ದ ಟೊರಾಂಟೋ ಸಬ್ವೇ ಅಂಡ್ RT

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯೂಸಿಯಮ್ ಸಬ್ವೇ ನಿಲ್ದಾಣ
ಮ್ಯೂಸಿಯಮ್ ಸಬ್ವೇ ನಿಲ್ದಾಣ

ಕೆನಡಾ ರಾಷ್ಟ್ರದ ಆಂಟೇರಿಯೋ ಪ್ರಾಂತ್ಯದ ಟೊರಾಂಟೋ ನಗರದ ಟ್ರಾನ್ಸಿಟ್ ರಾಪಿಡ್ ಸಿಸ್ಟೆಮ್ ಅಂಡರ್ ಗ್ರೌಂಡ್ ಹಾಗೂ 'ಭೂಮಿಯ ಮೇಲ್ಭಾಗದ ರೈಲ್ವೆ ಲೈನ್ ವ್ಯವಸ್ಥೆ' ಯಿದೆ. ಇದನ್ನು ಸುವ್ಯವಸ್ಥಿತವಾಗಿ 'ಟೊರಾಂಟೋ ಟ್ರಾನ್ಸಿಟ್ ಕಮೀಶನ್' (TTC) ಸಂಸ್ಥೆ [೧] ನಿಭಾಯಿಸುತ್ತಿದೆ. ಸನ್ ೧೯೫೪ ರಲ್ಲಿ ೧೨ ಸ್ಟೇಷನ್ ಗಳಿಗೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಶುರುವಾದ ಈ ವ್ಯವಸ್ಥೆ, ಮೊಟ್ಟ ಮೊದಲ ರೈಲ್ವೆ ದಾರಿಯನ್ನು ಯಾಂಗ್ ಸ್ಟ್ರೀಟ್ ಬಳಿ ನಿರ್ಮಿಸಿತು. ಇದು ಕೆನಡಾದಲ್ಲೇ ಮೊಟ್ಟಮೊದಲನೆಯದಾಗಿ ಕಟ್ಟಿ ಯಶಸ್ವಿಯಾಗಿ ಮುಗಿಸಿದ ಸಬ್ವೇ ಸಾರಿಗೆ ಮಾಧ್ಯಮ. ಆಗಲಿಂದ ಈ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆದು, ಕೆನಡದಾದ್ಯಂತ ಸಾರ್ವಜನಿಕರ ಅಗತ್ಯಗಳನ್ನು ಮುಟ್ಟುವ ನಿಟ್ಟಿನಲ್ಲಿ ದುಡಿಯುತ್ತಿದೆ. ಮಾಂಟ್ರಿಯಲ್ ಮೆಟ್ರೋ ನಂತರ ದಿನ ಪ್ರತಿ ಓಡಾಡುವ ಪ್ರಯಾಣಿಕರ ಸಂಖ್ಯೆಯನ್ನು ಹೋಲಿಸಿದರೆ, ೪ ಲೈನ್ ೬೯ ನಿಲ್ದಾಣಗಳು, ಸುಮಾರು ೭೦ ಕಿ.ಮೀ(೪೩ ಮೈ) ಉದ್ದದ ರೈಲ್ವೆ ದಾರಿಯಲ್ಲಿ. ಸಬ್ವೇ ಅತ್ಯಂತ ಸುಲಭದರದ ಅತಿ ಜನಪ್ರಿಯ ಸಾಧನವಾಗಿದೆ. ಸರಾಸರಿ, ೧,೦೫೪,೨೦೦ ಪ್ರಯಾಣಿಕರು, (as of Q4 2011)/೨೦೧೧) ದಿನ ಪ್ರತಿ ಈ ಮಾಧ್ಯಮವನ್ನು ಅವಲಂಭಿಸಿದ್ದಾರೆ.

ಚಿತ್ರ:Tramsit .jpg
'ಕೆನಡಾದ ಅತ್ಯುತ್ತಮ ಸಬ್ವೇ ಸೇವೆ'

ಕ್ಷಿಪ್ರ ಸಂಚಾರ[ಬದಲಾಯಿಸಿ]

'ಟಿಟಿಸಿ' ಕೆಲವುವೇಳೆ 'ರ‍್ಯಾಪಿಡ್ ಟ್ರಾನ್ಸಿಟ್' ಎಂಬ ಪದವನ್ನು ಬಳಸುತ್ತದೆ. ಎಲ್ಲಾ ೪ ಲೈನ್ ಗಳ ಬಳಕೆ ಇದೆ ಎನ್ನುವ ಅರ್ಥದಲ್ಲಿ. Scarborough RT ಯನ್ನು ಬಿಟ್ಟು, ಸಾರ್ವಜನಿಕರು ಇದನ್ನು ಸಬ್ವೇ ಎಂದೇ ಸಂಬೋಧಿಸುತ್ತಾರೆ. ಕೆಲವುವೇಳೆ 'ಆರ್ ಟಿ' ಎಂದು ಮಾತ್ರ ಕರೆಯಲಾಗುತ್ತದೆ.

ಹೊಸದಾಗಿ ಹೆಚ್ಚಿಸಬೇಕಾದ ರೈಲ್ವೆ ಮಾರ್ಗ[ಬದಲಾಯಿಸಿ]

ಈಗ ಸದ್ಯಕ್ಕೆ ಹೊಸದಾಗಿ ಹೆಚ್ಚಿಸಬೇಕಾದ 'ಸಬ್ವೇ ಮಾರ್ಗ'ವೆಂದರೆ, ಪಶ್ಚಿಮ ಶಾಖೆ 'ಯಾಂಗ್ ಯೂನಿವರ್ಸಿಟಿ-ಸ್ಪಡೈನ ಲೈನ್' ಉತ್ತರ ಟೊರಾಂಟೋ ಎಗ್ಲಿನ್ಟನ್ ಅವೆನ್ಯು ನಿಂದ ಹೊಸಮಾರ್ಗ, ಅದನ್ನು ಶೆಪರ್ಡ್ ಲೈನ್ ಗೆ ಈಗಿನ ಟರ್ಮಿನಲ್ ನಿಂದ ಎರಡೂಕಡೆಗೆ ವಿಸ್ತರಿಸುವ ಯೋಜನೆಇದೆ.

ಉಲ್ಲೇಖಗಳು[ಬದಲಾಯಿಸಿ]

  1. Toronto Transit Commission (TTC)
Subway and RT system map
A map of the Toronto Subway/RT network.
A map of the Toronto Subway/RT network.