ದೂಧ್ ಸಾಗರ್ ಜಲಪಾತ
ಗೋಚರ
ದೂದ್ ಸಾಗರ್ ಜಲಾಪಾತ | |
---|---|
ಸ್ಥಳ | ಗೋವಾ, ಭಾರತ |
ನಿರ್ದೇಶಾಂಕಗಳ | 15°18′46″N 74°18′51″E / 15.31277°N 74.31416°E |
ಒಟ್ಟು ಉದ್ದ | ೩೧೦ ಮೀ (೧೦೧೭ ಅಡಿ) |
ಒಟ್ಟು ಪ್ರಪಾತಗಳು | ೪ |
ಸೇರುವ ನದಿ | ಮಂಡೋವಿ |
ದೂಧ್ ಸಾಗರ ( ಹಾಲಿನ ಸಮುದ್ರ ) ಮಹಾದಾಯಿ ನದಿಯಿಂದ ಬೀಳುವ ನಾಲ್ಕು ಹಂತದ ಒಂದು ಜಲಪಾತ. ಇದು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿಯಲ್ಲಿ ಬರುತ್ತದೆ. ಇದು ಪಣಜಿಯಿಂದ ರಸ್ತೆ ಮಾರ್ಗವಾಗಿ ೬೦ ಕಿ.ಮೀ. ದೂರದಲ್ಲಿದೆ ಮತ್ತು ಮಡಗಾವ್-ಬೆಳಗಾವಿ ರೈಲುಮಾರ್ಗದಲ್ಲಿ ಮಡಗಾವಿನಿಂದ ೪೬ ಕಿ.ಮೀ. ಪೂರ್ವದಲ್ಲಿ ಮತ್ತು ಬೆಳಗಾವಿಯಿಂದ ೮೦ ಕಿ.ಮೀ. ದಕ್ಷಿಣಕ್ಕಿದೆ. ೩೧೦ ಮೀ (೧೦೧೭ ಅಡಿ) ಎತ್ತರದಿಂದ ಧುಮುಕುವ ದೂಧ್ ಸಾಗರ ಜಲಪಾತ, ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.[೧]
ಈ ಜಲಪಾತವು ಪಶ್ವಿಮ ಘಟ್ಟದ ಭಗವಾನ ಮಹಾವೀರ ಉದ್ಯಾನ ಮತ್ತು ಮೊಲ್ಲೆಮ್ ರಾಷ್ಟ್ರೀಯ ಉದ್ಯಾನದ ಹತ್ತಿರವಿದೆ. ಈ ಜಲಪಾತವು ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿಯನ್ನು ರೂಪಿಸುತ್ತವೆ. ಈ ಪ್ರದೇಶವು ದಟ್ಟ ಕಾಡಿನಿಂದ ಸುತ್ತುವರಿದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "World's highest waterfalls". World Waterfall Database. Archived from the original on 2011-06-11. Retrieved 2006-11-11.
Dudhsagar Falls ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.