ವಿಷಯಕ್ಕೆ ಹೋಗು

ದೇವ ಸೂರ್ಯ ಮಂದಿರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವ ಸೂರ್ಯ ಮಂದಿರವು ಭಾರತದ ಬಿಹಾರ ರಾಜ್ಯದಲ್ಲಿರುವ ಒಂದು ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಸೂರ್ಯ ದೇಗುಲವಾಗಿದ್ದು ಛಠ್ ಪೂಜೆಗಾಗಿ ಸೂರ್ಯ ದೇವರಿಗೆ ಸಮರ್ಪಿತವಾಗಿದೆ. ಇದು ದೇವ್ ಪಟ್ಟಣದಲ್ಲಿ ಸ್ಥಿತವಾಗಿದೆ. ದೇವಾಲಯವು ವಿಶಿಷ್ಟವಾಗಿದೆ ಏಕೆಂದರೆ ಸಾಮಾನ್ಯವಾಗಿ ಉದಯವಾಗುವ ಸೂರ್ಯನನ್ನು ಎದುರಿಸುವ ಬದಲು ಅಸ್ತವಾಗುವ ಸೂರ್ಯನನ್ನು ಎದುರಿಸಿ ಪಶ್ಚಿಮ ದಿಕ್ಕನ್ನು ಎದುರಿಸುತ್ತದೆ.[೧] ಈ ದೇವಾಲಯವು ಛಠ್ ಪೂಜೆಯ ಹಬ್ಬ, ಆರ್ದ್ರಾ ನಕ್ಷತ್ರ ಮತ್ತು ಪ್ರತಿ ಭಾನುವಾರದಂದು ಭೇಟಿಕೊಡಲು ಬಹಳ ಮಂಗಳಕರವಾಗಿದೆಯೆಂದು ಪರಿಗಣಿತವಾಗಿದೆ ಎಂದು ವರದಿಯಾಗಿದೆ.[೨] ಛಠ್‍ಗೆ ಭೂಮಿಯ ಮೇಲಿರುವ ಅತ್ಯಂತ ಪವಿತ್ರ ಸ್ಥಳವೆಂದರೆ ದೇವ್. ಇಲ್ಲಿ ಸೂರ್ಯ ದೇವನು ಎಲ್ಲ ಭಕ್ತರ ವಚನಗಳನ್ನು ಈಡೇರಿಸುತ್ತಾನೆ.[೩]

ಈ ದೇವಾಲಯವು ನಾಗರ ವಾಸ್ತುಕಲೆ, ದ್ರಾವಿಡ ವಾಸ್ತುಕಲೆ ಮತ್ತು ವೇಸರ ವಾಸ್ತುಕಲೆಯ ಮಿಶ್ರಣವಾಗಿದೆ. ದೇವ ಸೂರ್ಯ ದೇವಾಲಯದ ಮೇಲೆ ಗುಮ್ಮಟ ಆಕಾರವನ್ನು ಕೆತ್ತಲಾಗಿದ್ದು ಬಹಳ ಸುಂದರವಾಗಿದೆ. ಗುಮ್ಮಟದ ಮೇಲೆ ಚಿನ್ನದ ಒಂದು ಕರಂಡವಿದ್ದು ಇದನ್ನು ಬಹಳ ದೂರದಿಂದ ಹೊಳೆಯುತ್ತಿರುವಂತೆ ಕಾಣಬಹುದು. ಇದು ದೇಗುಲವನ್ನು ಬಹಳ ಸುಂದರ ಮತ್ತು ಭವ್ಯವಾಗಿಸುತ್ತದೆ.[೪][೫]

ಉಲ್ಲೇಖಗಳು[ಬದಲಾಯಿಸಿ]