ದಿವಾಕರ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ದಿವಾಕರ ಶೆಟ್ಟಿ, ಮುಂಬಯಿನಗರದ ಸುಪ್ರಸಿದ್ಧ, ಪ್ರತಿಭಾವಂತ, ಸೃಜನಶೀಲ ಚಿತ್ರ ಕಲಾವಿದ. ಮನುಷ್ಯ ಮತ್ತು ಪ್ರಕೃತಿಗಳ ನಡುವಿನ ಸಂಬಂಧಗಳನ್ನು ಸೃಜನಶೀಲವಾಗಿ ಚಿತ್ರಿಸುತ್ತಾ ಅಧ್ಯಾತ್ಮಿಕ ಆಯಾಮಗಳನ್ನು ತಮ್ಮ ಚಿತ್ರಗಳಿಗೆ ನೀಡಿರುತ್ತಾರೆ. ಮುಂಬಯಿನ ಹಲವಾರು ಹೆಸರಾಂತ ಗ್ಯಾಲರಿಗಳಲ್ಲಿ ಅವರ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಎಲ್ಲ ಭಾಷೆಯ ಪತ್ರಿಕೆಗಳೂ ಅವರ ಕೃತಿಗಳನ್ನು ಶ್ಲಾಘಿಸಿ ಬರೆದಿದ್ದಾರೆ. ಮ್ಯೂರಲ್ ಮತ್ತು ಗಣೇಶನ ಚಿತ್ರಗಳನ್ನು ವೈವಿಧ್ಯಪೂರ್ಣರೀತಿಯಲ್ಲಿ ಚಿತ್ರಿಸಿ, ಪ್ರಸ್ತುತಪಡಿಸಿದ ರೀತಿ ಅನನ್ಯವಾಗಿವೆ. ಇವರ ಚಿತ್ರಕಲಾ ಪ್ರದರ್ಶನಗಳು,

  • ಅಮೆರಿಕ, ಲಂಡನ್, ಮೊದಲಾದ ನಗರಗಳಲ್ಲಿ ಪ್ರದರ್ಶಿಸಲ್ಪಟ್ಟಿವೆ.
  • ಕಾಮನ್ ವೆಲ್ತ್ ಪ್ರದರ್ಶನದಲ್ಲಿ ಭಾರತವನ್ನು ಪ್ರತಿನಿಧಿಸಿದ ಐವರು ಕಲಾವಿರಲ್ಲಿ 'ದಿವಾಕರ್' ಸಹಿತ ಒಬ್ಬರು.
  • ದಿವಾಕರ್, ಮರದ ಕೆತ್ತನೆಯ ಉಬ್ಬು-ತಗ್ಗಿನ ಬೃಹತ್ ಚಿತ್ರಿಕೆಗಳನ್ನು ಪಡಿಮೂಡಿಸುವುದರಲ್ಲಿ ಅಗ್ರಗಣ್ಯರೆಂದು ಹೆಸರಾಗಿದ್ದಾರೆ.

ಅವರ ಇತ್ತೀಚಿನ ಚಿತ್ರಗಳಲ್ಲಿ ಅಧ್ಯಾತ್ಮಿಕತೆ ಪ್ರಧಾನವಾಗಿ ಕೇಂದ್ರೀಕೃತವಾಗಿ ಮೂಡಿಬಂದಿದೆ. ದಿವಾಕರ ಶೆಟ್ಟಿಯವರು, ಮುಂಬಯಿನ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಲ್ಲದೆ, ಪ್ರೋತ್ಸಾಹ ನೀಡುತ್ತಾರೆ. ಇವರ ಬೃಹತ್ ಚಿತ್ರ ಕೃತಿ, ಮುಂಬಯಿನ ಮಾಹೀಮ್ ಜಿಲ್ಲೆಯಲ್ಲಿರುವ 'ಕರ್ನಾಟಕ ಸಂಘ'ದ ಮುಖದ್ವಾರದಲ್ಲಿ ಎದ್ದು ಕಾಣಿಸುತ್ತದೆ.

ಪ್ರಶಸ್ತಿಗಳು[ಬದಲಾಯಿಸಿ]

  • ವರ್ಷ ೨೦೧೫ ರ, 'ಕರ್ನಾಟಕ ಸಂಘದ ಸಾಧನ ಶಿಖರ ಪ್ರಶಸ್ತಿ'ಪ್ರದಾನಮಾಡಿದರು.[೧] [೨]
  1. "Udaya vani, Mar 11, 2015, ಹತ್ತನೆಯ ಸಾಹಿತ್ಯ - ಸಂಸ್ಕೃತಿ ಸಮಾವೇಶ ಸಮಾರೋಪ". Archived from the original on ಮಾರ್ಚ್ 12, 2015. Retrieved ಮಾರ್ಚ್ 18, 2015.
  2. 'ಉದಯವಾಣಿ',೩,ಮಾರ್ಚ್,೨೦೧೫, ಮಹಾರಾಷ್ಟ್ರ ವಾರ್ತೆಗಳು :ಪುಟ-೧೨,'ಎಂ.ಬಿ.ಕುಕ್ಯಾನ್,ದಿವಾಕರ ಶೆಟ್ಟಿಗೆ ಮುಂಬಯಿ ಕರ್ನಾಟಕ ಸಂಘದ ಸಾಧನ ಶಿಖರ ಗೌರವ'