ದಾಸ್‌ಪ್ರಕಾಶ್ ಐಸ್‌ಕ್ರೀಮ್
ಬೆಂಗಳೂರಿನ ಅತ್ಯಂತ ಹಳೆಯ ಐಸ್‌ಕ್ರೀಮ್ ತಯಾರಕರಾದ ದಾಸ್‌ಪ್ರಕಾಶ್ ಐಸ್‌ಕ್ರೀಮ್‌ಗಳು ಮೊಟ್ಟೆಯ ಬಳಕೆಯಿಲ್ಲದೆ ತಮ್ಮ ಎಲ್ಲಾ ಉತ್ಪನ್ನಗಳನ್ನು ತಯಾರಿಸುತ್ತವೆ ಹಾಗು ಇದು ಜೈನ ಸ್ನೇಹಿ ಉತ್ಪನ್ನವಾಗಿದೆ.
ಕಾರ್ಖಾನೆಯ ಪ್ರಾರಂಭ
[ಬದಲಾಯಿಸಿ]ಕಾರ್ಖಾನೆಯಿಂದ ತಯಾರಿಸಿದ ಶುದ್ಧ ಮತ್ತು ಆರೋಗ್ಯಕರವಾದ ಐಸ್‌ಕ್ರೀಮ್‌ಗಳಿಗೆ ನಗರದಲ್ಲಿರುವ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ೧೯೬೫ ರಲ್ಲಿ ಮದ್ರಾಸ್‌ನಲ್ಲಿ ದಾಸ್‌ಪ್ರಕಾಶ್ ಅನ್ನು ಪ್ರಾರಂಭಿಸಲಾಯಿತು. ಇದನ್ನು ಬಾಡಿಗೆ ಸಂಕೀರ್ಣದಲ್ಲಿ ಸ್ಥಾಪಿಸಲಾಯಿತು. ಆದರೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಮೈಕ್ರೊ ಸ್ಕೇಲ್ ವ್ಯವಹಾರವು ೧೯೬೮ ರಲ್ಲಿ ಅದರ ಜನಪ್ರಿಯತೆಯ ಉತ್ತಮ ಗುಣಮಟ್ಟದ ಐಸ್ ಕ್ರೀಮ್‌ಗಳ ಪರಿಣಾಮವಾಗಿ ಸಣ್ಣ ಪ್ರಮಾಣದ ವ್ಯವಹಾರವಾಗಿ ತಮ್ಮದೇ ಆದ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿತು. ಚೆನ್ನೈ ನಗರದ ಬೇಡಿಕೆಗಳಿಗೆ ಒಲವು ತೋರಿದ ನಂತರ ಮತ್ತು ಆಧಾರದಲ್ಲಿ ಜನಪ್ರಿಯವಾದ ನಂತರ ಇದರ ಅಂಗಡಿಗಳನ್ನು ಕೊಚ್ಚಿನ್, ಕೊಯಮತ್ತೂರು, ಸಲೆಮ್, ನೆಲ್ಲೂರು, ವಿಜಯವಾಡ ಮತ್ತು ಜೈಪುರ ಮುಂತಾದ ನಗರಗಳಿಗೆ ವಿಸ್ತರಿಸಲಾಯಿತು[೧].
ಆರಂಭಿಕ ಸವಾಲುಗಳು
[ಬದಲಾಯಿಸಿ]೧೯೭೫ ರಲ್ಲಿ ದಾಸ್‌ಪ್ರಕಾಶ್ ಐಸ್‌ಕ್ರೀಮ್‌ಗಳ ಒಂದು ಶಾಖೆಯನ್ನು ಮತ್ತು ಒಂದು ಕಾರ್ಖಾನೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಹಲಸೂರಿನಲ್ಲಿನ ಶಾಖೆಯು ಶ್ರೀ ಮುರಳೀಧರ್ ಅವರ ಪಾಲುದಾರರ ಮಾಲೀಕತ್ವ ಮತ್ತು ಮಾರ್ಗದರ್ಶನದಲ್ಲಿತ್ತು. ದಾಸ್‌ಪ್ರಕಾಶ್ ಐಸ್‌ಕ್ರೀಮ್ ಬೆಂಗಳೂರಿನಲ್ಲಿ ಮೂವತ್ತು ಪಾಯಿಂಟ್‌ಗಳ ಮಾರಾಟದೊಂದಿಗೆ ವಿನಮ್ರ ಆರಂಭವನ್ನು ಅನುಭವಿಸಿತು ಮತ್ತು ತಿಂಗಳಿಗೆ ೩೦,೦೦೦ ರೂಪಾಯಿಗಳ ಅದ್ಭುತ ವಹಿವಾಟುಗಳನ್ನು ಹೊಂದಿತ್ತು. ಬೆಂಗಳೂರಿನ ಗ್ರಾಹಕರ ನಂಬಿಕೆ ಹೆಚ್ಚುತ್ತಿರುವಾಗ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು ಇದು ಉದ್ಯಮ ಮಾರಾಟವನ್ನು ವರ್ಷಕ್ಕೆ ೧೨ ರಿಂದ ೧೫% ದರದಲ್ಲಿ ಹೆಚ್ಚಿಸಲು ಕಾರಣವಾಯಿತು. ಉತ್ಪಾದನಾ ಘಟಕವನ್ನು ಕೆಲವು ವರ್ಷಗಳ ನಂತರ ತುಲನಾತ್ಮಕವಾದ ದೊಡ್ಡ ಆವರಣಕ್ಕೆ ಸ್ಥಳಾಂತರಿಸಲಾಯಿತು. ಆರಂಭಿಕ ವರ್ಷಗಳಿಗೆ ಹೋಲಿಸಿದರೆ ಮಾರಾಟದ ಬಿಂದುಗಳಲ್ಲಿ ತೀವ್ರ ಏರಿಕೆ ಅಂದರೆ ೩೦ ಮಾರಾಟ ಬಿಂದುಗಳಿಂದ ೧೫೦ ಮಾರಾಟ ಬಿಂದುಗಳಿಗೆ ಕೇವಲ ೧೨ ವರುಷಗಳ ಅವಧಿಯಲ್ಲಿ ಕಂಡುಬಂದಿತ್ತು. ಇದು ಬೆಂಗಳೂರಿನ ಅನೇಕ ಹೆಸರಾಂತ ಅಡುಗೆ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ನಿರ್ವಹಣೆಯ ಬದಲಾವಣೆ
[ಬದಲಾಯಿಸಿ]ಅನಿರೀಕ್ಷಿತ ಸನ್ನಿವೇಶಗಳಿಂದಾಗಿ ಉದ್ಯಮವನ್ನು ಸ್ಥಾಪಿಸಿದ ಮಾಲೀಕರು ೨೦೦೦ರ ಇಸವಿಯಲ್ಲಿ ಸ್ಥಾವರ ಮತ್ತು ಯಂತ್ರೋಪಕರಣಗಳನ್ನು ಪ್ರಸ್ತುತ ಮಾಲೀಕರಿಗೆ ಮಾರಾಟ ಮಾಡಲು ಒತ್ತಾಯಿಸಲಾಯಿತು. ಈಗಿನ ಮಾಲೀಕರು ಅಂದಿನ ಸನ್ನಿವೇಶದ ಆಧಾರದ ಮೇಲೆ ೨೦೧೦ ರಲ್ಲಿ ಒಂದು ತುಂಡು ಭೂಮಿಯನ್ನು ಗುತ್ತಿಗೆಗೆ ಖರೀದಿಸಿ ಆ ಜಾಗದಲ್ಲಿ ಒಂದು ಆಧುನಿಕ ಕಾರ್ಖಾನೆಯನ್ನು ನಿರ್ಮಿಸಿದರು.ಹೆಸರಾಂತ ಸ್ಟಾರ್ ಹೋಟೆಲ್‌ಗಳು ಮತ್ತು ಉದಯೋನ್ಮುಖ ಅಡುಗೆ ಮಾರುಕಟ್ಟೆಯಿಂದ ಬೆಂಗಳೂರು ನಗರದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮಾಲೀಕರು ಆಧುನೀಕೃತ ಯಂತ್ರೋಪಕರಣಗಳ ಮೇಲೆ ಸರಿಸುಮಾರು ೨ ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಿದರು. ದಾಸ್‌ಪ್ರಕಾಶ್ ಐಸ್‌ಕ್ರೀಮ್ಸ್ ತಯಾರಿಸಿದ ಐಸ್‌ಕ್ರೀಮ್ ಎಷ್ಟರ ಮಟ್ಟಿಗೆ ರುಚಿಕರವಾಗಿತ್ತೆಂದರೆ ಅವರು ಕರ್ನಾಟಕದ ಹೊರಗಡೆ ಇರುವ ನಗರಗಳಿಂದ ವಿಶೇಷ ಸಂದರ್ಭಗಳಿಗೆ ಬೃಹತ್ ಆದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು.
ದಾಸ್‌ಪ್ರಕಾಶ್ ಐಸ್‌ಕ್ರೀಮ್ ಆರಂಭದಲ್ಲಿ ಸಗಟು ವ್ಯಾಪಾರಿಗಳಾಗಿದ್ದರು. ಅವರ ಸೇವೆಯ ಗುಣಮಟ್ಟದಿಂದಾಗಿ ಅವರು ಕೊಯಮತ್ತೂರು, ಸಲೆಮ್, ಹೊಸೂರು, ಉಡುಪಿ, ಮಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿನ ಸ್ಟಾರ್ ಹೋಟೆಲ್‌ಗಳಿಂದ ವಿಶೇಷ ಕಾರ್ಯಕ್ರಮಗಳಿಗಾಗಿ ಬೃಹತ್ ಆದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ಆದ್ದರಿಂದ ದಾಸ್‌ಪ್ರಕಾಶ್ ಐಸ್‌ಕ್ರೀಮ್ಸ್ ಐಸ್‌ಕ್ರೀಮ್‌ಗಳ ಮಾರುಕಟ್ಟೆಯಲ್ಲಿ ಅಜೇಯ ಏಕಸ್ವಾಮ್ಯ ಹೊಂದಿದವು ಎಂದು ನಾವು ಹೇಳಬಹುದು. ಆಧುನೀಕೃತ ಯಂತ್ರೋಪಕರಣಗಳ ಮೇಲಿನ ಹೂಡಿಕೆಯ ಫಲಿತಾಂಶವು ಕಂಪನಿಯ ಮೇಲೆ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮೂಲಕ ಸಕಾರಾತ್ಮಕ ಪರಿಣಾಮ ಬೀರಿದೆ. ಇಲ್ಲಿ ತಯಾರಿಸಿದ ಉತ್ಪನ್ನಗಳ ಗುಣಮಟ್ಟವನ್ನು ಸ್ಥಿರ ರೀತಿಯಲ್ಲಿ ನಿರ್ವಹಿಸಲಾಗುತ್ತದೆ ಏಕೆಂದರೆ ಕಚ್ಚಾ ವಸ್ತುಗಳನ್ನು ಐ.ಎಸ್.ಐ ಪ್ರಮಾಣೀಕೃತ ಮತ್ತು ಉತ್ತಮ ಮಾನ್ಯತೆ ಪಡೆದ ಪೂರೈಕೆದಾರರಿಂದ ಪಡೆಯಲಾಗುತ್ತದೆ. ಐಸ್‌ಕ್ರೀಮ್‌ಗಳ ತಯಾರಿಕೆಯಲ್ಲಿ ಒಳಗೊಂಡಿರುವ ಹಾಲು ಮತ್ತು ಬೆಣ್ಣೆಯಂತಹ ಮುಖ್ಯ ಪದಾರ್ಥಗಳನ್ನು ಕರ್ನಾಟಕ ಮಿಲ್ಕ್ ಫೆಡರೇಶನ್ (ಬಾಮುಲ್) ಹರಿಯಾಣದಿಂದ ಹಾಗು ಹಾಲಿನ ಪುಡಿ ಮತ್ತು ಸಕ್ಕರೆಯನ್ನು ನೇರವಾಗಿ ಬೆಳಗಾವಿಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಂದ ಪಡೆಯಲಾಗುತ್ತದೆ.
ದಾಸಪ್ರಕಾಶ್ ಐಸ್‌ಕ್ರೀಮ್ಸ್‌ನ ಗುಣಮಟ್ಟದ ಕಚ್ಚಾ ವಸ್ತುಗಳು ಮತ್ತು ಉತ್ತಮ ಗುಣಮಟ್ಟದ ಐಸ್‌ಕ್ರೀಮ್‌ಗಳು ಗ್ರಾಹಕರನ್ನು ತೃಪ್ತಿಪಡಿಸಲು ಕೈಜೋಡಿಸುತ್ತವೆ. ಕಂಪನಿಯ ನಿವ್ವಳ ಮಾರಾಟದಲ್ಲಿ ಕ್ರಮೇಣ ಹೆಚ್ಚಳವಾಗಿ ಬೆಳವಣಿಗೆಯ ದರವು ಸ್ಥಿರವಾಗಲು ಒಂದೇ ಕಾರಣ ಅದು ಸೇವೆಯ ಗುಣಮಟ್ಟ. ನಮ್ಮ ಹಿತೈಷಿಗಳು ಮೆಚ್ಚುವ ಅಂಶವೆಂದರೆ ಕಚ್ಚಾ ವಸ್ತುಗಳನ್ನು ಗುಣಮಟ್ಟದ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ ವೆಚ್ಚದ ಮೇಲೆ ಅಲ್ಲ. ಪ್ರಸ್ತುತ ಸಮಯದಲ್ಲಿಯೂ ಸಹ ದಾಸ್‌ಪ್ರಕಾಶ್ ಐಸ್‌ಕ್ರೀಮ್ ತನ್ನ ಗ್ರಾಹಕರೊಂದಿಗೆ ಮಾತ್ರವಲ್ಲದೆ ಎಲ್ಲಾ ಪುರಸಭೆ ನಿಗಮಗಳು, ವ್ಯವಹಾರಗಳು ಮತ್ತು ಸರ್ಕಾರಿ ಇಲಾಖೆಗಳಲ್ಲೂ ಉತ್ತಮ ಹೆಸರನ್ನು ಉಳಿಸಿಕೊಂಡಿದೆ. ದಾಸಪ್ರಕಾಶ್ ಐಸ್‌ಕ್ರೀಮ್ ಅನ್ನು ಎಮ್.ಎಸ್.ಎಮ್.ಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ) ಎಂದು ವರ್ಗೀಕರಿಸಬಹುದು. ವಿಳಾಸ : ಸಂ.೨೩೪, ಮೈಸೂರು ರಸ್ತೆ, ಬೆಂಗಳೂರು - ೫೬೦೦೩೯. ಈ ಸಂಸ್ಥೆಯು ವ್ಯಾಪಾರ ಕ್ಷೇತ್ರದಲ್ಲಿ " ವಿ.ವಿ. ಎಂಟರ್ಪ್ರೈಸರ್ಸ್ " ಎಂದೂ ಸಹ ಕಂಡುಬರುತ್ತದೆ[೨].
ಫೋಟೋ ಗ್ಯಾಲರಿ
[ಬದಲಾಯಿಸಿ]-
ಎಕ್ಸಾಟಿಕ್ ಐಸ್‌ಕ್ರೀಮ್‌ಗಳು - ಟುಟಿ ಫ್ರುಟಿ, ಕಪ್ಪು ದ್ರಾಕ್ಷಿ, ಸ್ಟ್ರಾಬೆರಿ ಮತ್ತು ಕಾಫಿ
-
ಕೇಕ್ ಮಧ್ಯದಲ್ಲಿ ವಿವಿಧ ರೀತಿಯ ಐಸ್‌ಕ್ರೀಮ್ ತುಂಬಿರುವ ಸ್ವಾದಿಷ್ಠವಾದ ಐಸ್‌ಕ್ರೀಮ್ ರೋಲ್ಸ್
-
ಐಸ್‌ಕ್ರೀಮ್ ತಾಪಮಾನ ಸ್ಥರೀಕಾರಕ
-
ತಯಾರಾದ ಐಸ್ಕ್ರೀಮ್ಗಳನ್ನು ಸಂಗ್ರಹ ಮಾಡುವ ಶೀತ ಕೊಠಡಿಗಳು
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2024-01-27. Retrieved 2019-09-12.
- ↑ https://www.justdial.com/Bangalore/Dasprakash-Ice-Creams-Opposite-BHEL-Mysore-Road/080P5139856_BZDET