ನಿಯಮಿತ ಕಂಪೆನಿ
ಕಂಪನಿಗಳ ಕಾನೂನು |
---|
ವ್ಯಾಪಾರ ಘಟಕಗಳು |
ಐರೋಪ್ಯ ಒಕ್ಕೂಟ / ಇಇಎ |
ಯುಕೆ / ಆಯರ್ಲಂಡ್ / ಕಾಮನ್ವೆಲ್ತ್ |
ಅಮೇರಿಕಾ |
ಹೆಚ್ಚುವರಿ ಘಟಕಗಳು |
ಸಿದ್ಧಾಂತಗಳು |
ಕಾರ್ಪೊರೇಟ್ ಕಾನೂನುಗಳು |
ಸಂಬಂಧಿತ ಕ್ಷೇತ್ರಗಳು |
ಒಂದು ನಿಯಮಿತ ಕಂಪೆನಿ ಯು ಕಂಪೆನಿಯಾಗಿದ್ದು, ಸದಸ್ಯರು ಅಥವಾ ಚಂದಾದಾರರ ಬಾಧ್ಯತೆಯು ಅವರು ಕಂಪೆನಿಗೆ ಏನು ಬಂಡವಾಳ ಹೂಡಿಕೆ ಅಥವಾ ಖಾತರಿ ನೀಡಿದ್ದಾರೆ ಎನ್ನುವುದಕ್ಕೆ ನಿಯಮಿತವಾಗಿದೆ. ನಿಯಮಿತ ಕಂಪೆನಿಗಳು ಷೇರುಗಳು ಅಥವಾ ಖಾತರಿಯಿಂದ ನಿಯಮಿತವಾಗಿರಬಹುದು. ನಿಯಮಿತ ಕಂಪೆನಿಯು ಷೇರುಗಳಿಂದ ನಿಯಮಿತವಾಗಿದ್ದು, ಸಾರ್ವಜನಿಕ ಕಂಪೆನಿಗಳು ಮತ್ತು ಖಾಸಗಿ ಕಂಪೆನಿಗಳು ಎಂದು ಮತ್ತಷ್ಟು ವಿಭಾಗವಾಗಿದೆ. ಖಾಸಗಿ ನಿಯಮಿತ ಕಂಪೆನಿಯ ಸದಸ್ಯರು ಯಾರಾಗಬಹುದು ಎನ್ನುವುದು ಕಾನೂನು ಮತ್ತು ಕಂಪೆನಿಯ ಕಾನೂನುಗಳಿಂದ ನಿರ್ಬಂಧಿತವಾಗಿದೆ. ಇದಕ್ಕೆ ವಿರುದ್ಧವಾಗಿ ಯಾರು ಬೇಕಾದರೂ ಸಾರ್ವಜನಿಕ ನಿಯಮಿತ ಕಂಪೆನಿಯಲ್ಲಿ ಷೇರುಗಳನ್ನು ಖರೀದಿಸಬಹುದು.
ನಿಯಮಿತ ಕಂಪೆನಿಗಳನ್ನು ಅನೇಕ ರಾಷ್ಟ್ರಗಳಲ್ಲಿ ಕಾಣಬಹುದು. ಆದರೂ ಅವುಗಳ ಆಡಳಿತದ ವಿವರವಾದ ನಿಯಮಗಳು ವ್ಯಾಪಕ ವ್ಯತ್ಯಾಸ ಹೊಂದಿರುತ್ತದೆ. ಪಿಎಲ್‌ಸಿ ವಿಧದ ಸಾರ್ವಜನಿಕವಾಗಿ ಮಾರಾಟದ ಕಂಪೆನಿಗಳು(ಉದಾಹರಣೆಗೆ, ಜರ್ಮನ್ Aktiengesellschaft (AG), ಜೆಕ್ ಎ.ಎಸ್ ಮತ್ತು ಮೆಕ್ಸಿಕನ್, ಫ್ರೆಂಚ್, ಪಾಲಿಷ್ S.A.)ಮತ್ತು ಖಾಸಗಿ ವಿಧದ ಕಂಪೆನಿ(ಉದಾಹರಣೆಗೆ ಜರ್ಮನ್ GmbH, ಪಾಲಿಷ್ Sp. z o.o., ಜೆಕ್ s.r.o. ಮತ್ತು ಸ್ಲೋವಾಕ್ ಎಸ್. ಎಸ್ ಆರ್.ಒ.).
ವಿಧಗಳು
[ಬದಲಾಯಿಸಿ]ಖಾತರಿದಾರನಿಂದ ನಿಯಮಿತವಾದ ಖಾಸಗಿ ಕಂಪೆನಿ
[ಬದಲಾಯಿಸಿ]ಷೇರು ಬಂಡವಾಳವಿಲ್ಲದ ಒಂದು ಕಂಪೆನಿ, ಅದರ ಸದಸ್ಯರಿಂದ ಖಾತರಿ ಪಡೆದಿದ್ದು, ಕಂಪೆನಿಯು ದಿವಾಳಿಯಾದ ಸಂದರ್ಭದಲ್ಲಿ ನಿಗದಿತ ಮೊತ್ತವನ್ನು ಪಾವತಿ ಮಾಡಲು ಸಮ್ಮತಿಸುತ್ತಾರೆ. ನಿಯಮಿತ ಬಾಧ್ಯತೆಯ ಈ ರೂಪವನ್ನು ಬಳಸಿಕೊಂಡು ದತ್ತಿಸಂಸ್ಥೆಗಳು ಸಾಮಾನ್ಯವಾಗಿ ಸ್ಥಾಪಿತವಾಗುತ್ತವೆ. ಇನ್ನೊಂದು ಉದಾಹರಣೆ ಫೈನಾನ್ಸಿಯಲ್ ಸರ್ವೀಸಸ್ ಅಥೋರಿಟಿ ಆಸ್ಟ್ರೇಲಿಯದಲ್ಲಿ ಪಟ್ಟಿಮಾಡಿರದ ಸಾರ್ವಜನಿಕ ಕಂಪೆನಿ ಖಾತರಿದಾರನಿಂದ ನಿಯಮಿತವಾಗಿರಬಹುದು.[೧]
ಷೇರುಗಳಿಂದ ನಿಯಮಿತವಾದ ಖಾಸಗಿ ಕಂಪೆನಿ
[ಬದಲಾಯಿಸಿ]ನಿಯಮಿತ ಬಾಧ್ಯತೆಯ ಷೇರುದಾರರಿರುತ್ತಾರೆ ಮತ್ತು ಅದರ ಷೇರುಗಳನ್ನು ಸಾಮಾನ್ಯ ಸಾರ್ವಜನಿಕರಿಗೆ ನೀಡಲಾಗುವುದಿಲ್ಲ. ಷೇರುಗಳಿಂದ ನಿಯಮಿತವಾದ ಖಾಸಗಿ ಕಂಪೆನಿಗಳ ಷೇರುದಾರರು ಮೂರನೇ ವ್ಯಕ್ತಿಗೆ ಅದನ್ನು ಮಾರಾಟ ಮಾಡುವುದಕ್ಕೆ ಮುಂಚಿತವಾಗಿ ತಮ್ಮ ಸಹ ಷೇರುದಾರರಿಗೆ ಷೇರುಗಳನ್ನು ನೀಡುವ ಪ್ರಸ್ತಾಪಕ್ಕೆ ಬದ್ಧರಾಗಿರುತ್ತಾರೆ.
ಸಾರ್ವಜನಿಕ ನಿಯಮಿತ ಕಂಪೆನಿ
[ಬದಲಾಯಿಸಿ]ಸಾರ್ವಜನಿಕ ನಿಯಮಿತ ಕಂಪೆನಿಗಳು ಷೇರುವಿನಿಮಯ ಕೇಂದ್ರದಲ್ಲಿ ಸಾರ್ವಜನಿಕ ಮಾರಾಟ ಮಾಡಬಹುದು. U.S. ಕಾರ್ಪೊರೇಷನ್ (ಕಾರ್ಪ್.) ಮತ್ತುಜರ್ಮನ್ ಆಕ್ಟಿಂಜೆಸೆಲ್‌ಸ್ಕ್ಟಾಫ್ಟ್ರೀತಿಯಲ್ಲಿ. (AG).
ನಿರ್ದಿಷ್ಟ ರಾಷ್ಟ್ರಗಳಲ್ಲಿ
[ಬದಲಾಯಿಸಿ]ಐರ್ಲೆಂಡ್ ಮತ್ತು ಯುನೈಟೆಡ್ ಕಿಂಗ್ಡಂ
[ಬದಲಾಯಿಸಿ]ಯುನೈಟೆಡ್ ಕಿಂಗ್ಡಂ ಅಥವಾ ರಿಪಬ್ಲಿಕ್ ಆಫ್ ಐರ್ಲೆಂಡ್‌ನಲ್ಲಿ ಇದು ಷೇರುದಾರರೊಂದಿಗೆ ಕಾರ್ಪೊರೇಷನ್ ಆಗಿದ್ದು, ಷೇರುದಾರರ ಬಾಧ್ಯತೆಯು ಷೇರುಗಳಿಂದ ನಿಯಮಿತವಾಗಿದೆ. ಇದು ಖಾಸಗಿ ಸ್ವಾಮ್ಯದ ಕಂಪೆನಿಯ ಅತ್ಯಂತ ಸಾಮಾನ್ಯ ರೂಪವಾಗಿದೆ. ನಿಯಮಿತ ಕಂಪೆನಿಯ ಸ್ಥಾಪನೆ ಅನೇಕ ಜನರಿಗೆ ಆಕರ್ಷಕ ಆಯ್ಕೆಯಾಗಿದೆ. ಇದಕ್ಕೆ ಭಿನ್ನವಾಗಿ ಏಕಮಾತ್ರ ಮಾಲೀಕತ್ವಗಳು, ವೈಯಕ್ತಿಕ ಆಸ್ತಿಗಳು ಕಂಪೆನಿ ಹಣಕಾಸುಗಳಿಂದ ವಿಶಿಷ್ಟವಾಗಿದೆ.
ಕಂಪೆನಿಗಳ ನೋಂದಣಿಯು ಗ್ರೇಟ್ ಬ್ರಿಟನ್ (ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಮತ್ತುವೇಲ್ಸ್) ಕಂಪೆನೀಸ್ ಹೌಸ್ಮೂಲಕ ನಿರ್ವಹಿಸಲಾಗುತ್ತದೆ. ನಿಯಮಿತ ಕಂಪೆನಿಗೆ ಕೆನಡಾದಲ್ಲಿ ನೋಂದಣಿ ಮಾಡಲು ಇಚ್ಛಿಸುವ ವ್ಯಕ್ತಿ ಅವರ ಪ್ರಾಂತೀಯ ಸರ್ಕಾರ ಅಥವಾ ಫೆಡರಲ್ ಸರ್ಕಾರದಲ್ಲಿ ಆರ್ಟಿಕಲ್ಸ್ ಆಫ್ ಇನ್‌ಕಾರ್ಪೊರೇಷನ್(ಸ್ಥಾಪನೆಯ ಲಿಖಿತಕಟ್ಟಳೆಗಳು) ಸಲ್ಲಿಸಬೇಕು.[೨] ಆಸ್ಟ್ರೇಲಿಯದಲ್ಲಿ ಕಂಪೆನಿಗಳ ನೋಂದಣಿಯನ್ನು ಆಸ್ಟ್ರೇಲಿಯನ್ ಸೆಕ್ಯೂರಿಟೀಸ್ ಎಂಡ್ ಇನ್‌ವೆಸ್ಟ್‌ಮೆಂಟ್ ಕಮೀಷನ್(ASIC)ಮೂಲಕ ನಿರ್ವಹಿಸಲಾಗುತ್ತದೆ.[೩]
ಉತ್ತರ ಐರ್ಲೆಂಡ್‌ನಲ್ಲಿ ಕಂಪೆನಿಗಳ ನೋಂದಣಿಯು ಡಿಪಾರ್ಟ್‌ಮೆಂಟ್ ಆಫ್ ಎಂಟರ್‌ಪ್ರೈಸ್, ಟ್ರೇಡ್ ಎಂಡ್ ಇನ್‌ವೆಸ್ಟ್‌ಮೆಂಟ್‌ನ ಜವಾಬ್ದಾರಿಯಾಗಿದೆ. 2009 ಅಕ್ಟೋಬರ್‌ನಿಂದ ಜವಾಬ್ದಾರಿಯು ಡಿಪಾರ್ಟ್‌ಮೆಂಟ್ ಫಾರ್ ಬಿಸಿನೆಸ್ ಎಂಟರ್‌ಪ್ರೈಸ್ ಎಂಡ್ ರೆಗ್ಯುಲೇಟರಿ ರಿಫಾರ್ಮ್(BERR)ಅಡಿಯಲ್ಲಿ ಕಂಪೆನೀಸ್ ಹೌಸ್‌ಗೆ ವರ್ಗಾವಣೆಯಾಗಿದೆ.[೪]
ಸ್ಕಾಟ್‌ಲ್ಯಾಂಡ್ ಮಾದರಿಯ ಕಂಪೆನೀಸ್ ಹೌಸ್‌ಗೆ ಹೋಲಿಕೆಯಾಗಿ ಉತ್ತರ ಐರ್ಲೆಂಡ್ ನೋಂದಣಿ ನಿರ್ವಹಣೆ ಮತ್ತು ಉಪಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ. ಇದರ ಅರ್ಥವೇನೆಂದರೆ ಕಚೇರಿಯು ಬೆಲ್‌ಫಾಸ್ಟ್‌ನಲ್ಲಿ ಉಳಿಯುತ್ತದೆ ಮತ್ತು ಉತ್ತರ ಐರ್ಲೆಂಡ್‌ಗೆ ರಿಜಿಸ್ಟ್ರಾರ್‌ರನ್ನು ಉಳಿಸಿಕೊಳ್ಳುತ್ತದೆ.
ಆಸ್ಟ್ರೇಲಿಯಾ
[ಬದಲಾಯಿಸಿ]ಆಸ್ಟ್ರೇಲಿಯದಲ್ಲಿ ಖಾಸಗಿ ಕಂಪೆನಿಗೆ ಸಮಾನವಾದ ಕಂಪೆನಿಪ್ರೊಪ್ರೈಟಿ ಲಿಮಿಟೆಡ್ ಕಂಪೆನಿ (Pty Ltd). ಕೇವಲ ನಿಯಮಿತ ಅಥವಾ ಎಲ್‌ಟಿಡಿ ಎಂದು ಕೊನೆಯಲ್ಲಿನ ಹೆಸರಿರುವ ಆಸ್ಟ್ರೇಲಿಯನ್ ಕಂಪೆನಿಯು ಸಾರ್ವಜನಿಕ ಕಂಪೆನಿಯಾಗಿದೆ. ಉದಾಹರಣೆಗೆ ASX ನಲ್ಲಿ ಪಟ್ಟಿಯಾಗಿರುವುದು(ಆದರೂ ಸಾರ್ವಜನಿಕ ಕಂಪೆನಿಗಳು ಸಾಮಾನ್ಯವಾಗಿ ಪಟ್ಟಿಯಾಗಿರುವುದಿಲ್ಲ) ಆಸ್ಟ್ರೇಲಿಯ ಪಿಎಲ್‌ಸಿಗೆ ನೇರ ಸಮಾನವಾದ ಕಂಪೆನಿಯನ್ನು ಹೊಂದಿಲ್ಲ.
ನಿಯಮಿತ ಕಂಪೆನಿಯ ಷೇರುದಾರ, ಕಂಪೆನಿಯು ದಿವಾಳಿತನಕ್ಕೆ ಒಳಗಾದ ಸಂದರ್ಭದಲ್ಲಿ( ಅಮೆರಿಕದಲ್ಲಿ ಬ್ಯಾಂಕ್‌ರಪ್ಟ್ಸಿ(ಪಾಪರು)ಷೇರುಗಳಿಗೆ ಪಾವತಿ ಮಾಡಿರದ ಮೊತ್ತವನ್ನು ನೀಡಲು ಬಾಧ್ಯಸ್ಥರಾಗುತ್ತಾರೆ.(ಸಾಮಾನ್ಯವಾಗಿ ಸೊನ್ನೆ, ಬಹುತೇಕ ಷೇರುಗಳು ಪೂರ್ಣ ಪಾವತಿಯಾಗಿ ವಿತರಿಸಲಾಗಿರುತ್ತದೆ). 'ಪಾವತಿ'ಯು ಪ್ರಥಮ ವಿತರಣೆಯಲ್ಲಿ ಷೇರುಗಳಿಗಾಗಿ ಕಂಪೆನಿಗೆ ನೀಡಿದ ಮೊತ್ತಕ್ಕೆ ಸಂಬಂಧಿಸಿದೆ. ಒಬ್ಬ ಷೇರುದಾರ ಇನ್ನೊಬ್ಬ ಷೇರುದಾರನಿಗೆ ಷೇರುಗಳ ಮಾಲೀಕತ್ವ ವರ್ಗಾವಣೆಗೆ ನೀಡಿದ ಮೊತ್ತವೆಂದು ಭಾವಿಸಬಾರದು. ಹೀಗೆ ಷೇರುದಾರ ನಿಯಮಿತ ಬಾಧ್ಯತೆಯನ್ನು ಹೊಂದಿರುತ್ತಾನೆ.
ಅಮೇರಿಕಾ ಸಂಯುಕ್ತ ಸಂಸ್ಥಾನ
[ಬದಲಾಯಿಸಿ]ಅಮೆರಿಕದಲ್ಲಿ ಲಿಮಿಟೆಡ್ ಕಂಪೆನಿಯ ಬದಲಿಗೆ ಕಾರ್ಪೊರೇಷನ್ ಪದಬಳಕೆಗೆ ಆದ್ಯತೆ ನೀಡಲಾಗುತ್ತದೆ.(ಏಕೆಂದರೆ ಕಾರ್ಪೊರೇಷನ್‌ಗಳು ನಿಯಮಿತ ಬಾಧ್ಯತೆ ಯನ್ನು ಹೊಂದಿರುತ್ತವೆ) ನಿಯಮಿತ ಬಾಧ್ಯತೆ ಕಂಪೆನಿ (LLC)ಯು ಭಿನ್ನ ಸಂಸ್ಥೆಯಾಗಿದೆ. ಆದಾಗ್ಯೂ, ಕೆಲವು ರಾಜ್ಯಗಳು Ltd. ಎಂಬ ಹೆಸರನ್ನು ಹೊಂದಲು ಅವುಗಳ ಕಾರ್ಪೊರೇಟ್ ಸ್ಥಾನಮಾನವನ್ನು ಸೂಚಿಸುವುದಕ್ಕಾಗಿ ಕೆಲವು ಕಾರ್ಪೊರೇಷನ್‌ಗಳಿಗೆ ಅನುಮತಿ ನೀಡುತ್ತದೆ. ( ಸಾಮಾನ್ಯ Inc. ಬದಲಿಗೆ).
ಇವನ್ನೂ ಗಮನಿಸಿ
[ಬದಲಾಯಿಸಿ]- ವ್ಯಾಪಾರದ ವಿವಿಧ ಸ್ವರೂಪಗಳು
- ಕಂಪೆನಿ ರಚನೆ (UK)
- ನಿಗಮ (ಕಾರ್ಪೊರೇಷನ್)
- ನಿಯಮಿತ ಬಾಧ್ಯತೆ ಕಂಪೆನಿ (LLC) (US)
- ನಿಯಮಿತ ಬಾಧ್ಯತೆ ಸಹಭಾಗಿತ್ವ (LLP) (US)
- ಷೇರು ಬಂಡವಾಳ
- ಅನಿಯಮಿತ ಕಂಪನಿ
- ಯುಗೇನ್ ಗೈಷಾ
ಉಲ್ಲೇಖಗಳು
[ಬದಲಾಯಿಸಿ]- ↑ "Australian Limited Companies". Archived from the original on 2010-07-23. Retrieved 2010-08-15.
- ↑ http://www.bdc-canada.comಬಿಸಿನೆಸ್[ಶಾಶ್ವತವಾಗಿ ಮಡಿದ ಕೊಂಡಿ] ಡೆವೆಲಪ್‌ಮೆಂಟ್ ಸೆಂಟರ್ - ಕೆನಡಾ
- ↑ "Australian Securities and Investments Commission". Asic.gov.au. Retrieved 2010-08-15.
- ↑ "Northern Ireland Company Registry Integration". Companies House gov.uk. 1 October 2009. Archived from the original on 2014-11-26. Retrieved 2010-08-15.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಲಿಮಿಟೆಡ್ ಲಯೆಬಿಲಿಟಿ ಕಂಪೆನಿ UK ಬಿಸಿನೆಸ್ ಲಿಂಕ್
- ಜನರಲ್ ಇನ್ಫರ್ಮೇಷನ್ ಎಬೌಟ್ ಲಿಮಿಟೆಡ್ ಲಯೇಬಿಲಿಟಿ ಕಂಪೆನೀಸ್ UK ಬಿಸಿನೆಸ್ ಲಿಂಕ್