ವಿಷಯಕ್ಕೆ ಹೋಗು

ದೀಪಾ ಶಶೀಂದ್ರನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೀಪಾ ಶಶೀಂದ್ರನ್

ದೀಪಾ ಶಶೀಂದ್ರನ್ ( ಮಲಯಾಳಂ; ಜನನ ೩ ಜುಲೈ ೧೯೭೪ ) ಒಬ್ಬ ಭಾರತೀಯ ಕಲಾವಿದೆ ಮತ್ತು ಕೂಚಿಪುಡಿ ತಜ್ಞೆ ಮಂಜು ಭಾರ್ಗವಿ ಅವರ ಶಿಷ್ಯೆ. ಇವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರದ ಕೂಚಿಪುಡಿಯ ಶಿಕ್ಷಕಿ, ನೃತ್ಯ ಸಂಯೋಜಕಿ, ಕಲಾ ಕ್ಯೂರೇಟರ್, ವಾಣಿಜ್ಯೋದ್ಯಮಿ ಮತ್ತು ಕೂಚಿಪುಡಿ ಪರಂಪರಾ ಫೌಂಡೇಶನ್ ಟ್ರಸ್ಟ್ ಬೆಂಗಳೂರು ಸಂಸ್ಥಾಪಕರಾಗಿದ್ದಾರೆ. [] [] [] [] [] []

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಶಶೀಂದ್ರನರವರು ತಮ್ಮ ೫ ನೇ ವಯಸ್ಸಿನಲ್ಲಿ ತಮ್ಮ ಗುರುಗಳಾದ ಕಲಾಮಂಡಲಂ ಉಷಾ ದಾತಾರ್ ಮತ್ತು ಡಾ. ಸಾವಿತ್ರಿ ರಾಮಯ್ಯ ಅವರ ಅಡಿಯಲ್ಲಿ ಭರತನಾಟ್ಯದ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಪ್ರಾರಂಭಿಸಿದರು. ಇವರು ೮ ನೇ ವಯಸ್ಸಿನಿಂದ, ಪ್ರಸಿದ್ಧ ಕೂಚಿಪುಡಿ ತಜ್ಞರಾದ ಶ್ರೀಮತಿ ಮಂಜು ಭಾರ್ಗವಿ ಅವರ ಬಳಿ ಕೂಚಿಪುಡಿ ನೃತ್ಯದ ಪ್ರಕಾರವನ್ನು ಕಲಿಯಲು ಪ್ರಾರಂಭಿಸಿದರು ಮತ್ತು ಮೂರು ದಶಕಗಳ ಕಾಲ ಅವರ ಬಳಿ ಅಧ್ಯಯನವನ್ನು ಮುಂದುವರೆಸಿದರು. ಅವರು ಮುಂದೆ ಗುರುವಾದ ವೆಂಪಟಿ ರವಿಶಂಕರ್ ಅವರ ಬಳಿ ಹೊಸ ಆವಿಷ್ಕಾರಗಳ ಬಗ್ಗೆ ತರಬೇತಿ ಪಡೆದರು. ಪ್ರಸ್ತುತ, ಶಶೀಂದ್ರನ್ ಅವರು ಬೆಂಗಳೂರಿನಲ್ಲಿ ಸ್ಥಾಪಿಸಿದ ಕೂಚಿಪುಡಿ ಪರಂಪರಾ ಫೌಂಡೇಶನ್ ಟ್ರಸ್ಟ್‌ನೊಂದಿಗೆ ಕಲಾ ಪ್ರಕಾರದ ಸೂಕ್ಷ್ಮ ವ್ಯತ್ಯಾಸಗಳನ್ನು ರಚಿಸುತ್ತಿದ್ದಾರೆ. [] []

ವೃತ್ತಿ

[ಬದಲಾಯಿಸಿ]

ಶಶೀಂದ್ರನ್ ಅವರು ಕೂಚಿಪುಡಿ ನೃತ್ಯ ಶೈಲಿಯಲ್ಲಿ ಬಹುಮುಖ ಕಲಾವಿದರಾಗಿದ್ದು, ಸುಮಾರು ನಾಲ್ಕು ದಶಕಗಳಿಂದ ಈ ಕಲಾ ಪ್ರಕಾರವನ್ನು ಅಭ್ಯಾಸ ಮಾಡಿದ್ದಾರೆ. ನೃತ್ಯ ತಂತ್ರಗಳು ಮತ್ತು ಏಕವ್ಯಕ್ತಿ ಪ್ರದರ್ಶನಗಳಿಗಾಗಿ ಅವರು ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವಳು ನೃತ್ಯ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಹೊಂದಿದ್ದಾರೆ ಮತ್ತು ಅನೇಕ ಪ್ರತಿಷ್ಠಿತ ಉತ್ಸವಗಳು ಮತ್ತು ಸಂದರ್ಭಗಳಲ್ಲಿ ತನ್ನ ಗುರುಗಳ ಜೊತೆಯಲ್ಲಿ ಪ್ರದರ್ಶನ ನೀಡಿದ್ದಾರೆ. [] ಕರ್ನಾಟಕ ಸರ್ಕಾರದ ಕೂಚಿಪುಡಿ ಪಠ್ಯಪುಸ್ತಕ ಸಮಿತಿಯು ಆಕೆಯ ನೃತ್ಯ ಚಿತ್ರಗಳನ್ನು ಆ ರಾಜ್ಯದ ಕೂಚಿಪುಡಿ ಪಠ್ಯ ಪುಸ್ತಕದಲ್ಲಿ ಅಳವಡಿಸಿದೆ. [೧೦] [೧೧]

ಉತ್ತರ ಅಮೆರಿಕಾದ ಮೊದಲ ಅಂತರರಾಷ್ಟ್ರೀಯ ಕೂಚಿಪುಡಿ ನೃತ್ಯ ಸಮ್ಮೇಳನವು ಹೂಸ್ಟನ್‌ನಲ್ಲಿ ನಡೆಯಿತು. ಇಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಲು ಶಶೀಂದ್ರನ್ ಅವರನ್ನು ಆಹ್ವಾನಿಸಲಾಯಿತು. ಅವರು ದೋಹಾ, ದುಬೈ ಮತ್ತು ಅಬುಧಾಬಿಯಲ್ಲಿ ಕಾರ್ಯಾಗಾರಗಳನ್ನು ಮತ್ತು ಪ್ರದರ್ಶನಗಳನ್ನು ನಡೆಸಿದ್ದಾರೆ. ಸಂಸ್ಕೃತಿ ಸಚಿವಾಲಯವು ಆಯೋಜಿಸಿದ ಬಹ್ರೇನ್‌ನಲ್ಲಿನ ಫೆಸ್ಟಿವಲ್ ಆಫ್ ಇಂಡಿಯಾ, ಶಶೀಂದ್ರನ್ ನೇತೃತ್ವದ ಮೇಳವನ್ನು ಪ್ರದರ್ಶನಕ್ಕೆ ಆಹ್ವಾನಿಸಿತು. [೧೨] [೧೩] [೧೪]

ಶಶೀಂದ್ರನ್ ಅವರು ಹಲವಾರು ಅಧಿಕೃತ ಏಕವ್ಯಕ್ತಿ ಸಂಗ್ರಹಗಳನ್ನು ಒಳಗೊಂಡಿರುವ ಮೂಲ ನೃತ್ಯ ಸಂಯೋಜನೆಯಿಂದ ಪ್ರಸಿದ್ಧರಾಗಿದ್ದರೆ. ಜೊತೆಗೆ ಶಿವಲೀಲಾ, ದಕ್ಷಯಜ್ಞಂ, ಜಯದೇವ ದಶಾವತಾರಮ್, ಅಗ್ನಿಜ್ಯೋತ್ಸ್ನ, ಪಂಚನಾಯಕರು, ಶ್ರೀ ವೆಂಕಟಾದ್ರಿ ವೈಭವಂ, ನಾಧಿ, ನಂದನಂ ಚರಿತಂ, ಇತ್ಯಾದಿಗಳನ್ನು ಸಂಯೋಜಿಸಿದ್ದಾರೆ. ಅವರು ಭಾರತ, ಯುರೋಪ್, ಯುಎಸ್ಎ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವಿದ್ಯಾರ್ಥಿಗಳಿಗೆ ನೃತ್ಯವನ್ನು ಕಲಿಸುತ್ತಾರೆ.

ಶಶೀಂದ್ರನ್ ಅವರು ನಾಟ್ಯವೇದಂ, ನಾಟ್ಯ ಪರಂಪರಾ ಉತ್ಸವ, ಗುರು ವಂದನಾ ಮತ್ತು ಆರ್ಟ್ ಕೆಫೆ ಸರಣಿಯಂತಹ ನವೀನ ನೃತ್ಯ ಉತ್ಸವಗಳನ್ನು ಆಯೋಜಿಸಲು ಸಹಾಯ ಮಾಡಿದ್ದಾರೆ. ಅವರು ಕಾರ್ಯಾಗಾರಗಳು, ಉಪನ್ಯಾಸಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು ಸಹಾಯ ಮಾಡಿದ್ದಾರೆ. [೧೫] [೧೬] [೧೭] [೧೮] [೧೯] [೨೦]

ಯುವರಂಗದಿಂದ ಕರ್ನಾಟಕದ ಅತ್ಯುತ್ತಮ ಕೂಚಿಪುಡಿ ಕಲಾವಿದೆ, ಕಟಕ್‌ನಲ್ಲಿ ನೃತ್ಯ ಶಿರೋಮಣಿ ರಾಷ್ಟ್ರೀಯ ಪ್ರಶಸ್ತಿ ಮತ್ತು ವಿಶಾಖಪಟ್ಟಣಂನಲ್ಲಿ ಕೂಚಿಪುಡಿ ನೃತ್ಯಗಾರ ಪದ್ಮಶ್ರೀ-ಶೋಭಾ ನಾಯ್ಡು ಅವರಿಂದ ಸತ್ಯಭಾಮಾ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಗಾರ್ಡನ್ ವಿಶ್ವವಿದ್ಯಾನಿಲಯವು ಅವರಿಗೆ ಅಂತರರಾಷ್ಟ್ರೀಯ ಮಹಿಳಾ ಸಾಧಕರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಮತ್ತು ಫಿಲಾಂತ್ರೊಪಿಕ್ ಸೊಸೈಟಿ ಆಫ್ ಇಂಡಿಯಾ ಮತ್ತು ನನ್ಮಾ ಕೇರಳದಿಂದ ಅವರನ್ನು ಗೌರವಿಸಲಾಗಿದೆ. ಇವರು ದೂರದರ್ಶನದ ಮಾನ್ಯತೆ ಪಡೆದ ಕಲಾವಿದೆ, ವಿದೇಶದಲ್ಲಿ ಭಾರತದ ಉತ್ಸವಗಳ ಎಂಪನೆಲ್ಡ್ ಕಲಾವಿದೆ, ಕರ್ನಾಟಕ ನೃತ್ಯಕಲಾಪರಿಷತ್‌ನ ಸಹ-ಆಯ್ಕೆ ಮಾಡಿದ ಸದಸ್ಯೆ, ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಹಂಗಾಮಿ ಅಧ್ಯಾಪಕ ಸದಸ್ಯೆ ಮತ್ತು ರೇವಾ ವಿಶ್ವವಿದ್ಯಾಲಯದಲ್ಲಿ ಪರೀಕ್ಷಕಿಯಾಗಿದ್ದಾರೆ. [೨೧] [೨೨] [೨೩]

ನೃತ್ಯದ ಹೊರತಾಗಿ, ಶಶೀಂದ್ರನ್ ಅವರು ಕೈಗಾರಿಕಾ ಸಂಬಂಧಗಳು ಮತ್ತು ವೈಯಕ್ತಿಕ ನಿರ್ವಹಣೆಯಲ್ಲಿ ಪಿಜಿಡಿ ಜೊತೆಗೆ ಕಾನೂನು ಪದವೀಧರರಾಗಿದ್ದಾರೆ, ಸಾಫ್ಟ್‌ವೇರ್ ಉದ್ಯಮದಲ್ಲಿ ಮಾನವ ಸಂಪನ್ಮೂಲ ತಜ್ಞರು ಮತ್ತು ಹ್ಯೂಮನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಸೇವೆಗಳಲ್ಲಿ ಉದ್ಯಮಿಯಾಗಿದ್ದಾರೆ. ಅವರು ಕರ್ಮ ಕ್ರಿಯೇಟರ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದರು, ಇದು ಪ್ರಸಿದ್ಧ ಸ್ಟಾರ್ಟ್‌ಅಪ್‌ಗಳು ಮತ್ತು ಪ್ರೈಸ್‌ವಾಟರ್‌ಹೌಸ್ ಕೂಪರ್ಸ್, ಸ್ಯಾಮ್‌ಸಂಗ್, ಎಂಐಎಸ್‌ಎಸ್, ಸುಬೆಕ್ಸ್, ಸಾಸ್ಕೆನ್ ಮತ್ತು ಇತರ ಮಧ್ಯಮ ಗಾತ್ರದ ಕಂಪನಿಗಳೊಂದಿಗೆ ಯಶಸ್ವಿಯಾಗಿ ತೊಡಗಿಸಿಕೊಂಡಿದೆ. [೨೪] [೨೫] [೨೬] ಅಲ್ಲದೇ ಇವರು ರೋಟೇರಿಯನ್ ಆಗಿ ಸಾಮಾಜಿಕ ಜವಾಬ್ದಾರಿಗಳನ್ನು ಸಹ ತೆಗೆದುಕೊಂಡಿದ್ದಾರೆ.

ಕೂಚಿಪುಡಿ ಪರಂಪರಾ ಫೌಂಡೇಶನ್

[ಬದಲಾಯಿಸಿ]

ದೀಪಾ ಶಶೀಂದ್ರನ್ ಸ್ಥಾಪಿಸಿದ ಕೂಚಿಪುಡಿ ಪರಂಪರಾ ಫೌಂಡೇಶನ್, ಶಾಸ್ತ್ರೀಯ ನೃತ್ಯದ ಕೂಚಿಪುಡಿ ಪ್ರಕಾರವನ್ನು ಪ್ರಚಾರ ಮಾಡಲು ಮತ್ತು ಉತ್ತೇಜಿಸಲು ಉದ್ದೇಶಿಸಿರುವ ಲಾಭರಹಿತ ಟ್ರಸ್ಟ್ ಆಗಿದೆ. ಪ್ರತಿಷ್ಠಾನವು ಉನ್ನತ ಮಟ್ಟದ ಕಲಾವಿದರನ್ನು ಬೆಳೆಸಲು ಬೆಂಗಳೂರು ಮತ್ತು ಕ್ಯಾಲಿಕಟ್‌ನಲ್ಲಿ ಮಾಸ್ಟರ್ ತರಗತಿಗಳನ್ನು ಒಳಗೊಂಡಂತೆ ವ್ಯವಸ್ಥಿತ ತರಬೇತಿಯನ್ನು ನೀಡುತ್ತದೆ. ಪ್ರತಿಷ್ಠಾನದ ಚಟುವಟಿಕೆಗಳಲ್ಲಿ ತರಗತಿಗಳು, ಕಾರ್ಯಾಗಾರಗಳು, ಪ್ರದರ್ಶನಗಳು, ನಿರ್ಮಾಣಗಳು ಮತ್ತು ಉತ್ಸವಗಳು ಮಾತ್ರವಲ್ಲದೆ ಅದರ ವೃತ್ತಿಪರವಾಗಿ ನಡೆಸುವ ಸಲಹಾ ಸಮಿತಿಯು ರೂಪಿಸಿದ ಕಲಾ ಪ್ರಕಾರದ ಪ್ರಚಾರಕ್ಕಾಗಿ ಇತರ ಪ್ರಯತ್ನಗಳನ್ನು ಒಳಗೊಂಡಿರುತ್ತದೆ. [೨೭] [೨೮] [೨೯] [೩೦] [೩೧] [೩೨]

ಪ್ರತಿಷ್ಠಾನವು ಈಗ ಕೇರಳದ ಕ್ಯಾಲಿಕಟ್‌ನಲ್ಲಿರುವ ಶ್ರೀ ಕೈತಪ್ರಮ್ ದಾಮೋದರನ್ ನಂಬೂತಿರಿ ಅವರ ಸ್ವಾತಿ ಕಲಾ ಕೇಂದ್ರದಲ್ಲಿ ಮಾಸ್ಟರ್ ತರಗತಿಗಳನ್ನು ನಡೆಸುತ್ತಿದೆ. ಬೆಂಗಳೂರಿನ ಅನೇಕ ಹಿರಿಯ ಕಲಾವಿದರು ಭಾಗವಹಿಸಿದ್ದಾರೆ. [೩೩]

೨೦೧೪ ರಲ್ಲಿ, ಕೂಚಿಪುಡಿ ಪರಂಪರಾ ಪ್ರತಿಷ್ಠಾನವು ತಮ್ಮ ಮೊದಲ "ಕೂಚಿಪುಡಿಯಲ್ಲಿ ದೈವತ್ವ" ಉತ್ಸವವನ್ನು ನಾಟ್ಯ ಪರಂಪರೆ ಉತ್ಸವವನ್ನು ನಡೆಸಿತು. ಈ ಉತ್ಸವದಲ್ಲಿ ಕೂಚಿಪುಡಿ ಗ್ರಾಮದ ಹಿರಿಯ ಗುರುಗಳಂತಹ ಖ್ಯಾತ ಕೂಚಿಪುಡಿ ಕಲಾವಿದರು ಸೇರಿದ್ದರು. ಪ್ರತಿಷ್ಠಾನವು ರಾಣಿ ದ್ರೌಪದಿಯ ಬಗ್ಗೆ "ಅಗ್ನಿಜ್ಯೋತ್ಸ್ನಾ" ಎಂಬ ನೃತ್ಯ ನಾಟಕದ ಉದ್ಘಾಟನೆಯನ್ನು ನಿರ್ಮಿಸಿತು. ಅದರ ಪರಿಕಲ್ಪನೆ, ಸಾಹಿತ್ಯ, ಸಂಗೀತ, ನೃತ್ಯ ಸಂಯೋಜನೆ ಮತ್ತು ಪ್ರಸ್ತುತಿಗಾಗಿ ಇದು ಉತ್ತಮ ವಿಮರ್ಶೆಗಳನ್ನು ಪಡೆಯಿತು. ಈ ನಿರ್ಮಾಣವು ನೃತ್ಯ ಪ್ರಕಾರದ ಪರಿಶುದ್ಧತೆಗೆ ಚ್ಯುತಿ ಬಾರದಂತೆ ಹೊಸ ಪಾತ್ರದ ಹೊಸತನಕ್ಕೆ ನಾಂದಿ ಹಾಡಿತು. ಅಕಾಡೆಮಿಯ ಕಿರಿಯ ಸದಸ್ಯೆ, ಬಾಲ ಪ್ರತಿಭೆ ಲಕ್ಷ್ಮಿಕಾ, ಇತ್ತೀಚಿನ ೨೦೧೪ ರ ಹಾಜರಾತಿ ಪುಸ್ತಕ "ತೆಲುಗು ಸಂಪ್ರದಾಯಗಳು" ಸಂಪಾದಕೀಯ ಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪುಸ್ತಕವನ್ನು ಆಶಿಶ್ ಮೋಹನ್ ಖೋಕರ್ ಅವರು ಬರೆದಿದ್ದಾರೆ ಮತ್ತು ಪದ್ಮಶ್ರೀ ಆನಂದ ಶಂಕರ್ ಜಯಂತ್ ಅವರು ಅತಿಥಿ ಸಂಪಾದಿಸಿದ್ದಾರೆ. [೩೪] [೩೫] [೩೬] [೩೭] [೩೮] [೩೯]

ನಾಟ್ಯ ವೇದಂ ವಾರ್ಷಿಕ ನೃತ್ಯೋತ್ಸವ - ೨೦೧೨

[ಬದಲಾಯಿಸಿ]

ದೀಪಾ ಶಶೀಂದ್ರನ್ ಅವರು ಮೇ ೧೮ ಮತ್ತು ೧೯ ರಂದು ಮೇ ೧೮ ಮತ್ತು ೧೯ ರಂದು ನಾಟ್ಯವೇದಂ ವಾರ್ಷಿಕ ನೃತ್ಯೋತ್ಸವ ೨೦೧೨ ಅನ್ನು ತಮ್ಮ ನೃತ್ಯ ಗುರು ಮಂಜು ಭಾರ್ಗವಿ ಅವರಿಗೆ ಗೌರವಾರ್ಥವಾಗಿ ಆಯೋಜಿಸಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ ಪ್ರಕಾರಗಳ ಖ್ಯಾತ ಕಲಾವಿದರು ಪಾಲ್ಗೊಂಡಿದ್ದರು. [೪೦] [೪೧] [೪೨] [೪೩] [೪೪]

ನಾಟ್ಯ ಪರಂಪರೆ ಉತ್ಸವ - ೨೦೧೪ ರಿಂದ ಇಲ್ಲಿಯವರೆಗೆ

[ಬದಲಾಯಿಸಿ]

ಪ್ರತಿಷ್ಠಾನವು ಕಲೆಯ ಪ್ರಚಾರಕ್ಕಾಗಿ ನಾಟ್ಯ ಪರಂಪರೆ ಉತ್ಸವವನ್ನು ಆಯೋಜಿಸಿದೆ. ಉದಾಹರಣೆಗೆ, "ಕೂಚಿಪುಡಿಯಲ್ಲಿ ದೈವತ್ವ" ಕಾರ್ಯಕ್ರಮವು ೨೪-೨೫ ಮೇ ೨೦೧೪ ರಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆಯಿತು ಮತ್ತು ಕೂಚಿಪುಡಿ ನೃತ್ಯ ಪ್ರಕಾರಗಳ ಪ್ರಖ್ಯಾತ ಕಲಾವಿದರನ್ನು ಒಳಗೊಂಡಿತ್ತು. [೪೫] [೪೬] [೪೭] [೪೮] [೪೯] [೫೦]

ಪ್ರಶಸ್ತಿಗಳು ಮತ್ತು ರುಜುವಾತುಗಳು

[ಬದಲಾಯಿಸಿ]
  • ಅತ್ಯುತ್ತಮ ಕೂಚಿಪುಡಿ ಕಲಾವಿದ ಯುವ ರಂಗ [೫೧]
  • ನೃತ್ಯ ಶಿರೋಮಣಿ ರಾಷ್ಟ್ರೀಯ ಪ್ರಶಸ್ತಿ [೫೨]
  • ಸತ್ಯಭಾಮಾ ಶ್ರೇಷ್ಠ ಪ್ರಶಸ್ತಿ [೫೩]
  • ನೃತ್ಯ ವಿಲಾಸಿನಿ [೫೪]
  • ನಾಟ್ಯ ಕೌಸ್ತುಬ
  • ಗಾರ್ಡನ್ ಸಿಟಿ ವಿಶ್ವವಿದ್ಯಾನಿಲಯದಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ಮಹಿಳಾ ಸಾಧಕರು ಪ್ರಶಸ್ತಿ.
  • ಫಿಲಾಂತ್ರೊಪಿಕ್ ಸೊಸೈಟಿ ಆಫ್ ಇಂಡಿಯಾದಿಂದ ಸನ್ಮಾನಿಸಲಾಯಿತು.
  • ಎಕ್ಸೈಡ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನಿಂದ ಗೌರವಿಸಲ್ಪಟ್ಟಿದೆ.
  • ರೋಟರಿ ಇಂಟರ್‌ನ್ಯಾಶನಲ್‌ನಿಂದ ಅತ್ಯುತ್ತಮ ಸಂಸ್ಥೆ ಗುರುತಿಸುವಿಕೆ.

ಉಲ್ಲೇಖಗಳು

[ಬದಲಾಯಿಸಿ]
  1. News The Hindu - 22 August 2014
  2. "Website Narthaki". Archived from the original on 12 July 2015. Retrieved 12 April 2015.
  3. "Website Thiraseela". Archived from the original on 8 January 2019. Retrieved 12 April 2015.
  4. "Official Website". Archived from the original on 4 March 2016. Retrieved 12 April 2015.
  5. Government of India - CCRTIndia - Profile
  6. Website High Beam
  7. News The Hindu - 22 August 2014
  8. "Official Website". Archived from the original on 4 March 2016. Retrieved 12 April 2015.
  9. "Official Website". Archived from the original on 4 March 2016. Retrieved 12 April 2015.
  10. "Website Thiraseela". Archived from the original on 8 January 2019. Retrieved 12 April 2015.
  11. "Official Website". Archived from the original on 4 March 2016. Retrieved 12 April 2015.
  12. "Website Thiraseela". Archived from the original on 8 January 2019. Retrieved 12 April 2015.
  13. "Official Website". Archived from the original on 4 March 2016. Retrieved 12 April 2015.
  14. Government of India - CCRTIndia - Profile
  15. Government of India - CCRTIndia - Profile
  16. News Deccan Herald - 17 May 2012
  17. "Website Thiraseela". Archived from the original on 8 January 2019. Retrieved 12 April 2015.
  18. "Official Website". Archived from the original on 4 March 2016. Retrieved 12 April 2015.
  19. "Website Celebrity Portal". Archived from the original on 12 April 2015. Retrieved 12 April 2015.
  20. "This Week Bangalore News". Archived from the original on 2018-10-24. Retrieved 2022-05-28.
  21. Government of India - CCRTIndia - Profile
  22. "Website Thiraseela". Archived from the original on 8 January 2019. Retrieved 12 April 2015.
  23. "Official Website". Archived from the original on 4 March 2016. Retrieved 12 April 2015.
  24. "Website Thiraseela". Archived from the original on 8 January 2019. Retrieved 12 April 2015.
  25. "Official Website". Archived from the original on 4 March 2016. Retrieved 12 April 2015.
  26. Government of India - CCRTIndia - Profile
  27. News The Hindu 23 May 2014
  28. "Official Website - Natya Parampara Utsav". Archived from the original on 2018-10-24. Retrieved 2022-05-28.
  29. "Website of Ananda Shankar Jayant". Archived from the original on 2019-07-13. Retrieved 2022-05-28.
  30. Livemint - Upcoming Events
  31. "Narthaki - Natya Parampara Utsav". Archived from the original on 2016-03-04. Retrieved 2022-05-28.
  32. "Explocity Website". Archived from the original on 2015-07-11. Retrieved 2022-05-28.
  33. "Official Website". Archived from the original on 4 March 2016. Retrieved 12 April 2015.
  34. News The Hindu 23 May 2014
  35. "Official Website - Natya Parampara Utsav". Archived from the original on 2018-10-24. Retrieved 2022-05-28.
  36. "Website of Ananda Shankar Jayant". Archived from the original on 2019-07-13. Retrieved 2022-05-28.
  37. Livemint - Upcoming Events
  38. "Narthaki - Natya Parampara Utsav". Archived from the original on 2016-03-04. Retrieved 2022-05-28.
  39. "Explocity Website". Archived from the original on 2015-07-11. Retrieved 2022-05-28.
  40. "News Indian Express 8 May 2012". Archived from the original on 3 ಮೇ 2016. Retrieved 28 ಮೇ 2022.
  41. "News This Week Bangalore 23 May 2012". Archived from the original on 24 ಅಕ್ಟೋಬರ್ 2018. Retrieved 28 ಮೇ 2022.
  42. News The Hindu 24 May 2012
  43. News Deccan Herald 21 May 2012
  44. City Plus - Jagran
  45. News The Hindu 23 May 2014
  46. "Official Website - Natya Parampara Utsav". Archived from the original on 2018-10-24. Retrieved 2022-05-28.
  47. "Website of Ananda Shankar Jayant". Archived from the original on 2019-07-13. Retrieved 2022-05-28.
  48. Livemint - Upcoming Events
  49. "Narthaki - Natya Parampara Utsav". Archived from the original on 2016-03-04. Retrieved 2022-05-28.
  50. "Explocity Website". Archived from the original on 2015-07-11. Retrieved 2022-05-28.
  51. "Official Website Awards". Archived from the original on 4 March 2016. Retrieved 12 April 2015.
  52. "Official Website Awards". Archived from the original on 4 March 2016. Retrieved 12 April 2015.
  53. "Official Website Awards". Archived from the original on 4 March 2016. Retrieved 12 April 2015.
  54. "Official Website Awards". Archived from the original on 4 March 2016. Retrieved 12 April 2015.