ನಾಗರೇಖಾ ಗಾಂವಕರ
ಗೋಚರ
ನಾಗರೇಖಾ ಗಾಂವಕರ ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಸೃಜನಶೀಲ ಬರಗಾರ್ತಿ, ಅನುವಾದಕಿ ಮತ್ತು ಅಂಕಣಕಾರ್ತಿ. ವೃತ್ತಿಯಲ್ಲಿ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಬರಹಗಾರರು.
ಹುಟ್ಟು
[ಬದಲಾಯಿಸಿ]ಉತ್ತರಕನ್ನಡ ಜಿಲ್ಲೆಯ ಅಡ್ಲೂರು ಗ್ರಾಮದಲ್ಲಿ ಜನಿಸಿದರು.
ಶಿಕ್ಷಣ
[ಬದಲಾಯಿಸಿ]ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಂ ಎ ಪದವಿ. ವೃತ್ತಿಯಿಂದ ಉಪನ್ಯಾಸಕಿಯಾಗಿದ್ದು, ಸರಕಾರಿ ಪದವಿಪೂರ್ವ ಕಾಲೇಜು ದಾಂಡೇಲಿಯಲ್ಲಿ ಕರ್ತವ್ಯ ನಿರ್ವಹಣೆ.
ಪ್ರಕಟಿತ ಕೃತಿಗಳು
[ಬದಲಾಯಿಸಿ]- ಏಣ , ಪದಗಳೊಂದಿಗೆ ನಾನು, ಬರ್ಫದ ಬೆಂಕಿ[ ಕವನ ಸಂಕಲನಗಳು,]
- ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ[ಅಂಕಣ ಬರಹ ಕೃತಿ]
- ಕವಾಟ- ಪುಸ್ತಕ ಪರಿಚಯ ಕೃತಿ
- ಸ್ತ್ರೀ- ಸಮಾನತೆಯ ಸಂಧಿಕಾಲದಲ್ಲಿ- ಮಹಿಳಾ ಅಸ್ಮಿತೆ ಕುರಿತ [ಅಂಕಣ ಬರಹ] ಕೃತಿ.
- “ದಿ ಡೈರಿ ಆಫ್ ಎ ಯಂಗ್ ಗರ್ಲ” – ಆನ್ ಫ್ರಾಂಕ್ [ ಅನುವಾದಿತ ಕೃತಿ] ಬಂದಿರುತ್ತದೆ.
ಪ್ರಶಸ್ತಿಗಳು
[ಬದಲಾಯಿಸಿ]- “ ಏಣ ” ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ “ಶ್ರೀಮತಿ ಶಾರದಾರಾಮಲಿಂಗಪ್ಪ ದತ್ತಿ ಪ್ರಶಸ್ತಿ-2015”[೧]
- ಕರಾವಳಿ ಮುಂಜಾವು ದಿನಪತ್ರಿಕೆಯಲ್ಲಿಯ ಅಂಕಣ ಬರಹಗಳ ಗುರುತಿಸಿ ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯ ಪ್ರತಿವರ್ಷ ನೀಡುವ ಪತ್ರಕರ್ತ ಪುರಸ್ಕಾರ ಕನ್ನಡ ವಿಭಾಗದ ಪ್ರಾ. ಎಸ್‌ಆರ್‌ಜೋಗ್ ಮಹಿಳಾ ಪ್ರಶಸ್ತಿ-2019.
- “ಬರ್ಫದ ಬೆಂಕಿ” ಸಂಕಲನಕ್ಕೆ ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ ವತಿಯಿಂದ ನೀಡುವ “ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ-2019 ಹಾಗೂ ಕರ್ನಾಟಕ ಲೇಖಕಿಯರ ಸಂಘ ಕಾವ್ಯಕ್ಕೆ ನೀಡುವ “ಗೀತಾ ದೇಸಾಯಿ ದತ್ತಿ ಬಹುಮಾನ-2018-19
- “ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ”-ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನೀಡುವ ಲೀಲಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ-2020[೨]
- 2019ರಲ್ಲಿ “ಮೌನದೊಳಗೊಂದು ಅಂತರ್ಧಾನ” ಕಥಾ ಸಂಕಲನ ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬೈ ಇವರು ಕೊಡಮಾಡುವ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಪ್ರಶಸ್ತಿ
ಬಾಹ್ಯಕೊಂಡಿ
[ಬದಲಾಯಿಸಿ]- ಕೆಂಡಸಂಪಿಗೆಯಲ್ಲಿ ನಾಗರೇಖಾ ಅವರು ಬರೆದ ಬರಹಗಳ ವಿವರ
- ವಿಶ್ವಧ್ವನಿಯಲ್ಲಿ ನಾಗರೇಖಾ ಗಾಂವಕರರ ಬರಹಗಳು
- ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅನುವಾದಕಿ ನಾಗರೇಖಾ ಗಾಂವಕರ
- ಚಿಲುಮೆ ಕನ್ನಡ ಸಾಹಿತ್ಯ ತಾಣ
ಉಲ್ಲೇಖ
[ಬದಲಾಯಿಸಿ]- ↑ "Story and Poem By ನಾಗರೇಖಾ ಗಾಂವಕರ | BookBrahma". www.bookbrahma.com.
- ↑ https://www.shauryadigital.life/2021/07/2020.html Archived 2021-12-27 ವೇಬ್ಯಾಕ್ ಮೆಷಿನ್ ನಲ್ಲಿ. |website=SHAURYA DIGITAL LIFE