ನಿದ್ರೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಿದ್ರೆ ಮಾಡುತ್ತಿರುವ ಹೆಂಗಸು

ಒಬ್ಬ ವ್ಯಕ್ತಿ ಎಚ್ಚರವಿಲ್ಲದಿದ್ದಾಗ ನಿದ್ರೆ ಮಾಡುತ್ತಿರುತ್ತಾನೆ. ಸಾಮಾನ್ಯವಾಗಿ ಎಲ್ಲರೂ ರಾತ್ರಿ ಹೊತ್ತು ಮಲಗಿರುತ್ತಾರೆ. ಹಗಲು ಹೊತ್ತು ಎಚ್ಚರವಿರುತ್ತಾರೆ - ಶಾಲಗೆ ಹೊಗುವವರು, ಕೆಲಸ ಮಾಡುವವರು, ಇತ್ಯಾದಿ. ಇದಲ್ಲದೇ, ಹಲವು ಮಕ್ಕಳು ಹಾಗು ವಯಸ್ಕರು ಮಧ್ಯಾನ ಕೂಡ ನಿದ್ರೆ ಮಾಡುತ್ತಾರೆ. ಪ್ರಾಣಿಗಳು ಸಹ ನಿದ್ರೆ ಮಾಡುತ್ತವೆ.

ಯಾತಕ್ಕಾಗಿ ನಿದ್ರೆ?[ಬದಲಾಯಿಸಿ]

ನಿದ್ರಾವಸ್ಥೆಯಲ್ಲಿ ಮೆದುಳು ಕೆಲುವು ಕ್ರಮಗಳನ್ನು ಕೈಗೊಳ್ಳುತ್ತವೆ. ಸದ್ಯಕ್ಕೆ ಇವಾವುವು ಯಂದು ಸ್ಪಷ್ಟವಾಗಿ ತಿಳಿಯದಿದ್ದರೂ, ಶರೀರಕ್ಕೆ ನಿದ್ರೆ ಬಹಳ ಮುಖ್ಯವಾದುದ್ದೆಂದು ಹೇಳಲಾಗುತ್ತದೆ. ಮನುಷ್ಯರು ನಿದ್ರೆ ಮಾಡುವಾಗ ಕನಸು ಕಾಣುತ್ತಾರೆ, ಪ್ರಾಣಿಗಳೂ ಕಾಣಬಹುದೇನೊ. ಸಾಮಾನ್ಯವಾಗಿ ಎಲ್ಲರೂ ದಿನಕ್ಕೊಮ್ಮೆ ಮಲಗಿದರೆ, ಬೆಕ್ಕುಗಳಂಥ ಪ್ರಾಣಿಗಳು ದಿನಕ್ಕೆ ಹಲವು ಭಾರಿ ಸಣ್ಣ-ನಿದ್ರೆ ಮಾಡುತ್ತವೆ.

ಎಷ್ಟು ನಿದ್ರೆ ಬೇಕು?[ಬದಲಾಯಿಸಿ]

ನಿದ್ರೆ ಯಾವಾಗ ಮತ್ತು ಎಷ್ಟು - ಇವೆರಡೂ ಮುಖ್ಯವಾದದ್ದು. ಇವು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ. ಇದು ಆ ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿತ. ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಅವಶ್ಯಕ. ನವಜಾತ ಶಿಶುಗಳು ದಿನಕ್ಕೆ ೧೮ ತಾಸು ಮಲಗಿದರೆ, ಒಂದು ವರ್ಷದ ಮಗುವಿಗೆ ೧೪ ತಾಸು ಸಾಕಾಗುತ್ತದೆ. ವಯಸ್ಕರಿಗೆ ಕನಿಷ್ಟ ೮ ತಾಸು ನಿದ್ರಾ ಸಮಯ ಅತ್ಯವಶ್ಯಕ.

"https://kn.wikipedia.org/w/index.php?title=ನಿದ್ರೆ&oldid=319222" ಇಂದ ಪಡೆಯಲ್ಪಟ್ಟಿದೆ