ದ್ಯೌಷ್ಪಿತೃ
Jump to navigation
Jump to search
ದ್ಯೌಷ್ಪಿತೃ , ಅಕ್ಷರಶಃ "ಆಕಾಶ ಪಿತೃ" ವೈದಿಕ ದೇವತಾಸಂಗ್ರಹದ ಪ್ರಾಚೀನ ಕಾಲದ ಆಕಾಶ ದೇವತೆ ಮತ್ತು ಉಷೆ (ಪ್ರಾತಃಕಾಲ) ಹಾಗು ರಾತ್ರಿಯ ತಂದೆ. ಋಗ್ವೇದದಲ್ಲಿ, ದ್ಯೌಷ್ಪಿತೃ ಕೇವಲ ೧.೮೯.೪, ೧.೯೦.೭, ೧.೧೬೪.೩೩, ೧.೧೯೧.೬ ಮತ್ತು ೪.೧.೧೦ ಶ್ಲೋಕಗಳಲ್ಲಿ ಬರುತ್ತದೆ ಮತ್ತು ಕೇವಲ ೧.೮೯.೪ರಲ್ಲಿ ಪಿತರ್ ದ್ಯೌಷ್ ಮಾತಾ ಪೃಥ್ವಿ ಜೊತೆಗೆ ಬರುತ್ತದೆ. ಹಾಗಾಗಿ, ಋಗ್ವೇದ ಪುರಾಣದಲ್ಲಿ ಅವನು ಬಹಳ ಸಣ್ಣ ದೇವತೆ, ಆದರೆ ಮುಖ್ಯ ದೇವತೆಗಳ ತಂದೆಯಾಗಿರುವಲ್ಲಿ ಅವನ ನೈಜ ಪ್ರಾಮುಖ್ಯ ಕಾಣುತ್ತದೆ.