ವಿಷಯಕ್ಕೆ ಹೋಗು

ನವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಬ್ಬ ಮನುಷ್ಯ ತನ್ನ ಬೆನ್ನನ್ನು ತುರಿಸಿಕೊಳ್ಳುತ್ತಿದ್ದಾನೆ

ನವೆಯು (ತುರಿ, ತುರಿಕೆ) ಕೆರೆದುಕೊಳ್ಳುವ ಬಯಕೆ ಅಥವಾ ಪ್ರತಿವರ್ತನವನ್ನು ಉಂಟುಮಾಡುವ ಸಂವೇದನೆ.[] ನವೆಯು ಅದನ್ನು ಯಾವುದೇ ಒಂದು ಬಗೆಯ ಇಂದ್ರಿಯ ಅನುಭವವಾಗಿ ವರ್ಗೀಕರಿಸುವ ಅನೇಕ ಪ್ರಯತ್ನಗಳನ್ನು ತಡೆಹಿಡಿದಿದೆ. ನವೆಯು ನೋವಿಗೆ ಅನೇಕ ಹೋಲಿಕೆಗಳನ್ನು ಹೊಂದಿದೆ ಎಂದು ಆಧುನಿಕ ವಿಜ್ಞಾನವು ತೋರಿಸಿಕೊಟ್ಟಿದೆ. ಎರಡೂ ಅಹಿತರಕರ ಇಂದ್ರಿಯಾನುಭವಗಳಾದರೂ, ಅವುಗಳ ವರ್ತನ ಸಂಬಂಧಿ ಪ್ರತಿಕ್ರಿಯಾ ನಮೂನೆಗಳು ಭಿನ್ನವಾಗಿವೆ. ನೋವು ಹಿಂತೆಗೆತದ ಪ್ರತಿವರ್ತನವನ್ನು ಉಂಟುಮಾಡಿದರೆ, ನವೆಯು ಕೆರೆತದ ಪ್ರತಿವರ್ತನವನ್ನು ಉಂಟುಮಾಡುತ್ತದೆ. ನವೆ ಮತ್ತು ನೋವಿನ ಮಾಯಲನ್ ಪೊರೆ ಹೊಂದಿರದ ನರತಂತುಗಳು ಎರಡೂ ಚರ್ಮದಲ್ಲಿ ಹುಟ್ಟಿಕೊಳ್ಳುತ್ತವೆ; ಆದರೆ, ಅವುಗಳಿಗೆ ಮಾಹಿತಿಯು ಕೇಂದ್ರಿಯವಾಗಿ ಎರಡು ವಿಭಿನ್ನ ವ್ಯವಸ್ಥೆಗಳಲ್ಲಿ ಸಾಗಿಸಲಾಗುತ್ತದೆ. ಎರಡೂ ಒಂದೇ ನರಕಂತೆ ಮತ್ತು ಸ್ಪೈನೋಥ್ಯಾಲಮಿಕ್ ವ್ಯೂಹವನ್ನು ಬಳಸುತ್ತವೆ.

ನೋವು ಮತ್ತು ನವೆ ಎರಡೂ ಬಹಳ ಭಿನ್ನವಾದ ವರ್ತನ ಸಂಬಂಧಿ ಪ್ರತಿಕ್ರಿಯಾ ನಮೂನೆಗಳನ್ನು ಹೊಂದಿವೆ. ನೋವು ಹಿಂತೆಗೆತ ಪ್ರತಿವರ್ತನವನ್ನು ಪ್ರಚೋದಿಸುತ್ತದೆ, ಇದರಿಂದ ಪ್ರತ್ಯಾಕರ್ಷಣ ಉಂಟಾಗುತ್ತದೆ ಮತ್ತು ಹಾಗಾಗಿ ದೇಹದ ಒಂದು ಅಪಾಯದಲ್ಲಿರುವ ಭಾಗವನ್ನು ರಕ್ಷಿಸುವ ಪ್ರಯತ್ನವಾಗಿ ಒಂದು ಪ್ರತಿಕ್ರಿಯೆ ಉಂಟಾಗುತ್ತದೆ. ಇದಕ್ಕೆ ವಿರುದ್ಧವಾಗಿ, ನವೆಯು ಕೆರೆತದ ಪ್ರತಿವರ್ತನವನ್ನು ಉಂಟುಮಾಡುತ್ತದೆ, ಹಾಗಾಗಿ ವ್ಯಕ್ತಿಯನ್ನು ಚರ್ಮದ ಪ್ರಭಾವಿತ ಸ್ಥಳಕ್ಕೆ ಸೆಳೆಯುತ್ತದೆ. ನವೆಯು ಚರ್ಮದ ಕೆಳಗೆ ಅಥವಾ ಅದರ ಮೇಲೆ ಬಾಹ್ಯ ವಸ್ತುವಿನ ಪ್ರಚೋದನೆಯನ್ನು, ಜೊತೆಗೆ ಅದನ್ನು ತೆಗೆಯಬೇಕೆಂಬ ಪ್ರಚೋದನೆಯನ್ನು ಕೂಡ ಉತ್ಪತ್ತಿಮಾಡುತ್ತದೆ. ಉದಾಹರಣೆಗೆ, ಒಂದು ಸ್ಥಳೀಯ ನವೆ ಸಂವೇದನೆಗೆ ಪ್ರತಿಕ್ರಿಯಿಸುವುದು ಒಬ್ಬರ ಚರ್ಮದಿಂದ ಕೀಟಗಳನ್ನು ತೆಗೆಯಲು ಒಂದು ಪರಿಣಾಮಕಾರಿ ರೀತಿಯಾಗಿದೆ.

ಸಾಂಪ್ರದಾಯಿಕವಾಗಿ ಕೆರೆಯುವಿಕೆಯನ್ನು ಕಿರಿಕಿರಿಗೊಳಿಸುವ ನವೆ ಸಂವೇದನೆಯನ್ನು ಕಡಿಮೆ ಮಾಡಿ ಒಬ್ಬರಿಗೆ ನೆಮ್ಮದಿ ಕೊಡುವ ರೀತಿಯೆಂದು ಪರಿಗಣಿಸಲಾಗಿದೆ. ಆದರೆ ಕೆರೆಯುವಿಕೆಯ ಸಂತೋಷಕರ ಅಂಶಗಳಿವೆ, ಮತ್ತು ಒಬ್ಬರು ಹಾನಿಕರ ಕೆರೆಯುವಿಕೆಯನ್ನು ಬಹಳ ಹಿತಕರವೆಂದು ಕಂಡುಕೊಳ್ಳಬಹುದು. ದೀರ್ಘಕಾಲಿಕ ನವೆ ರೋಗಿಗಳ ವಿಷಯದಲ್ಲಿ ಇದು ಸಮಸ್ಯಾತ್ಮಕವಾಗಬಹುದು, ಉದಾಹರಣೆಗೆ ಅಟೋಪಿಕ್ ಡರ್ಮಟೈಟಿಸ್ ರೋಗಿಗಳು ಬಾಧಿತ ಜಾಗಗಳನ್ನು ಕೆರೆದುಕೊಳ್ಳಬಹುದು, ಎಷ್ಟರ ಮಟ್ಟಿಗೆ ಎಂದರೆ ನವೆ ಸಂವೇದನೆಯು ಕಾಣದಂತಾಗುವ ಬದಲು ಕೆರೆಯುವಿಕೆಯು ಹಿತಕರ ಅಥವಾ ನೋವುಳ್ಳ ಸಂವೇದನೆಯನ್ನು ಉತ್ಪತ್ತಿಮಾಡದಿರುವ ಮಟ್ಟಿಗೆ. ಕೆರೆಯುವಿಕೆಯ ಪ್ರೇರಕ ಅಂಶಗಳಲ್ಲಿ ಪ್ರತಿಫಲ ಮತ್ತು ತೀರ್ಮಾನ ಮಾಡುವಿಕೆಯ ಮಿದುಳಿನ ಮುಂಭಾಗದ ಪ್ರದೇಶಗಳು ಸೇರಿವೆ ಎಂದು ಊಹಿಸಲಾಗಿದೆ. ಹಾಗಾಗಿ ಈ ಅಂಶಗಳು ನವೆ ಮತ್ತು ಕೆರೆಯುವಿಕೆಯ ತಡೆಯಲಾಗದ ಸ್ವರೂಪಕ್ಕೆ ಕೊಡುಗೆ ನೀಡಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Andersen HH, Elberling J, Arendt-Nielsen L (2015). "Human surrogate models of histaminergic and non-histaminergic itch". Acta Dermato-Venereologica. 95 (7): 771–7. doi:10.2340/00015555-2146. PMID 26015312.
"https://kn.wikipedia.org/w/index.php?title=ನವೆ&oldid=866767" ಇಂದ ಪಡೆಯಲ್ಪಟ್ಟಿದೆ