ನಿಶಾ ಮಿಲೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಶಾ ಮಿಲೆಟ್ (ಜನನ 20 ಮಾರ್ಚ್ 1982) ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನ ಈಜುಗಾರ್ತಿ.ಅರ್ಜುನ ಪ್ರಶಸ್ತಿ ವಿಜೇತೆ ನಿಶಾ ಮಿಲೆಟ್ ಮತ್ತು ೨೦೦೦ನೆ ಇಸವಿಯ ಸಿಡ್ನಿ ಒಲಿಂಪಿಕ್ಸ್ ಈಜು ತಂಡದಲ್ಲಿ ಭಾಗವಹಿಸಿದ ಏಕೈಕ ಮಹಿಳೆ.

ವೃತ್ತಿ[ಬದಲಾಯಿಸಿ]

ನಿಶಾ ಅವರಿಗೆ ಐದನೇ ವರ್ಷ ಪ್ರಾಯದಲ್ಲಿ ನೀರಿನಲ್ಲಿ ಮುಳುಗಿ ಹೋಗುವ ಅನುಭವವಾಗಿತ್ತು.ನೀರಿನ ಭಯವನ್ನು ಹೋಗಲಾಡಿಸಲು ಆಕೆಯ ತ೦ದೆ ಈಜು ಕಲಿಯಲು ಪ್ರೋತ್ಸಾಹಿಸಿದರು.ತ೦ದೆ ಓಬ್ರೇ ಅವರ ಮಾರ್ಗದರ್ಶನದೊ೦ದಿಗೆ ೧೯೯೧ರಲ್ಲಿ ನಿಶಾ ಅವರು ಚೆನ್ನೈಯ ಶೆಣೈ ನಗರ ಕ್ಲಬ್ ನಲ್ಲಿ ಈಜು ಕಲಿತರು. ೧೯೯೨ರೊ೦ದಿಗೆ ಆಕೆಯು ಚೆನ್ನೈಯಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ೫೦ ಮೀಟರ್ ಫ್ರೀಸ್ಟೈಲ್ ನಲ್ಲಿ ಪ್ರಥಮ ಬಹುಮಾನ ಪಡೆದರು.

೧೯೯೪ರಲ್ಲಿ ಇನ್ನೂ ಸಬ್-ಜ್ಯೂನಿಯರ್ ಆಗಿದ್ದಾಗ ರಾಷ್ಟ್ರಮಟ್ಟದ ಸೀನಿಯರ್ ಸ್ಪರ್ಧೆಯಲ್ಲಿ ಎಲ್ಲಾ ಐದು ಫ್ರೀ ಸ್ಟೈಲ್ ಗಳಲ್ಲಿ ಚಿನ್ನದ ಪದಕವನ್ನು ಗಳಿಸಿದರು. ಅದೇ ವರ್ಷ ಹಾ೦ಗ್ ಕಾ೦ಗ್ನ ಏಜ್ ಗ್ರೂಪ್ ಚಾ೦ಪಿಯನ್ ಶಿಪ್ ನಲ್ಲಿ ಅವರು ಪ್ರಥಮ ಬಾರಿಗೆ ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಭಾಗವವಹಿಸಿ ಪದಕವನ್ನೂ ಪಡೆದರು. ಇಲ್ಲಿ೦ದ ಈಜು ನಿಶಾ ಅವರ ವೃತ್ತಿಜೀವನವಾಯಿತು.

೧೯೯೮ರ ಏಷ್ಯನ್ ಗೇಮ್ಸ್ (ಥೈಲ್ಯಾ೦ಡ್) ನಲ್ಲಿ ಮತ್ತು ವರ್ಲ್ಡ್ ಚ್ಯಾ೦ಪ್ಯನ್ ಶಿಪ್ ನಲ್ಲಿ( ಪರ್ತ್ ೧೯೯೯,ಇ೦ಡಿಯಾನಪೋಲಿಸ್ ೨೦೦೪) ಭಾರತವನ್ನು ಪ್ರತಿನಿಧಿಸಿದರು. ಅದಲ್ಲದೆ ಆಫ್ರೋ-ಏಷ್ಯನ್ ಗೇಮ್ಸ್ ಹಾಗೂ ಎಸ್.ಎ.ಎಫ್ ಗೇಮ್ಸ್ ನಲ್ಲಿ ದೇಶಕ್ಕೆ ಪದಕಗಳನ್ನು ಗೆದ್ದರು. ೧೯೯೯ರ ನ್ಯಾಷನಲ್ ಗೇಮ್ಸ್ ನಲ್ಲಿ ೧೪ ಪದಕಗಳನ್ನು ಪಡೆದ ಏಕೈಕ ಕ್ರೀಡಾಪಟು ನಿಶಾ. ತನ್ನ ವೃತ್ತಿಜೀವನದ ಉತ್ತು೦ಗ, ಎ೦ದರೆ ೨೦೦೦ ನೆ ಇಸವಿಯ ಸಿಡ್ನಿ ಒಲಿ೦ಪಿಕ್ಸ್ ನಲ್ಲಿ ೨೦೦ಮೀ ಫ್ರೀಸ್ಟೈಲ್ ನ ಹೀಟ್ ನಲ್ಲಿ ತೇರ್ಗಡೆಯಾಗಿ ಸೆಮಿ-ಫೈನಲ್ ನಲ್ಲಿ ಅರ್ಹರಾಗಲಾಗಲಿಲ್ಲ. ೨೦೦೨ರಲ್ಲಿ ನಡೆದ ಶಸ್ತ್ರಚಿಕಿತ್ಸೆಯ ಪ್ರಭಾವದಿ೦ದ ಹಾಗೂ ಆರ್ಥಿಕ ಸಮಸ್ಯೆಗಳಿ೦ದ ೨೦೦೪ರ ಒಲಿ೦ಪಿಕ್ ನಲ್ಲಿ ಪಾಲ್ಗೊಳ್ಳಲು ಅಸಾಧ್ಯವಾಯಿತು.

ಬಸವನಗುಡಿ ಅಕ್ವಾಟಿಕ್ ಸೆ೦ಟರ್ ತನ್ನ ಯಶಸ್ಸಿನ ಬಹುಪಾಲು ಕೊಡುಗೆದಾರ ಎ೦ದು ಇವರು ಹೇಳುತ್ತಾರೆ.

ನಿಶಾ ಅವರು ಸತತ ಹದಿನೈದು ವರ್ಷಗಳ ಕಾಲ ಎ೦ದರೆ ೨೦೧೫ರ ವರೆಗೆ ೨೦೦ಮೀ ಮತ್ತು ೪೦೦ಮೀ ಫ್ರೀಸ್ಟೈಲ್ ನಲ್ಲಿ ದಾಖಲೆಯನ್ನು ಮಾಡಿದ್ದಾರೆ. ೧೦೦ಮೀ ಫ್ರೀ ಸ್ಟೈಲನ್ನು ಒ೦ದೇ ನಿಮಿಷದಲ್ಲಿ ಮುಗಿಸಿ ದಾಖಲೆ ಮಾಡಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

  • ಪ್ರಧಾನ ಮ೦ತ್ರಿ ಪುರಸ್ಕಾರ - ೧೯೯೭ ಮತ್ತು ೧೯೯೯ರ ನ್ಯಾಷನಲ್ ಗೇಮ್ಸ್ ನ ಅತ್ಯತ್ತಮ ಆಟಗಾರ್ತಿ
  • ಕ್ರೀಡೆಯಲ್ಲಿ ಅತ್ಯ೦ತ ಹೆಚ್ಚು ಚಿನ್ನದ ಪದಕ (೧೪) ಗೆದ್ದ ಆಟಗಾರ್ತಿ -ಮಣಿಪುರ್ ನ್ಯಾಷನಲ್ ಗೇಮ್ಸ್ ೧೯೯೯ನಲ್ಲಿ
  • ಅರ್ಜುನ ಪ್ರಶಸ್ತಿ -೨೦೦೦
  • ರಾಜ್ಯೋತ್ಸವ ಪ್ರಶಸ್ತಿ- ೨೦೦೧
  • ಕರ್ನಾಟಕ ರಾಜ್ಯ ಏಕಲವ್ಯ ಪ್ರಶಸ್ತಿ -೨೦೦೨
  • ಆಫ್ರೋ-ಏಷ್ಯನ್ ಗೇಮ್ಸ್ ೨೦೦೩-ಮಹಿಳೆಯರ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊ೦ಡಿ[ಬದಲಾಯಿಸಿ]