ದಿ ಹಾರ್ಡಿ ಬಾಯ್ಸ್
ದಿ ಹಾರ್ಡಿ ಬಾಯ್ಸ್ ಎಂಬುದು ಫ್ರಾಂಕ್ ಮತ್ತು ಜೋ ಹಾರ್ಡಿ ಜೋಡಿಯು, ಮಕ್ಕಳು ಮತ್ತು ಹದಿಹರೆಯದವರಿಗಾಗಿ ಹಲವಾರು ರಹಸ್ಯ ಸರಣಿಗಳಲ್ಲಿ ಕಾಣಿಸಿಕೊಳ್ಳುವ ಕಾಲ್ಪನಿಕ ಪಾತ್ರಗಳು. ಈ ಪುಸ್ತಕಗಳನ್ನು ಅಮೆರಿಕಾದ ಬರಹಗಾರ ಎಡ್ವರ್ಡ್ ಸ್ಟ್ರಾಟೆಮಿಯರ್ ರಚಿಸಿದರು. [೧] ಸ್ಟ್ರಾಟೆಮಿಯರ್ ಬುಕ್-ಪ್ಯಾಕೇಜಿಂಗ್ ಸಂಸ್ಥೆಯ ಸ್ಥಾಪಕ; ತದ್ನಂತರ ಈ ಪುಸ್ತಕಗಳನ್ನು ಫ್ರಾಂಕ್ಲಿನ್ ಡಬ್ಲ್ಯೂ. ಡಿಕ್ಸನ್ ಎಂಬ ಸಾಮೂಹಿಕ ಸಂಕ್ಷಿಪ್ತ ಹೆಸರಿನ ಅಡಿಯಲ್ಲಿ ಭೂಗತ ಬರಹಗಾರರಿಂದ ಬರೆಸಲಾಗಿದೆ.
[೨]
ಪ್ರಾರಂಭ
[ಬದಲಾಯಿಸಿ]ಹಾರ್ಡಿ ಬಾಯ್ಸ್ ೧೯೨೭ ರಲ್ಲಿ ಮೊದಲ ಬಾರಿಗೆ ಪ್ರಕಾಶಿಸಲ್ಪಟ್ಟಿತು. ೧೯೫೯ ರಲ್ಲಿ ಆರಂಭಗೊಂಡ ಈ ಪುಸ್ತಕಗಳು ವ್ಯಾಪಕವಾಗಿ ಪರಿಷ್ಕರಿಸಲ್ಪಟ್ಟವು, ಜನಾಂಗೀಯ ನಿಂದನೆಯನ್ನು ನಿರ್ಮೂಲನೆ ಮಾಡಲು ಭಾಗಶಃವಾಗಿ ಪರಿಷ್ಕರಿಸಲ್ಪಟ್ಟವು. ಅಮೇರಿಕೆಯ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮಾರ್ಪಡಿಸಲು, ಈ ಪುಸ್ತಕಗಳನ್ನು ಸರಳವಾದ ಶೈಲಿಯಲ್ಲಿ ಬರೆಯಲಾಗಿದೆ. [೩]
ಕಥಾಸಾರಾಂಶ
[ಬದಲಾಯಿಸಿ]ಹಾರ್ಡಿ ಬಾಯ್ಸ್, ಫ್ರಾಂಕ್ ಮತ್ತು ಜೋ ಹಾರ್ಡಿ, ಕಾಲ್ಪನಿಕ ಕಥೆಯಲ್ಲಿನ ಹದಿಹರೆಯದ ಸಹೋದರರು ಮತ್ತು ಹವ್ಯಾಸಿ ಪತ್ತೆದಾರರು. ಫ್ರಾಂಕ್ ಹದಿನೆಂಟು (ಹಿಂದಿನ ಆವೃತ್ತಿಗಳಲ್ಲಿ ಹದಿನಾರು), ಮತ್ತು ಜೋ ಹದಿನೇಳು (ಹಿಂದಿನ ಆವೃತ್ತಿಗಳಲ್ಲಿ ಹದಿನೈದು) ವಯಸ್ಸಿನವರು. ಅವರಿಬ್ಬರೂ ತಮ್ಮ ತಂದೆ, ಪತ್ತೇದಾರ ಫೆನ್ಟನ್ ಹಾರ್ಡಿಯೊಂದಿಗೆ ಬಾರ್ಮೆಟ್ ಬೇ ನಲ್ಲಿನ ಬಯೋಪೋರ್ಟ್ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರ ತಾಯಿ, ಲಾರಾ ಹಾರ್ಡಿ ಮತ್ತು ಅವರ ಚಿಕ್ಕಮ್ಮ ಗೆರ್ಟ್ರೂಡ್ . ಸಹೋದರರು ಬೇಯರ್ಪೋರ್ಟ್‌ನಲ್ಲಿ ಪ್ರೌಢಶಾಲೆಗೆ ಹೋಗುತ್ತಾರೆ, ಅಲ್ಲಿ ಅವರು ಇಬ್ಬರೂ ಒಂದೇ ತರಗತಿಯಲ್ಲಿರುತ್ತಾರೆ.ಆದರೆ ಶಾಲೆಯಲ್ಲಿನ ಓದುವ ಸಮಯವನ್ನು ವಿರಳವಾಗಿ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತು ರಹಸ್ಯಗಳನ್ನು ಪರಿಹರಿಸುವುದನ್ನು ಎಂದಿಗೂ ಶಾಲಾ ವೇಳಾಪಟ್ಟಿ ತಡೆಯುವುದಿಲ್ಲ. ಹಳೆಯ ಕಥೆಗಳಲ್ಲಿ, ಹಾರ್ಡಿ ಬಾಯ್ಸ್ ರಹಸ್ಯಗಳು ತಮ್ಮ ತಂದೆಯ ಗೌಪ್ಯವಾದ ಪ್ರಕರಣಗಳೊಂದಿಗೆ ಹೆಚ್ಚಾಗಿ ಸಂಬಂಧ ಹೊಂದಿವೆ. ಫೆನ್ಟನ್ ಹಾರ್ಡಿ ಕೆಲವೊಮ್ಮೆ ಹಾರ್ಡಿ ಬಾಯ್ಸ್ ಸಹಾಯವನ್ನು ಕೋರುತ್ತಾರೆ. ಆದರೆ ಇತರ ಸಮಯದಲ್ಲಿ ಅವರು ಸಂಬಂಧಿತ ಖಳನಾಯಕರು ಮತ್ತು ಘಟನೆಗಳ ಮೇಲೆ ಮುಗಿಬೀಳುತ್ತಾರೆ. ಅಂಡರ್ ಕವರ್ ಬ್ರದರ್ಸ್ ಸರಣಿಯಲ್ಲಿ (೨೦೦೫-೨೦೧೨), ಹಾರ್ಡಿ ಬಾಯ್ಸ್ ಅಮೆರಿಕನ್ ಟೀನ್ಸ್ ಎಗೇನ್ಸ್ಟ್ ಕ್ರೈಮ್ ತಂಡದ ಸದಸ್ಯರಾಗಿದ್ದಾರೆ ಮತ್ತು ಕಳ್ಳರನ್ನು ಹಿಡಿದುದಕ್ಕೆ ಪ್ರಶಸ್ತಿ ಸ್ವೀಕರಿಸುತ್ತಾರೆ. ಹಾರ್ಡಿ ಬಾಯ್ಸ್ ಕೆಲವೊಮ್ಮೆ ತಮ್ಮ ಸ್ನೇಹಿತರಾದ ಚೆಟ್ ಮೊರ್ಟನ್ , ಫಿಲ್ ಕೊಹೆನ್ , ಬಿಫ್ ಹೂಪರ್ , ಜೆರ್ರಿ ಗಿಲ್ರಾಯ್ ಮತ್ತು ಟೋನಿ ಪ್ರಿಟೊರಿಂದ ರಹಸ್ಯಗಳನ್ನು ಪರಿಹರಿಸುವಲ್ಲಿ ಸಹಾಯ ಪಡೆಯುತ್ತಾರೆ. ಅವರ ಗೆಳತಿಯರಾದ ಕ್ಯಾಲೀ ಷಾ ಮತ್ತು ಐಯೋಲಾ ಮಾರ್ಟನ್ (ಚೆಟ್ಳ ಸಹೋದರಿ) ಇವರಿಂದ ಕೂಡ ನೆರವು ಪಡೆಯುತ್ತಾರೆ.
ನಾವೀನ್ಯತೆ
[ಬದಲಾಯಿಸಿ]ಪ್ರತಿ ಕಾದಂಬರಿಯಲ್ಲಿ, ಹಾರ್ಡಿ ಬಾಯ್ಸ್ ನಿರಂತರವಾಗಿ ಸಾಹಸ ಮತ್ತು ಕ್ರಿಯೆಯಲ್ಲಿ ತೊಡಗಿಕೊಂಡಿರುತ್ತಾರೆ. ಆಗಾಗ್ಗೆ ಅಪಾಯದ ಹೊರತಾಗಿಯೂ, ಹುಡುಗರು ತಮ್ಮ ಜಾಣತನ ಮತ್ತು ದಿಟ್ಟತನವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಅವರು ಬಲು ಚುರುಕಾದ ಹುಡುಗರಾಗಿ ಧೈರ್ಯದಿಂದ ವರ್ತಿಸುತ್ತಾರೆ. ಹಾರ್ಡಿ ಸೋದರರು ಅದೃಷ್ಟವಂತರು ಮತ್ತು ಅವರ ಸುತ್ತಲಿನ ಮಂದಿಗಿಂತಲೂ ಹೆಚ್ಚು ಬುದ್ಧಿವಂತರಾಗಿರುತ್ತಾರೆ.ಫ್ರಾಂಕ್ ಮತ್ತು ಜೋ ಸ್ವಲ್ಪ ಶ್ರೀಮಂತರಾಗಿರುತ್ತಾರೆ . ಅವರು ರಹಸ್ಯ ಮತ್ತು ಒಳಸಂಚಿನ ವಾತಾವರಣದಲ್ಲಿ ವಾಸಿಸುವರು. ಸರಳ ಜೀವನದ ಅಮೇರಿಕನ್ ಸಣ್ಣ ಪಟ್ಟಣದಲ್ಲಿ ಕೊಲೆ, ಮಾದಕದ್ರವ್ಯದ ಚಟವುಳ್ಳವರು, ಹತ್ಯೆ, ಕುದುರೆ ಜೂಜು, ಅಪಹರಣ, ವಜ್ರ ಕಳ್ಳಸಾಗಣೆ, ವೈದ್ಯಕೀಯ ದುರಾಚಾರ, ೧೯೪೦ ರ ದಶಕದಲ್ಲಿ ವ್ಯಾಪಕವಾಗಿದ್ದ ದೊಡ್ಡ-ಮಟ್ಟದ ಕಳ್ಳತನ, ಹೀಗೆ ಹಲವು ಬಗೆಯ ಅಪರಾಧಗಳನ್ನು ತಮ್ಮ ವಿಭಿನ್ನ ಕಾರ್ಯತಂತ್ರದ ಮೂಲಕ ಮತ್ತು ಬೇಹುಗಾರಿಕೆ ಮೂಲಕ ಕಂಡುಹಿಡಿದು ಕಾನೂನಿನ ಪರಿಧಿಗೆ ತರುವ ಸೋದರರ ಕಥೆಗಳು ಬಲು ಜನಮನ್ನಣೆ ಗಳಿಸಿದವು. ಪ್ರತಿ ಕಥೆಯಲ್ಲಿಯೂ, ಹೊಸ ಸಾಹಸಗಳು, ಆತಂಕಗಳು ಇವನ್ನು ಎದುರಿಸಿ, ಹಲವು ಬಾರಿ ತಮ್ಮ ತಂದೆಗೆ ಅಪರಾಧಿಗಳನ್ನು ಹಿಡಿಯಲು ಸಹಾಯ ಮಾಡುತ್ತಾರೆ. ೧೯೫೦ರ ನಂತರ ಕಾರ್ ಕಳ್ಳರು, ಕಳ್ಳಸಾಗಾಣಿಕೆಗಾರರು, ವಜ್ರಗಳ ಕಳ್ಳರು, ಕೊಲೆಗಾರರು, ಹೀಗೆ ಹಲವು ಬಗೆಯ ಅಪರಾಧಿಗಳನ್ನು ಎದುರಿಸಿ, ಅವರನ್ನು ಕಾನೂನಿನ ವಶಕ್ಕೆ ಒಪ್ಪಿಸುವ ಕಥೆಗಳು ಓದುಗರ ಮತ್ತು ಹದಿಹರೆಯದವರ ಪ್ರೀತಿಗೆ ಪಾತ್ರವಾಗಿವೆ. [೪]
ಜನಪ್ರಿಯ ಸರಣಿಗಳು
[ಬದಲಾಯಿಸಿ]ಮೆಕ್ಸಿಕೋ ಸೇರಿದ ದಿ ಮಾರ್ಕ್ ದ ಡೋರ್ (೧೯೩೪), ಸ್ಕಾಟ್ಲೆಂಡ್ನ ಫ್ಲೈಟ್-೧೦೧, (೧೦೬೭) ದ ಸೀಕ್ರೆಟ್ ಏಜೆಂಟ್ , ದಿ ಆರ್ಕ್ಟಿಕ್ ಪೆಟ್ರೋಲ್ ಮಿಸ್ಟರಿ (೧೯೬೯), ಐಸ್ಲ್ಯಾಂಡ್ ದ ಮಮ್ಮಿ ಕೇಸ್ (೧೯೮೦), ಮತ್ತು ಕೀನ್ಯಾ ದ ಮಿಸ್ಟರಿ ಆಫ್ ದಿ ಬ್ಲ್ಯಾಕ್ ರೈನೋ (೨೦೦೩) ನಲ್ಲಿ. ಹಾರ್ಡಿಸ್ ಮೋಟಾರ್ಸೈಕಲ್, ಮೋಟಾರು ದೋಣಿ, ಐಸ್ಬೋಟ್ , ರೈಲು, ವಿಮಾನ ಮತ್ತು ತಮ್ಮದೇ ಕಾರ್ ಮೂಲಕ ಅಮೆರಿಕಾ ಸಂಯುಕ್ತ ಸಂಸ್ಥಾನದಾದ್ಯಂತ ಪ್ರಯಾಣಿಸಿ ಅಪರಾಧಿಗಳನ್ನು ಹಿಡಿದ ಕಥೆಗಳಾಗಿವೆ.
ಚಹರೆ
[ಬದಲಾಯಿಸಿ]ತುಂಬಾ ಸಾಮಾನ್ಯವಾಗಿರುವಂತೆ, ಹುಡುಗರು ಈ ರೀತಿ ಕಾಣಬರುತ್ತಾರೆ. "ಫ್ರಾಂಕ್ ಕಪ್ಪು ಕೂದಲನ್ನು ಹೊಂದಿದ್ದರೆ, ಜೋ ಹೊಂಬಣ್ಣದವ". "ಫ್ರಾಂಕ್ ಚಿಂತಕನಾಗಿದ್ದಾಗ, ಜೋ ಹೆಚ್ಚು ಹಠಾತ್ ಪ್ರವೃತ್ತಿಯ ಮತ್ತು ಪ್ರಾಯಶಃ ಸ್ವಲ್ಪ ಹೆಚ್ಚು ಅಥ್ಲೆಟಿಕ್ ಆಗಿರುತ್ತಾನೆ". ಇಬ್ಬರು ಗಂಡು ಮಕ್ಕಳು ಪರಸ್ಪರರ ಜೊತೆ ಒಳ್ಳೆಯ ಮಾತುಗಳನ್ನಾಡುತ್ತಾರೆ ಮತ್ತು ನ್ಯೂ ಹಾರ್ಡಿ ಬಾಯ್ಸ್ ಕೇಸ್ಫೈಲ್ಸ್ ಸರಣಿಯಲ್ಲಿ ಹೊರತುಪಡಿಸಿ ಸಹೋದರರ ವೈರತ್ವದಲ್ಲಿ ತೊಡಗಿಸಿಕೊಳ್ಳುವುದಿಲ್ಲ. [೫] [೬]
ಟೀಕೆ
[ಬದಲಾಯಿಸಿ]ಕೆಲವು ಟೀಕಾಕಾರರು ಹಾರ್ಡಿ ಬಾಯ್ಸ್ ಪಾತ್ರಧಾರಿಗಳು, ಶ್ರೀಮಂತರು ಮತ್ತು ಕಾನೂನು-ಗೌರವಿಸುವ "ವಯಸ್ಕರ ಆಡಳಿತ ವರ್ಗದ ಏಜೆಂಟ್" ಆಗುತ್ತಾರೆ ಎಂದು ವಾದಿಸುತ್ತಾರೆ. [೭] ಹೆಚ್ಚಿನ ಪುಸ್ತಕಗಳು, ಧಾರಾವಾಹಿಗಾಗಿ ಮಾರ್ಪಾಡಾಗುವ ಭರದಲ್ಲಿ, ದ್ವಿತೀಯ ವಿಶ್ವಯುದ್ಧ-ಪೂರ್ವದ ವಿವರಣಾತ್ಮಕ ಶೈಲಿಯನ್ನು ಕಳೆದುಕೊಂಡಿರುವುದನ್ನು ಕಂಡು ಹಲವು ಮಂದಿ ವಿಮರ್ಶಕರು ಮತ್ತು ಅಭಿಮಾನಿಗಳು ವಿಷಾದಿಸಿದರು. ಆದರೆ ಜನಮಾನಸದಲ್ಲಿ,ಈ ನವೀಕರಣಗಳು ಕಥೆಗಳನ್ನು ಆಧುನೀಕರಿಸುವ ಪ್ರಯತ್ನವಾಗಿ ನೆಲೆ ನಿಂತಿದೆ. ಸರಣಿಯ ಮಹಿಳಾ ಪ್ರತಿರೂಪವಾದ ನ್ಯಾನ್ಸಿ ಡ್ರೂಗೆ ಕೂಡ ನವೀಕರಣಗಳ ಬಗ್ಗೆ ಇದೇ ದೂರುಗಳನ್ನು ಮಾಡಲಾಗಿತ್ತು. [೮]
ಬದಲಾವಣೆಗಳು
[ಬದಲಾಯಿಸಿ]ಹಾರ್ಡಿ ಬಾಯ್ಸ್ ಸರಣಿ, ಹಾರ್ಡಿ ಬಾಯ್ಸ್ ಕೇಸ್ಫೈಲ್ಸ್ ಅನ್ನು ೧೯೮೭ ರಲ್ಲಿ ರಚಿಸಲಾಯಿತು ಮತ್ತು ಕೊಲೆಗಳು, ಹಿಂಸಾಚಾರ ಮತ್ತು ಅಂತಾರಾಷ್ಟ್ರೀಯ ಬೇಹುಗಾರಿಕೆ ಒಳಗೊಂಡಿತ್ತು. ಮೂಲ "ಹಾರ್ಡಿ ಬಾಯ್ಸ್ ಮಿಸ್ಟರಿ ಸ್ಟೋರೀಸ್" ಸರಣಿಯು ೨೦೦೫ ರಲ್ಲಿ ಅಂತ್ಯಗೊಂಡಿತು. [೯] ಅದೇ ವರ್ಷದಲ್ಲಿ ಅಂಡರ್ಕವರ್ ಬ್ರದರ್ಸ್ ಎಂಬ ಹೊಸ ಸರಣಿ ಬಿಡುಗಡೆಯಾಯಿತು. ಮೊದಲ ಬಾರಿಗೆ, ಪಾತ್ರಗಳು ತಮ್ಮ ಸಾಹಸಗಳನ್ನು ನಿರೂಪಿಸುವ ಪಾತ್ರಗಳ ನವೀಕರಿಸಿದ ಆವೃತ್ತಿಗಳನ್ನು ಇದು ಒಳಗೊಂಡಿತ್ತು. ಅಂಡರ್ಕವರ್ ಬ್ರದರ್ಸ್ ೨೦೧೨ ರಲ್ಲಿ ಕೊನೆಗೊಂಡಿತು ಮತ್ತು ೨೦೧೩ ರಲ್ಲಿ ಹಾರ್ಡಿ ಬಾಯ್ಸ್ ಅಡ್ವೆಂಚರ್ಸ್ ಅವರಿಂದ ಬದಲಿಸಲ್ಪಟ್ಟಿತು.[೧೦]
ಜನಮನ್ನಣೆ
[ಬದಲಾಯಿಸಿ]ಈ ಎಲ್ಲ ಬದಲಾವಣೆಗಳ ಮೂಲಕ, ಪಾತ್ರಗಳು ಜನಪ್ರಿಯವಾಗಿವೆ; ಪುಸ್ತಕಗಳು ವಾರ್ಷಿಕವಾಗಿ ಒಂದು ದಶಲಕ್ಷಕ್ಕೂ ಹೆಚ್ಚಿನ ಪ್ರತಿಗಳನ್ನು ಕಂಡಿವೆ. ಪ್ರತಿ ವರ್ಷವೂ ಹಲವಾರು ಹೊಸ ಸಂಪುಟಗಳು ಪ್ರಕಟವಾಗುತ್ತವೆ ಮತ್ತು ಈ ಹಾರ್ಡಿ ಬಾಯ್ಸ್ ಸರಣಿ ಸಾಹಸಗಳನ್ನು ೨೫ ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ. [೧೨] ಹಾರ್ಡಿ ಬಾಯ್ಸ್ ಸರಣಿಯು, ಐದು ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಮತ್ತು ಹಲವಾರು ವೀಡಿಯೋ ಆಟಗಳಲ್ಲಿ ಕಾಣಿಸಿಕೊಂಡಿದೆ ಮತ್ತು ಊಟದ ಡಬ್ಬಿಗಳು ಮತ್ತು ಜೀನ್ಸ್ ಗಳಂತಹ ವಾಣಿಜ್ಯ ಉತ್ಪನ್ನಗಳನ್ನು ಪ್ರಚಾರ ಮಾಡಲು ಬಳಕೆಯಾಗಿದೆ. [೧೩]
ಸ್ಪೂರ್ತಿಯ ಚಿಲುಮೆ
[ಬದಲಾಯಿಸಿ]ಹಾರ್ಡಿ ಬಾಯ್ಸ್ ಸರಳ ಬದುಕು, ಬಾಲ್ಯದ ಕನಸು, ಅಮೆರಿಕನ್ ಆದರ್ಶಗಳು ಮತ್ತು ಪುರುಷತ್ವಶೀಲತೆ ಹೀಗೆ ಹಲವು ಬಗೆಯ ಆದರ್ಶಗಳನ್ನು ಪ್ರತಿಪಾದಿಸುತ್ತದೆ. ಕೆಟ್ಟದ್ದಕ್ಕಿಂತ ಒಳ್ಳೆತನಕ್ಕೆ ಉತ್ತಮವಾದ ಗೆಲುವಿನ ಸಾಧ್ಯತೆ ಇದೆ ಎಂಬುದನ್ನು ಮಕ್ಕಳಲ್ಲಿ ತುಂಬಲು ಸಹಕಾರಿಯಾಗಿದೆ. [೧೪]
- ↑ "wiki". "en.wikipedia.org". 3 April 2018. Retrieved 30 May 2018.
- ↑ "contributor". "www.scholastic.com". 3 April 2018. Retrieved 30 May 2018.
- ↑ "the-hardy-boys-mystery-game". "toytales.ca". 3 April 2018. Retrieved 30 May 2018.
- ↑ "03". "www.oregonlive.com". 3 April 2018. Retrieved 30 May 2018.
- ↑ "keeline" (PDF). "www.keeline.com". 3 April 2018. Archived from the original (PDF) on 4 ನವೆಂಬರ್ 2019. Retrieved 30 May 2018.
- ↑ "hardy_boys". "web.archive.org". 3 April 2018. Archived from the original on 25 ಅಕ್ಟೋಬರ್ 2008. Retrieved 30 May 2018.
{{cite web}}
: CS1 maint: bot: original URL status unknown (link) - ↑ "08". "www.sleuthsayers.org". 3 April 2018. Retrieved 30 May 2018.
- ↑ "node". "www.aintitcool.com". 3 April 2018. Retrieved 30 May 2018.
- ↑ "us". "www.nytimes.com". 3 April 2018. Retrieved 30 May 2018.
- ↑ "org". "doi.org". 3 April 2018. Retrieved 30 May 2018.
- ↑ "writers-commentary-anthony-del-col-nancy-drew-hardy-boys-big-lie-1". "www.bleedingcool.com". 3 April 2018. Retrieved 30 May 2018.
- ↑ "article-1G1-155402114". "business.highbeam.com". 3 April 2018. Archived from the original on 10 ಜುಲೈ 2015. Retrieved 30 May 2018.
- ↑ "wiki". "en.wikipedia.org". 3 April 2018. Retrieved 30 May 2018.
- ↑ "google". "books.google.com". 3 April 2018. Retrieved 30 May 2018.