ನಳಿನ್ ಕುಮಾರ್ ಕಟೀಲ್
ಗೋಚರ
ನಳೀನ್ ಕುಮಾರ್ ಕಟೀಲ್ | |
---|---|
೨೬ ಏಪ್ರಿಲ್ ೨೦೦೯ ರಂದು ನಡೆದ ಚುನಾವಣೆಯಲ್ಲಿ ಮಂಗಳೂರಿನಲ್ಲಿ ಪ್ರಚಾರ ಮಾಡುತ್ತಿರುವ ಕಟೀಲ್ ರವರು | |
ಮತಕ್ಷೇತ್ರ | ದಕ್ಷಿಣ ಕನ್ನಡ |
ವೈಯಕ್ತಿಕ ಮಾಹಿತಿ | |
ಜನನ | ೭ ಫೆಬ್ರವರಿ ೧೯೬೬ ಕುಂಜಾಡಿ , ದಕ್ಷಿಣ ಕನ್ನಡ, ಕರ್ನಾಟಕ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಾರ್ಟಿ |
ಸಂಗಾತಿ(ಗಳು) | ಶ್ರೀದೇವಿ ಎನ್.ಶೆಟ್ಟಿ |
ಮಕ್ಕಳು | ೨ ಹೆಣ್ಣು ಮಕ್ಕಳು |
As of 24 May, 2009 |
ನಳೀನ್ ಕುಮಾರ್ ನಿರಂಜನ ಶೆಟ್ಟಿ ಕಟೀಲ್ (ಫೆಬ್ರವರಿ ೭ ೧೯೬೬) ಭಾರತ ದೇಶದ ಲೋಕಸಭಾ ಸದಸ್ಯ. ಕರ್ನಾಟಕದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ೧೬ನೇಯ ವ್ಯಕ್ತಿಯಾಗಿ ಪ್ರತಿನಿಧಿಸುತ್ತಿದ್ದಾರೆ.[೧]
ರಾಜಕೀಯ ಜೀವನ
[ಬದಲಾಯಿಸಿ]ನಳೀನ್ ಕುಮಾರ್ ಕಟೀಲ್ ಅವರು ಕಟ್ಟಡಗಳನ್ನು ಕಟ್ಟಿಸಿಕೋಡುವ ಕಾಂಟ್ರಕ್ಟರ್ ಆಗಿದ್ದರು. ನಂತರ ಅವರು ರಾಷ್ಟೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ ಸಾಮಾಜಿಕ, ರಾಜಾಕೀಯಕ್ಕೆ ಬಂದರು. ಮೊದಲಿಗೆ ರಾಜಾಕೀಯವಾಗಿ ಅಲ್ಲದೆ ಸಸ್ವಯಂ ಸೇವಕರಾಗಿ ಕೆಲಸ ಮಾಡಿದರು. ನಂತರ ಭಾರತೀಯ ಜನಾತ ಪಾರ್ಟಿಗೆ ಸೇರಿದರು. ೨೦೦೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ೨೦೦೯ರಲ್ಲಿ ಇವರು ಲೋಕಸಭೆಯ ಕೆಳಗಿನ ಮನೆಗೆ ಆಯ್ಕೆ ಆದರು. ನಂತರ ಪುನ: ೨೦೧೪ರಲ್ಲಿ ಲೋಕಸಭೆಯ ಸದಸ್ಯರಾಗಿ ಆಯ್ಕೆ ಆದರು.[೨]
ವೈಯುಕ್ತಿಕ ಜೀವನ
[ಬದಲಾಯಿಸಿ]ನಳೀನ್ ಕುಮಾರ್ ಕಟೀಲ್ ಅವರು ಶ್ರೀದೆವಿ ಶೆಟ್ಟಿಯವರನ್ನು ೦೨ ಮೇ ೨೦೦೧ರಂದು ಮದುವೆಯಾದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ರಾಜಕೀಯ ಹುದ್ದೆ
[ಬದಲಾಯಿಸಿ]- ೨೦೧೯ರಲ್ಲಿ ೦೩ನೇ ಬಾರಿಗೆ ಲೋಜಕಸಭಾ ಸದಸ್ಯ.
- ಕರ್ನಾಟಕ ರಾಜ್ಯದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆ.
ಉಲ್ಲೇಖಗಳು
[ಬದಲಾಯಿಸಿ]- ↑ "ನಳಿನ್ ಕುಮಾರ್ ಕಟೀಲ್". ಲೋಕಸಭಾ ಜಾಲತಾಣ 18 ನವೆಂಬರ್ 2018.
- ↑ https://www.news18.com/