ವಿಷಯಕ್ಕೆ ಹೋಗು

ನಿಷೇಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಷೇಕವು (ಶೋಭನ, ಪ್ರಸ್ತ) ಹಿಂದೂಗಳಲ್ಲಿ ಮೊದಲ ಸಂಭೋಗಕ್ಕೆ ಸಂಬಂಧಿಸಿದ ಧರ್ಮಾಚರಣೆ. ವಿವಾಹದ ನಂತರ ೪ನೇ ದಿವಸದ ರಾತ್ರಿಯಂದು ಮಾತ್ರ ಮೊದಲ ಸಂಭೋಗಕ್ಕೆ ಅನುಮತಿಸಲಾಗುತ್ತದೆ.[]

ಧರ್ಮಾಚರಣೆಗಳು

[ಬದಲಾಯಿಸಿ]

ಈ ಧರ್ಮಾಚರಣೆಯ ನಿಖರತೆಯನ್ನು ಇನ್ನೂ ನಿರ್ಧರಿಸಬೇಕಾಗಿದೆ. ಜನಪ್ರಿಯ ಆಚರಣೆಯಲ್ಲಿ, ವಧು ಹಾಗೂ ವರನಿಗೆ ನಿಖರವಾಗಿ ಮೊದಲ ರಾತ್ರಿಯಂದು ಪೂರ್ವನಿರ್ಧಾರಿತವಾದ ಮಂಗಳವಾದ ಸಮಯದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಲು ವಿಶೇಷ ಏರ್ಪಾಟಿರುತ್ತದೆ. ಇದು ಆ ಸ್ಥಳ ಮತ್ತು ಕುಟುಂಬವು ಅನುಸರಿಸುವ ಗೃಹ್ಯಸೂತ್ರಗಳನ್ನು ಅವಲಂಬಿಸಿರುತ್ತದೆ. ಬಹುಪಾಲು ಉತ್ತರ ಭಾರತದವರು ಶುಕ್ಲ ಯಜುರ್ವೇದವನ್ನು ಅನುಸರಿಸುತ್ತಾರೆ, ಹಾಗಾಗಿ ಇದನ್ನು ವಿವಾಹದ ನಂತರ ೪ನೇ ದಿನದಂದು ಏರ್ಪಡಿಸಲಾಗುತ್ತದೆ. ಇತರ ಕಲ್ಪಸೂತ್ರಗಳು ಇದು ಗೃಹ ಪ್ರವೇಶದ ನಂತರ ನಡೆಯಬೇಕೆಂದು ಹೇಳುತ್ತವೆ, ಅಂದರೆ ಅನೇಕ ಪ್ರದೇಶಗಳಲ್ಲಿ ಮದುವೆಯ ಮಾರನೆಯ ದಿನದಂದು. ಗೃಹ ಪ್ರವೇಶದ ನಂತರ ಮತ್ತು ನಿಷೇಕದ ಮೊದಲು ದಂಪತಿಗಳಿಗೆ ಒಬ್ಬರನ್ನೊಬ್ಬರು ನೋಡಲು ಹಾಗೂ ಮಾತನಾಡಿಸಲು ಅವಕಾಶ ನೀಡಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2019-10-10. Retrieved 2019-09-13.


"https://kn.wikipedia.org/w/index.php?title=ನಿಷೇಕ&oldid=1244504" ಇಂದ ಪಡೆಯಲ್ಪಟ್ಟಿದೆ