ನಾಡಿಗ ಕೃಷ್ಣಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ| ನಾಡಿಗ ಕೃಷ್ಣಮೂರ್ತಿಯವರು ೧೯೨೧ರಲ್ಲಿ ಶಿವಮೊಗ್ಗಾ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ ಜನಿಸಿದರು.

ನಾಡಿಗ ಕೃಷ್ಣಮೂರ್ತಿಯವರು ಅಮೇರಿಕಾದ ಮಿಸ್ಸೋರಿಯಲ್ಲಿ ಪತ್ರಿಕೋದ್ಯಮದ ಬಗೆಗೆ ವಿಶೇಷ ಶಿಕ್ಷಣ ಪಡೆದು, ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವಾಚಕರಾದರು. ೧೯೬೪ರಲ್ಲಿ ‘ಪತ್ರಿಕೋದ್ಯಮದ ಹುಟ್ಟು,ಬೆಳವಣಿಗೆ ಮತ್ತು ಅಭಿವೃದ್ಧಿ’ ಪ್ರೌಢ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪಡೆದರು. ಸಂದರ್ಶಕ ಪ್ರಾಧ್ಯಾಪಕರಾಗಿ ವಿದೇಶಿ ವಿದ್ಯಾಲಯಗಳನ್ನು ಸಂದರ್ಶಿಸಿದ್ದಾರೆ.


ಮಾನಸ ಗಂಗೋತ್ರಿ’ ಇದು ಇವರು ಸಂಪಾದಿಸುತ್ತಿದ್ದ ಪ್ರಾಯೋಗಿಕ ಪತ್ರಿಕೆ.


ಇವರು ಬರೆದ ಕೃತಿಗಳು ಇಂತಿವೆ:

  • Mahatma Gandhi and other martyers
  • ಅಮೇರಿಕನ್ ಜರ್ನಲಿಜಮ್ (ಅನುವಾದ)


ಕರ್ನಾಟಕದಲ್ಲಿ ಪ್ರಾರಂಭವಾದ ಪತ್ರಿಕಾ ಅಕಾಡೆಮಿಗೆ ಇವರು ಪ್ರಥಮ ಅಧ್ಯಕ್ಷರಾಗಿದ್ದರು.


ಡಾ| ನಾಡಿಗ ಕೃಷ್ಣಮೂರ್ತಿಯವರು೧೯೮೩ರಲ್ಲಿ ನಿಧನರಾದರು.