ವಿಷಯಕ್ಕೆ ಹೋಗು

ಧರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಧರೆ - ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ ೩ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹ, ಇದಲ್ಲದೆ, ಮಾನವರಿಗೆ ಈಗ ತಿಳಿದಿರುವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ - ಭೂಮಿ. ಅಷ್ಟೇ ಅಲ್ಲ, ಇದರ ಸಾಂದ್ರತೆಯೂ ಅತಿ ಹೆಚ್ಚು.


ಇತಿವೃತ್ತ[ಬದಲಾಯಿಸಿ] ವೈಜ್ಞಾನಿಕ ಅಧ್ಯಯನದ ಪ್ರಕಾರ ಭೂಮಿಯು ೪೬೦ಕೋಟಿ ವರ್ಷಗಳ ಹಿಂದೆ ರೂಪು ಗೊಂಡಿತು.[೧] ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ ಅದರ ಸ್ವಲ್ಪವೇ ನಂತರ, ಸುಮಾರು ೪೫೩ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು.

ಪರಿಚಯ[ಬದಲಾಯಿಸಿ] ಭೂಮಿಯ ಚಿಪ್ಪು ಹಲವು ಫಲಕಗಳಾಗಿ ಒಡೆದಿದೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಅತ್ತಿಂದಿತ್ತ ಅಸ್ತೆನೋ ಗೋಳದ ಮೇಲೆ ಚಲಿಸುತ್ತವೆ. ಭೂಮಿಯ ಒಳಭಾಗವು ಇನ್ನೂ ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಭೂಮಿಯ ಅತ್ಯಂತ ಮೇಲಿನ ಪದರ ಚಿಪ್ಪು. ಇದು ಸಿಲಿಕ -ಅಲ್ಯುಮಿನಿಯಂನಿಂದಾದ ಹೊರಪದರ,, ಸಿಲಿಕ-ಮೆಗ್ನೇಸಿಯಂನಿಂದಾದ ಕೆಳಪದರದಿಂದ ಕೂಡಿದೆ. ಖಂಡದ ಕೆಳಗೆ ಚಿಪ್ಪು ಹೆಚ್ಚು ಮಂದವಿದೆ. ಆದರೆ ಸಾಗರದಡಿಯಲ್ಲಿ ತೆಳುವಾಗಿದೆ. ಕವಚವು ಅರೆಘನಸ್ಥಿತಿಯಲ್ಲಿದೆ.ಬಹುತೇಕ ಎಲ್ಲ ಲೋಹಗಳ ಭಂಡಾರವಿದು. ಭೂಗರ್ಭವು ಕಬ್ಬಿಣ ಮತ್ತು ನಿಕ್ಕಲ್ ನಿಂದ ನಿರ್ಮಿತವಾಗಿದೆ. ಭೂಮಿಯ ಕಾಂತಕ್ಷೇತ್ರದ ನೆಲೆ ಇದು. ಜೀವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ. ಈ ಜೀವ ಸಂಕುಲಗಳು ಉಂಟುಮಾಡುವ ಪರಿಸರ ಅಸಮತೋಲನವು ಭೂಮಿಯ ಮೇಲ್ಮೈಯನ್ನು ಗಮನಾರ್ಹವಾಗಿ ಬದಲಾಯಿಸಿದೆ. ಮೇಲ್ಮೈನ ಸುಮಾರು ೭೧% ಭಾಗವು ಉಪ್ಪು ನೀರಿನ ಸಾಗರಗಳಿಂದ ಆವೃತವಾಗಿದೆ; ಉಳಿದ ಮೇಲ್ಮೈಯು ಭೂಖಂಡಗಳು ಮತ್ತು ದ್ವೀಪಗಳಿಂದ ಕೂಡಿದೆ. ಭೂಮಿ ಮತ್ತು ಅದರ ಸುತ್ತುಮುತ್ತಲಿನ ಅಂತರಿಕ್ಷದ ನಡುವೆ ಬಹಳಷ್ಟು ವಿನಿಮಯ ಕ್ರಿಯೆಗಳು ಜರಗುತ್ತವೆ. ಸ್ವಲ್ಪ ದೊಡ್ಡದೆಂದೇ ಹೇಳಬಹುದಾದ ಚಂದ್ರನ ಕಾರಣದಿಂದ ಸಾಗರಗಳಲ್ಲಿ ಉಬ್ಬರವಿಳಿತಗಳು ಉಂಟಾಗುತ್ತವೆ. ಹಲವಾರು ಕೋಟಿ ವರ್ಷಗಳ ಅವಧಿಯಲ್ಲಿ ಈ ಉಬ್ಬರವಿಳಿತಗಳು ಭೂಮಿಯ ಅಕ್ಷೀಯ ಪರಿಭ್ರಮಣ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸಿವೆ. ಭೂ ಇತಿಹಾಸದ ಮೊದಲ ಭಾಗದಲ್ಲಿ ಧೂಮಕೇತು ಅಪ್ಪಳಿಸಿದ್ದರಿಂದ ಸಾಗರಗಳು ಉದ್ಭವವಾದವು ಎಂಬುದು ಒಂದು ಸಿದ್ಧಾಂತ. ನಂತರದ ಕ್ಷುದ್ರಗ್ರಹಗಳ ತಾಡನೆಯಿಂದ ಮೇಲ್ಮೈ ಸಾಕಷ್ಬ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಉಂಟುಮಾಡಿರಬಹುದು. ಓರೆಗೊಂಡ ಭೂ ಕಕ್ಷೆ ದೀರ್ಘಾವಧಿ ಯಲ್ಲಿ [:en:Milankovitch cycle ಭೂ ಮೇಲ್ಮೈನ ಬಹಳಷ್ಟು ಭಾಗಗಳನ್ನು ಹಿಮದಲ್ಲಿ ಹೊದಿಸಿದ ಹಿಮಯುಗಗಳಿಗೂ ಕಾರಣವಾಗಿದ್ದಿರಬಹುದು.

"https://kn.wikipedia.org/w/index.php?title=ಧರೆ&oldid=1153531" ಇಂದ ಪಡೆಯಲ್ಪಟ್ಟಿದೆ