ದ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಮುಂಬಯಿ
ಧ್ಯೇಯ | It is good to seek out the causes of things |
---|---|
ಪ್ರಕಾರ | ಸಂಶೋಧನೆ ಶಿಕ್ಷಣ ಸಂಸ್ಥೆ |
ಸ್ಥಾಪನೆ | ೧೯೨೦ |
ಸ್ಥಳ | ಮುಂಬಯಿ, ಮಹಾರಾಷ್ಟ್ರ, India |
ಆವರಣ | Urban |
ಜಾಲತಾಣ | http://iscmumbai.org.in/page/1 |
ದ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, (The Institute Of Science) [೧] ವಿದ್ಯಾ ಸಂಸ್ಥೆಯನ್ನು ಬ್ರಿಟಿಷ್ ಸರ್ಕಾರದವರು, ಹೆಮ್ಮೆಯಿಂದ ಮುಂಬಯಿನ ನಾಗರಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೋಟೆಪ್ರದೇಶದಲ್ಲಿ ಸ್ಥಾಪಿಸಿದರು. ಈ ಪ್ರತಿಶ್ಠಿತ ಶಿಕ್ಷಣಸಂಸ್ಥೆಯನ್ನು ಜಾರ್ಜ್ ವಿಟೆಟ್ ರವರು ವಿನ್ಯಾಸಮಾಡಿ ನಿರ್ಮಿಸಿದರು. ಆಗಿನ ಬೊಂಬಾಯಿನಗರದ ಗವರ್ನರ್ ಬ್ಯಾರನ್ ಸಿಡ್ನ್ ಹ್ಯಾಮ್ ರವರು ಸ್ಥಾಪಿಸಿದರು. ಭಾರತದಲ್ಲಿ ಆಗ ಈ ಮಟ್ಟದ ಶಿಕ್ಷಣಸಂಸ್ಥೆಗಳು ಹೆಚ್ಚಾಗಿರಲಿಲ್ಲ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ಶ್ರೀ ಜೆ.ಎನ್.ಟಾಟ ರವರ ಬಿಡುಗೈ ದಾನದವತಿಯಿಂದ ಆಗತಾನೇ ಪ್ರಾರಂಭವಾಗಿತ್ತು. 'ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್' ಕಟ್ಟಡ ನಿರ್ಮಾಣದ ಕಾರ್ಯ, ೧೯೧೧ ರಲ್ಲಿ ಶುರುವಾಗಿ, ೧೯೨೦ ರಲ್ಲಿ ಮುಗಿಯಿತು. ಈ ಪ್ರತಿಷ್ಠಿತ ವಿದ್ಯಾಸಂಸ್ಥೆ, ಗಾಥಿಕ್ ಶೈಲಿಯ ರಾಜಾಬಾಯಿ ಗೋಪುರ, ಹಾಗೂ ಎಲ್ಫಿನ್ ಸ್ಟನ್ ಕಾಲೇಜ್ ಕಟ್ಟಡಗಳ ರೀತಿಯಲ್ಲೇ ಕಟ್ಟಿದ್ದು, ಇವೆರಡು ಕಟ್ಟಡಗಳಿಗೂ ತೀರ ಹತ್ತಿರದಲ್ಲಿದೆ. ಮಹಾರಾಷ್ಟ್ರದ ಥಾಣೆ ಯ ಬಳಿಸಿಕ್ಕುವ ಹಳದಿಬಣ್ಣದ ಖೊರಾಡಿ ಬಾಸಾಲ್ಟ್ ಕಲ್ಲಿನಿಂದ , ನವಿರಾದ ಕೆತ್ತನೆಕೆಲಸಗಳನ್ನು, ಫ್ಯಾಕೇಡ್‍ಗಳನ್ನು, ಹಾಗೂ ಪ್ರಮುಖ ಗುಮ್ಮಟವನ್ನೂ ನಿರ್ಮಿಸಿದ್ದಾರೆ. ಕಟ್ಟಡಕ್ಕೆ ಎರಡು ವಿಭಾಗಗಳಿವೆ.
ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಕಟ್ಟಡ ವಿನ್ಯಾಸ
[ಬದಲಾಯಿಸಿ]ಫ್ಯಾಕೇಡ್‍ಗಳನ್ನು ನೇರವಾಗಿ ಒಂದು ಸರಳವಾದ ಮಧ್ಯದಲ್ಲಿ ನಿರ್ಮಿಸಿದ ಗುಮ್ಮಟ, (ಕಟ್ಟಡದ ಮುಂಭಾಗ) ವನ್ನು ಕವಾಸ್ ಜಿ ಜೆಹಾಂಗೀರ್ ಹಾಲ್ ಗೆ ಸೇರಿಸುತ್ತದೆ. ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ಭವನವನ್ನು ಈಗಾಗಲೇ ಆ ಪ್ರದೇಶದಲ್ಲಿ ನಿರ್ಮಿಸಿರುವ ೧೯ ನೆಯ ಶತಮಾನದ ಹಲವು ಕಟ್ಟಡಗಳ ಜೊತೆಯಲ್ಲಿ ಸೊಗಸಾಗಿ ಕಾಣುವರೀತಿಯಲ್ಲಿ, ಕಟ್ಟಡದ ಮುಂಭಾಗದಲ್ಲಿ ಬಟಾನಿಕಲ್ ಗಾರ್ಡನ್ನ್ನು ಅತಿ ಎಚ್ಚರಿಕೆಯಿಂದ, ಸಿಕ್ಕ ಪುಟಾಣಿ ಜಾಗದಲ್ಲೇ ವಿಸ್ತರಿಸಿದ್ದಾರೆ. ಪ್ರಮುಖ ರಸ್ತೆಯೊಂದು ಸಂಸ್ಥೆಯ ಮುಂದೆ ಬರುವುದರಿಂದ, (many-arched facades are a botanical garden), ಅತಿ ಎಚ್ಚರಿಕೆಯಿಂದ ಹಚ್ಚ-ಹಸುರಿನ ಹುಲ್ಲುಬೆಳೆಸಿದ ಸ್ಥಳವಿದೆ. ಕಟ್ಟಡ ನಿರ್ಮಾಣಕ್ಕೆ ಒಟ್ಟು ನಾಲ್ಕು ಕಡೆಯಿಂದ ದೇಣಿಗೆಗಳು ಬಂದವು. ಸರ್. ಕವಾಸ್ ಜಿ ಜೆಹಾಂಗೀರ್ರವರು ಪೂರ್ವ ಪಾರ್ಶ್ವದ ನಿರ್ಮಾಣಕ್ಕೆ,ಅತಿಹೆಚ್ಚು ಹಣವನ್ನು ದಾನಮಾಡಿದರು. ಪಶ್ಚಿಮ ಹಾಗೂ ಪೂರ್ವ ವಿಭಾಗಗಳಿಗೆ, ಆಗಿನಕಾಲದ ಪ್ರಖ್ಯಾತ ಉದ್ಯೋಗಪತಿಗಳಾಗಿದ್ದ, ಜ್ಯಾಕೊಬ್ ಸಸೂನ್ ರವರೂ, ಹಾಗೂಕರೀಮ್ ಭಾಯ್ ಇಬ್ರಾಹಿಮ್ ರವರೂ ಧನಸಹಾಯಮಾಡಿದರು. ಇನ್ಸ್ಟಿಟ್ಯೂಟ್‍ನ ಪುಸ್ತಕಭಂಡಾರ, ವಾಸನ್ ಜಿ ಮೂಲ್ಜಿ ಯವರು ದಾನಮಾಡಿದ ಹಣದಿಂದ ಸಂಪನ್ನವಾಯಿತು. ಈಗ ಮುಂಬಯಿ ವಿಶ್ವವಿದ್ಯಾಲಯದ ಭಾಗವಾಗಿರುವ ಸಂಶೋಧನಾ ವಿಂಗ್,ಆಗಿರುವ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಪರಿಸರ-ವಿಜ್ಞಾನವನ್ನು ಕುರಿತಾದ ಶಿಕ್ಷಣಾಭ್ಯಾಸಕ್ಕೆ ಹೆಸರುವಾಸಿಯಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Official Website of Institute of Science Archived 2006-06-14 ವೇಬ್ಯಾಕ್ ಮೆಷಿನ್ ನಲ್ಲಿ.
- supplementary official website of The Institute of Science, Mumbai showing latest developments at The Institute Archived 2009-09-05 ವೇಬ್ಯಾಕ್ ಮೆಷಿನ್ ನಲ್ಲಿ.
- Information about Institute of Science
ಉಲ್ಲೇಖಗಳು
[ಬದಲಾಯಿಸಿ]- ↑ "Government of Maharashtra The Institute Of Science Royal Institute of Science". Archived from the original on 2014-12-23. Retrieved 2015-02-13.