ನಾಗಮಂಡಲ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಕಾಶ್ ರಾಜ್, ವಿಜಯಲಕ್ಷ್ಮಿ

ನಾಗಮಂಡಲ ಗಿರೀಶ್ ಕಾರ್ನಾಡ್ ವಿರಚಿತ ಪ್ರಸಿದ್ದ ನಾಟಕ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಈ ನಾಟಕ ಹಲವು ಭಾರತೀಯ ಹಾಗು ವಿದೇಶಿ ಭಾಷೆಗಳಲ್ಲಿ ತರ್ಜುಮೆಗೊಂಡಿದೆ. ೧೯೮೮ರಲ್ಲಿ ರಚನೆಗೊಂಡ ಈ ನಾಟಕವನ್ನು ೧೯೯೦ರಲ್ಲಿ ಕಾರ್ನಾಡರೆ ಆಂಗ್ಲ ಭಾಷೆಗೆ ಭಾಷಾಂತರಿಸಿದರು. ೧೯೯೨ರಲ್ಲಿ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ದೊರಕಿತು.

ನಾಟಕ[ಬದಲಾಯಿಸಿ]

ನಾಗಮಂಡಲ ನಾಟಕವು ಹಲವಾರು ಭಾಷೆಗಳಲ್ಲಿ ಹಲವು ರೀತಿಯ ಪ್ರಯೋಗಕ್ಕೆ ಒಳಪಟ್ಟು ಜನಪ್ರಿಯವಾಗಿದೆ.ಭಾರತೀಯ ಜಾನಪದ ಸೊಗಡಿನ ಈ ನಾಟಕ ಕೇವಲ ಭಾರತವಲ್ಲದೆ ಅಮೇರಿಕವೂ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.

ಚಲನಚಿತ್ರ[ಬದಲಾಯಿಸಿ]

೧೯೯೭ರಲ್ಲಿ ಕನ್ನಡದಲ್ಲಿ ನಿರ್ದೇಶಕ ಟಿ ಎಸ್ ನಾಗಾಭರಣ ನಾಗಮಂಡಲವನ್ನು ರಜತ ಪರದೆಗೆ ತಂದರು. ಉದ್ಯಮಿ ಶ್ರೀಹರಿ ಖೋಡೆಯವರು ನಿರ್ಮಿಸಿದ ಈ ಚಿತ್ರದ ತಾರಾಗಣದಲ್ಲಿ, ಪ್ರಕಾಶ್ ರೈ, ಬಿ ಜಯಶ್ರೀ, ವಿಜಯಲಕ್ಷ್ಮಿ, ಮಂಡ್ಯ ರಮೇಶ್ ಮೊದಲಾದವರಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ಛಾಯಾಗ್ರಾಹಕ ಜಿ. ಎಸ್. ಭಾಸ್ಕರ್ ಅವರ ಚಿತ್ರೀಕರಣವಿದ್ದು, ಸಂಗೀತ ಸಿ ಅಶ್ವಥ್ ನೀಡಿದ್ದಾರೆ. ಟಿ ಎಸ್ ನಾಗಾಭರಣ ಈ ಚಿತ್ರದ ನಿರ್ದೇಶನಕ್ಕಾಗಿ ಫಿಲಂಫೇರ್ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು. ಈ ಚಿತ್ರದಲ್ಲಿ ೧೭ ಹಾಡುಗಳಿರುವುದು ಇನ್ನೊಂದು ವಿಶೇಷ.

[೧]

  1. http://www.bing.com/search?q=nagamandala+kannada+movie&src=IE-SearchBox&FORM=IESR02&pc=EUPP_UE11