ಧಂತೋಲಿ
ಧಂತೋಲಿ ( ಮರಾಠಿ : धंतोली) ನಗರವು ಮಹಾರಾಷ್ಟ್ರದ ನಾಗಪುರದಲ್ಲಿದೆ. [೧] ಇದು ಜನನಿಬಿಡ ಪ್ರದೇಶವಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಆಸ್ಪತ್ರೆಗಳು ಮತ್ತು ಇತರ ಸಂಸ್ಥೆಗಳಿವೆ. ಆರಂಭದಲ್ಲಿ ಧಂತೋಲಿಯು ನಾಗಪುರದ ರಾಜ ಮತ್ತು ಮರಾಠಿ ಬ್ರಾಹ್ಮಣರು ಯುದ್ಧದಲ್ಲಿ ಗೆದ್ದು ತಂದ ಸಂಪತ್ತನ್ನು ಶೇಖರಿಸಿ ಇಡುವ ಸ್ಥಳವಾಗಿತ್ತು. ನಂತರ 1950 ರ ದಶಕದಲ್ಲಿ ಅನೇಕ ಬಂಗಾಳಿ ಮತ್ತು ಮೈಥಿಲಿ ಬ್ರಾಹ್ಮಣರು ಇಲ್ಲಿಗೆ ಬಂದು ನೆಲೆಸಿದ್ದರಿಂದ ಇದು ನಾಗಪುರದ ಪ್ರಸಿದ್ಧ ರಾಮಕೃಷ್ಣ ಮಿಷನ್ ಮತ್ತು ಕಾಳಿ ದೇವಸ್ಥಾನಕ್ಕೆ ನೆಲೆಯಾಯಿತು. ಈ ನಗರದಲ್ಲಿ ವೀರಯೋಧ ಮೇಜರ್ ಸುರೇಂದರ್ ದೇವ್ ಪಾರ್ಕ್ ಬಳಿಯಲ್ಲಿ ಪ್ರಸಿದ್ಧ ಸಾಯಿ ಬಾಬಾ ದೇವಸ್ಥಾನವಿದೆ. ಈ ಪ್ರದೇಶವನ್ನು ನಗರದ ಅತ್ಯುತ್ತಮ ವಸತಿ ಪ್ರದೇಶವೆಂದು ಪರಿಗಣಿಸಲಾಗಿದೆ. [೨]
ವ್ಯಾಪಾರ ಕೇಂದ್ರ
[ಬದಲಾಯಿಸಿ]ಧಂತೋಲಿಯು ನಾಗ್ಪುರದ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿದ್ದು, ಇದನ್ನು ಹಿಂದೆ ಒಂದು ಉತ್ತಮ ವಸತಿಯೋಗ್ಯ ನಗರವೆಂದು ಪರಿಗಣಿಸಲಾಗಿತ್ತು. [೧] ಈ ಪ್ರದೇಶವು ಹಲವಾರು ಯಶಸ್ವಿ ವ್ಯಾಪಾರಿಗಳು, ಬೃಹತ್ ವ್ಯವಹಾರಗಳನ್ನು ನಡೆಸುವವರು, ವೃತ್ತಿಪರರು ಮತ್ತು ಕಲಾವಿದರಿಗೆ ನೆಲೆಯಾಗಿದೆ. ವಿಕ್ರಮ ಪಂಡಿತ್ , ಸಿಟಿಗ್ರೂಪ್ ನ ಮಾಜಿ ಸಿಇಒ; ವಿ ಆರ್ ಮನೋಹರ್, ಭಾರತದ ಪ್ರಮುಖ ವಕೀಲ ಮತ್ತು ಮಹಾರಾಷ್ಟ್ರದ ಮಾಜಿ ಅಡ್ವೋಕೇಟ್ ಜನರಲ್, ಶಶಾಂಕ್ ಮನೋಹರ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾಜಿ ಅಧ್ಯಕ್ಷರು, ಪಿಯೂಷ್ ಶರ್ಮಾ (ಈಗಿನ ಹೆಸರು ನಿಕೋಸ್ ನಾರ್ಕಿಸೋಸ್) ಮಾಜಿ ಮಾಡೆಲ್, ಈಗ ಏಸ್ ಫ್ಯಾಷನ್ ಮತ್ತು ದೇಹದಾರ್ಢ್ಯ ಛಾಯಾಗ್ರಾಹಕ, ಇವರುಗಳು ಇದೇ ಪ್ರದೇಶದಿಂದ ಬಂದವರು. [೩] ಲೋಕಮತ್ ಮತ್ತು ಹಿತವಾದವು ಧಂತೋಲಿಯಲ್ಲಿ ಪ್ರಕಟವಾಗುವ ಪ್ರಖ್ಯಾತ ದಿನಪತ್ರಿಕೆಗಳು. ಯಶವಂತ ಕ್ರೀಡಾಂಗಣದ ಬಳಿಯ ಪ್ರಸಿದ್ಧ ನಾಗಪುರ ಪಾವ್-ಭಾಜಿ ಧಂತೋಲಿಯದು.
ಕ್ರೀಡೆ ಮತ್ತು ಮನರಂಜನೆ
[ಬದಲಾಯಿಸಿ]ನಾಗ್ಪುರದ ಅತ್ಯಂತ ಹಳೆಯ ಕ್ರೀಡಾಂಗಣಗಳಲ್ಲಿ ಒಂದಾದ ಯಶವಂತ ಕ್ರೀಡಾಂಗಣವು ಧಂತೋಲಿಯ ನಾಗ್ ನದಿಯ ಎದುರಿಗೆ ಇದೆ. ಕ್ರೀಡಾಂಗಣವನ್ನು ಹೆಚ್ಚಾಗಿ ಬಳಸುತ್ತಿಲ್ಲದ ಕಾರಣ ಇದನ್ನು ಸ್ಥಳೀಯರು ಬಳಸುವ ಬೀದಿ ಮಾರುಕಟ್ಟೆ ಕೇಂದ್ರವಾಗಿ ನೋಡಲಾಗುತ್ತಿದೆ. ಆದ್ದರಿಂದ ಇದನ್ನು[೪] ನವೀಕರಿಸುವ ಅಗತ್ಯವಿದೆ. ಪಟವರ್ಧನ್ ಮೈದಾನವು ಈ ಪ್ರದೇಶದ ಮತ್ತೊಂದು ಮನರಂಜನಾ ವಲಯವಾಗಿದ್ದು ಲಲಿತ ಕಲೆಗಳ ಪ್ರದರ್ಶನ ಮತ್ತು ಸರ್ಕಸ್‌ನಂತಹ ಚಟುವಟಿಕೆಗಳನ್ನು ಆಯೋಜಿಸಲು ಜನಪ್ರಿಯ ಸ್ಥಳವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Dhantoli India Tourist Information. Touristlink.com.
- ↑ "17 more hospitals to come up in Dhantoli". The Times of India. 19 January 2013. Archived from the original on 22 October 2013. Retrieved 27 April 2013.
- ↑ Dhantoli India Tourist Information. Touristlink.com.
- ↑ Yeshwant Stadium – Nagpur. Wikimapia.org.