ದ ಟೊರಾಂಟೋ ಸಬ್ವೇ ಅಂಡ್ RT

ಕೆನಡಾ ರಾಷ್ಟ್ರದ ಆಂಟೇರಿಯೋ ಪ್ರಾಂತ್ಯದ ಟೊರಾಂಟೋ ನಗರದ ಟ್ರಾನ್ಸಿಟ್ ರಾಪಿಡ್ ಸಿಸ್ಟೆಮ್ ಅಂಡರ್ ಗ್ರೌಂಡ್ ಹಾಗೂ 'ಭೂಮಿಯ ಮೇಲ್ಭಾಗದ ರೈಲ್ವೆ ಲೈನ್ ವ್ಯವಸ್ಥೆ' ಯಿದೆ. ಇದನ್ನು ಸುವ್ಯವಸ್ಥಿತವಾಗಿ 'ಟೊರಾಂಟೋ ಟ್ರಾನ್ಸಿಟ್ ಕಮೀಶನ್' (TTC) ಸಂಸ್ಥೆ [೧] ನಿಭಾಯಿಸುತ್ತಿದೆ. ಸನ್ ೧೯೫೪ ರಲ್ಲಿ ೧೨ ಸ್ಟೇಷನ್ ಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಶುರುವಾದ ಈ ವ್ಯವಸ್ಥೆ, ಮೊಟ್ಟ ಮೊದಲ ರೈಲ್ವೆ ದಾರಿಯನ್ನು ಯಾಂಗ್ ಸ್ಟ್ರೀಟ್ ಬಳಿ ನಿರ್ಮಿಸಿತು. ಇದು ಕೆನಡಾದಲ್ಲೇ ಮೊಟ್ಟಮೊದಲನೆಯದಾಗಿ ಕಟ್ಟಿ ಯಶಸ್ವಿಯಾಗಿ ಮುಗಿಸಿದ ಸಬ್ವೇ ಸಾರಿಗೆ ಮಾಧ್ಯಮ. ಆಗಲಿಂದ ಈ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆದು, ಕೆನಡದಾದ್ಯಂತ ಸಾರ್ವಜನಿಕರ ಅಗತ್ಯಗಳನ್ನು ಮುಟ್ಟುವ ನಿಟ್ಟಿನಲ್ಲಿ ದುಡಿಯುತ್ತಿದೆ. ಮಾಂಟ್ರಿಯಲ್ ಮೆಟ್ರೋ ನಂತರ ದಿನ ಪ್ರತಿ ಓಡಾಡುವ ಪ್ರಯಾಣಿಕರ ಸಂಖ್ಯೆಯನ್ನು ಹೋಲಿಸಿದರೆ, ೪ ಲೈನ್ ೬೯ ನಿಲ್ದಾಣಗಳು, ಸುಮಾರು ೭೦ ಕಿ.ಮೀ(೪೩ ಮೈ) ಉದ್ದದ ರೈಲ್ವೆ ದಾರಿಯಲ್ಲಿ. ಸಬ್ವೇ ಅತ್ಯಂತ ಸುಲಭದರದ ಅತಿ ಜನಪ್ರಿಯ ಸಾಧನವಾಗಿದೆ. ಸರಾಸರಿ, ೧,೦೫೪,೨೦೦ ಪ್ರಯಾಣಿಕರು, (as of Q4 2011)/೨೦೧೧) ದಿನ ಪ್ರತಿ ಈ ಮಾಧ್ಯಮವನ್ನು ಅವಲಂಭಿಸಿದ್ದಾರೆ.
ಕ್ಷಿಪ್ರ ಸಂಚಾರ
[ಬದಲಾಯಿಸಿ]'ಟಿಟಿಸಿ' ಕೆಲವುವೇಳೆ 'ರ‍್ಯಾಪಿಡ್ ಟ್ರಾನ್ಸಿಟ್' ಎಂಬ ಪದವನ್ನು ಬಳಸುತ್ತದೆ. ಎಲ್ಲಾ ೪ ಲೈನ್ ಗಳ ಬಳಕೆ ಇದೆ ಎನ್ನುವ ಅರ್ಥದಲ್ಲಿ. Scarborough RT ಯನ್ನು ಬಿಟ್ಟು, ಸಾರ್ವಜನಿಕರು ಇದನ್ನು ಸಬ್ವೇ ಎಂದೇ ಸಂಬೋಧಿಸುತ್ತಾರೆ. ಕೆಲವುವೇಳೆ 'ಆರ್ ಟಿ' ಎಂದು ಮಾತ್ರ ಕರೆಯಲಾಗುತ್ತದೆ.
ಹೊಸದಾಗಿ ಹೆಚ್ಚಿಸಬೇಕಾದ ರೈಲ್ವೆ ಮಾರ್ಗ
[ಬದಲಾಯಿಸಿ]ಈಗ ಸದ್ಯಕ್ಕೆ ಹೊಸದಾಗಿ ಹೆಚ್ಚಿಸಬೇಕಾದ 'ಸಬ್ವೇ ಮಾರ್ಗ'ವೆಂದರೆ, ಪಶ್ಚಿಮ ಶಾಖೆ 'ಯಾಂಗ್ ಯೂನಿವರ್ಸಿಟಿ-ಸ್ಪಡೈನ ಲೈನ್' ಉತ್ತರ ಟೊರಾಂಟೋ ಎಗ್ಲಿನ್ಟನ್ ಅವೆನ್ಯು ನಿಂದ ಹೊಸಮಾರ್ಗ, ಅದನ್ನು ಶೆಪರ್ಡ್ ಲೈನ್ ಗೆ ಈಗಿನ ಟರ್ಮಿನಲ್ ನಿಂದ ಎರಡೂಕಡೆಗೆ ವಿಸ್ತರಿಸುವ ಯೋಜನೆಇದೆ.
ಉಲ್ಲೇಖಗಳು
[ಬದಲಾಯಿಸಿ]Subway and RT system map | |
---|---|
![]() |