೆಬ್ರವರಿ 2, 2024). "ಕಹಿಗುಣವಿರುವ ನುಗ್ಗೆ ಸೊಪ್ಪು ಹಲವು ಆರೋಗ್ಯ ಸಮಸ್ಯೆಗಳಿಗೆ ಔಷಧಿ, ಇಲ್ಲಿದೆ ಸರಳ ಮನೆ ಮದ್ದು". TV9 Kannada.{{cite web}}: CS1 maint: numeric names: authors list (link)