ನರ್ಗಿಸ್ ಚಂಡಮಾರುತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೇ ೧ರಂದು ನರ್ಗಿಸ್ ಚಂಡಮಾರುತ

ನರ್ಗಿಸ್ ಚಂಡಮಾರುತ ೨೦೦೮ರ ಮೇ ತಿಂಗಳಲ್ಲಿ ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಗಳಲ್ಲಿ ಉಂಟಾದ ಒಂದು ಅತ್ಯಂತ ತೀವ್ರವಾದ ಚಂಡಮಾರುತ. ಇದು ಮೇ ೨ರಂದು ಮ್ಯಾನ್ಮಾರ್ ದೇಶವನ್ನು ಅಪ್ಪಳಿಸಿ ಸುಮಾರು ೧೨೦,೦೦೦ ಜನರ ಸಾವಿಗೆ ಕಾರಣವಾಯಿತು.ಸುಮಾರು ೫೩೮೦೦ ಜನರು ನಾಪತ್ತೆಯಾಗಿದ್ದಾರೆ. ಮ್ಯಾನ್ಮಾರ್ ದೇಶದ ಇತಿಹಾಸದಲ್ಲಿಯೇ ಅತ್ಯಂತ ತೀವ್ರವಾದ ನೈಸರ್ಗಿಕ ವಿಕೋಪವಿದು. ಮ್ಯಾನ್ಮಾರ್‌ಗೆ ಅಪ್ಪಳಿಸಿದ ಚಂಡಮಾರುತ 'ನರ್ಗಿಸ್‌'ನಿಂದಾಗಿ 1.38 ಲಕ್ಷ ಮಂದಿ ಬಲಿಯಾದರು. ಸಾವಿರಾರು ಮನೆ, ಕಟ್ಟಡಗಳು ನೆರೆಯಲ್ಲಿ ಕೊಚ್ಚಿಹೋಗಿದ್ದವು. ೬೧೦೦ ಕೋಟಿ ರೂಪಾಯಿ ನಷ್ಟವಾಗಿತ್ತು.ನರ್ಗಿಸ್ ಚಂಡಮಾರುತದಿಂದ ಆದ ಅಪಘಾತದ ನಷ್ಟದಿಂದ ಸುದಾರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು.

ಬೆ ಆಫ್ ಬಂಗಾಳದತ್ತ ನರ್ಗಿಸ್ ಚಂಡಮಾರುತ

ಉಲ್ಲೇಖಗಳು [೧] [೨]

  1. http://kannada.boldsky.com/insync/pulse/2016/worst-natural-disasters-ever-recorded.htmlslider-pf49660-recorded.html[ಶಾಶ್ವತವಾಗಿ ಮಡಿದ ಕೊಂಡಿ]
  2. http://www.kannadaprabha.com/edition/printkp.aspx?artid=122284[ಶಾಶ್ವತವಾಗಿ ಮಡಿದ ಕೊಂಡಿ]