ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆ
ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆ | |
---|---|
Location | |
ಲೋಧಿ ಎಸ್ಟೇಟ್, ನವ ದೆಹಲಿ ನವ ದೆಹಲಿ, ಕರ್ನಾಟಕ, ಭಾರತ | |
Coordinates | 28°35′35″N 77°13′25″E / 28.593097°N 77.223526°E |
Information | |
ಬಗೆ | ದೆಹಲಿ ಸರಕಾರದ ಅನುದಾನಿತ ಸಂಸ್ಥೆ |
ಧ್ಯೇಯ | ಸತ್ಯಂ ಶಿವಂ ಸುಂದರಂ |
ಸ್ಥಾಪನೆ | ೧೯೬೧ |
Principal | ಪ್ರಶಾಂತ ಕುಮಾರ್ |
Campus | ಲೋಧಿ ಎಸ್ಟೇಟ್ |
Information | 011-24633391,011-24611360, dksdelhi@rediffmail.com |
Website | http://dkes.in/ |
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಏಕೈಕ ಕನ್ನಡದ ಶಾಲೆ ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆ. ಇದು ರಾಷ್ಡ್ರೀಯ ಭಾಷಾ ನೀತಿ ಅನುಸರಿಸಿ ತ್ರಿಭಾಷಾ ಸೂತ್ರವನ್ನು ಕಲಿಸುವ ಉದ್ದೇಶದಿಂದ ದೆಹಲಿ ಸರಕಾರದ ಸ್ವಾಮ್ಯ ಮತ್ತು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಸಹಯೋಗದಿಂದ ನಡೆಸಲ್ಪಡುವ ಶಾಲೆ.
ದೆಹಲಿ ಕನ್ನಡ ಶಾಲೆಯ ಇತಿಹಾಸ
[ಬದಲಾಯಿಸಿ]ಈ ಶಾಲೆಯು ೧೯೬೧ರ[೧] ವಿಜಯದಶಮಿಯಂದು ೧೭ ವಿದ್ಯಾಥಿಗಳು ಮತ್ತು ನಾಲ್ವರು ಶಿಕ್ಷಕರೊಂದಿಗೆ ಪ್ರಾರಂಭವಾಯಿತು. ಅಂದಿನ ಪ್ರಮುಖರಾದ ಬಿ. ಎನ್. ದಾತರ್, ಡಿ. ಪಿ. ಕರ್ಮರ್ಕರ್, ಕೆ. ಸಿ. ರೆಡ್ಡಿ ಹಾಗೂ ಎಸ್. ನಿಜಲಿಂಗಪ್ಪ ಅವರ ಮುಂದಾಲೋಚನೆಯಲ್ಲಿ ಎಸ್. ವಿ. ಕೃಷ್ಣಮೂರ್ತಿ ರಾವ್ ಅವರು ಸ್ಥಾಪಿಸಿದರು. ಅಂದಿನ ಮೈಸೂರು ಮಹಾರಾಜರ ದೇಣಿಗೆಯಿಂದ ಹಾಗೂ ಅಭಿಮಾನಿ ಕನ್ನಡಿಗರ ಸಹಕಾರದಿಂದ ದೆಹಲಿ ಕನ್ನಡ ಶಾಲೆಗೆ ಸ್ಥಳ ದೊರಕಿಸಿ ಶಾಲಾ ಕಟ್ಟಡ ನಿರ್ಮಿಸಲಾಯಿತು.
ಉದ್ದೇಶ
[ಬದಲಾಯಿಸಿ]ರಾಷ್ಟ್ರೀಯ ಭಾಷಾ ನೀತಿ ಅನುಸರಿಸಿ ತ್ರಿಭಾಷಾ[೨] ನೀತಿಯನ್ನು ಕನ್ನಡೇತರರಿಗೆ ಕಲಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಇದು ದೆಹಲಿ ಕನ್ನಡಿಗರ ಸಾಮಾಜಿಕ, ಸಾಂಸ್ಕೃತಿಕ ನೆಲೆಗಟ್ಟು ಭದ್ರಪಡಿಸಲು ಸಹಕಾರಿಯಾಗಿದೆ.
ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯ ಬಗ್ಗೆ
[ಬದಲಾಯಿಸಿ]- ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯು ಕನ್ನಡ ಹಾಗೂ ಕನ್ನಡೇತರರಿಗೆ ಶಿಕ್ಷಣ ನೀಡುತ್ತಿದೆ. ಇಲ್ಲಿ ೧ ರಿಂದ ೭ನೇ ತರಗಗತಿಯವರೆಗೆ ಕನ್ನಡ ಒಂದು ಕಡ್ಡಾಯ ಭಾಷೆಯಾಗಿದೆ. ಪ್ರಸ್ತುತ ಕಲಾ, ವಾಣಿಜ್ಯ, ವಿಜ್ಞಾನವನ್ನು ಪಿಯುಸಿ (+೨) ಮಟ್ಟದಲ್ಲಿ ಬೋಧಿಸಲಾಗುತ್ತಿದೆ ಉತ್ತರ ಭಾರತದ ಹೆಚ್ಚಿನ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಪ್ರಸ್ತುತ ಸಂಸ್ಥೆಯ ಪ್ರಾಂಶುಪಾಲರಾಗಿ ಶ್ರೀ ಪ್ರಶಾಂತ ಕುಮಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ೫೫ ಬೋಧಕ-ಬೋಧಕೇತರ ಸಿಬ್ಬಂದಿಗಳಿದ್ದಾರೆ ಮತ್ತು ಈ ಸಂಸ್ಥೆಯಲ್ಲಿ ೧೦೬೫ ವಿದ್ಯಾರ್ಥಿಗಳಿದ್ದಾರೆ. ಅಂದಾಜು ಶೇಕಡ ೨೦ರಷ್ಟು ಕನ್ನಡದ ವಿದ್ಯಾರ್ಥಿಗಳಿದ್ದಾರೆ.
ಸಂಸ್ಥೆಯಲ್ಲಿರುವ ವಿಭಾಗಗಳು
[ಬದಲಾಯಿಸಿ]ಸಂಸ್ಥೆಯಲ್ಲಿ ಒಟ್ಟು ಮೂರು ವಿಭಾಗಗಳಿವೆ.