ನಮ್ಮ ಧ್ವನಿ
ನಮ್ಮ ದ್ವನಿ ಭಾರತದ ಮೊತ್ತಮೊದಲ ಸಮುದಾಯ ಕೇಬಲ್ ರೇಡಿಯೊ ಕೇಂದ್ರ. ಇದು ಕರ್ನಾಟಕದ ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಇದೆ. ಬೂದಿಕೋಟೆ ಮೈಸೂರು ಹುಲಿ ಟಿಪ್ಪುವಿನ ತಂದೆ ಹೈದರಾಲಿ ಜನ್ಮ ಸ್ಥಳ.
ಹೈದರಾಲಿ ಅಥವಾ ಹೈದರ್ ಅಲಿ (ಕ್ರಿ. ಶ. ೧೭೨೨ - ೧೭೮೨) ದಕ್ಷಿಣ ಭಾರತದ ಮೈಸೂರು ರಾಜ್ಯವನ್ನಾಳುತ್ತಿದ್ದ ಸುಲ್ತಾನ. ಇವನು ಟಿಪ್ಪು ಸುಲ್ತಾನನ ತಂದೆ.
ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ ಕೋಲಾರ ಜಿಲ್ಲೆಯ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿಯಾಗಿರುವ ಮಾರ್ಕಂಡೇಯ್ಯ ಕೆರೆ ಸಿಗುತ್ತದೆ. ಬೂದಿಕೋಟೆ ಮಾರ್ಕಂಡೇಯ್ಯ ಕೆರೆ, ಹೈದರಾಲಿ ಜನ್ಮ ಸ್ಥಳದ ಜೊತೆಗೆ ನಮ್ಮಧ್ವನಿ ಸಮುದಾಯ ಕೇಬಲ್ ರೇಡಿಯೋ ಕೇಂದ್ರದಿಂದ ತುಂಬಾ ಪ್ರಸಿದ್ದಿಯಾಗಿದೆ. ನಮ್ಮಧ್ವನಿಯು ಸಮುದಾಯ ನಿರ್ವಹಿಸುತ್ತಿರುವ ಕೇಬಲ್ ರೇಡಿಯೋ ಕೇಂದ್ರ. ಇದನ್ನು ಪ್ರಾರಂಬಿಸಲು ಹಣಕಾಸಿನ ನೆರವನ್ನು ಯುನೆಸ್ಕೋ ನೀಡಿದ್ದು, ತಾಂತ್ರಿಕ ನೆರವನ್ನು ವಾಯ್ಸಸ್ Archived 2008-11-20 ವೇಬ್ಯಾಕ್ ಮೆಷಿನ್ ನಲ್ಲಿ. ನೀಡಿದ್ದು. ಮೈರಾಡ ಸಂಸ್ಥೆಯು ಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದೆ. ನಮ್ಮಧ್ವನಿ ಕೇಂದ್ರದಲ್ಲಿ ಸಮುದಾಯಕ್ಕೆ ಬೇಕಾದ ಆರೋಗ್ಯ, ಕೃಷಿ, ಕಾನೂನು,ಮನೆಮದ್ದು,ಸ್ಥಳೀಯ ಸುದ್ದಿ, ಮಾರುಕಟ್ಟೆ ದರ,ಮನರಂಜೆಯ ಕಾರ್ಯಕ್ರಮ ಇತ್ಯಾದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇದರಿಂದ ಹಲವಾರು ಜನರು ಮಾಹಿತಿಯನ್ನು ಪಡೆದುಕೊಂಡು ತಮ್ಮ ನಿತ್ಯ ಜೀವನದಲ್ಲಿ ಬಳಸಿಕೊಳ್ಳುತ್ತಿದ್ದಾರೆ.