ದಿಲ್ವಾರಾ ಮಂದಿರಗಳು
ದಿಲ್ವಾರಾ ಮಂದಿರಗಳು | |
---|---|
![]() Dilwara Jain Temples | |
Basic information | |
Location | Mount Abu, Sirohi, Rajasthan, India |
Geographic coordinates | 24°36′33.5″N 72°43′23″E / 24.609306°N 72.72306°ECoordinates: 24°36′33.5″N 72°43′23″E / 24.609306°N 72.72306°E |
Affiliation | ಜೈನ |
Architectural description | |
Completed | between the 11th and 13th centuries AD |
Specifications |
ದಿಲ್ವಾರಾ ರಾಜಸ್ಥಾನ ರಾಜ್ಯದಲ್ಲಿ, ನಾಥದ್ವಾರ-ಉದಯಪುರ ರಸ್ತೆಯಲ್ಲಿ ನಾಥದ್ವಾರದಿಂದ 13 ಮೈ. ದೂರದಲ್ಲಿರುವ ಒಂದು ಸ್ಥಳ.
ಜೈನ ಆಲಯಗಳು[ಬದಲಾಯಿಸಿ]
ಪ್ರಾಚೀನ ಜೈನ ಆಲಯಗಳ ನಿವೇಶನ. 6 ಣ 18ನೆಯ ಶತಮಾನದವರೆಗಿನ ಅನೇಕ ವಾಸ್ತು ನಿರ್ಮಾಣಗಳು ಇಲ್ಲಿವೆ. ಇಲ್ಲಿಯ ದೇವಸ್ಥಾನಗಳಲ್ಲಿ ಅನೇಕ ಶಿಲ್ಪ ಕೃತಿಗಳೂ ಚಿತ್ರ ಕಲಾಕೃತಿಗಳೂ ಇವೆ. ಅಮೃತಶಿಲೆಯಲ್ಲಿ ನಿರ್ಮಿಸಲಾದ ವಾಸ್ತು ಹಾಗೂ ಮೂರ್ತಿಶಿಲ್ಪ ಕೃತಿಗಳು ಅಸಾಧಾರಣವಾದಂಥವು. ಇಲ್ಲಿರುವ ಮಂದಿರಗಳ ಪೈಕಿ 11ನೆಯ ಶತಮಾನದ ಪಿತ್ತಲ್‍ಹಾರ್ ದೇವಾಲಯ, 18ನೆಯ ಶತಮಾನದ ತೇಜಪಾಲ ದೇವಮಂದಿರ ತುಂಬ ಜೀರ್ಣಾವಸ್ಥೆಯಲ್ಲಿದ್ದರೂ ಇವು ಆ ಕಾಲದ ವಾಸ್ತುಶಿಲ್ಪ ವೈಭವದ ಪ್ರತೀಕಗಳು. ಗಾಳಿ ಮಳೆ ಬಿಸಿಲುಗಳಿಂದ ಸವೆದು, ಪಾಚಿಯೇ ಮುಂತಾದವುಗಳಿಂದ ಕೂಡಿದ್ದರೂ ಇವು ಸರಳತೆ, ಸಂವೇದನಶೀಲತೆ ಹಾಗೂ ಮಾನವೀಯತೆಯ ಅಭಿವ್ಯಕ್ತಿಗಳಾಗಿ ಆ ಕಾಲದ ಭಾರತೀಯ ಕಲೆಯ ಉತ್ತಮ ನಿದರ್ಶನಗಳಾಗಿವೆ. ಸುಮಾರು ಮುನ್ನೂರು ಜೈನ ಮಂದಿರಗಳ ಭಗ್ನಾವಶೇಷಗಳನ್ನೊಳಗೊಂಡ ಈ ಸ್ಥಳಕ್ಕೆ ದೇವಲಪತಾಕ ಎಂಬ ಹೆಸರಿತ್ತು.
ಛಾಯಾಂಕಣ[ಬದಲಾಯಿಸಿ]
Dilwara in 1990
Kalpavriksha illustration in Dilwara Jain Temple
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Dilwara -A Legendary Marble Temple
- The Delwara Temples at Mount Abu Jaina Architecture in India, ch.1