ವಿಷಯಕ್ಕೆ ಹೋಗು

ನಟ್ ಹ್ಯಾಮ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

’ನಾರ್ವೆ’ ದೇಶದ ಆಧುನಿಕ ಸಾಹಿತ್ಯದ ಜನಕನೆಂದು ಹೆಸರು ಪಡೆದ, ಸಾಹಿತಿ, ನಟ್ ೧೯೨೦ ರಲ್ಲಿ ’ನೋಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ’ ರಾದರು. ಸಾಹಿತ್ಯ, ಮೀಮಾಂಸೆ, ನಾಟಕ, ಕತೆ, ಕಾದಂಬರಿಗಳನ್ನು ಬರೆದಿದ್ದಾರೆ. ಇವರ ನಿಜವಾದ ನಾಮಧೇಯ, ’ನಡ್ ಪೆಡರ್ಸನ್’, ಎಂದಾಗಿತ್ತು. ನಟ್ ಬರೆದ ಎರಡು ಕಾದಂಬರಿಗಳು 'Hunger' ಮತ್ತು 'Growth of the Soil,' ಇಂದಿಗೂ ಓದುಗರಿಗೆ ಪ್ರಿಯವಾಗಿದೆ.

'ನಟ್ ಹ್ಯಾಮ್ಸನ್'ರ ಬಾಲ್ಯ

[ಬದಲಾಯಿಸಿ]

'ನಟ್ ಹ್ಯಾಮ್ಸನ್' ಬಹಳ ಬಡ ಕುಟುಂಬದಲ್ಲಿ ’ದರ್ಜಿಯೊಬ್ಬನ ಮಗನಾಗಿ’, ಜನಿಸಿದರು. ವಿದ್ಯಾಭ್ಯಾಸ ಮುಂದುವರೆಸಲೂ ಆರ್ಥಿಕ ನೆರವಿಲ್ಲದೆ, ತಮ್ಮ ೧೭ ನೇ ವಯಸ್ಸಿನಲ್ಲಿ, ’ಹಗ್ಗ ತಯಾರಿಸುವ ಕಾರ್ಖಾನೆ’ ಯೊಂದರಲ್ಲಿ ಕಾರ್ಮಿಕನಾಗಿ ಸೇರಿಕೊಂಡರು. ಅಲ್ಲಿಂದ ಮುಂದೆ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಹೋಗಿ, ಅಲ್ಲಿಯೂ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ದುಡಿದು, ಹೆಚ್ಚಿನ ಅನುಭವ ಪಡೆದರು.'ನಟ್ ಹ್ಯಾಮ್ಸನ್' ಸ್ವದೇಶಕ್ಕೆ ಮರಳಿದಾಗ, ಅವರ ’ಲೋಕಾನುಭವ’ ಶ್ರೇಷ್ಟಮಟ್ಟದ್ದಾಗಿತ್ತು. ತಮ್ಮ ಬಿಡುವಿನ ವೇಳೆಯಲ್ಲಿ ಬರವಣಿಗೆ ಅವರ ಕಾರ್ಮಿಕ ಜೀವನದ ಜೊತೆಯಲ್ಲೇ ಸಾಗಿತ್ತು.

'ನಟ್ ಹ್ಯಾಮ್ಸನ್' ರ ’ಹಸಿವು,’ ಒಂದು ಸುಪ್ರಸಿದ್ಧ ಕಾದಂಬರಿ

[ಬದಲಾಯಿಸಿ]

೧೯೧೮ ರಲ್ಲಿ ಅಮೆರಿಕ ದೇಶದಿಂದ ವಾಪಸ್ಸಾದ ನಟ್ ರು, ’ನಾರ್ವೆ ದೇಶ’ ದಲ್ಲಿ ನೆಲೆಸಿದ ನಟ್ ರು, ನಿರಂತರವಾಗಿ ಕಥೆ, ಕಾದಂಬರಿಗಳನ್ನು ಬರೆಯುತ್ತಾಹೋದರು. ೧೮೯೦ ರಲ್ಲಿ, ಅವರು ಬರೆದ ಮೊದಲ ಕಾದಂಬರಿ, ’ಹಸಿವು’, [Hunger], ಎಲ್ಲರ ಮೆಚ್ಚುಗೆ ಗಳಿಸಿತು. ಕಾದಂಬರಿಯ ಸನ್ನಿವೇಶ, ನಾರ್ವೆ ದೇಶದ ರಾಜಧಾನಿಯಲ್ಲಿ ಹಸಿದು ಕಂಗಾಲಾಗಿದ್ದ ಓರ್ವ ಯುವ-ಬರಹಗಾರನೇ ಇದರ ನಾಯಕ.'ನಟ್ ಹ್ಯಾಮ್ಸನ್' ರ ಸ್ವಂತ ಅನುಭವವೇ ಇದರ ಮೂಲ ದ್ರವ್ಯ. ಉಪವಾಸ ತಮ್ಮ ಜೀವನದ ಒಂದು ಭಾಗವಾಗಿ ಹೋಗುವುದರಿಂದ ಅವನಿಗೆ ಅದು ಒಗ್ಗಿಹೋಗುತ್ತದೆ. ಇಲ್ಲಿ ಹಸಿವೆಯಿಂದ ಕಂಗೆಟ್ಟು ಸ್ವಲ್ಪ ಭ್ರಮೆಗೆ ಒಳಗಾಗಿರುವ ನಾಯಕ ಮಹಾಶಯನ ಸ್ವಗತ ಹಾಗೂ ವಿಚಿತ್ರ ತರ್ಕಗಳಿಂದಾಗಿ ಈ ಕಾದಂಬರಿ ’ಕಾಫ್ಕಾ’ ತರಹೆಯ ಬರವಣಿಗೆಯ ಶೈಲಿಯ ಮತ್ತು ಒಂದು ’ಆದ್ಯಕೃತಿ’ ಯೆಂದು ಪರಿಗಣಿಸಲ್ಪಟ್ಟಿದೆ.

’ಭೂಮಿಯ ಬೆಳೆ,’ ಅಪರೂಪದ ಕೃತಿ

[ಬದಲಾಯಿಸಿ]

ಮತ್ತೊಂದು ಪ್ರಸಿದ್ಧ ಕಾದಂಬರಿ, ’ಭೂಮಿಯ ಬೆಳೆ, ’The Growth of the Soil, ’ ನಾರ್ವೆ ದೇಶದ ಘಟ್ಟ ಪ್ರದೇಶದಲ್ಲಿ ಕಾಡನ್ನು ಕಡಿದು, ಕೃಷಿ-ಭೂಮಿಯನ್ನು ಸಿದ್ಧಪಡಿಸಿಕೊಂಡು ಅಲ್ಲಿ ತನ್ನ ಕುಟುಂಬವನ್ನು ಬೆಳೆಸಿದ ಒಬ್ಬ ಸಾಹಸಿಪ್ರವೃತ್ತಿಯ ವ್ಯಕ್ತಿಯೊಬ್ಬನ ಕಥೆ. ಈ ಹಿಡುವಳಿಯೇ ನಿಧಾನವಾಗಿ ಕಾಲಕ್ರಮದಲ್ಲಿ ಒಂದು ಊರಾಗಿ ಊಪಗೊಳ್ಳುತ್ತದೆ. ಇದೊಂದು ’ಎಪಿಕ್’ [’ಮಹಾಕಾವ್ಯಸದೃಶ ಕೃತಿ’] ಎಂದು ಪರಿಗಣಿಸಲ್ಪಟ್ಟು ಮಾನ್ಯತೆ ಪಡೆದಿದೆ. ಸಾಹಿತಿಯಾದವನು, ಮನುಷ್ಯನ ’ರಕ್ತದ ಪಿಸುದ್ವನಿಯನ್ನು ಮತ್ತು ಮೂಳೆ-ಮಜ್ಜೆಯ ಗೋಗರೆತವನ್ನು ಕೇಳಿಸಿಕೊಳ್ಳಬೇಕೆನ್ನುವ 'ನಟ್ ಹ್ಯಾಮ್ಸನ್' ರ ಸಾಹಿತ್ಯ ಸಿದ್ಧಾಂತವಾಗಿದೆ.

ಒಟ್ಟಾರೆ 'ನಟ್ ಹ್ಯಾಮ್ಸನ್' ಬರೆದ ಕೃತಿಗಳು

[ಬದಲಾಯಿಸಿ]

೧೯೫೪ ರಲ್ಲಿ ಸಮಗ್ರ ಕೃತಿಗಳನ್ನು ಒಟ್ಟು ೧೫ ಸಂಪುಟಗಳಲ್ಲಿ ಮುದ್ರಿಸಿ ಪ್ರಕಟಿಸಲಾಗಿದೆ.