ವಿಷಯಕ್ಕೆ ಹೋಗು

ನಾಡಿ ಜ್ಯೋತಿಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಡಿ ಜ್ಯೋತಿಷವು ತಮಿಳುನಾಡು, ಕೇರಳ ಮತ್ತು ಪಕ್ಕದ ಪ್ರದೇಶಗಳಲ್ಲಿ ಅಭ್ಯಸಿಸಲ್ಪಡುವ ಧರ್ಮ ಜ್ಯೋತಿಷದ ಒಂದು ರೂಪವಾಗಿದೆ. ಇದು ಎಲ್ಲ ಮನುಷ್ಯರ ಭೂತ, ವರ್ತಮಾನ ಮತ್ತು ಭವಿಷ್ಯದ ಜೀವನಗಳನ್ನು ಪ್ರಾಚೀನ ಕಾಲದಲ್ಲಿನ ಧರ್ಮ ಋಷಿಗಳು ಮುಂಗಂಡಿದ್ದರು ಎಂಬ ನಂಬಿಕೆ ಮೇಲೆ ಆಧಾರಿತವಾಗಿದೆ.[]

ಸಿದ್ಧಾಂತ

[ಬದಲಾಯಿಸಿ]

ನಾಡಿ ಜ್ಯೋತಿಷದ ಮೂಲಭೂತ ಪರಿಕಲ್ಪನೆಯೆಂದರೆ "ನಾಡಿ". ಒಂದು ರಾಶಿಯಲ್ಲಿ ೧೫೦ ನಾಡಿಗಳಿರುತ್ತವೆ; ಒಂದು ರಾಶಿಯೆಂದರೆ ೩೦ ಕೋನಮಾನಗಳು. ರಾಶಿಚಕ್ರದ ಹನ್ನೆರಡು ರಾಶಿಗಳನ್ನು ಮೂರು ವರ್ಗಗಳಾಗಿ ಗುಂಪುಮಾಡಲಾಗುತ್ತದೆ: ಚರ, ಸ್ಥಿರ ಮತ್ತು ದ್ವಿಸ್ವಭಾವ ರಾಶಿಗಳು. ೧೫೦ ನಾಡಿಗಳ ನಾಮಕರಣವು ರಾಶಿಗಳ ಈ ಮೂರು ಪ್ರಕಾರಗಳಿಗೆ ವಿಶಿಷ್ಟವಾಗಿದೆ. ೩೬೦ ಕೋನಮಾನಗಳಲ್ಲಿ ೧,೮೦೦ ನಾಡಿಗಳಿವೆ. ಸಂಪೂರ್ಣ ರಾಶಿಚಕ್ರದಲ್ಲಿ ೪೫೦ ವಿಶಿಷ್ಟ ಹೆಸರುಗಳು ಮತ್ತು ಸಂಖ್ಯೆಗಳಿವೆ.[] ನಾಡಿ ಗ್ರಂಥಗಳು ಭವಿಷ್ಯವಾಣಿಯ ಮೂಲಭೂತ ಏಕಮಾನವಾಗಿ ನಾಡಿಯ ಈ ಪರಿಕಲ್ಪನೆಯನ್ನು ಬಳಸುತ್ತವೆ. ಹಾಗಾಗಿಯೇ ಅವನ್ನು "ನಾಡಿ ಅಂಶಗಳು" ಎಂದು ಕರೆಯಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Bakshi, Dhiraj (2016). Science of Vedic Nadi Shastra. CreateSpace Independent Publishing Platform. ISBN 978-1537246116. Retrieved July 22, 2018.
  2. Theology And Tradition Of Eternity: Philosophy Of Adi Advaita (Reprint ed.). PartridgeIndia. January 15, 2016. p. 362. ISBN 978-1482869842. {{cite book}}: |first= missing |last= (help)