ವಿಷಯಕ್ಕೆ ಹೋಗು

ನರಸಿಂಹ ತೀರ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನರಸಿಂಹ ತೀರ್ಥ

ನರಸಿಂಹ ತೀರ್ಥ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಸುಮಾರು ೨ ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ - ೪ ದ ಬದಿಯಲ್ಲಿರುವ ಒಂದು ಮುಖ್ಯ ಪ್ರವಾಸೀ ತಾಣ. ಇಲ್ಲಿ ಶ್ರೀಪಾದರಾಜರು ಐಕ್ಯವಾದ ಬೃಂದಾವನವಿದೆ.

ರಥ

ನರಸಿಂಹ ತೀರ್ಥ ಅಲ್ಲಿರುವ ಪುಷ್ಕರಿಣಿಯ ಹೆಸರು. ಈ ಪುಷ್ಕರಿಣಿಯಲ್ಲಿ ನೀರು ಸದಾಕಾಲ ಇದ್ದೇ ಇರುತ್ತದಂತೆ. ಶ್ರೀಪಾದರಾಜರು ವಾಸ ಮಾಡಿದ ಸ್ಥಳವಾದ ಈ‌ ಮಠ, ಯೋಗನರಸಿಂಹನ ದೇವಸ್ಥಾನ, ಮಧ್ವ ಮೂರ್ತಿಯಿರುವ ಗುಡಿ, ಹಾಗೂ ಆಂಜನೇಯನ ದೇವಸ್ಥಾನಗಳನ್ನೂ ಒಳಗೊಂಡಿದೆ.