ವಿಷಯಕ್ಕೆ ಹೋಗು

ಕರಗುವ ತಾಪಮಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದ್ರವನ ಬಿಂದು ಇಂದ ಪುನರ್ನಿರ್ದೇಶಿತ)
Melting points (in blue) and boiling points (in pink) of the first eight carboxylic acids (°C)

ಕರಗುವ ತಾಪಮಾನ (melting point)ಎಂದರೆ ಒಂದು ಘನ ವಸ್ತುವು ತನ್ನ ಸ್ಥಿತಿಯನ್ನು ಬದಲಿಸಿ ದ್ರವರೂಪಕ್ಕೆ ತಿರುಗಲು ಬೇಕಾಗುವ ತಾಪಮಾನ.ಈ ತಾಪಮಾನದಲ್ಲಿ ವಸ್ತುವಿನ ಘನ ಮತ್ತು ದ್ರವರೂಪಗಳು ಸಮತೋಲನದಲ್ಲಿರುತ್ತವೆ.ಕರಗುವ ತಾಪಮಾನವು ಒತ್ತಡವನ್ನು ಅನುಸರಿಸಿರುತ್ತದೆ.ಆದುದರಿಂದ ಕರಗುವ ತಾಪಮಾನವನ್ನು ಸೂಚಿಸುವಾಗ ಪ್ರಮಾಣೀಕೃತ ಉಷ್ಣಾಂಶವನ್ನು ಪರಿಗಣಿಸುತ್ತಾರೆ.ಇದರ ವಿರುದ್ಧ ಕ್ರಿಯೆ ಎಂದರೆ ವಸ್ತುವು ದ್ರವರೂಪದಿಂದ ಘನರೂಪಕ್ಕೆ ತಿರುಗುವ ತಾಪಮಾನವನ್ನು ಸ್ಪಟಿಕೀಕರಣ ತಾಪಮಾನ ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ಹೆಚ್ಚಿನ ಘನವಸ್ತುಗಳ ಕರಗುವ ತಾಪಮಾನ ಮತ್ತು ಸ್ಪಟಿಕೀಕರಣ ತಾಪಮಾನ ಒಂದೇ ಆಗಿರುತ್ತದೆಯಾದರೂ ಕೆಲವು ವಸ್ತುಗಳಲ್ಲಿ ಇದು ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ ಪಾದರಸದ ಕರಗುವ ತಾಪಮಾನ ಮತ್ತು ಸ್ಪಟಿಕೀಕರಣ ತಾಪಮಾನ 234.32 ಕೆಲ್ವಿನ್ (−38.83 °Cಅಥವಾ −37.89 °F) ಆದರೆ ಅಗರ್ 85 °C (185 °F)ರಲ್ಲಿ ಕರಗಿದರೆ 31 °C to 40 °C (89.6 °F to 104 °F);ಉಷ್ಣತೆಯಲ್ಲಿ ಘನರೂಪಕ್ಕೆ ಬರುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]