ವಿಷಯಕ್ಕೆ ಹೋಗು

ನಿಬ್ಬಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಬ್ಬಲ್ (nibble) ಎಂಬುದು ಗಣಕಯಂತ್ರ ವಿಭಾಗದಲ್ಲಿ ಬರುವ ನಾಲ್ಕು-ಬಿಟ್ ಗಳ ಗುಂಪು. ನಿಬ್ಬಲ್ ೪ ಬಿಟ್ ಗಳಿಂದ ಕೂಡಿರುವುದರಿಂದ,ಒಟ್ಟು ಹದಿನಾರು (೨) ಸಂಖ್ಯೆಗಳನ್ನು ಪಡೆಯುವ ಸಾಧ್ಯತೆಗಳಿವೆ, ಆದ್ದರಿಂದ ಒಂದು ನಿಬ್ಬಲ್ ಒಂದು ಹೆಕ್ಸಾಡೆಸಿಮಲ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎನ್ನಬಹುದು (ಹಾಗಾಗಿ, ನಿಬ್ಬಲ್ ಅನ್ನು ಸಾಮಾನ್ಯವಾಗಿ "ಹೆಕ್ಸ ಡಿಜಿಟ್" ಅಥವಾ "ಹೆಕ್ಸಿಟ್" ಎಂದು ಕರೆಯಲಾಗುತ್ತದೆ). ಒಂದು ಬೈಟ್ ಎರಡು ಹೆಕ್ಸಾಡೆಸಿಮಲ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ; ಆದ್ದರಿಂದ, ಒಂದು ಬೈಟ್‍ನ ಸಾರಾಂಶವನ್ನು ಎರಡು ನಿಬ್ಬಲ್ ಗಳಿಂದ ತಿಳಿಸಲಾಗುತ್ತದೆ.ನಿಬ್ಬಲ್ ಅನ್ನು ಕೆಲವುಬಾರಿ "ಸೆಮಿಆಕ್ಟೇಟ್" ಅಥವಾ "ಕ್ವಾರ್ಟೇಟ್" ಎಂದು ನೆಟ್ವರ್ಕಿಂಗ್ ಅಥವಾ ಟೆಲಿಸಂಪರ್ಕ ವಿಭಾಗದಲ್ಲಿ ಕರೆಯಲಾಗುತ್ತದೆ.

ನಿಬ್ಬಲ್ ಎಂಬ ಪದದ ಮೂಲ ಆಂಗ್ಲಭಾಷೆಯ "Byte"ನಂತೆಯೇ ಕೇಳಿಸುವ "bite"ಆಗಿದೆ. ನಿಬ್ಬಲ್ ಒಂದು ಸಣ್ಣ bite, ಅದನ್ನು ಹಾಸ್ಯಾಸ್ಪದವಾಗಿ "half a bite" ಎಂದು ಹೇಳಬಹುದು.

ನಿಬ್ಬಲ್ ಅನ್ನು ಐಬಿಎಮ್ ಮೇಯ್ನ್‍ಫ್ರೇಮ್ ಗಣಕಯಂತ್ರಗಳಲ್ಲಿ ಒಂದು ಸಂಖ್ಯೆಯನ್ನು ಬೈನರಿ ಕೋಡೆಡ್ ಡೆಸಿಮಲ್‍ನಲ್ಲಿ ಉಪಯೊಗಿಸಿದಾಗ ಬಳಸಿದ ಮೆಮೊರಿಯನ್ನು ತಿಳಿಸಲು ಬಳಸಲಾಗುತ್ತದೆ. ಇಂತಹ ಬಳಕೆಯಿಂದ ಕಡಿಮೆ ಜಾಗವನ್ನು ಉಪಯೋಗಿಸಲಾಗುತ್ತದೆ, ಸಂಸ್ಕರಣಾ ವೇಗವನ್ನು ಸಮರ್ಪಕವಾಗಿ ಬಳಸಲಾಗುತ್ತದೆ ಹಾಗೂ ಡೀಬಗ್ಗಿಂಗ್ಅನ್ನು ಸುಲಭವಾಗಿಸುತ್ತದೆ. ಒಂದು 8-ಬಿಟ್ ಬೈಟ್ ಅನ್ನು ಎರಡು ನಿಬ್ಬಲ್ ಗಳಾಗಿ ಇಬ್ಭಾಗಿಸಲಾಗುತ್ತದೆ ಹಾಗೂ ಪ್ರತಿ ನಿಬ್ಬಲ್ ಅನ್ನು ಒಂದೊಂದು ಅಂಕೆಯನ್ನು ಸಂಸ್ಕರಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಒಂದು ವೇರಿಯೇಬಲ್ ನ ಕೊನೆಯ ನಿಬ್ಬಲ್ಅನ್ನು ಧನಾತ್ಮಕ ಇಲ್ಲವೇ ಋಣಾತ್ಮಕ ಚಿನ್ಹೆಗಳನ್ನು ಸೂಚಿಸಲು ಸಂರಕ್ಷಿಸಲಾಗಿದೆ. ಹಾಗಾಗಿ ಒಂಭತ್ತು ಅಂಕೆಗಳ ಒಂದು ಸಂಖ್ಯೆಯನ್ನು ಒಂದು ವೇರಿಯೇಬಲ್ ನಲ್ಲಿ 5 ಬೈಟ್ ಗಳಲ್ಲಿ ಇಡಲಾಗುತ್ತದೆ. ಇದರಿಂದ ಡೀಬಗ್ಗಿಂಗ್ ನಲ್ಲಿ ಉಪಯೋಗಿಸುವ ಹೆಕ್ಸ್ ಡಂಪ್ ನಲ್ಲಿ ಎರಡು ಹೆಕ್ಸ್ ಸಂಖ್ಯೆಗಳನ್ನು ಒಂದು ಬೈಟ್ ನ ಮೌಲ್ಯವನ್ನು ಪ್ರತಿನಿಧಿಸುವಂತೆ ಮಾಡಬಹುದು. 16x16=28.

ಐತಿಹಾಸಿಕವಾಗಿ, ಕೆಲವೊಮ್ಮೆ "nybble" ಪದವನ್ನು ಕೇವಲ 4 ಬಿಟ್ ಗಳ ಗುಂಪಿಗೆ ಸೀಮಿತವಾಗಿಡದೇ 8 ಬಿಟ್ ಗಿಂತ ಕಡಿಮೆ ಬಿಟ್ ಗಳ ಗುಂಪುಗಳನ್ನಾಗಿ ಬಳಸಿದ ಪ್ರಸಂಗಗಳಿವೆ. ಆಪಲ್ II ಮೈಕ್ರೊಕಂಪ್ಯೂಟರ್ ಗಳಲ್ಲಿ ಡಿಸ್ಕ್ ಡ್ರೈವ್ ಸ್ವಾದೀನ ಕ್ರಮವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ದತ್ತಾಂಶವನ್ನು ಡಿಸ್ಕ್ ಗೆ ಬರೆಯಬೇಕಾದರೆ 256-ಬೈಟ್ ಪುಟವನ್ನು 5-ಬಿಟ್ ನ ನಂತರ 6-ಬಿಟ್ ನಿಬ್ಬಲ್ ಗಳ ಗುಂಪಾಗಿ ಉಪಯೋಗಿಸಲಾಗಿತ್ತು; ಇದನ್ನು ಡಿಸ್ಕ್ ನಿಂದ ಓದಬೇಕಾದರೆ ಹಿಂತಿರುಗಿಸಲಾಗುತ್ತಿತ್ತು. ಗಮನಿಸಬೇಕಾದ ಅಂಶ ಎಂದರೆ "byte" ಪದವೂ ಕೂಡಾ ಕೆಲವೂಮ್ಮೆ ಕೇವಲ ಎಂಟು ಬಿಟ್ ಗಳ ಗುಂಪು ಎಂದು ಸೀಮಿತಗೊಳಿಸದೆ, ಬಿಟ್ ಗಳ ಗುಂಪು ಎಂದು ಹೇಳಲಾಗುತ್ತದೆ. ಇಂದು, "byte" ಹಾಗೂ "nibble" ಪದಗಳನ್ನು ಸಾಮಾನ್ಯವಾಗಿ 8-ಬಿಟ್ ಹಾಗೂ 4-ಬಿಟ್ ಗಳ ಗುಂಪುಗಳಾಗಿ ಪ್ರಕಾರವಾಗಿ ಬಳಸಲಾಗುತ್ತದೆ ಮಾತ್ರ.

ಕೆಲವು ಭಾಷೆಗಳಲ್ಲಿ ನಿಬ್ಬಲ್ ಅನ್ನು ಟೆಟ್ರೇಡ್ ಎನ್ನಲಾಗುತ್ತದೆ - ಗ್ರೀಕ್ ನಿಂದ ಟೆಟ್ರ("ನಾಲ್ಕು"). ಇದು ನಿಬ್ಬಲ್ ನಲ್ಲಿ ಇರುವ ಬಿಟ್ ಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ - ನಾಲ್ಕು- ಅರ್ಧ ಬೈಟ್(1 ಬೈಟ್ = 8 ಬಿಟ್ ಅಂದುಕೊಂಡಂತೆ)

"https://kn.wikipedia.org/w/index.php?title=ನಿಬ್ಬಲ್&oldid=317803" ಇಂದ ಪಡೆಯಲ್ಪಟ್ಟಿದೆ