ನಿರ್ಮಲಾನಂದ ಸ್ವಾಮೀಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ
SriSriSri Nirmalanandanatha Swamiji.jpg
ಜನನ: (೧೯೬೯-೦೭-೨೦)೨೦ ಜುಲೈ ೧೯೬೯
ಜನನ ಸ್ಥಳ: ತುಮಕೂರು ಗುಬ್ಬಿ ತಾಲೂಕಿನ ಚೀರನಹಳ್ಳಿ
ಗುರು: ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ
ಶಿಷ್ಯರು: ಶ್ರೀಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ದೇಶ-ವಿದೇಶಗಳ ಅಸಂಖ್ಯಾತ ಭಕ್ತವರ್ಗ
ಪ್ರಶಸ್ತಿಗಳು/ಬಿರುದುಗಳು:ಅನ್ನ ದಾಸೋಹಿ,ಶಿಕ್ಷಣ ಸಂತ.
ಸಾಹಿತ್ಯ ರಚನೆಗಳು:ಸಂಪಾದಕರು,ಶ್ರೀ ಆದಿಚುಂಚನಗಿರಿ ಮಾಸ ಪತ್ರಿಕೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಾಥ ಪರಂಪರೆಯ 72ನೇ ಪೀಠಾಧ್ಯಕ್ಷರಾದ ಅನ್ನ ದಾಸೋಹಿ, ಶಿಕ್ಷಣ ಸಂತ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರು 20 ಜುಲೈ 1969ರಲ್ಲಿ ಜನಿಸಿದರು. ಪೂರ್ವಾಶ್ರಮದಲ್ಲಿ ನಾಗರಾಜು ಎಂಬ ಹೆಸರಿನಿಂದ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದ ಇವರನ್ನು ಅಧ್ಯಾತ್ಮದ ಸೆಳೆತ ಶ್ರೀಮಠಕ್ಕೆ ಕರೆದುಕೊಂಡು ಬಂದಿತು. 1994-95ರಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧ್ಯಕ್ಷರಾಗುವ ವೇಳೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು. ಪರಮಪೂಜ್ಯ,ಭೈರವೈಕ್ಯ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಅಣತಿಯಂತೆ 14 ಜನವರಿ 2013ರಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನೂತನ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಅನ್ನ ದಾಸೋಹ, ಶಿಕ್ಷಣ ದಾಸೋಹ ಮೊದಲಾದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು ಅಂದಿನಿಂದ ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ನಿರಂತರವಾಗಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಶ್ರೀಗಳ ಜನನ ಮತ್ತು ಬಾಲ್ಯ[ಬದಲಾಯಿಸಿ]

ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಚೀರನಹಳ್ಳಿಯಲ್ಲಿ ನರಸೇಗೌಡ ಹಾಗೂ ನಂಜಮ್ಮ ದಂಪತಿಗಳ ದ್ವಿತೀಯ ಪುತ್ರರಾಗಿ 20 ಜುಲೈ 1969ರಲ್ಲಿ ಜನಿಸಿದರು. ಶ್ರೀಗಳ ಪೂರ್ವಾಶ್ರಮದ ಹೆಸರು "ನಾಗರಾಜು" ಎಂಬುದಾಗಿತ್ತು.

ಶ್ರೀಗಳ ವಿದ್ಯಾಭ್ಯಾಸ[ಬದಲಾಯಿಸಿ]

ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಪೂರೈಸಿದ ಶ್ರೀಗಳು, ಮಾಧ್ಯಮಿಕ ಶಿಕ್ಷಣವನ್ನು ನೆಟ್ಟೇಕೆರೆಯಲ್ಲಿ ಪೂರ್ಣಗೊಳಿಸಿದರು. ಮಾವಿನಹಳ್ಳಿಯಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದು, ಏಳನೇ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಕ್ಕಾಗಿ ಜಿಂದಾಲ್ ಸಂಸ್ಥೆ ನೀಡುವ ಸ್ಕಾಲರ್ ಶಿಪ್ ಪಡೆದುಕೊಂಡಿದ್ದರು.ಮುಂದೆ ಮೈಸೂರಿನ ಹಿಂದುಳಿದ ವರ್ಗದ ವಸತಿ ನಿಲಯದಲ್ಲಿದ್ದುಕೊಂಡು ಎಂಜಿನಿಯರಿಂಗ್ ಅಭ್ಯಾಸ ಮಾಡಿದರು. ಪುಣೆಯ ಭಾರತ ಸರ್ಕಾರದ ಸಂಶೋಧನಾ ಕೇಂದ್ರಕ್ಕೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದರು. ಆದರೆ, ಅಧ್ಯಾತ್ಮದ ಸೆಳೆತ ಅವರನ್ನು ಶ್ರೀಮಠಕ್ಕೆ ಕರೆದುಕೊಂಡು ಬಂದಿತು.ಶ್ರೀಮಠದ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದಲ್ಲಿ ಅದ್ವೈತ ವೇದಾಂತ ವಿದ್ವುದುತ್ತಮ ಮತ್ತು ಶೈವಾಗಮದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದಿರುವ ನಿರ್ಮಲಾನಂದ ಸ್ವಾಮೀಜಿ ಅವರು, ಆದಿಚುಂಚನಗಿರಿಮಠದ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಹಾಗೂ ವಿಸ್ತರಣೆಗಾಗಿ ದೇಶ,ವಿದೇಶಗಳನ್ನೂ ಸುತ್ತಿದ್ದಾರೆ.

ಶ್ರೀಗಳ ದಿನಚರಿ[ಬದಲಾಯಿಸಿ]

ಮೃದು ಸ್ವಭಾವಿ, ಮೆದು ಮಾತಿನವರಾಗಿದ್ದು, ಅಧ್ಯಾತ್ಮದ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡೇ ಮಠದ ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧರ್ಮ ಮತ್ತು ವಿಜ್ಞಾನದ ನಡುವೆ ಅಂತರ ಇರಬಾರದು ಎಂಬುದು ಶ್ರೀಗಳ ನಿಲುವಾಗಿದೆ. ಹಾಗಾಗಿ ಭಕ್ತಾದಿಗಳಿಗೆಂದು ಮಠದ ಆವರಣದಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವ ಮೂಲಕ ಧರ್ಮ ಮತ್ತು ವಿಜ್ಞಾನದ ಸಂಯೋಜನೆ ಮಾಡುವುದರ ಮೂಲಕ "ಉಚಿತ ಅಂತರ್ಜಾಲ ವ್ಯವಸ್ಥೆ" ಮಾಡಿರುವ ಭಾರತದ ಮೊದಲ ಮಠ ಎಂಬ ಖ್ಯಾತಿಗೆ ಆದಿಚುಂಚನಗಿರಿ ಶ್ರೀಕ್ಷೇತ್ರ ಪಾತ್ರವಾಗಲು ಕಾರಣರಾಗಿದ್ದಾರೆ.

ನಿರ್ಮಲ ವಾಣಿ[ಬದಲಾಯಿಸಿ]

1.ಧರ್ಮವಿಲ್ಲದೆ ವಿಜ್ಞಾನ ಇರಬಾರದು. ಹಾಗೇಯೆ ವಿಜ್ಞಾನ ಇಲ್ಲದ ಧರ್ಮವೂ ಸರಿಯಲ್ಲ. ಧರ್ಮ ಮತ್ತು ವಿಜ್ಞಾನದ ನಡುವೆ ಹೊಂದಾಣಿಕೆ ಇದ್ದರೆ ಉತ್ತಮ. ಹಾಗಾಗಿ ಇಂದಿನ ಮಕ್ಕಳು ಮುಂದೆ ವಿಜ್ಞಾನಿಗಳಾಗಿ ದೇಶವನ್ನು ಅಭಿವೃದ್ಧಿಗೊಳಿಸ ಬೇಕು.

2.‘ಜನರನ್ನು ಸುಜ್ಞಾನದ ಕಡೆಗೆ ತೆಗೆದುಕೊಂಡು ಹೋಗಲು ಹೊರಟಿರುವ ನಮ್ಮಂತಹ ಸಂತರಲ್ಲಿ ಒಂದೇ ಎಂಬ ಭಾವನೆ ಕೇವಲ ಸೈದ್ಧಾಂತಿಕವಾಗಿ ಇರದೇ, ಅನುಷ್ಠಾನದ ರೂಪದಲ್ಲಿ ಇದ್ದದ್ದೇ ಅದಲ್ಲಿ ಬಹುಶಃ ಯಾವುದೇ ಒಂದು ಧರ್ಮವನ್ನು ಇನ್ನೊಂದು ಧರ್ಮವರು ಬೇರೆ ಯಾವುದೇ ಸ್ವಾರ್ಥ ವನ್ನು ಇಟ್ಟುಕೊಂಡು ಒಡೆಯಲು ಸಾಧ್ಯವಿಲ್ಲ’

3.ಮುಕ್ತ ಮನಸ್ಸಿನಿಂದ ಅಂದು ಕೃಷ್ಣ ಕೊಟ್ಟಂತಹ ಸಂದೇಶವನ್ನು ಪಾಲಿಸಿದರೆ ನಮ್ಮ ಬದುಕಿಗೆ ಬೇಕಾದ ಜ್ಞಾನ ಪ್ರಾಪ್ತಿಯಾಗುತ್ತದೆ. ಆಧುನಿಕ ಕಾಲಕ್ಕೆ ಶ್ರೀಕೃಷ್ಣ ಎಷ್ಟು ಪ್ರಸ್ತುತವೋ, ಅಪ್ರಸ್ತುತ ವೋ ಎಂಬ ಸರಿಯಾದ ಚರ್ಚೆ ಯಾದಲ್ಲಿ, ಅಂದಿನ ಇಂದಿನ ಸಮಾಜಕ್ಕೆ ಕೃಷ್ಣ ಹೆಚ್ಚು ಪ್ರಸ್ತುತ. ಆದರೆ,ನಾವು ಕೃಷ್ಣನನ್ನು ಅರ್ಥ ಮಾಡಿ ಕೊಳ್ಳುವಲ್ಲಿ ಎಡವಿದ್ದೇವೆ.

4.ಇಂದಿನ ದಿನಗಳಲ್ಲಿ ಧರ್ಮ ಧರ್ಮಗಳ ನಡುವೆ ಸಾಕಷ್ಟು ಕ್ಲೇಷ, ವಿಭಿನ್ನ ಭಾವನೆಗಳು ಪಸರಿಸಿ ಸಮಾಜದ ಶಾಂತಿ ಮತ್ತು ಸಾಮರಸ್ಯ ಹಾಳಾಗುತ್ತಿದೆ. ಧರ್ಮಗಳ ನಡುವಿನ ಒಡಕು, ವೈಮನಸ್ಸುಗಳು ಒಂದು ಕಡೆಯಾದರೆ. ಒಂದೇ ಧರ್ಮದಲ್ಲಿರುವ ಹಲವಾರು ಸಂತರು ಮತ್ತು ಮಠಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ಇದು ತುಂಬಾ ಅಪಾಯಕಾರಿ.

ಭಕ್ತರ ಭೇಟಿ ಒಂದು ಪ್ರಮುಖ ದಿನಚರಿ[ಬದಲಾಯಿಸಿ]

ಶ್ರೀಗಳ ವಿಶ್ರಾಂತಿಯ ಸಮಯ[ಬದಲಾಯಿಸಿ]