ಧ್ವಾಂತಪ್ರಮಾಪಕ ಯಂತ್ರ

ವಿಕಿಪೀಡಿಯ ಇಂದ
Jump to navigation Jump to search
ಧ್ವಾಂತಪ್ರಮಾಪಕ ಯಂತ್ರ
ಮಹರ್ಷಿ ಭರದ್ವಾಜರ ಧ್ವಾಂತಪ್ರಮಾಪಕ ಯಂತ್ರ
ರಾಷ್ಟ್ರೀಯತೆಭಾರತ
ಕಾಲವೇದಕಾಲ

ಮಹರ್ಷಿ ಭರದ್ವಾಜರ ಧ್ವಾಂತಪ್ರಮಾಪಕ ಯಂತ್ರ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ಧ್ವಾಂತ ಪ್ರಮಾಪಕ ಯಂತ್ರವು ಬಾಹ್ಯಾಕಾಶದಲ್ಲಿನ ವಸ್ತುಗಳ ಅಧ್ಯಯನಕ್ಕೆಂದು ಸೃಷ್ಟಿಸಲಾಯಿತು. ಇದನ್ನು ಆಂಗ್ಲಭಾಷೆಯಲ್ಲಿ ಸ್ಪೆಕ್ಟ್ರೋಸ್ಕೋಪ್(spectroscope) ಎಂದು ಕರೆಯುತ್ತಾರೆ. ಈ ಯಂತ್ರವು ಬಾಹ್ಯಾಕಾಶದಲ್ಲಿನ ವಸ್ತುಗಳನ್ನು, ಅವುಗಳಿಂದ ಬರುವ ಕಿರಣಗಳ ಸಹಾಯದಿಂದಲೇ ಅಧ್ಯಯನ ಮಾಡಲು ಬಳಕೆಯಾದಯಂತ್ರ. ಈ ಯಂತ್ರವು; ಅತಿಗೆಂಪು ಕಿರಣಗಳು(Infrared), ನೇರಳಾತೀತ ಕಿರಣಗಳು(Ultraviolet) ಹಾಗೂ ಗೋಚರ ಬೆಳಕಿನ ಕಿರಣಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ. ಈ ಯಂತ್ರವು, ಅತಿಗೆಂಪು, ನೇರಳಾತೀತ ಹಾಗೂ ಗೋಚರ ಬೆಳಕನ್ನು ಗ್ರಹಿಸಿ ಕೊಂಡು ಅದನ್ನು ಸ್ಪೆಕ್ಟ್ರಮ್(spectrum)ನ ರೂಪದಲ್ಲಿ ಹೊರಸೂಸುತ್ತದೆ. ಈ ಯಂತ್ರದ ಸಹಾಯದಿಂದ ನಾವು ಆಕಾಶದಲ್ಲಿನ ಯಾವುದೇ ವಸ್ತುವು ಇರುವ ದೂರ, ಸಂಯೋಜನೆ ಹಾಗೂ ಈ ಕಿರಣಗಳು ದಾಟಿ ಬಂದ ದಾರಿಯ ಸಂಯೋಜನೆ ಮುಂತಾದ ಹಲವು ವಿಷಯಗಳನ್ನು; ಕೇವಲ ಆ ವಸ್ತುವಿನ ಕಿರಣಗಳ ಮೂಲಕವಾಗಿ ತಿಳಿದುಕೊಳ್ಳಬಹುದು.

ಜನನ[ಬದಲಾಯಿಸಿ]

ಈ ಯಂತ್ರದ ಜನನ ಪ್ರಾಚೀನ ಭಾರತದಲ್ಲಾಯಿತು. ಇದರ ಅತ್ಯಂತ ಪ್ರಾಚೀನತೆಯಿಂದಾಗಿ ಇದರ ಹಲವು ಸಂಗತಿಗಳು ನಮಗೆ ತಿಳಿಯದೆ ಹೋಗಿವೆ. 'ಎನ್. ಜಿ. ಡೋಂಗ್ರೆ'ಯವರ ಪ್ರಕಾರ ಈ ಯಂತ್ರವು ಮಹರ್ಷಿ ಭರಧ್ವಾಜರು ಆವಿಶ್ಕಾರ ಮಾಡಿದರು. ಮಹರ್ಷಿ ಭರಧ್ವಾಜರು, ಈ ಯಂತ್ರದ ಬಲದಿಂದ ಹಲವು ಕ್ಲಿಷ್ಟವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡರೆಂದು ಹೇಳುತ್ತಾರೆ. ಬೋದಾನಂದ ತಮ್ಮ ವ್ಯಾಖ್ಯಾನದಲ್ಲಿ ಮಹರ್ಷಿ ಭರದ್ವಾಜರ ಈ ಧ್ವಾಂತಪ್ರಮಾಪಕ ಯಂತ್ರವನ್ನು ಒಳಗೊಂಡ , ಮಹರ್ಷಿ ಭರದ್ವಾಜರಿಂದಲೇ ರಚಿತವಾದ 'ಅಂಶುಬೋಧಿನಿ' ಎಂಭ ಗ್ರಂಥದ ಬಗ್ಗೆ ಹೇಳಿದ್ದಾರೆ.

ಮಹರ್ಷಿ ಭರದ್ವಾಜರು[ಬದಲಾಯಿಸಿ]

ಭರದ್ವಾಜರು ಭರತಖಂಡದ ಓರ್ವ ಮಹರ್ಷಿ. ಸಪ್ತರ್ಷಿಗಳ ಸಾಲಿನಲ್ಲಿ ಇವರೂ ಒಬ್ಬರು. ಮಹರ್ಷಿ ಆತ್ರಿ, ಮಹರ್ಷಿ ವಶಿಷ್ಟ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಗೌತಮ, ಮಹರ್ಷಿ ಜಮದಗ್ನಿ ಹಾಗೂಮಹರ್ಷಿ ಕಷ್ಯಪರು; ಸಪ್ತಋಷಿ ಸಾಲಿನಲ್ಲಿರುವ ಇತರ ಋಷಿಗಳು. ಮಹರ್ಷಿ ಭರದ್ವಾಜರು ವೇದ ಕಾಲದವರು ಎಂದು ಹೇಳಲಾಗಿದೆ. ದೇವಗುರು ಬೃಹಸ್ಪತಿ ಇವರ ತಂದೆಯೆಂದು ಹೇಳಲಾಗುತ್ತದೆ. ಇವರು ಋಗ್ವೇದದ ಆರು ಮಂಡಲಗಳನ್ನು ರಚಿಸಿದ್ದಾರೆ. ಇವರು ಭರತ ಮಹಾಚಕ್ರವರ್ತಿಗಳ ವಂಶಸ್ಥರೆಂಬ ನಂಬಿಕೆಯೂ ಇದೆ. ಕುರು ವಂಶದ ರಾಜಗುರುಗಳಾಗಿದ್ದ ದ್ರೋಣಆಚಾರ್ಯರು ಇವರ ಮಗನೆಂದು ಹೇಳಲಾಗಿದೆ. ಇವರ ಆಶ್ರಮವು, ಪ್ರಯಾಗ ಪುಣ್ಯಕ್ಷೇತ್ರದಲ್ಲಿ ನಿರ್ಮಿಸಲಾಗಿತ್ತು. ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರನ ವನವಾಸದ ಸಂದರ್ಭದಲ್ಲಿ ಮಹರ್ಷಿ ಭರದ್ವಾಜರ ಆಶ್ರಮಕ್ಕೆ ಬಂದನೆಂದು ಹೇಳಲಾಗಿದೆ. ಶ್ರೀಮನ್ನಾರಾಯಣನ ಅವತಾರನಾದ ಶ್ರೀರಾಮಚಂದ್ರನ ಜನ್ಮಕಾರಣವನ್ನು ಅರಿತ ಮಹರ್ಷಿ ಭರದ್ವಾಜರು, ಅವನಿಗೆ ಹಲವು ದಿವ್ಯ ಅಸ್ತ್ರಗಳನ್ನು ಕೊಟ್ಟು ಅನುಗ್ರಹಿಸಿದರೆಂದು ಹೇಳಲಾಗಿದೆ. ಇವರ ಹೆಸರಿನಲ್ಲಿ ನರಬ್ರಹ್ಮರಾದ ಬ್ರಾಹ್ಮಣರ ಒಂದು ಗೋತ್ರವೂ ಇದೆ. ಈ ಗೋತ್ರಕ್ಕೆ ಸೇರಿದವರು ಸಾಮಾನ್ಯವಾಗಿ ಭರದ್ವಾಜ ಎಂಬ ಹೆಸರನ್ನು ತಮ್ಮ ಹೆಸರಿನ ಹಿಂದೆ ಸೇರಿಸಿಕೊಂಡಿರುತ್ತಾರೆ.

ಯಂತ್ರದ ಸಂಯೋಜನೆ[ಬದಲಾಯಿಸಿ]

ಈ ಯಂತ್ರವು 13(ಹದಿಮೂರು) ಭಾಗಗಳಿಂದ ಕೂಡಿದೆ. ಚತುಶ್ರೇಯ, ಛಾಯಾಪಕರ್ಶಣಾದರ್ಶ, ಪ್ರಭಾಕರಮಣಿಯುಕ್ತ ದಿವಾಕರಾದರ್ಶ ಚಕ್ರ, ಕಿರಣಗ್ರಾಹಕಮಣಿಯುಕ್ತ ನಿಶಾಕರಾದರ್ಶ ಚಕ್ರ, ಧರ್ಮಾಪಹಾರಕಮಣಿಯುಕ್ತ ಉಷ್ಣಾಪಕರ್ಶಕ ಭಾನುಫಲಕ ಚಕ್ರ, ತಮೋಗರ್ಭಮಣಿಯುಕ್ತ ಛಾಯಾಮುಖಾದರ್ಶ ಚಕ್ರ, ಪ್ರಭಾಮಣೀಯುಕ್ತ ಪ್ರಭಾಮುಖಾದರ್ಶ ಚಕ್ರ, ವಲ್ಲಭಮಣೀಯುಕ್ತ ಪ್ರಕಾಶಸ್ಥಂಭನ ಚಕ್ರ, ಛಾಯಾ-ಪ್ರಭಾ ವಿಭಾಜಕ ಪಟ್ಟಿಕ; ಎಂಬುವು ಈ ಯಂತ್ರದ ಕೆಲವು ಮುಖ್ಯ ಭಾಗಗಳು. ಇವುಗಳಷ್ಟೇ ಅಲ್ಲದೆ ಮೇರುಸ್ಥಂಭ, ದಂಡಗಳು ಮುಂತಾದ ಹಲವು ಅತ್ಯಂತ ಮುಖ್ಯವಾಗದ ಭಾಗಗಳೂ ಇವೆ.

ಚತುಶ್ರೇಯ, ಛಾಯಾಪಕರ್ಶಣಾದರ್ಶ ಮತ್ತು ಮೇರುಸ್ಥಂಭ[ಬದಲಾಯಿಸಿ]

ಚತುಶ್ರೇಯ ಎಂಬುದು ನಾಲ್ಕು ಬದಿಗಳನ್ನೊಳಗೊಂಡ ೧೨೦*೧೨೦(120*120) ಅಂಗುಲಗಳೀರುವ ಚೌಕಾಕಾರದ ಪಟ್ಟಿ. ಈ ಪಟ್ಟಿಯ ಆಧಾರದ ಮೇಲೆಯೇ ಉಳಿದ ಅಂಗಗಳು ನಿರ್ಮಿತವಾಗುತ್ತದೆ. ಛಾಯಾಪಕರ್ಶಣಾದರ್ಶ ಎಂಬುದು ಚತುಶ್ರೇಯದ ಮೇಲೆ ಇರಿಸಲಾದ ಒಂದು ಬಿಂಬ. ಇದರ ಆಧಾರದಮೇಲೆ ಉಳಿದ ಯಂತ್ರಾಂಗಗಳನ್ನು ಕೂಡಿಸಲಾಗುತ್ತದೆ. ಈ ಬಿಂಬದ ಮಧ್ಯದಲ್ಲಿ ಮೇರುಸ್ಥಂಭವನ್ನು ದೃಢಪಡಿಸಲಾಗುತ್ತದೆ. ಈ ಮೇರುಸ್ಥಂಭವು ೭೨(72) ಅಂಗುಲ ಎತ್ತರವಾದುದು. ಈ ಸ್ಥಂಭವು ಸಧೃಢವಾಗಿರುವುದನ್ನು ಸ್ಪಷ್ಟಪಡಿಸಿಕೊಳ್ಳುವುದು ಮುಖ್ಯ; ಏಕೆಂದರೆ ಇದು ಆರು ಚಕ್ರಗಳನ್ನು ಹೊರಬೇಕಾಗಿರುವುದು.

ಪ್ರಭಾಕರಮಣಿಯುಕ್ತ ದಿವಾಕರ ಚಕ್ರ[ಬದಲಾಯಿಸಿ]

ಪ್ರಭಾಕರಮಣಿಯೆಂಬುದು ಒಂದು ರಸಾಯನದಿಂದ ಲೇಪಿತವಾದ ಲೆನ್ಸ್(lens). ಈ ಲೆನ್ಸುಗಳು ಸಾಮಾನ್ಯವಾಗಿ ಗಾಜಿನಿಂದಾಗಿರುತ್ತದೆ. ಗಾಜು ನೇರಳಾತೀತ ಕಿರಣಗಳನ್ನು ತಮ್ಮ ಮುಖಾಂತರವಾಗಿ ಚಲಿಸಲು ಅನುಮತಿಸುವುದಿಲ್ಲ. ಈ ಕಾರಣದಿಂದಾಗಿ ಲೆನ್ಸನ್ನು ಒಂದು ರಸಾಯನದಿಂದ ಲೇಪಿಸಿ ಅಥವಾ ಅದೇ ರಸಾಯನವನ್ನು ಬೆರೆಸಿ ತಯಾರಿಸಲಾಗುತ್ತದೆ. ಈ ಮಣಿಯನ್ನು ದಿವಾಕರಚಕ್ರವು ಹೊಂದಿರಬೇಕು. ಕಿರಣಗಳ ಅಧ್ಯಯನಕ್ಕೆ ಬೇಕಾದ ಅಳತೆ ಗೆರೆಗಳನ್ನು, ಈ ಚಕ್ರದ ಮೇಲೆ, ರಚಿಸಲಾಗುತ್ತದೆ. ಈ ಚಕ್ರವು ಅಳತೆಯಲ್ಲಿ ಐವತ್ತು ಅಂಗುಲಗಳಿರಬೇಕಾದುದು ಅವಶ್ಯ.

ಕಿರಣಗ್ರಾಹಕಮಣಿಯುಕ್ತ ನಿಶಾಕರಾದರ್ಶ ಚಕ್ರ[ಬದಲಾಯಿಸಿ]

ಕಿರಣಗ್ರಾಹಕಮಣಿಯೆಂಬುದು ಆಂಗ್ಲಭಾಷೆಯಲ್ಲಿ ಪ್ರಿಸಂ. ಈ ಮಣಿಯು ಕಿರಣಗಳನ್ನು ಅವುಗಳ ತರಂಗಾತರಾನುಸಾರವಾಗಿ ಬೇರ್ಪಡಿಸಲು ಬಳಕೆಯಾಗುವ ಮಣಿಯ ವಿವಿದ ಬಗೆಗಳಲ್ಲಿ ಒಂದು. ಆಂಗ್ಲಭಾಷೆಯಲ್ಲಿ ಇದನ್ನು ಕೊನಿಕಲ್ ಪ್ರಿಸಮ್(conical prism) ಎಂದು ಕರೆಯುತ್ತಾರೆ. ಸಾಮಾನ್ಯ ಪ್ರಿಸಮ್ ಮತ್ತು ಕೊನಿಕಲ್ ಪ್ರಿಸಮ್ ಗಳ ಮಧ್ಯ ಹೆಚ್ಚಿನ ಅಂತರವೇನೂ ಗೋಚರವಾಗಿ ಕಾಣುವುದಿಲ್ಲ ಆದರೆ ಅವುಗಳು ಕೊಡುವ ಸ್ಪೆಕ್ಟ್ರಮ್ ನಲ್ಲಿ ಬಹಳವಾಗಿ ವ್ಯತ್ಯಾಸಗಳು ಕಂಡುಬರುತ್ತವೆ. ಹಾಗಾಗಿ ಈ ಯಂತ್ರದಲ್ಲಿ ಸಾಮಾನ್ಯ ಪ್ರಿಸಮ್ ಅನ್ನು ಬಳಸುವುದು ಸಾಧ್ಯವೆಂದೆನಿಸುವುದಿಲ್ಲ. ನಿಶಾಕರಾದರ್ಶ ಚಕ್ರವು ಈ ಮಣಿಯನ್ನು ಹೊಂದಿರುತ್ತದೆ. ಈ ಚಕ್ರವು ಸೂಕ್ತ ಕಿರಣಗಳನ್ನು ತನ್ನ ಮೂಲಕವಾಗಿ ಕಳುಹಿಸಲು ಸಾಧ್ಯವಾಗುವಂತೆ ಇದರ ತಯಾರಿಕೆಯಾಗಿರುತ್ತದೆ. ಈ ಚಕ್ರವು ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್ ಮತ್ತು ಫಾಸ್ಫಿಕ್ ಆಸಿಡ್ ಗಳ ಮಿಶ್ರಣದಿಂದ ತಯಾರಾದ ಚಂದ್ರನ ವರ್ಣವನ್ನು ಹೋಲುವ ಒಂದು ರಸಾಯನದಿಂದ ಲೇಪಿತವಾಗಿರುತ್ತದೆ. ಈ ಲೇಪನವು, ಕಿರಣಗಳು ಈ ಚಕ್ರದ ಮುಖಾಂತರವಾಗಿ ಚಲಿಸುವುದನ್ನು ಸುಲಭವನ್ನಾಗಿ ಮಾಡಿಬಿಡುತ್ತದೆ. ಈ ಚಕ್ರವು ೪೬(46) ನಲವತ್ತಾರು ಅಂಗುಲಗಳ ಅಳತೆಯಲ್ಲಿರುವುದು ಅವಶ್ಯ.

ಧರ್ಮಾಪಹಾರಮಣಿಯುಕ್ತ ಉಷ್ಣಾಪಕರ್ಶಕ ಭಾನುಫಲಕ ಚಕ್ರ[ಬದಲಾಯಿಸಿ]

ಧರ್ಮಾಪಹಾರಕಮಣಿಯೂ ಕಿರಣಗ್ರಾಹಕಮಣಿಯಂತೆಯೇ ಕೊನಿಕಲ್ ಪ್ರಿಸಮ್. ಈ ಯಂತ್ರವು, ಗೋಚರ ಬೆಳಕಲ್ಲದೆ, ಎರಡು ಬೇರೆಬೇರೆ ಕಿರಣಗಳ ಬಳಕೆಯನ್ನು ಹೊಂದಿರುವ ಕಾರಣದಿಂದಾಗಿ ಇದಕ್ಕೆ ಮತ್ತೊಂದು ಕೊನಿಕಲ್ ಪ್ರಿಸಮ್ ನ ಅವಶ್ಯಕತೆ ಇದೆ. ಉಷ್ಣಾಪಕರ್ಶಕ ಭಾನುಫಲಕ ಚಕ್ರವು ತನ್ನ ಒಂದು ಭಾಗದಲ್ಲಿ ಈ ಧರ್ಮಾಪಹಾರಕಮಣಿಯನ್ನು ಹೊಂದಿರುತ್ತದೆ. ಈ ಚಕ್ರವನ್ನು ಅತಿಗೆಂಪು ಕಿರಣಗಳು ದಾಟಿ ಹೋಗಲು ಸುಲಭವಾಗುವಂತೆ ಕೆಲವು ರಸಾಯನಗಳೂ ಹಾಗೂ ಗಾಜಿನಿಂದಲೂ ತಯಾರಿಸಲ್ಪಡುತ್ತದೆ. ಈ ಚಕ್ರವು ೪೨(42) ನಲವತ್ತೆರಡು ಅಂಗುಲಗಳ ಅಳತೆಯಲ್ಲಿರಬೇಕಾದುದು ಅವಶ್ಯ.

ತಮೋಗರ್ಭಮಣೀಯುಕ್ತ ಛಾಯಾಮುಖಾದರ್ಶ ಚಕ್ರ[ಬದಲಾಯಿಸಿ]

ತಮೋಗರ್ಭಮಣಿ ಎಂಬುದು ಪ್ರಭಾಕರಮಣಿಯಂತೆಯೇ ಲೆನ್ಸ್. ಆದರೆ ಈ ಭೂತಗನ್ನಡಿಯು ನೇರಳಾತೀತ ಕಿರಣಗಳನ್ನು ತಮ್ಮ ಮುಖಾಂತರವಾಗಿ ಚಲಿಸಲು ಅನುಮತಿಸುವುದಿಲ್ಲ. ಆದ್ದರಿಂದ ಈ ಭೂತಗನ್ನಡಿಯನ್ನು ಪಾದರಸವನ್ನು ಹೋಲುವ ಒಂದು ರೀತಿಯ ರಸಾಯನದಲ್ಲಿ ಮುಳುಗಿಸಿ ಬಿಸಿ ಮಾಡಲಾಗುತ್ತದೆ. ಕೆಲವು ಕಾಲ ಬಿಸಿ ಮಾಡುವುದರಿಂದ ಈ ರಸಾಯನವು ಭೂತಗನ್ನಡಿಯೊಳಗೆ ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸಿದ ರಸಾಯನವು ಸಂಪೂರ್ಣವಾಗಿ ಭೂತಗನ್ನಡಿಯೊಳಗೆ ಆವರಿಸಿಕೊಳ್ಳುತ್ತದೆ. ಹೀಗೆ ಮಾಡುವುದರಿಂದಾಗಿ ತಮೋಗರ್ಭಮಣಿಯನ್ನು ನೇರಳಾತೀತ ಕಿರಣಗಳು ಸುಲಭವಾಗಿ ದಾಟಹೊಗಲು ದಾರಿ ಮಾಡಬಹುದು. ಛಾಯಾಮುಖಾದರ್ಶ ಚಕ್ರವು ಈ ಮಣಿಯನ್ನು ಹೊಂದಿರುತ್ತದೆ. ಈ ಚಕ್ರವು ಭೂದಿಯ ವರ್ಣದಲ್ಲಿರುವ ಒಂದು ಬಗೆಯ ಗಾಜಿನಿಂದ ತಯಾರಿಸಲಾಗುತ್ತದೆ. ಗಾಜಿನ ಈ ವರ್ಣಕ್ಕೆ ಕಾರಣ ಇದರ ಸಂಯೋಜನೆ. ಈ ಚಕ್ರವು ಕೆಲವು ರಸಾಯನಗಳ ಮಿಶ್ರಣದಿಂದ ತಯಾರಿಸಲಾದ ಗಾಜಿನಿಂದ ಸೃಷ್ಟಿಸಲಾಗುತ್ತದೆ. ಈ ಚಕ್ರದಲ್ಲಿನ ತಮೋಗರ್ಭಮಣಿಯು ಸರಿಯಾಗಿ ತಮೋಗ್ರಾಹಕಮಣಿಯ ಕೆಳಗೆ ಬರುವಹಾಗೆ ಜೋಡಿಸಬೇಕು. ಈ ಯಂತ್ರ ಕೆಲಸ ಮಡಲು ಈ ಚಕ್ರದ ಅಳತೆ ೩೮(38) ಮೂವತ್ತೆಂಟು ಅಂಗುಲಗಳಾಗಿರಬೇಕಾದುದು ಅವಶ್ಯ.

ಪ್ರಭಾಮಣಿಯುಕ್ತ ಉಷ್ಣಾಪಕರ್ಶಭಾನುಫಲಕ ಚಕ್ರ[ಬದಲಾಯಿಸಿ]

ಪ್ರಭಾಮಣಿಯೆಂಬುದು ಮತ್ತೆ ಭೂತಗನ್ನಡಿ. ಈ ಭೂತಗನ್ನಡಿಯೂ ಸಹ ನೇರಳಾತೀತ ಕಿರಣಗಳೂ ಸುಲಭವಾಗಿ ಚಲಿಸಲು ಸಾಧ್ಯವಾಗುವಂತೆ ಒಂದು ಬಗೆಯ ರಸಾಯನವನ್ನು ಗಾಜಿನೊಂದಿಗೆ ಸೇರಿಸಿ ತಯಾರಿಸಲಾಗುತ್ತದೆ. ಪ್ರಭಾಮುಖಾದರ್ಶ ಚಕ್ರವು ಈ ಮಣಿಯನ್ನು ಹೊಂದಿರುತ್ತದೆ. ಈ ಚಕ್ರದಲ್ಲಿನ ಪ್ರಭಾಮಣಿಯನ್ನು ಸರಿಯಾಗಿ ಉಷ್ಣಾಪಕರ್ಶ ಭಾನುಫಲಕ ಚಕ್ರದಲ್ಲಿನ ಧರ್ಮಾಪಹಾರಕಮಣಿಯ ಕೆಳಗೆ ಬರುವ ಹಾಗೆ ಜೋಡಿಸಬೇಕು. ಈ ಯಂತ್ರವು ಸರಿಯಾಗಿ ಕೆಲಸ ಮಾಡಬೇಕಾದರೆ ಈ ಚಕ್ರದ ಅಳತೆ ೩೪(34) ಮೂವತ್ತನಾಲ್ಕು ಅಂಗುಲಗಳಿರಬೇಕಾದುದು ಅವಶ್ಯ.

ವಲ್ಲಭಮಣಿಯುಕ್ತ ಪ್ರಕಾಶಸ್ಥಂಭನ ಚಕ್ರ[ಬದಲಾಯಿಸಿ]

ವಲ್ಲಭಮಣಿಯೆಂಬುದು ಮತ್ತೆ ಭೂತಗನ್ನಡಿ. ನೇರಳಾತೀತ ಕಿರಣಗಳು ಸಲೀಸಾಗಿ ಇದರ ಮುಖಾಂತರ ಹೋಗಲು ಸಹಾಯವಾಗುವಂತೆ ಪಾದರಸವನ್ನು ಹೋಲುವ ಒಂದು ರಸಾಯನದಿಂದ ಇದನ್ನು ತಯಾರಿಸಲಾಗುತ್ತದೆ. ಪ್ರಕಾಶಸ್ಥಂಭನ ಚಕ್ರವು ಈ ವಲ್ಲಭಮಣಿಯನ್ನು ಹೊಂದಿರುತ್ತದೆ. ಈ ವಲ್ಲಭಮಣಿಯು ಸರಿಯಾಗಿ ಛಾಯಾಮುಖಾದರ್ಶ ಚಕ್ರದಲ್ಲಿನ ತಮೋಗರ್ಭಮಣಿಯ ಕೆಳಗೆ ಬರುವ ಹಾಗೆ ಜೋಡಿಸಬೇಕಾಗುತ್ತದೆ. ಈ ಯಂತ್ರವು ಸರಿಯಾಗಿ ಕೆಲಸ ಮಾಡಲು ಈ ಚಕ್ರದ ಅಳತೆ ೩೦(30) ಮೂವತ್ತು ಅಂಗುಲಗಳಾಗಿರಬೇಕಾದುದು ಅವಶ್ಯ.

ಛಾಯಾ-ಪ್ರಭಾ ವಿಭಾಜಕ ಪಟ್ಟಿಕಾ[ಬದಲಾಯಿಸಿ]

ಛಾಯಾ-ಪ್ರಭಾ ವಿಭಾಜಿಕ ಪಟ್ಟಿಕಾ ಎಂಬುದು ಛಾಯಾಪಕರ್ಶಣಾದರ್ಶ ಚಕ್ರದ ಮೇಲೆ ಕೆಲವು ರಸಾಯನಗಳ ಲೇಪನೆಯಿಂದ ಸೃಷ್ಟಿಸಲಾಗುವ ಪಟ್ಟಿಕಾ. ಈ ಲೇಪನದಿಂದ ನೇರಳಾತೀತ ಮತ್ತು ಅತಿಗೆಂಪು ಕಿರಣಗಳ ಸ್ಪೆಕ್ಟ್ರಮ್ ಕಾಣಲು ಸಿಗುತ್ತದೆ. ನೇರಳಾತೀತ ಕಿರಣಗಳು ಗಾಜಿನಲ್ಲಿ ಚಲಿಸಲು ಸಾಮಾನ್ಯವಾಗಿ ಸಾಧ್ಯವಿಲ್ಲದ ಕಾರಣದಿಂದಾಗಿ ಈ ಲೇಪನದ ಒಂದು ಕಡೆಯ ಭಾಗವನ್ನು ಕೆಲವು ರಸಾಯನದಿಂದ ಮಿಶ್ರಣ ಪಡಿಸಿ ಅನಂತರ ಲೇಪಿಸಲಾಗುತ್ತದೆ. ಹೀಗಾಗಿ ಈ ಎರಡೂ ಕಿರಣಗಳ ಸ್ಪೆಕ್ಟ್ರಮ್ ಗಳನ್ನು ನಾವು ಕಾಣಲು ಸಾಧ್ಯ.

ಮಾಡರ್ನ್ ಸ್ಪೆಕ್ಟ್ರೋಸ್ಕೋಪಿನ ಕೆಲವು ಮಾಹಿತಿ[ಬದಲಾಯಿಸಿ]

ಮಾಡರ್ನ್ ಸ್ಪೆಕ್ಟ್ರೋಸ್ಕೋಲಪ್ ಧ್ವಾಂತ ಪ್ರಮಾಪಕ ಯಂತ್ರದ ಇಂದಿನ ರೂಪ. ಇದನ್ನು ಧ್ವಾಂತಪ್ರಮಾಪಕ ಯಂತ್ರಕ್ಕೆ ಹೋಲಿಸಿದಾಗ, ಧ್ವಾಂತ ಪ್ರಮಾಪಕ ಯಂತ್ರವು ಇದಕ್ಕಿಂತ ಕ್ಲಿಷ್ಟವೆನಿಸುವುದು. ಈ ಸ್ಪೆಕ್ಟ್ರೋಸ್ಕೋಪಿನಲ್ಲಿ ಮೂರು ಭಾಗಗಳಿವೆ, ಅವು: ಕೋಳಿಮ್ಯಾಟರ್, ಪ್ರಿಸಮ್ ಮತ್ತು ಟೆಲೆಸ್ಕೋಪ್. ಕೋಲಿಮ್ಯಾಟರ್ ಎಂಬುದು ಕಿರಣಗಳನ್ನು ನಿಯಂತ್ರಿಸಿ ಕಳುಹಿಸಲು ಬಳಕೆಯಾಗುವ ಭಾಗ. ಇದು ಒಂದು ರಂದ್ರವೋ ಅಥವ ಭೂತಗನ್ನಡಿಯೋ ಆಗಿರಬಹುದು. ಪ್ರಿಸಮ್ ಎಂಬುದು ಬೆಳಕನ್ನು ಅದರ ಘಟಕ ವರ್ಣಗಳಾಗಿ ವಿಂಗಡಿಸಲು ಬಳಕೆಯಾಗುವ ಸಾಧನ. ಟೆಲೆಸ್ಕೋಪ್ ಎಂಬುದು ಸಾಮಾನ್ಯವಾದ ದೂರದರ್ಷಕ. ದೂರದಲ್ಲಿನ ಒಂದು ಮೂಲದಿಂದ ಬರುವ ಬೆಳಕು ಸ್ಪೆಕ್ಟ್ರೊಸ್ಕೋಪನ್ನು ಕೋಳಿಮ್ಯಾತರಿನ ಮೂಲಕ ಪ್ರವೇಶಿಸುತ್ತದೆ. ಈ ಬೆಳಕು ಪ್ರಿಸಮಿನ ಮೂಲಕ ಸಾಗಿ ಅದರ ಘಟಕ ವರ್ಣಗಳಾಗಿ ವಿಂಗಡಿಸಲ್ಪಡುತ್ತದೆ. ವಿಂಗಡಿಸಲ್ಪಟ್ಟ ಈ ವರ್ಣಗಳು ದೊರದರ್ಷಕದ ಸಹಾಯದಿಂದ ಅತಿವರ್ಣಿಸಿ ಕಾಣಲು ಸಿಗುತ್ತದೆ. ಮಾರ್ಡನ್ ಸ್ಪೆಕ್ಟ್ರೋಸ್ಕೋಪ್ ಸರಳವಾದಷ್ಟೇ ತನ್ನದೇ ಆದ ಸೀಮನಗಳನ್ನು ಹೊಂದಿದೆ. ಇದು ಕೇವಲ ಬೆಳಕನ್ನು ಮಾತ್ರ ಅಧ್ಯಯನ ಮಾಡಲು ಸಹಕರಿಸುತ್ತದೆ. ಆದರೆ ಧ್ವಾಂತಪ್ರಮಾಪಕ ಯಂತ್ರವು , ನೇರಳಾತೀತ , ಅತಿಗೆಂಪು ಮತ್ತು ಗೋಚರ ಬೆಳಕನ್ನು ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ.

ಎಚ್ಚರಿಕೆ[ಬದಲಾಯಿಸಿ]

ಈ ಯಂತ್ರಾಂಗಗಳಲ್ಲಿ ಕೆಲವುಗಳನ್ನು ಸ್ಪರ್ಷಿಸುವುದರಿಂದ ಮಾನವನ ಕೈಗೆ ಹಾನಿಯುಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಈ ಚಕ್ರಗಳನ್ನು ತಿರುಗಿಸಲೆಂದು ಕೆಲವು ದಂಡ(ಸ್ಥಂಭ/ ಕಂಬಗಳನ್ನು) ಮೇರುಸ್ಥಂಭದ ಎರಡು ಬದಿಗಳಲ್ಲಿ ಇರಿಸಿ ಅವುಗಳಲ್ಲಿ ರಾಟೆಯ ಮುಖಾಂತರವಾಗಿ ಸಧೃಡವಾದ ದಾರವನ್ನು ಸಾಗಿಸಿ, ಪ್ರತಿಯೊಂದು ಚಕ್ರಕ್ಕೂ ಸೇರಿಸಲಾಗಿದೆ. ಈ ವ್ಯವಸ್ಥೆಯ ಸಹಾಯದಿಂದ ನಾವು ಈ ಚಕ್ರಗಳನ್ನು ಸ್ಪರ್ಷಿಸದೆಯೇ ತಿರುಗಿಸಬಹುದು.

ಸಮಾರೋಪ[ಬದಲಾಯಿಸಿ]

ಈ ಯಂತ್ರವು ವಾರನಾಸಿಯಲ್ಲಿರುವ ಒಂದು ವಿಶ್ವವಿಧ್ಯಾಲಯದಲ್ಲಿ ಸ್ಥಾಪಿತವಾಗಿದೆ. ಈ ಯಂತ್ರವು ಕೆಲಸಮಾಡುವ ಸ್ಥಿತಿಯಲ್ಲೇ ಇರುವುದು ತಿಳಿದ ಕಾರಣದಿಂದಾಗಿ, ಭಾರತದಲ್ಲಿ ಸ್ಪೆಕ್ಟ್ರೋಸ್ಕೋಪಿ(spectroscopy) ವಿಷಯದಲ್ಲಿ ತಿಳುವಳಿಕೆ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಮಹರ್ಷಿ ಭರದ್ವಾಜರು ರಾಮಾಯಣ ಕಾಲದವರೆಂಬ ಕಾರಣದಿಂದಾಗಿ, ಅಂದಿನ ಭಾರತದವರಿಗೆ ಸ್ಪೆಕ್ಟ್ರೊಸ್ಕೋಪಿಯ ವಿಷಯಗಳಲ್ಲಿ ಸಾಕಷ್ಟು ಜ್ಞಾನವಿತ್ತೆಂದು ತೀರ್ಮಾನಿಸಬಹುದು.[೧]

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಸಂಪರ್ಕ[ಬದಲಾಯಿಸಿ]

www.insa.nic.in/writereaddata/UpLoadedFiles/IJHS/Vol29_4_6_NGDongre.pdf

nebula.wsimg.com/945b1ef8028c747c04ff1e8af999b179?AccessKeyId=91F7E06610F0753B0BB5&disposition=0&alloworigin=1

www.insa.nic.in/writereaddata/UpLoadedFiles/IJHS/Vol33_3_4_NGDongre.pdf

  1. [www.insa.nic.in/writereaddata/UpLoadedFiles/IJHS/Vol29_4_6_NGDongre.pdf/ಧ್ವಾಂತಪ್ರಮಾಪಕ ಯಂತ್ರ]